24 ವರ್ಷದಲ್ಲೇ ಬಾಲಿವುಡ್‌ ಟಾಪ್‌ ಹೀರೋಯಿನ್ಸ್‌ ಹಿಂದಿಕ್ಕಿ ಸೂಪರ್‌ಸ್ಟಾರ್ ಆದ ನಟಿ, 136 ಕೋಟಿ ಗಳಿಸಿದ ಸಿನಿಮಾ!

Published : Apr 27, 2024, 11:42 AM ISTUpdated : Apr 27, 2024, 11:54 AM IST

ಕೇವಲ 24 ವರ್ಷದಲ್ಲೇ ಈ ಉದಯೋನ್ಮುಖ ನಟಿ, ಬಾಲಿವುಡ್‌ನ ಟಾಪ್‌ ನಟಿಯರನ್ನು ಹಿಂದಿಕ್ಕಿ ಸೂಪರ್‌ಸ್ಟಾರ್ ಆಗಿದ್ದಾರೆ. ಅಭಿನಯಿಸಿದ ಸಿನಿಮಾ 136 ಕೋಟಿ ಗಳಿಸಿದ್ದು, 2024ರ ಎಂಟನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವೆಂದು ಗುರುತಿಸಿಕೊಂಡಿದೆ. ಯಾರು ಆ ನಟಿ..ಸಿನಿಮಾ ಯಾವುದು?

PREV
110
24 ವರ್ಷದಲ್ಲೇ ಬಾಲಿವುಡ್‌ ಟಾಪ್‌ ಹೀರೋಯಿನ್ಸ್‌ ಹಿಂದಿಕ್ಕಿ ಸೂಪರ್‌ಸ್ಟಾರ್ ಆದ ನಟಿ, 136 ಕೋಟಿ ಗಳಿಸಿದ ಸಿನಿಮಾ!

ಪ್ರೇಮುಲು, ಮಲಯಾಳಂ ರೊಮ್ಯಾಂಟಿಕ್ ಸಿನಿಮಾ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಯಶಸ್ಸನ್ನು ಗಳಿಸಿದ ಚಿತ್ರ. ಕೇವಲ 3 ಕೋಟಿ ಬಜೆಟ್‌ನ ಈ ಚಿತ್ರವು ಸೂಪರ್‌ಸ್ಟಾರ್ ನಟರು ಇಲ್ಲದಿದ್ದರೂ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಲನಚಿತ್ರಗಳಲ್ಲಿ ಒಂದಾಗಿದೆ.

210

ಇದು ತನ್ನ ಇಬ್ಬರು ನಾಯಕ ನಟರನ್ನು ಅವರ ವೃತ್ತಿಜೀವನದ ಆರಂಭದಲ್ಲಿ ಸ್ಟಾರ್‌ಡಮ್‌ಗೆ ಏರಿಸಿದೆ. 23ರ ಹರೆಯದ ಮಮಿತಾ ಬೈಜು 'ಪ್ರೇಮುಲು' ಸಿನಿಮಾದಿಂದಾಗಿ ಈಗಾಗಲೇ ಸ್ಟಾರ್ ಆಗಿದ್ದಾರೆ. 

310

ಸ್ವತಃ ರಾಜಮೌಳಿ ಮಮತಾ ಅಭಿನಯವನ್ನು ಹೊಗಳಿದ್ದಾರೆ. ವಿಜಯ್‌ ದೇವರಕೊಂಡ ಮುಂದಿನ ಸಿನಿಮಾಗೆ ಮಮಿತಾ ಬೈಜು ಹೀರೋಯಿನ್ ಎಂಬ ಮಾತು ಈಗಾಗಲೇ ಕೇಳಿ ಬರ್ತಿದೆ.

410

ನಟಿ ಕೇರಳದ ಕಿಡಂಗೂರಿನಲ್ಲಿ ಜನಿಸಿದರು. ಮಮಿತಾ ತನ್ನ ಹದಿಹರೆಯದಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರೂ, ಆಕೆಯ ಪೋಷಕರ ಒತ್ತಾಯದ ಮೇರೆಗೆ, ಅಧ್ಯಯನವನ್ನು ಮುಂದುವರೆಸಿದರು. ಕೊಚ್ಚಿಯ ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಮನಃಶಾಸ್ತ್ರದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡಿದರು. 

510

ಅದಕ್ಕೂ ಮೊದಲು ಮಮಿತಾ ತನ್ನ ಸ್ವಂತ ಊರಿನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ವರದಿಗಳ ಪ್ರಕಾರ, ಒಂದು ಸಮಯದಲ್ಲಿ, ಮಮಿತಾ ಮನೋವಿಜ್ಞಾನದಲ್ಲಿ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಣಿಸಿದ್ದರು.

610

ಮಮಿತಾ ಬೈಜು 2001ರಲ್ಲಿ 16ನೇ ವಯಸ್ಸಿನಲ್ಲಿ ಅಭಿನಯ ಆರಂಭಿಸಿದರು. ಹಲವಾರು ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ದೊಡ್ಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. 2021ರಲ್ಲಿ 'ಆಪರೇಷನ್ ಜಾವಾ'ದಲ್ಲಿ ಮಮಿತಾ ಪಾತ್ರ ಎಲ್ಲರ ಗಮನ ಸೆಳೆಯಿತು.

710

ಮುಂದಿನ ಎರಡು ವರ್ಷಗಳಲ್ಲಿ ಖೋ-ಖೋ, ಸೂಪರ್ ಶರಣ್ಯ ಮತ್ತು ಪ್ರಣಯ ವಿಲಾಸಂನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. 

810

ಮಮಿತಾ ಮಾರ್ಚ್ 2024 ರಲ್ಲಿ ರೆಬೆಲ್ ಮೂಲಕ ತಮಿಳು ಸಿನಿಮಾಗಳಲ್ಲಿ ಅಭಿನಯ ಆರಂಭಿಸಿದರು. ಆದರೆ ಆಕೆಯನ್ನು ರಾತ್ರೋರಾತ್ರಿ ಸ್ಟಾರ್ ಮಾಡಿದ್ದು ಪ್ರೇಮಲು ಸಿನಿಮಾ  3 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಚಲನಚಿತ್ರವು ವಿಶ್ವಾದ್ಯಂತ 136 ಕೋಟಿ ರೂ . ಗಳಿಸಿತು. ಇದು 2024ರ ಅತ್ಯಂತ ದೊಡ್ಡ ಸೂಪರ್‌ಹಿಟ್‌ ಎಂದು ಕರೆಸಿಕೊಂಡಿದೆ. 

910

ವಿಶ್ವಾದ್ಯಂತ ಪ್ರೇಮಲು ಸಿನಿಮಾ 136 ಕೋಟಿ ರೂ.ಗಳ ಲಾಭವನ್ನು ಗಳಿಸಿದೆ. ಈ ಮೂಲಕ 2024ರ ಎಂಟನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವೆಂದು ಗುರುತಿಸಿಕೊಂಡಿದೆ.

1010

ಮಮಿತಾ ಅಭಿನಯದ ಸಿನಿಮಾ ಕತ್ರಿನಾ ಕೈಫ್ ಅವರ ಮೆರ್ರಿ ಕ್ರಿಸ್‌ಮಸ್ (ರೂ. 26 ಕೋಟಿ), ಯಾಮಿ ಗೌತಮ್ ಅವರ ಆರ್ಟಿಕಲ್ 370 (ರೂ. 110 ಕೋಟಿ), ಮತ್ತು ಕೃತಿ ಸನೋನ್ ಅವರ 'ತೇರಿ ಬಾತೋಮೆ ಮೇ ಐಸಾ ಉಲ್ಜಾ ಜಿಯಾ' (ರೂ. 133 ಕೋಟಿ) ಗಳಿಕೆಯನ್ನು ಮೀರಿಸಿದೆ.

Read more Photos on
click me!

Recommended Stories