* ಚಲಿಸುತ್ತಿದ್ದ ರೈಲಿನಲ್ಲಿ ದರೋಡೆ ನಡೆಸಿದ ದುಷ್ಕರ್ಮಿಗಳು
* ದರೋಡೆ ವೇಳೆ ಯುವತಿ ಮೇಲೆ ಅತ್ಯಾಚಾರ
* ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಕುಕೃತ್ಯ
ಮುಂಬೈ(ಅ.09): ಚಲಿಸುತ್ತಿರುವ ರೈಲಿನಲ್ಲಿ ದರೋಡೆ ಹಾಗೂ 20 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ(Gangrape) ನಡೆದಿರುವ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದಲ್ಲಿ(Maharashtra) ಬೆಳಕಿಗೆ ಬಂದಿದೆ. ಪುಷ್ಪಕ್ ಎಕ್ಸ್ ಪ್ರೆಸ್ ನಲ್ಲಿ(Pushpak Express) ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇಗತ್ಪುರಿ-ಕಾಸ್ರಾ ನಿಲ್ದಾಣಗಳ ನಡುವೆ ಸುಮಾರು 8 ದುಷ್ಕರ್ಮಿಗಳು ಪ್ರಯಾಣಿಕರ ಲೂಟಿ ಮಾಡಿದ್ದಾರೆ. ಈ ಸಮಯದಲ್ಲಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವನ್ನೂ ನಡೆಸಿದ್ದಾರೆಂದು ಹೇಳಲಾಗಿದೆ. ಈವರೆಗೂ, ಪೊಲೀಸರು 4 ದುಷ್ಕರ್ಮಿಗಳನ್ನು ಸೆರೆಹಿಡಿದಿದ್ದಾರೆ, ಇನ್ನಿತರ ನಾಲ್ವರಿಗಾಗಿ ಶೋಧ ನಡೆಸಲಾಗುತ್ತಿದೆ.
ರೈಲಿನಲ್ಲಿದ್ದವರನ್ನೆಲ್ಲಾ ಲೂಟಿ ಮಾಡಿದ್ದರು
undefined
ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ(Pushpak Express) ದರೋಡೆ ಮತ್ತು ಸಾಮೂಹಿಕ ಅತ್ಯಾಚಾರದ ಘಟನೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ದಾರಿಯಲ್ಲಿ ಸುಮಾರು 8 ದರೋಡೆಕೋರರು ರೈಲು ಹತ್ತಿದ್ದರು. ಅವರು ಇಗತ್ಪುರಿ-ಕಾಸ್ರಾ ನಿಲ್ದಾಣಗಳ ನಡುವೆ ಸುಮಾರು 15-20 ಪ್ರಯಾಣಿಕರನ್ನು ಲೂಟಿ ಮಾಡಿದ್ದರು. ಪುಷ್ಪಕ್ ಎಕ್ಸ್‌ಪ್ರೆಸ್ ಶುಕ್ರವಾರ ಸಂಜೆ 6 ಗಂಟೆಗೆ ಇಗತ್ಪುರಿ ನಿಲ್ದಾಣವನ್ನು ತಲುಪಿತು. ರೈಲು ಇಗತ್ಪುರಿ ನಿಲ್ದಾಣದಿಂದ ಮುಂಬೈ ಕಡೆಗೆ ಚಲಿಸುವಾಗ, ಸುರಂಗವೊಂದರ ಮೂಲಕ ಹಾದುಹೋಗುತ್ತದೆ. ಈ ವೇಳೆ ರೈಲಿನ ವೇಗ ಕಡಿಮೆಯಾಗುತ್ತದೆ. ಇದರ ಲಾಭ ಪಡೆದುಕೊಂಡ ದುಷ್ಕರ್ಮಿಗಳು ರೈಲು ಹತ್ತಿದ್ದರು. ಅಲ್ಲದೇ ರೈಲು ಹತ್ತಿದ ಕೂಡಲೇ ದರೋಡೆಕೋರರು ಪ್ರಯಾಣಿಕರನ್ನು ಥಳಿಸಲು ಆರಂಭಿಸಿದರು. ದುಷ್ಕರ್ಮಿಗಳು ಪ್ರಯಾಣಿಕರಿಂದ ಮೊಬೈಲ್ ಮತ್ತು ಹಣವನ್ನು ದೋಚಿದ್ದಾರೆ. ದರೋಡೆಕೋರರ ಕೈಯಲ್ಲಿ ಬೆಲ್ಟ್ ಮತ್ತು ಇತರ ಆಯುಧಗಳಿದ್ದವು ಎಂದು ದರೋಡೆಗೊಳಗಾದ ಪ್ರಯಾಣಿಕರು ತಿಳಿಸಿದ್ಧಾರೆ.
With reference to Kalyan RPS CR. No. 771/21 the victim is twenty years old and she has been taken for medical examination by our lady officer. She is fine. We are collecting all evidences. The accused are being questioned by our team. We are checking their previous records.
— Quaiser Khalid IPS (@quaiser_khalid)ಪಾಪಿ ಅಪ್ಪ: 6 ವರ್ಷದ ಮಗಳ ರೇಪ್ ಮಾಡಲಾಗಲಿಲ್ಲ ಎಂದು ಗುಪ್ತಾಂಗಕ್ಕೆ ಕೋಲು ಹಾಕಿದ!
ಇಬ್ಬರು ದರೋಡೆಕೋರರನ್ನು ಹಿಡಿದ ಪ್ರಯಾಣಿಕರು
ದುಷ್ಕರ್ಮಿಗಳು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ. 20 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಸಮಯದಲ್ಲಿ ಕೆಲವು ಪ್ರಯಾಣಿಕರು ಧೈರ್ಯ ಮಾಡಿ, ಇಬ್ಬರು ದುಷ್ಕರ್ಮಿಗಳನ್ನು ಹಿಡಿದಿದ್ದಾರೆ. ರೈಲು ಕಲ್ಯಾಣ್ ನಿಲ್ದಾಣವನ್ನು ತಲುಪಿದ ತಕ್ಷಣ ದುಷ್ಕರ್ಮಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಇದೇ ವೇಳೆ ಇನ್ನಿಬ್ಬರು ದರೊಡೆಕೋರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಲ್ಯಾಣ್ ಜಿಆರ್‌ಪಿ ಮತ್ತು ಕಲ್ಯಾಣ್ ರೈಲ್ವೇ ಕ್ರೈಂ ಬ್ರಾಂಚ್ ಈ ಬಗ್ಗೆ ತನಿಖೆ ನಡೆಸುತ್ತಿವೆ
ಕಾನೂನು ಪಾಲಿಸದ ಸೆಲೆಬ್ರಿಟಿಗಳನ್ನು ಸುಮ್ಮನೆ ಬಿಡಲ್ಲ: ದಿಟ್ಟ ಅಧಿಕಾರಿ ಸಮೀರ್ ವಾಂಖೆಡೆ!
ಕಾಸರ ನಿಲ್ದಾಣವನ್ನು ತಲುಪಿದ ಬಳಿಕ ಸಹಾಯ ಕೋರಿದ ಪ್ರಯಾಣಿಕರು
ರೈಲ್ವೇ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ಈ ಬಗ್ಗೆ ವಿವರಿಸಿದ್ದು, ಅತ್ಯಾಚಾರಕ್ಕೊಳಗಾದ ಯುವತಿಯ ವಯಸ್ಸು 20 ವರ್ಷಗಳು. ಆಕೆಯನ್ನು ನಮ್ಮ ಮಹಿಳಾ ಅಧಿಕಾರಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ, ಆಕೆ ಈಗ ಆರೋಗ್ಯವಾಗಿದ್ದಾರೆ. ನಾವು ಎಲ್ಲಾ ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ. ಆರೋಪಿಯ ವಿಚಾರಣೆ ನಡೆಯುತ್ತಿದೆ. ನಾವು ಅವರ ಹಿಂದಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳು ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನ ಇಗತ್ಪುರಿಯಲ್ಲಿ (ಔರಂಗಾಬಾದ್ ರೈಲ್ವೆ ಜಿಲ್ಲೆ) ಸ್ಲೀಪರ್ ಬೋಗಿ ಡಿ -2 ಅನ್ನು ಹತ್ತಿದ್ದರು. ಅವರು ರಾತ್ರಿ ವೇಳೆ ಈ ಅಪರಾಧ ಕೃತ್ಯ ಎಸಗಿದ್ದಾರೆ. ರೈಲು ನಮ್ಮ ಅಧಿಕಾರ ವ್ಯಾಪ್ತಿಯ ಕಾಸರವನ್ನು ತಲುಪಿದಾಗ, ಪ್ರಯಾಣಿಕರು ಸಹಾಯ ಕೇಳಿದ್ದಾರೆ. ತಕ್ಷಣ ಕ್ರಮ ಕೈಗೊಂಡು, ನಾವು 4 ಆರೋಪಿಗಳನ್ನು ಬಂಧಿಸಿದ್ದೇವೆ. ಅಪರಾಧ ವಿಭಾಗವು ಈ ಬಗ್ಗೆ ತನಿಖೆ ನಡೆಸುತ್ತಿದೆ. ಆರೋಪಿಗಳು 96,390 ರೂ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಮೊಬೈಲ್. ನಾವು ರೂ 34,200 ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದೇವೆ ಎಂದಿದ್ದಾರೆ.