ವಿಜಯಪುರ ನಗರದ ಸಂಚಾರ ವ್ಯವಸ್ಥೆ ಸುಧಾರಣೆಗೆ 5 ಕೋಟಿ: ಯತ್ನಾಳ

By Suvarna NewsFirst Published Dec 6, 2019, 11:59 AM IST
Highlights

ಸಂಚಾರಿ ಪೊಲೀಸ್‌ ಉಪ ಠಾಣೆ ಲೋಕಾರ್ಪಣೆಗೊಳಿಸಿದ ಶಾಸಕ ಯತ್ನಾಳ| ದೇಶದ ಚಂಡಿಗಡ, ಜೈಸಿಂಗ್‌ಪುರ ಮೊದಲಾದ ಮಾದರಿ ನಗರಗಳ ಹಾಗೆಯೇ ವಿಜಯಪುರ ನಗರ ರೂಪುಗೊಳ್ಳುವ ದಿನ ದೂರವಿಲ್ಲ| ರಸ್ತೆಗಳ ಪ್ರಗತಿಗಾಗಿಯೇ 150 ಕೋಟಿ ಅನುದಾನ ಬಿಡುಗಡೆಗೊಳ್ಳಲಿದೆ| 

ವಿಜಯಪುರ(ಡಿ.06): ನಗರದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ರೂಪಿಸಲಾಗಿರುವ ವಿಶೇಷ ಪ್ರೊಜೆಕ್ಟ್‌ಗೆ 5 ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್‌ ಚಿಂತನಾ ಹಾಲ್‌ನಲ್ಲಿ ಗುರು​ವಾರ ನಡೆದ ಸಭೆಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್‌ ನೇತೃತ್ವದಲ್ಲಿ ವಿಜಯಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 3 ಹೊಸ ಸಂಚಾರಿ ಉಪ ಪೊಲೀಸ್‌ ಠಾಣೆಗಳ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಜಯಪುರ ನಗರ ಸ್ಮಾರ್ಟ್‌ ಸಿಟಿಗಿಂತ ಕಡಿಮೆ ಇಲ್ಲ. ಆದರೆ ಅಧಿಕಾರಿಗಳು ಹಾಗೂ ಈ ಹಿಂದೆ ಇದ್ದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ. ಬ್ರಿಟಿಷರು ವ್ಯವಸ್ಥಿತವಾಗಿಯೇ ವಿಜಯಪುರ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೊರತೆಯಿಂದ ವಿಜಯಪುರ ನಗರ ಸ್ಮಾರ್ಟ್‌ ಸಿಟಿ ಆಗಲಿಲ್ಲ ಎಂದರು.

ದೇಶದ ಚಂಡಿಗಡ, ಜೈಸಿಂಗ್‌ಪುರ ಮೊದಲಾದ ಮಾದರಿ ನಗರಗಳ ಹಾಗೆಯೇ ವಿಜಯಪುರ ನಗರ ರೂಪುಗೊಳ್ಳುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ರಸ್ತೆಗಳ ಪ್ರಗತಿಗಾಗಿಯೇ 150 ಕೋಟಿ ಅನುದಾನ ಬಿಡುಗಡೆಗೊಳ್ಳಲಿದೆ ಎಂದರು.

ವಿಜಯಪುರ ನಗರದಲ್ಲಿ ಇನ್ನೊಂದು ಸಂಚಾರ ವೃತ್ತೀಯ ನಿರೀಕ್ಷಕರ ಕಚೇರಿ (ಸಿಪಿಐ) ಮಂಜೂರು ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಶೀಘ್ರವೇ ಈ ನಿಟ್ಟಿನಲ್ಲಿ ಭೇಟಿ ಮಾಡಿ ಮುಂಬರುವ ಬಜೆಟ್‌ನಲ್ಲಿ ಪೊಲೀಸ್‌ ಸಂಚಾರ ಠಾಣೆಯನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಅತ್ಯಾಧುನಿಕ ವ್ಯವಸ್ಥೆ ಆಧರಿಸಿ ವಿಜಯಪುರ ನಗರದ ಸುರಕ್ಷತೆ ಹಾಗೂ ಸಂಚಾರ ದಟ್ಟಣೆಯ ಉದ್ದೇಶದಿಂದ ರಚನೆ ಮಾಡಲಾಗಿರುವ ವಿಶೇಷ ಪ್ರೊಜೆಕ್ಟ್‌ಗೆ 5 ಕೋಟಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಟೆಂಡರ್‌ ಹಂತಕ್ಕೆ ತಲುಪಿದೆ. ಇದಕ್ಕೆ ಇನ್ನೂ ಹೆಚ್ಚಿನ ಅನುದಾನ ಬೇಕಿದ್ದರೆ ನೀಡಲು ಸಿದ್ಧ ಎಂದರು.

ಅತಿಕ್ರಮಣಕ್ಕೆ ಅವಕಾಶವಿಲ್ಲ:

ವಿಜಯಪುರದ ಗೋದಾವರಿ ಹೋಟೆಲ್‌ ಮೊದಲಾದ ಪ್ರಶಸ್ತ ಸ್ಥಳದಲ್ಲಿ ಸೆಟ್‌ಲೈಟ್‌ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅದೇ ತೆರನಾಗಿ ಶಿಖಾರಖಾನೆಯಲ್ಲಿರುವ ಸರ್ಕಾರಿ ಜಾಗ​ವನ್ನು ಕೆಲವೊಬ್ಬರು ಅತಿಕ್ರಮಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕೆ ನಾನು ಅವಕಾಶ ಕೊಡುವುದಿಲ್ಲ. ಆ ಸ್ಥಳದಲ್ಲೂ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಕಾರ್ಯ ಚಟುವಟಿಕೆ ಶೀಘ್ರ ಕೈಗೊಳ್ಳುತ್ತೇನೆ ಎಂದರು.

ಗಾಂಧಿ ವೃತ್ತಕ್ಕೆ ಹೊಂದಿಕೊಂಡು 50 ಲಕ್ಷ ವೆಚ್ಚದಲ್ಲಿ ಅಂಡರ್‌ಪಾಸ್‌ ನಿರ್ಮಾಣ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಂಡು, ಗಾಂಧಿ ಚೌಕ್‌ಗೆ ಹೊಂದಿಕೊಂಡಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯನ್ನು ಸ್ಥಳಾಂತರಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಕೆಳಭಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಹೆಲ್ಮೆಟ್‌ ಬಳಕೆ ಜಾಗೃತಿ ಅಗತ್ಯ:

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿಜಯಪುರ ನಗರದ ಸಂಚಾರ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದೇನೆ. ಮನಗೂಳಿ ಅಗಸಿಯಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಸೇರಿದಂತೆ ಅನೇಕ ಸಲಹೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ಸ್ವಾಗತಾಹÜರ್‍. ನಮಗಿಂತ ತೀರಾ ಸಣ್ಣ ಶ್ರೀಲಂಕಾ ಸೇರಿದಂತೆ ಮೊದಲಾದ ರಾಷ್ಟ್ರಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.

ಇನ್ನೊಂದೆಡೆ ಪ್ರತಿಯೊಬ್ಬರೂ ತಮ್ಮ ಮೊಬೈಲ್‌ಗೆ ಸ್ಕ್ರೀನ್‌ ಗಾರ್ಡ್‌ ಹಾಕುತ್ತಾರೆ. ಆದರೆ ತಲೆಗೆ ರಕ್ಷಣೆ ಒದಗಿಸುವ ಹೆಲ್ಮೆಟ್‌ ಧರಿಸಲು ಹಿಂದೇಟು ಹಾಕುವುದು ಸರಿಯಲ್ಲ. ಶೀಘ್ರವೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ನಗರದ ಎಪಿಎಂಸಿ ಯಾರ್ಡ್‌ ಹಾಗೂ ಆದರ್ಶ ನಗರ ಪೊಲೀಸ್‌ ಉಪಠಾಣೆಯ ಸರಹದ್ದಿಗೆ ಸಂಬಂಧಿಸಿದಂತೆ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯ ಆವರಣದಲ್ಲಿ ಸಂಚಾರ ಪೊಲೀಸ್‌ ಹೊರ ಉಪಠಾಣೆ, ಗೋಳಗುಮ್ಮಟ ಪೊಲೀಸ್‌ ಉಪಠಾಣೆಯ ಸರಹದ್ದಿಗೆ ಸಂಬಂಧಿಸಿದಂತೆ ಗೋಳಗುಮ್ಮಟದ ಮುಂಭಾಗ (ಹಳೆಯ ಸ್ಟೇಶನ್‌)ನಲ್ಲಿ ಸಂಚಾರ ಹೊರ ಉಪಠಾಣೆ, ಜಲನಗರ ಪೊಲೀಸ್‌ ಠಾಣೆಯ ಸರಹದ್ದಿಗೆ ಸಂಬಂಧಿಸಿದಂತೆ ಬಾಗಲಕೋಟೆ ಕ್ರಾಸ್‌ ಬಳಿ ಸಂಚಾರ ಪೊಲೀಸ್‌ ಉಪಠಾಣೆಗಳು ಕಾರ್ಯಾರಂಭಗೊಂಡವು.

ಈ ನೂತನ ಸಂಚಾರ ಹೊರ ಉಪಠಾಣೆಗಳಲ್ಲಿ ಹೆಚ್ಚುವರಿಯಾಗಿ 6 ಜನ ಎಎಸೈ ಹಾಗೂ 50 ಜನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಮಾಹಿತಿ ನೀಡಿದರು. 
 

click me!