ಸಿಧೂ ಮೂಸೆವಾಲ ರೀತಿಯಲ್ಲೇ ನನ್ನ ಹತ್ಯೆ, ಬೆದರಿಕೆ ಪತ್ರ ಬಹಿರಂಗ ಪಡಿಸಿದ ತಂದೆ!

By Suvarna NewsFirst Published Mar 26, 2023, 3:50 PM IST
Highlights

ಸಿಧೂ ಮೂಸೆವಾಲ ಹತ್ಯೆ ರೀತಿಯಲ್ಲೇ ನನ್ನ ಹತ್ಯೆಯೂ ನಡೆಯಲಿದೆ. ಏಪ್ರಿಲ್ 25ರೊಳಗೆ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದೆ. ಸಿಧೂ ಹತ್ಯೆಗೆ ನ್ಯಾಯ ಸಿಕ್ಕಿಲ್ಲ, ಇದೀಗ ಕುಟುಂಬಕ್ಕೂ ಭದ್ರತೆ ಇಲ್ಲ ಎಂದು ಮೂಸೆವಾಲ ತಂದೆ ನೋವು ತೋಡಿಕೊಂಡಿದ್ದಾರೆ.

ಪಂಜಾಬ್(ಮಾ.26) ಗಾಯಕ, ಕಾಂಗ್ರೆಸ್ ನಾಯಕ ಸಿಧೂ ಮೂಸೆವಾಲ ಹತ್ಯೆಯಾಗಿ ಸರಿಸುಮಾರು ಒಂದು ವರ್ಷ ತುಂಬುತ್ತಿದೆ. ಆದರೆ ಈ ಪ್ರಕರಣ ತಾರ್ಕಿಕ ಅಂತ್ಯಕಂಡಿಲ್ಲ. ಇದರ ನಡುವೆ ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್, ಗೂಂಡಾಗಳ ಅಬ್ಬರ ಹೆಚ್ಚಾಗಿದೆ. ಸಿಧೂ ಮೂಸೆವಾಲ ಹತ್ಯೆಗೆ ನ್ಯಾಯ ಒದಗಿಸಲು ತಂದೆ ಬಲ್ಕೌರ್ ಸಿಂಗ್ ಸತತ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ವೇದಿಕೆಯಲ್ಲಿ ನ್ಯಾಯ ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಪಂಜಾಬ್ ಸರ್ಕಾರ ಸಿಧೂ ಮೂಸೆವಾಲಗೆ ನ್ಯಾಯ ಒದಗಿಸಿಕೊಡುವ ಭರವಸೆ ಇಲ್ಲ ಎಂದು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹೇಳಿದ್ದರು. ಇದೀಗ ಸಿಧು ಮೂಸೆವಾಲ ತಂದೆ ಬಲ್ಕೌರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಸಿಧೂ ಹತ್ಯೆಯಾದ ರೀತಿಯಲ್ಲೆ ನನ್ನನ್ನು ಹತ್ಯೆ ಮಾಡವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಬದುಕುಳಿಯ ಭರವಸೆ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ಜೈಲು ಪಾಲಾಗಿರುವ ಪಂಜಾಬ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಸಿಧು ಹತ್ಯೆ ಹಿಂದೆ ಲಾರೆನ್ಸ್ ಕೈವಾಡವಿದೆ ಎಂದು ಪೊಲೀಸರು ತನಿಖಾ ಮೂಲಗಳು ಬಹಿರಂಗ ಪಡಿಸಿದೆ. ಹೀಗಾಗಿ ಬಲ್ಕೌರ್ ಸಿಂಗ್, ಲಾರೆನ್ಸ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು. ಇದು ಲಾರೆನ್ಸ್ ಗ್ಯಾಂಗ್ ಕಣ್ಣು ಕೆಂಪಾಗಿಸಿದೆ. ಇಷ್ಟೇ ಅಲ್ಲ  ಲಾರೆನ್ಸ್ ಹೆಸರು ಉಲ್ಲೇಖಿಸಿದ ಕಾರಣ ಹತ್ಯೆ ಮಾಡುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.

ಪಂಜಾಬ್ ಸರ್ಕಾರ ವ್ಯರ್ಥ, ಮಾಫಿಯಾ ವಿರುದ್ಧ ಯೋಗಿ ನಡೆ ಮೆಚ್ಚಿದ ಮೂಸೆವಾಲ ತಂದೆ!

ರಾಜಸ್ಥಾನದಿಂದ ಅನಾಮಿಕ ಇಮೇಲ್ ಮಾಡಲಾಗಿದೆ. ಎಪ್ರಿಲ್ 25ರೊಳಗೆ ಹತ್ಯೆ ಮಾಡುವುದಾಗಿ ಹೇಳಲಾಗಿದೆ. ಇದು ಸಿಧುಮೂಸೆವಾಲ ತಂದೆ ಹಾಗೂ ಕುಟುಂಬದ ಆತಂಕ ಹೆಚ್ಚಿಸಿದೆ. ಸಿಧು ಹತ್ಯೆ ಬಳಿಕ ಸಿಧು ಕುಟುಂಬಕ್ಕೆ ಹಲವು ಬೆದರಿಕೆ ಕರೆಗಳು ಬಂದಿದೆ. ಆದರೆ ಈ ಬಾರಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಖುದ್ದು ಬೆದರಿಕೆ ಹಾಕಿದೆ. ಇಷ್ಟೇ ಅಲ್ಲ ಸಮಯವನ್ನು ನಿಗದಿಪಡಿಸಿದೆ. ಹೀಗಾಗಿ ಆತಂಕ ಹೆಚ್ಚಾಗಿದೆ.  ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪಂಜಾಬ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಸಿಧೂ ಮೂಸೆವಾಲ ಕುಟುಂಬಕ್ಕೆ ಭದ್ರತೆ ಒದಗಿಸಿದ್ದಾರೆ.  

 

Sidhu Moosewala ಆಸ್ವಸ್ಥಗೊಂಡ ಸಿಧು ಮೂಸೆವಾಲಾ ತಂದೆ, ಪಟಿಯಾಲ ಆಸ್ಪತ್ರೆಗೆ ದಾಖಲು!

ಇತ್ತ ಸಿಧು ಮೂಸೆವಾಲ ಹಂತಕರನ್ನು ಜೈಲಿನಲ್ಲಿಡಲು ಪಂಜಾಬ್ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಮೂಸೆವಾಲ ಕುಟುಂಬಕ್ಕೆ ಯಾವ ರೀತಿ ಭದ್ರತೆ ನೀಡಲು ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಮುಖ್ಯ ಕಾರಣ ಇತ್ತೀಚೆಗೆ  ಮೂಸೆವಾಲಾ ಹತ್ಯೆ ಕೇಸಿನ ಆರೋಪಿ ದೀಪಕ್‌ ಟಿನು ಪೊಲೀಸ್‌ ವಶದಿಂದ ಪರಾರಿಯಾದ ಘಟನೆ ನಡೆದಿತ್ತು. ಬೇರೆಂದು ಪ್ರಕರಣದ ವಿಚಾರಣೆಗಾಗಿ ದೀಪಕ್‌ನನ್ನುಮೆಹ್ಸಾನಾ ಜಿಲ್ಲೆಗೆ ಕರೆತಂದಿದ್ದ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಘಟನೆ ಸಂಬಂಧ ಓರ್ವ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪಾತಕಿ ಲಾರೆನ್ಸ್‌ ಬಿಷ್ಣೋಯ್‌ನ ಸಹವರ್ತಿಯಾದ ಟಿನು ಸೇರಿದಂತೆ 6 ಜನರ ತಂಡ ಮೇ 29 ರಂದು ಸಿಧು ಜೀಪಿನಲ್ಲಿ ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ವಾಹನದ ಮೇಲೆ ದಾಳಿ ಮಾಡಿ ಗುಂಡು ಹಾರಿಸಿ ಹತ್ಯೆಗೈದಿತ್ತು.

click me!