ದೆಹಲಿ ಸರ್ಕಾರದಿಂದ ಅಯೋಧ್ಯೆಗೆ ಉಚಿತ ಪ್ರವಾಸ: ಕೇಜ್ರಿವಾಲ್‌ ಘೋಷಣೆ!

By Suvarna News  |  First Published Oct 27, 2021, 3:17 PM IST

*ನಾನು ಶ್ರವಣಕುಮಾರನಾಗಲು ಇಚ್ಛಿಸುತ್ತೇನೆ : ಕೇಜ್ರಿವಾಲ್‌
*ಹಿರಿಯ ನಾಗರಿಕರಿಗೆ ಅಯೋಧ್ಯೆಯ ಉಚಿತ ಪ್ರವಾಸ
*ಪ್ರವಾಸದ ಸಂಪೂರ್ಣ ವೆಚ್ಚ ಭರಿಸಲಿರುವ ದೆಹಲಿ ಸರ್ಕಾರ


ನವದೆಹಲಿ (ಅ. 27 ): ಅಯೋಧ್ಯೆಯ ರಾಮ ಮಂದಿರ ಭೇಟಿಯ ನಂತರ ಅರವಿಂದ್‌ ಕೇಜ್ರಿವಾಲ್ (Aravind Kejriwal) ದೆಹಲಿ ಸರ್ಕಾರದ "ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ" ಯಲ್ಲಿ ಅಯೋಧ್ಯೆಯನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ ಜಗನ್ನಾಥ ಪುರಿ, ಉಜ್ಜಯಿನಿ, ಶಿರಡಿ, ಅಮೃತಸರ, ಜಮ್ಮು, ದ್ವಾರಕಾ, ತಿರುಪತಿ, ರಾಮೇಶ್ವರಂ, ಹರಿದ್ವಾರ, ಮಥುರಾ ಮತ್ತು ಬೋಧಗಯಾಗಳನ್ನು ಈ ಯೋಜನೆಗೆ ಸೇರಿಸಲಾಗಿತ್ತು. ದೆಹಲಿಯಿಂದ ವೃದ್ಧರು ಯಾವುದೇ ವೆಚ್ಚವಿಲ್ಲದೆ ರಾಮ್ ಲಲ್ಲಾನ ಆಶೀರ್ವಾದ ಪಡೆಯಲು ಈಗ ಅಯೋಧ್ಯೆಗೆ (Ayodhya) ಭೇಟಿ ನೀಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಿನ್ನು ಕೆಲವೇ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು  (Uttar Pradesh Assembly Elections 2022) ನಡೆಯಲಿವೆ ಎಂಬುವುದು ಉಲ್ಲೇಖನೀಯ.

ಯುಪಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಸಜ್ಜು, ಕಮಲ ಪಾಳಯದ ಮಾಸ್ಟರ್‌ ಪ್ಲಾನ್!

Latest Videos

undefined

ಅರವಿಂದ್‌ ಕೇಜ್ರಿವಾಲ್ ಅಯೋಧ್ಯೆ ಭೇಟಿಯ ಒಂದು ದಿನ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ. ಅಕ್ಟೋಬರ್‌ 26 ಮಂಗಳವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅಯೋಧ್ಯೆಗೆ ಭೇಟಿ ನೀಡಿ ರಾಮನ ಲಲ್ಲಾನ ಆಶೀರ್ವಾದ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ದೆಹಲಿಯ ಉಪ-ಮುಖ್ಯಮಂತ್ರಿ ಮನಿಷ್‌ ಸಿಸೋದಿಯಾ (Manish Sisodia) ಹಾಗೂ ಆಮ್‌ ಆದ್ಮಿ ಪಕ್ಷದ ಕೇಂದ್ರ ಸಚಿವ ಹಾಗೂ ಉತ್ತರಪ್ರದೇಶ ಉಸ್ತುವಾರಿಯಾದ ಸಂಜಯ್‌ ಸಿಂಗ್‌ (Sanjay Singh) ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದರು. 

ವಾರಾಣಸಿಯ ಅತೀ ದೊಡ್ಡ ಆರೋಗ್ಯ ಯೋಜನೆ ಉದ್ಘಾಟಿಸಿದ ಪಿಎಂ ಮೋದಿ!

ಡಿಜಿಟಲ್‌ ಪ್ರೆಸ್‌ ಕಾನ್ಫರೆನ್ಸ್‌ (Digital Press conference) ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌ "ದೆಹಲಿ ಸಂಪುಟವು ಅಯೋಧ್ಯೆಯನ್ನು ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆಯಲ್ಲಿ ಸೇರಿಸಲು ಒಪ್ಪಿಗೆ ನೀಡಿದೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ. ಈ ಹಿಂದೆ ಜಗನ್ನಾಥ ಪುರಿ, ಉಜ್ಜಯಿನಿ, ಶಿರಡಿ ಸೇರಿದಂತೆ ಹಲವು ತೀರ್ಥಯಾತ್ರೆ ಸ್ಥಳಗಳನ್ನುಈ ಯೋಜನೆಗೆ ಸೇರಿಸಲಾಗಿತ್ತು ಎಂದು ಹೇಳಿದ್ದಾರೆ.

ಅಯೋಧ್ಯೆಗೆ ಉಚಿತ ಪ್ರವಾಸ!

ಈ ಯೋಜನೆಯಡಿ ಹಿರಿಯ ನಾಗರಿಕರ ಸಂಪೂರ್ಣ ಪ್ರವಾಸದ ವೆಚ್ಚವನ್ನು ದೆಹಲಿ ಸರಕಾರ ಭರಿಸುತ್ತದೆ. ಈ ಯೋಜನೆಯಡಿ ಈಗಾಗಲೇ 35,000 ಜನ ಪ್ರಯಾಣ ಮಾಡಿದ್ದಾರೆ ಎಂದು ಕೇಜ್ರಿವಾಲ್‌ ಮಾಹಿತಿ ನೀಡಿದ್ದಾರೆ. ಎಲ್ಲರಿಗೂ ಅಯೊಧ್ಯೆ ಪ್ರವಾಸವನ್ನು ಆಯೋಜಿಸುವ ಮೂಲಕ ನಾನು 'ಶ್ರವಣ ಕುಮಾರನಾಗಲು' ಇಚ್ಛಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಈ ಯೋಜನೆ ಸ್ಥಗಿತಗೊಂಡಿತ್ತು. ಮುಂದಿನ ತಿಂಗಳ ಒಳಗಾಗಿ ಮತ್ತೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಗುವುದು ಎಂದು ಕೇಜ್ರಿವಾಲ್‌ ಭರವಸೆ ನೀಡಿದ್ದಾರೆ.

ರಂಗೇರಿದ ಉತ್ತರಪ್ರದೇಶ ಚುನಾವಣೆ!

ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ 403 ವಿಧಾನಸಭೆ ಕ್ಷೇತ್ರಗಳಲ್ಲೂ ಆಮ್‌ ಆದ್ಮಿ ಪಕ್ಷ (Aam Aadmi Party) ಅಭ್ಯರ್ಥಿಗಳನ್ನು ಕಣಕ್ಕಿಳಸಲಿದೆ.  ಈಗಾಗಲೇ ಉತ್ತರಪ್ರದೇಶ ಚುನಾವಣೆ ರಂಗೇರಿದ್ದು ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಆರಂಭಿಸಿವೆ. ಉತ್ತರ ಪ್ರದೇಶದಲ್ಲಿ ಪಾರ್ಟಿಯನ್ನು ಶತಾಯಗತಾಯ ಮೇಲೆತ್ತಲು ಜೂನಿಯರ್ ಇಂದಿರಾ ಅಲಿಯಾಸ್ ಪ್ರಿಯಾಂಕಾ ಗಾಂಧಿ ಈಗಾಗಲೇ ಹೋರಾಟ ಆರಂಭಿಸಿದ್ದಾರೆ. 

ಉ. ಪ್ರದೇಶ ಪಡೆಯಲು ಕಾಂಗ್ರೆಸ್‌ನ ಸಪ್ತ ಪ್ರತಿಜ್ಞೆ: ಇದು ಪ್ರಿಯಾಂಕಾ ಮಾಸ್ಟರ್ ಪ್ಲಾನ್!

ಇನ್ನೂ ಇತ್ತ  ಬಿಜೆಪಿಯ(BJP) ಸೋಶಿಯಲ್ ಮೀಡಿಯಾ(Social media) ಟೀಂ ಹೊಸ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಮರಳಲು ಪ್ರಚಾರ ನಡೆಸುತ್ತಿದೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡ ತನ್ನ ಚಟುವಟಿಕೆಯನ್ನು ಹೆಚ್ಚಿಸಿದೆ ಮತ್ತು ಆನ್‌ಲೈನ್ ಅಭಿಯಾನವನ್ನು(Online campaign) ಪ್ರಾರಂಭಿಸಿದೆ. ಈ ತಂಡವು ವಿರೋಧವನ್ನು ಎದುರಿಸಲು ಉಭಯ ಕಾರ್ಯತಂತ್ರದೊಂದಿಗೆ ಚುನಾವಣಾ ಪ್ರಚಾರಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ, ಯೋಗಿ ಸರ್ಕಾರದ(Yogi Govt) ಸಾಧನೆಗಳನ್ನು ಎಣಿಸಲಾಗುತ್ತಿದೆ. ಈ ಮಧ್ಯೆ ಕೇಜ್ರಿವಾಲ್‌ ಈ ಹೊಸ ಯೋಜನೆ ಚುನಾವಣೆ ಹಿನ್ನೆಲೆಯಲ್ಲೇ ಜಾರಿ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

click me!