ಅ.29ರಿಂದ ಭಜರಂಗಿ ಅಬ್ಬರ, ಪೆಗಾಸಸ್ ಪ್ರಕರಣಕ್ಕೆ ಸುಪ್ರೀಂ ಉತ್ತರ; ಅ.27ರ ಟಾಪ್ 10 ಸುದ್ದಿ!

Published : Oct 27, 2021, 05:28 PM ISTUpdated : Oct 27, 2021, 09:40 PM IST
ಅ.29ರಿಂದ ಭಜರಂಗಿ ಅಬ್ಬರ, ಪೆಗಾಸಸ್ ಪ್ರಕರಣಕ್ಕೆ ಸುಪ್ರೀಂ ಉತ್ತರ; ಅ.27ರ ಟಾಪ್ 10 ಸುದ್ದಿ!

ಸಾರಾಂಶ

ಜನತೆಗೆ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ ಎಂದು ಪೆಗಾಸಸ್ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಹೇಳಿದೆ. ಹಿಂದೂಗಳೆದರು ನಮಾಜ್ ಮಾಡಿದರೆ ಹೆಚ್ಚು ತೃಪ್ತಿ ಎಂದಿದ್ದ ವಕಾರ್ ಯೂನಿಸ್ ಕ್ಷಮೆ ಯಾಚಿಸಿದ್ದಾರೆ. ಅಕ್ಟೋಬರ್ 29 ರಂದು ಭಜರಂಗಿ 2 ಬಿಡುಗಡೆಯಾಗಲಿದೆ. ಶಾರೂಖ್‌ನನ್ನು ತಡೆದ NCB ಆಫೀಸರ್ ವಾಂಖೆಡೆ,  23 ಲಕ್ಷ ನೌಕರರಿಗೆ ಉದ್ಯೋಗ ನಷ್ಟ ಸೇರಿದಂತೆ ಅಕ್ಟೋಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪೆಗಾಸಸ್: ಜನತೆಗೆ ತಮ್ಮ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ, ಕೇಂದ್ರಕ್ಕೆ ಸುಪ್ರೀಂ ತರಾಟೆ!

 ಇಸ್ರೇಲ್‌(Isrel) ಕಂಪನಿಯ ಗೂಢಚರ್ಯ ತಂತ್ರಾಂಶ ‘ಪೆಗಾಸಸ್‌’(Pegasus) ಬಳಸಿ ಕೇಂದ್ರ ಸರ್ಕಾರ ಪತ್ರಕರ್ತರು ಸೇರಿ ದೇಶದ 300ಕ್ಕೂ ಹೆಚ್ಚು ಗಣ್ಯರ ಮೊಬೈಲ್‌ ಫೋನ್‌ಗೆ ಕನ್ನ ಹಾಕಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ತೀವ್ರ ಹಿನ್ನಡೆಯಾಗಿದೆ.

ಕೊರೋನಾಗೆ ಶೇ.25ರಷ್ಟು ರೆಸ್ಟೋರೆಂಟ್‌ಗಳು ಬಂದ್‌: 23 ಲಕ್ಷ ನೌಕರರಿಗೆ ಉದ್ಯೋಗ ನಷ್ಟ!

ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸಿದ ಆರ್ಥಿಕ ಸಂಕಷ್ಟದಿಂದ 2021ನೇ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಶೇ.25ರಷ್ಟುರೆಸ್ಟೋರೆಂಟ್‌ಗಳು ಬಂದ್‌ ಆಗಿರುವ ಸಾಧ್ಯತೆಯಿದೆ. ಅಲ್ಲದೆ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕನಿಷ್ಠ 23 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!

 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ (Pakistan) ವಿರುದ್ದ ಭಾರತದ ಸೋಲಿನ ನಂತರ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಭಾರತವನ್ನು ಟೀಕಿಸುವ ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. ಒಂದಲ್ಲ ಒಂದು ರೀತಿ ಭಾರತವನ್ನು ಮುಜುಗರಕ್ಕೀಡು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. 

ಮನಿಕೆ ಮಗೆ ಹಿತೆ ಹಾಡಿಗೆ ಬೆಲ್ಲಿ ಕುಣಿಸಿ, ಶಹಭ್ಭಾಸ್ ಎನಿಸಿಕೊಂಡ ವೈಯ್ಯಾರಿ..!

ಮನಿಕೆ ಮಗೆ ಹಿತೆ ಹಾಡು ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಈ ಹಾಡನ್ನು ರಿಮೇಕ್ ಮಾಡಿ ಕೆಲವರು ಫನ್ ಮಾಡಿದರೆ, ಇನ್ನು ಕೆಲವರು ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಇಲ್ಲೊಬ್ಬ ವೈಯ್ಯಾರಿ ಈ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಈಕೆಯ ಡ್ಯಾನ್ಸಿಗೆ ನೋಡುಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಭಜರಂಗಿ ಹವಾ... ವಿನೋದ್ ರಾಜ್, ಯಶ್ ಕೊಂಡಾಡಿದ ಶಿವಣ್ಣ

ಜಯಣ್ಣ ಬೋಗಣ್ಣ ದಿಲ್‌ದಾರ್ ವ್ಯಕ್ತಿಗಳು. ಸಿನಿಮಾದ‌ ಎಲ್ಲ ವರ್ಗದಲ್ಲೂ ಅದ್ಭುತ ಕೆಲಸ ಆಗಿದೆ. ಶ್ರುತಿ ಭಾರತದ ಫೈನೆಸ್ಟ್ ನಟಿ ಅಂದ್ರೆ ತಪ್ಪಾಗಲ್ಲ. ಬ್ಯೂಟಿಫುಲ್ ಆಕ್ಟರ್ .. ನಾವೆಲ್ಲಾ ಎಂಜಾಯ್ ಮಾಡಿಕೊಂಡು ಭಜರಂಗಿ (Bhajarangi 2) ಸಿನಿಮಾ ಮಾಡಿದ್ದೇನೆ. ಅವರಿಗೆಲ್ಲಾ ಬೋರ್ ಆಗದ ಹಾಗೆ ಸಿನಿಮಾ‌ ಸೆಟ್ ನಲ್ಲಿ ನಾನಿದ್ದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar)ನುಡಿದರು.

ಮುಂಬೈ ಏರ್ಪೋರ್ಟ್‌ನಲ್ಲಿ ಶಾರೂಖ್‌ನನ್ನು ತಡೆದ NCB ಆಫೀಸರ್ ವಾಂಖೆಡೆ

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ(Drugs Case) ತನಿಖೆಯ ಮುಖ್ಯಸ್ಥರಾಗಿರುವ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು 2011 ರಲ್ಲಿ ಕಸ್ಟಮ್ಸ್ ಸಹಾಯಕ ಕಮಿಷನರ್ ಆಗಿದ್ದಾಗ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ಶಾರುಖ್ ಖಾನ್ ಅವರನ್ನು ತಡೆದಿದ್ದರು.

ಮೊಬೈಲ್ ಕಳೆದು ಹೋಯ್ತಾ? Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

ಈಗಂತೂ ಶಾಪಿಂಗ್ (Shopping) ಮಾಡಲು ಜೇಬಿನಲ್ಲಿ ಪರ್ಸ್ ಇರಲೇಬೇಕಾದ ಅಗತ್ಯವಿಲ್ಲ, ಕೈಯಲ್ಲಿ ಮೊಬೈಲ್ (Mobile) ಇದ್ರೆ ಸಾಕು. ಹೌದು, ತರಕಾರಿಯಿಂದ ಹಿಡಿದು ಬಟ್ಟೆ ತನಕ ಎಲ್ಲ ವಸ್ತುಗಳ ಖರೀದಿಗೆ ಮೊದಲಿನಂತೆ ಕ್ಯಾಷ್ ಅಥವಾ ಕಾರ್ಡ್ (Cash and Card) ಇರಬೇಕಾದ ಅಗತ್ಯವಿಲ್ಲ. 

ಟಾಟಾ ಪವರ್‌ನಿಂದ ದೇಶಾದ್ಯಂತ 1000 EV ಚಾರ್ಚಿಂಗ್ ಕೇಂದ್ರಗಳು

ದೇಶದ ಬಹುದೊಡ್ಡ ಕಂಪನಿಯಾಗಿರುವ ಟಾಟಾದ ಅಂಗ ಸಂಸ್ಥೆ, ಟಾಟಾ ಪವರ್ (TATA Power) ಸದ್ಯ ರಾಷ್ಟ್ರವ್ಯಾಪಿ 1000 ಎಲೆಕ್ಟ್ರಿಕ್ ವೆಹಿಕಲ್ (EV) ಚಾರ್ಜಿಂಗ್ ಸ್ಟೇಷನ್‌ಗಳ ಜಾಲವನ್ನು ನಿರ್ವಹಿಸುತ್ತಿದೆ. ಆ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುತ್ತಿದೆ. ಇದರಿಂದ ಇವಿ ವಾಹನಗಳ ಮಾಲೀಕರಿಗೆ ತುಂಬ ನೆರವಾಗಲಿದೆ.

ಗೆಳೆಯ, ಸ್ಟೈಲಿಷ್ಟ್ ಪ್ರೀತಂ ಜೊತೆ ಫಾರಿನ್‌ಗೆ ಹಾರಿದ ಸಮಂತಾ

ಇತ್ತೀಚೆಗಷ್ಟೇ ನಟಿ ಸಮಂತಾ ರುಥ್ ಪ್ರಭು ಹಿಮಾಲಯದಿಂದ(Himalaya) ಬಂದಿದ್ದರು. ಚಾರ್‌ಧಮ್(Chardham) ಯಾತ್ರೆ ಮುಗಿಸಿ ಬಂದ ಸಮಂತಾ ಮತ್ತೆ ಟ್ರಿಪ್ ಹೋಗಿದ್ದಾರೆ. ಈ ಬಾರಿ ಸ್ಟೈಲಿಷ್ಟ್ ಪ್ರೀತಂ ಜೊತೆಗೆ ಫಾರಿನ್‌ ಟ್ರಿಪ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ
ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ