ಮತ್ತೆ ಶುರುವಾಯ್ತು ಬೌ ಬೌ ಗೋಳು!

Aug 30, 2018, 11:27 AM IST

ಬೆಂಗಳೂರು(ಆ.30): ಇಷ್ಟು ದಿನ ಬಾಲ ಮುದುರಿಕೊಂಡಿದ್ದ ಬೀದಿ ನಾಯಿಗಳು ಮತ್ತೆ ಬಾಲ ಬಿಚ್ಚಿವೆ. ಪ್ರವೀಣ್ ಎಂಬ 10 ವರ್ಷದ ಬಾಲಕನ ಮೇಲೆ ಎರಗಿ ಕ್ರೌರ್ಯ ತೋರಿಸಿವೆ. ಹೆಚ್ಎಎಲ್ ಬಳಿ ಇರುವ ವಿಭೂತಿನಗರದಲ್ಲಿ ಈ ಘಟನೆ ನಡೆದಿದೆ.

ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಪ್ರವೀನ್ ಬಹಿರ್ದೆಸೆಗೆ ತೆರಳಿದ್ದಾನೆ. ಈ ವೇಳೆ ಸುಮಾರು 20 ನಾಯಿಗಳ ಹಿಂಡು ಬಾಲಕ ಮೇಲೆ ಎರಗಿದೆ. ಇನ್ನೂ ಪ್ರವೀಣ್ ಗೆ ಶ್ವಾನಗಳ ಗುಂಪು ದಾಳಿ ಮಾಡಿದ್ದರಿಂದ ಗಂಬೀರ ಗಾಯಗಳಾಗಿವೆ. ಸದ್ಯ ಪ್ರವೀಣ್ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಸ್ಥಳೀಯ ಕಾರ್ಪೋರೇಟರ್ ನಾಗರಾಜ್ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಂತ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..