ಕನ್ಹಯ್ಯಾ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ!

By Suvarna NewsFirst Published Jun 30, 2022, 7:49 AM IST
Highlights

* ರಾಜಸ್ಥಾನದ ಭೀಮಾನಗರದಲ್ಲಿ ಕಲ್ಲುತೂರಾಟ

* ಕನ್ಹಯ್ಯಾ ಹತ್ಯೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ

* ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ

* ಹರ್ಯಾಣದಲ್ಲಿ ಪ್ರತಿಕೃತಿ ಸುಟ್ಟು ಆಕ್ರೋಶ

ಜೈಪುರ(ಜೂ.30): ಕನ್ಹಯ್ಯಾ ಲಾಲ್‌ ಅವರನ್ನು ಮತಾಂಧರು ಬರ್ಬರವಾಗಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ದೇಶದ ವಿವಿಧೆಡೆ ಭಾರೀ ಪ್ರತಿಭಟನೆ, ಹಿಂಸಾಚಾರ, ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಕನ್ಹಯ್ಯಾ ಲಾಲ್‌ ಹಂತಕರಿಗೆ ಗಲ್ಲು ಶಿಕ್ಷೆ ನೀಡಿ ಎಂದು ಆಗ್ರಹಿಸಿ ರಾಜಸ್ಥಾನ, ದೆಹಲಿ, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ಹರಾರ‍ಯಣ ಸೇರಿ ಹಲವು ರಾಜ್ಯಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೀದಿಗಳಿದಿದ್ದಾರೆ.

ಟೇಲರ್‌ ಶಿರಚ್ಛೇದ ಮಾಡಿದವರಿಗೆ ಕಠಿಣ ಶಿಕ್ಷೆ: ಎಚ್‌ಡಿಕೆ ಆಗ್ರಹ

Latest Videos

ಹರಾರ‍ಯಣದ ಗುರುಗ್ರಾಮ ಹಾಗೂ ಮನೇಸರ್‌ನಲ್ಲಿ ವಿಎಚ್‌ಪಿ ಹಾಗೂ ಬಜರಂಗ ದಳ ಕಾರ್ಯಕರ್ತರು ಜೈ ಶ್ರೀರಾಮ್‌ ಘೋಷಣೆ ಕೂಗುತ್ತ ಇಸ್ಲಾಮಿಕ್‌ ಭಯೋತ್ಪಾದನೆ ಪ್ರತಿನಿಧಿಸುವ ಪ್ರತಿಮೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೇಲರ್‌ ಶಿರಚ್ಛೇದ ತನಿಖೆ ಹೊಣೆ ಎನ್‌ಐಎಗೆ

ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಮತಾಂಧರಿಂದ ನಡೆದ ಹಿಂದೂ ದರ್ಜಿ ಕನ್ಹಯ್ಯಾಲಾಲ್‌ ಶಿರಚ್ಛೇದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಲಾಗಿದೆ. ಇದರ ಬೆನ್ನಲ್ಲೇ ಎನ್‌ಐಎ, ಅಕ್ರಮ ಚಟುವಟಿಕೆ ತಡೆ ಕಾಯ್ದೆಯ (ಯುಎಪಿಎ) ವಿವಿಧ ಪರಿಚ್ಛೇದಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

ರಾಜಸ್ಥಾನ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ಆರಂಭಿಸಿತ್ತಾದರೂ, ಈ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವೇನಾದರೂ ಇದೆಯಾ? ಅಂತಾರಾಷ್ಟ್ರೀಯ ಸಂಘಟನೆಗಳ ನಂಟು ಇದೆಯಾ ಎಂಬ ಗುಮಾನಿ ಉಂಟಾಗಿದೆ. ಹೀಗಾಗಿ ರಾಜಸ್ಥಾನದ ಹೊರಗೆ ಅನೇಕ ಜನರನ್ನು ವಿಚಾರಣೆ ನಡೆಸಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ವಿಶಾಲ ದೃಷ್ಟಿಕೋನದ ತನಿಖೆ ಉದ್ದೇಶದಿಂದ ಎನ್‌ಐಎಗೆ ತನಿಖೆ ವಹಿಸಲಾಗಿದೆ.

ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್‌.ಈಶ್ವರಪ್ಪ

ಈ ಬಗ್ಗೆ ಹೇಳಿಕೆ ನೀಡಿರುವ ಎನ್‌ಐಎ, ‘ಕನ್ಹಯ್ಯಾ ಕೊಲೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಎನ್‌ಐಎಗೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಇತರ ಸಂಘಟನೆಗಳ ಪಾತ್ರ ಹಾಗೂ ಅಂತಾರಾಷ್ಟ್ರೀಯ ನಂಟಿನ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದೆ.

click me!