ಭಾರತೀಯ ವಾಯುಸೇನೆಗೆ ಶಕ್ತಿ ತುಂಬಲಿದೆ AMCA!

By Suvarna News  |  First Published Oct 27, 2021, 4:03 PM IST

* ಭಾರತದ ಸುಧಾರಿತ ಮಧ್ಯಮ ಯುದ್ಧ ವಿಮಾನ ಕಾರ್ಯಕ್ರಮ

* ಭಾರತೀಯ ವಾಯುಸೇನೆಗೆ ಬಲ ತುಂಬಿದ AMCA

* ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ ಮಾಹಿತಿ


ಗಿರೀಶ್ ಲಿಂಗಣ್ಣ

 ಬೆಂಗಳೂರು(ಅ.27): ಭಾರತದ ಸುಧಾರಿತ ಮಧ್ಯಮ ಯುದ್ಧ ವಿಮಾನ (AMCA) ಕಾರ್ಯಕ್ರಮವು ಭಾರತೀಯ ವಾಯುಪಡೆಯ ಆಧುನೀಕರಣ ಮತ್ತು ಸ್ವದೇಶೀಕರಣದ  ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.

Tap to resize

Latest Videos

ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!

 ಆದರೂ ಏರ್‌ಕ್ರಾಫ್ಟ್ ಎಂಜಿನ್‌ನ ಅಭಿವೃದ್ಧಿಯು ಇಲ್ಲಿಯವರೆಗೆ ಅಷ್ಟೇನೂ ಯಶಸ್ವಿಯಾಗಿಲ್ಲ. ತುರ್ತುಸ್ಥಿತಿಯನ್ನು ಪರಿಗಣಿಸಿ, ಬಹು-ಪಾತ್ರದ ವಿಮಾನವು ವಿದೇಶದಿಂದ ಅಭಿವೃದ್ಧಿಪಡಿಸಲಾದ ಎಂಜಿನ್‌ಗಳಿಂದ ಶಕ್ತಿಯನ್ನು ಪಡೆಯುತ್ತದೆ. ವಿಮಾನಕ್ಕೆ ಯಾವ ಎಂಜಿನ್ ಶಕ್ತಿ ನೀಡಲಿದೆ ಎಂಬ ಬಗ್ಗೆ ಊಹಾಪೋಹಗಳಿವೆ.

ರಷ್ಯಾದ ಜತೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಬೇಕಿದ್ದ ಐದನೇ ತಲೆಮಾರಿನ ಫೈಟರ್ ಏರ್‌ಕ್ರಾಫ್ಟ್ ಯೋಜನೆಯಿಂದ ಭಾರತವು ಹಿಂದೆ ಸರಿದ ಮೇಲೆ, ಮೇಕ್-ಇನ್-ಇಂಡಿಯಾ ಉಪಕ್ರಮದ ಅಡಿಯಲ್ಲಿ ಭಾರತವು ಸ್ವದೇಶಿ ಸ್ಟೆಲ್ತ್ ಏರ್‌ಕ್ರಾಫ್ಟ್ ಅನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿತು. ಈಗಾಗಲೇ 5.5 ತಲೆಮಾರಿನ ವಿಮಾನ ಎನ್ನಲಾಗುತ್ತಿರುವ ಹಾಗೂ ಶೀಘ್ರದಲ್ಲೇ ಪ್ರೊಟೊ ಮಾದರಿಯ ಉತ್ಪಾದನಾ ಹಂತಕ್ಕೆ ಪ್ರವೇಶಿಸುತ್ತಿರುವ ಎಎಂಸಿಎ (AMCA) ಯನ್ನು ಐಎಎಫ್ (IAF) ಮಾಜಿ ಮುಖ್ಯಸ್ಥ ಆರ್‌.ಕೆ.ಎಸ್. ಭದೌರಿಯಾ ಉಲ್ಲೇಖಿಸಿದಂತೆ ಆರನೇ ತಲೆಮಾರಿನ ತಂತ್ರಜ್ಞಾನದೊಂದಿಗೆ ಸೇರಿಸಲಾಗುವುದು.

ಅದರಂತೆ, ಮಾರ್ಗದರ್ಶಿ ಕ್ಷಿಪಣಿಗಳು, ಉನ್ನತ ಕ್ಷಿಪಣಿ-ವಿರೋಧಿ ಮತ್ತು ಎಚ್ಚರಿಕೆಯ ವ್ಯವಸ್ಥೆಗಳೊಂದಿಗೆ ವಿಮಾನವನ್ನು ಸಜ್ಜುಗೊಳಿಸಲು ಡಿಆರ್‌ಡಿಒ (DRDO) ಯೋಜಿಸುತ್ತಿದೆ. ಇದು ಏವಿಯಾನಿಕ್ಸ್ ಸೂಟ್ ಸುಧಾರಿತ ರಾಡಾರ್‌ಗಳು ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳನ್ನು ಹೊಂದಿದೆ. ಎಎಂಸಿಎ (AMCA) ಒಳಗೊಂಡಿರುವ ಶಸ್ತ್ರಾಸ್ತ್ರದ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಏಕೆಂದರೆ ಅದರ ರಹಸ್ಯ ಕಾರ್ಯಕ್ಷಮತೆಯನ್ನು ಸಂರಕ್ಷಿಸಲು ಮತ್ತು ಗರಿಷ್ಠಗೊಳಿಸಲು ಆಂತರಿಕ ಶಸ್ತ್ರಾಸ್ತ್ರ ಸಂಗ್ರಹದೊಂದಿಗೆ ಇದನ್ನು ನಿರ್ಮಿಸಲಾಗುವುದು. ಇದು ಥ್ರಸ್ಟ್-ವೆಕ್ಟರ್ ಎಂಜಿನ್‌ಗಳನ್ನು ಹೊಂದಿರುತ್ತದೆ, ಉನ್ನತ ಕೌಶಲದೊಂದಿಗೆ ಸಕ್ರಿಯಗೊಳಿಸುತ್ತದೆ. ಫೈಟರ್ ಜೆಟ್ 2024ರ ವೇಳೆಗೆ ತನ್ನ ಮೊದಲ ಹಾರಾಟವನ್ನು ಮಾಡುವ ನಿರೀಕ್ಷೆಯಿದೆ. ಆದರೆ ಎಎಂಸಿಎಗೆ ಯಾವ ಎಂಜಿನ್ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ಐಎಎಫ್ ಇನ್ನೂ ಅಂತಿಮಗೊಳಿಸಿಲ್ಲ.

ಪಾಕ್ ಗಡಿ ಬಳಿ ಭಾರತದ ಮೊದಲ 'ಎಮರ್ಜೆನ್ಸಿ ಲ್ಯಾಂಡಿಂಗ್ ಫೀಲ್ಡ್' ಉದ್ಘಾಟನೆ!

ಎಂಜಿನ್ ಪೂರೈಸಲು ಮೂರು ಕಂಪನಿಗಳು- ಬ್ರಿಟಿಷ್ ಸಂಸ್ಥೆ ರೋಲ್ಸ್ ರಾಯ್ಸ್, ಫ್ರೆಂಚ್ ಕಂಪನಿ ಸಫ್ರಾನ್ ಮತ್ತು ಯುಎಸ್ ಮೂಲದ ಜನರಲ್ ಎಲೆಕ್ಟ್ರಿಕಲ್ (ಜಿಇ)- ಸ್ಪರ್ಧೆಯಲ್ಲಿವೆ. ಮೂಲಗಳು ಬಹಿರಂಗಪಡಿಸಿರುವಂತೆ, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ರೋಲ್ಸ್ ರಾಯ್ಸ್ ಏರೋ ಇಂಡಿಯಾ 2021ರಲ್ಲಿ ತಮ್ಮ ಪ್ರಸ್ತುತ ಪಾಲುದಾರಿಕೆಯನ್ನು ವಿಸ್ತರಿಸಲು ಒಪ್ಪಿಕೊಂಡಿವೆ. ರೋಲ್ಸ್ ರಾಯ್ಸ್ ಭಾರತೀಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ. ಭಾರತೀಯ ಸಶಸ್ತ್ರ ಪಡೆಗಳು ಅಡೂರ್ MK811 ಅನ್ನು ಜಾಗ್ವಾರ್‌ನಲ್ಲಿ, Mk871 ಅನ್ನು AJT ಗಳಲ್ಲಿ ಮತ್ತು ಇತರ ವಿಮಾನಗಳಲ್ಲಿ ಬಳಸುತ್ತಿವೆ. ಬ್ರಿಟಿಷ್ ಕಂಪನಿಯು ಭಾರತದಲ್ಲಿ ಜೆಟ್ ಎಂಜಿಗಳ ಸಹ-ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಆಸಕ್ತಿಯನ್ನು ತೋರಿಸಿದೆ, ಅದಕ್ಕಾಗಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀಡುವುದಕ್ಕೂ ಮುಂದಾಗಿದೆ.

ತನ್ನ ಯುರೋಪಿಯನ್ ಪ್ರತಿಸ್ಪರ್ಧಿ ರೋಲ್ಸ್ ರಾಯ್ಸ್ ರೀತಿಯಲ್ಲೇ ಮಹತ್ವದ ಫ್ರೆಂಚ್ ಕಂಪನಿಯಾದ ಸಫ್ರಾನ್ ಕೂಡ ಈ ಓಟದಲ್ಲಿ ಹಿಂದುಳಿದಿಲ್ಲ. ಐಎಎಫ್ ಮತ್ತು ಭಾರತೀಯ ನೌಕಾಪಡೆಯಿಂದ ಬಳಸಲಾಗುವ 500ಕ್ಕೂ ಹೆಚ್ಚು ಯುದ್ಧ ವಿಮಾನಗಳಲ್ಲಿ ಇದು ಅಭಿವೃದ್ಧಿ ಪಡಿಸಿರುವ ಜಡತ್ವದ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದು ದೇಶದ ಸಶಸ್ತ್ರ ಪಡೆಗಳಿಗೆ ಟರ್ಬೈನ್ ಎಂಜಿನ್‌ಗಳ ಪ್ರಮುಖ ಪೂರೈಕೆದಾರ ಸಂಸ್ಥೆಯೂ ಆಗಿದೆ.

ಅಮೆರಿಕನ್ ಕಂಪನಿ ಜಿಇ (GE) ತೇಜಸ್ MK1 ಗಾಗಿ F404IN20 ಎಂಜಿನ್‌ಗಳನ್ನು ಹಾಗೂ ತೇಜಸ್ MK-2 ಗಾಗಿ ಮತ್ತೊಂದು ಎಂಜಿನ್ ಪೂರೈಸುತ್ತಿದೆ. ಯುದ್ಧ ವಿಮಾನ, ಮಿಲಿಟರಿ ಸಾರಿಗೆ, ಮತ್ತು ಹೆಲಿಕಾಪ್ಟರ್‌ಗಳಿಗೆ ಅಗತ್ಯವಿರುವ ಸಮಗ್ರ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳನ್ನು ಜಿಇ ಪೂರೈಸುತ್ತದೆ.  ಕೆಲವು ಪ್ರಮುಖ ವಿದೇಶಿ ಸಹಯೋಗಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿರುವ ಡಿಆರ್‌ಡಿಒ, ಸ್ಥಳೀಯ ಎಂಜಿನ್ ಅಭಿವೃದ್ಧಿಪಡಿಸುವ ತನಕ ಮಾತ್ರ ಎಎಂಸಿಎಯು ಎಫ್414 (F414) ಎಂಜಿನ್‌ನಿಂದ ಶಕ್ತಿಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ. ಎಫ್414 ಮೊದಲ 6-7 ವರ್ಷಗಳವರೆಗೆ ಬಳಕೆಯಲ್ಲಿದೆ.

Author: Girish Linganna
Director, ADD Engineering India
( An Indo- German Company)

click me!