ದಾವಣಗೆರೆಯಲ್ಲಿ ನಡೆದ ಯುವಕನ ಕೊಲೆ ಪ್ರಕರಣವು ಪರಸಂಗದ ಪುರಾಣದಿಂದ ನಡೆದಿದೆ. ಜಯಪ್ಪ ಎಂಬಾತ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರನಾದ ಶಿವಕುಮಾರನನ್ನು ಕೊಲೆ ಮಾಡಿದ್ದಾನೆ.
ದಾವಣಗೆರೆ(ಏ.13): ಅದು ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮ ಏಪ್ರಿಲ್ 5ರಂದು ಈ ಗ್ರಾಮದ ಜಮೀನೊಂದರಲ್ಲಿ ಯುವಕನೊಬ್ಬ ಅರೆ ಬೆತ್ತಲಾಗಿ ಸತ್ತು ಬಿದ್ದಿದ್ದ. ಸತ್ತವನು ಹೊನ್ನುರು ಗ್ರಾಮದವನಾಗಿರಲಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲ ಯಾರಿವನು? ನಮೂರಿನ ಜಮೀನಲ್ಲಿ ಹೆಣವಾಗದ್ದೇಗೆ ಅಂತಾ ತಲೆ ಕೆಡಿಸಿಕೊಂಡಿದ್ರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಶೀಲಿಸಿದಾಗ ಆಂಟಿ ಹಿಂದೆ ಬಿದ್ದವನು ಬರ್ಬರ ಕೊಲೆಯಾದ ಕಹಾನಿ ಬಯಲಾಗಿದೆ. ಹೊನ್ನೂರು ಗ್ರಾಮದ ಜಮೀನಲ್ಲಿ ಹೆಣವಾಗಿ ಬಿದ್ದವನು ಚಿತ್ರದುರ್ಗ ತಾಲೂಕಿನ ಹೆಗಡೆಹಾಳ್ ಗ್ರಾಮದವನಾದ ಶಿವಕುಮಾರ್. ಈತನನ್ನ ಕೊಂದಿದ್ದು ಹೊನ್ನೂರು ಗ್ರಾಮದ ಜಯಪ್ಪ. ಈ ಬರ್ಬರ ಕೊಲೆಗೆ ಕಾರಣವಾಗಿದ್ದು ಪರಸಂಗದ ಪುರಾಣ.
ಜಯಪ್ಪನ ಪತ್ನಿ ಹಾಗೂ ಶಿವಕುಮಾರ ಇಬ್ಬರು ಒಂದೇ ಊರಿನವರು. ಇಬ್ಬರು ಪರಸ್ಪರ ಪ್ರೀತಿ ಮಾಡ್ತಿದ್ರು. ಆದ್ರೆ ಜಯಪ್ಪನ ಪತ್ನಿ ಪೋಷಕರು ಜಯಪ್ಪನಿಗೆ ಕೊಟ್ಟು ಮದುವೆ ಮಾಡಿಸ್ತಾರೆ. ಆದ್ರೆ ಜಯಪ್ಪನ ಪತ್ನಿ ಹಾಗೂ ಶಿವಕುಮಾರ ಮದುವೆ ಬಳಿಕವೂ ತಮ್ಮ ಸಂಬಂಧ ಮುಂದುವರಿಸ್ತಾರೆ. ಆಗ್ಗಾಗೆ ಹೊನ್ನೂರಿಗೆ ಬರ್ತಿದ್ದ ಶಿವಕುಮಾರ, ಜಯಪ್ಪನ ಪತ್ನಿಯನ್ನ ಗ್ರಾಮದ ಜಮೀನಿಗೆ ಕರೆಸಿಕೊಂಡು ಚಕ್ಕಂದವಾಡ್ತಿದ್ದ. ಅದೇ ರೀತಿ ಏಪ್ರಿಲ್ 5ರಂದು ಇಬ್ಬರು ಜಮೀನಿನಲ್ಲಿದ್ದಾಗ ಜಯಪ್ಪನ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಾತಿಗೆ ಮಾತು ಬೆಳೆದಿದ್ದು, ಸಿಟ್ಟಿಗೆದ್ದ ಜಯಪ್ಪ, ಶಿವಕುಮಾರನನ್ನ ಹೊಡೆದು ಕೊಂದು ಹಾಕಿದ್ದಾರೆ.
ಅಂಗವಿಕಲ ಪ್ರೇಮಿಗಾಗಿ ಪತಿಯನ್ನೇ ಮುಗಿಸಿದ ಪತ್ನಿ!
ಕೊಲೆಗಾರನನ್ನ ಪತ್ತೆ ಹಚ್ಚಿದ ಪೊಲೀಸ್ ಶ್ವಾನ ತಾರಾ
ಶಿವಕುಮಾರನ ಕೊಲೆಗೈದು ತಲೆಮರೆಸಿಕೊಂಡಿದ್ದ ಹಂತಕ ಜಯಪ್ಪನನ್ನ ಪತ್ತೆ ಹಚ್ಚಿದ್ದು ಪೊಲೀಸ್ ಶ್ವಾನ ತಾರಾ. ಕೊಲೆ ನಡೆದ ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸುತ್ತಿದ್ದಂತೆ ಶ್ವಾನ ತಾರಾ. ಕೆಲ ಕಿಲೋಮೀಟರ್ ದೂರದಲ್ಲಿ ಅಡಗಿಕೊಂಡಿದ್ದ ಜಯಪ್ಪನ ಬಳಿ ಓಡಿಹೋಗಿ, ಕೊಲೆಗಾರನನ್ನ ಸಿಕ್ಕಿಬೀಳಿಸಿದೆ. ಮದುವೆಯಾಗಿದ್ದೂ ಹಳೆ ಗೆಳೆಯನ ಜತೆ ಅಕ್ರಮ ಸಂಬಂಧ ಬೆಳೆಸಿದ ಜಯಪ್ಪನ ಪತ್ನಿಗೆ ಈಗ ಗಂಡನೂ ಇಲ್ಲ.. ಪ್ರಿಯಕರನೂ ಇಲ್ಲ ಎನ್ನುವಂತಾಗಿದೆ.
ಮೂಗುತಿಯಿಂದ ಬಯಲಾಯ್ತು ಕೊಲೆ ರಹಸ್ಯ: ಉದ್ಯಮಿ ಅರೆಸ್ಟ್
ಘಟನೆ ಏನು?:
ಏ.4ರಂದು ರಾತ್ರಿ 7.20ರ ವೇಳೆ ಶಿವಕುಮಾರ ತನ್ನ ಸ್ನೇಹಿತರಾದ ರಮೇಶ, ಅಜ್ಜಯ್ಯ ಎಂಬುವರ ಜೊತೆಗೆ ದಾವಣಗೆರೆಯ ಹೊನ್ನೂರಿಗೆ ಹೋಗಿದ್ದರು. ಶಿವಕುಮಾರ ಹೆಗಡೆಹಾಳ್ ಗ್ರಾಮದ ಕೂಲಿ ಕೆಲಸಗಾರ ದಿ.ಚೌಡಪ್ಪರ ನಾಲ್ಕು ಮಕ್ಕಳ ಪೈಕಿ ಕಿರಿಯ. ಆಂಧ್ರದ ನಲ್ಲೂರು ಬಳಿ ಬೇಕರಿ ಕೆಲಸಕ್ಕೆ ಹೋಗುತ್ತಿದ್ದ ಶಿವಕುಮಾರ 3 ತಿಂಗಳಿಗೊಮ್ಮೆ ರಜೆ ಹಾಕಿ ಹೆಗಡೆಹಾಳ್ ಗ್ರಾಮಕ್ಕೆ ಬರುತ್ತಿದ್ದ. ತಿಂಗಳ ಹಿಂದೆ ಊರಿಗೆ ಬಂದು, ಹೊನ್ನೂರಿಗೆ ಹೋಗಿದ್ದ. ರಾತ್ರಿ ತಡವಾದರೂ ಊರಿಗೆ ಮರಳಿರಲಿಲ್ಲ.
ಮಾರನೇ ದಿನ ಬೆಳಿಗ್ಗೆ ಹೊನ್ನೂರು ಜಮೀನೊಂದರಲ್ಲಿ ಶಿವಕುಮಾರ ಕೊಲೆಯಾಗಿರುವ ವಿಚಾರ ಗೊತ್ತಾಗಿದೆ. ಮೃತನ ಸಹೋದರ ಕೊಲ್ಲಪ್ಪ ಅವರು ಸ್ನೇಹಿತರಾದ ಅಶೋಕ, ಗಿರೀಶ್ ಜೊತೆಗೆ ಬೆಳಿಗ್ಗೆ 11ರ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಶಿವಕುಮಾರನ ಮೈಮೇಲೆ ಗಾಯಗಳಾಗಿದ್ದು, ತಲೆಯಲ್ಲಿ ರಕ್ತಗಾಯ, ಮೈಮೇಲೆ ಪ್ಯಾಂಟ್ ಮಾತ್ರ ಇತ್ತು. ರಮೇಶನಿಗೆ ವಿಚಾರಿಸಿದಾಗ, ‘ರಾತ್ರಿ 10ರ ವೇಳೆಗೆ ಶಿವು ಇದ್ದ ಜಾಗಕ್ಕೆ ಹೋದೆವು. ಆದರೆ, ಶಿವು ಅಲ್ಲಿ ಇರಲಿಲ್ಲ. ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇನ್ನೊಂದು ನಂಬರ್‌ಗೆ ಫೋನ್ ಮಾಡಿದಾಗ ಪರಿಮಳ ಎಂಬಾಕೆ ಮಾತನಾಡಿದಳು’ ಎಂದು ಹೇಳಿದ್ದಾನೆ.
‘ಪರಿಮಳ ತಾನು ಹಾಗೂ ಶಿವು ಮಾತನಾಡುವಾಗ ತನ್ನ ಗಂಡ ಜಯಪ್ಪನ ಕೈಗೆ ಸಿಕ್ಕು ಬಿದ್ದೆವು. ಆಗ ನನ್ನ ಗಂಡ ಶಿವುಗೆ ಎರಡು ಏಟು ಹೊಡೆದ. ಶಿವು ಹೊಲದ ಕಡೆಗೆ ಓಡಿ ಹೋದ. ವಾಪಸ್ ಊರಿಗೆ ಹೋಗಿದ್ದಾನೆಂದು ಗಂಡ ವಾಪಸ್ ಬಂದರು ಎಂದು ತಿಳಿಸಿದಳು’ ಎಂದು ರಮೇಶ್ ಹೇಳಿದ್ದಾನೆ.