ಬಿಗ್ 3 ಇಂಪ್ಯಾಕ್ಟ್: ಕ್ಯಾಟ್‌ಫಿಶ್‌ ಧಂಧೆಗೆ ಬಿತ್ತು ಬ್ರೇಕ್!

Sep 6, 2018, 7:06 PM IST

ಬೆಂಗಳೂರು(ಸೆ.6): ಜನಪ್ರತಿನಿಧಿಯೊಬ್ಬರ ಗಂಡ ಕ್ಯಾಟ್ ಫಿಶ್ ಮಾರುತ್ತಿದ್ದಾರೆ ಎಂಬ ಅರೋಪ ಕೇಳಿ ಬರುತ್ತಿದ್ದಂತೇ ಸುವರ್ಣ ನ್ಯೂಸ್ ನ ಬಿಗ್ ೩ ಈ ಕುರಿತು ವರದಿ ಪ್ರಸಾರ ಮಾಡಿತ್ತು. 

ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ನಾರಾಯಣ ಸ್ವಾಮಿ ಎಂಬಾತ ಬಿಂದಾಸ್ ಆಗಿ ಕ್ಯಾಟ್ ಫಿಶ್ ಮಾರಾಟ ಮಾಡ್ತಿದ್ದ. ಕ್ಯಟ್ ಫಿಶ್ ಮಾರಾಟವನ್ನು ಸುಪ್ರೀಂ ಕೋರ್ಟ್ ಕೂಡ ನಿಷೇಧಿಸಿದೆ. ಆದರೂ ಪತ್ನಿ ಗ್ರಾಮ ಪಂಚಾಯ್ತಿ ಸದಸ್ಯೆ ಎಂಬ ಧೀಮಾಕಿನಲ್ಲಿ ನಾರಾಯಣ ಸ್ವಾಮಿ ಯಾರ ಹೆದರಿಕೆಯೂ ಇಲ್ಲದೇ ಕ್ಯಾಟ್ ಫಿಶ್ ಮಾರಾಟ ಮಾಡ್ತಿದ್ದ.

ಆದರೆ ಸುವರ್ಣನ್ಯೂಸ್ ನ ಬಿಗ್ ೩ಯಲ್ಲಿ ವರದಿ ಪ್ರಸಾರವಾಗ್ತಿದ್ದಂತೇ ನಾರಾಯಣಸ್ವಾಮಿ ಕ್ಯಾಟ್ ಫಿಶ್ ಧಂಧೆಗೆ ಬ್ರೇಕ್ ಹಾಕಿದ್ದಾನೆ. ಬಿಗ್ ೩ ವರದಿ ಆಧರಿಸಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ತಂಡ ತಹಶೀಲ್ದಾರ ನೇತೃತ್ವದಲ್ಲಿ ದಾಳಿ ನಡೆಸಿತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..