ನವದೆಹಲಿ: 'ಭಾರತ ಮತ್ತು ಪಾಕ್ ನಡುವೆ ಬಾಕಿ ಇರುವ ಏಕೈಕ ವಿಷಯವೆಂದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಸ್ತಾಂತರಿಸುವುದು ಎಂದು ಎಂದು ಭಾರತದ ವಿದೇಶಾಂಗ ಸಚಿವಾಲಯ ಪುನರುಚ್ಚರಿಸಿದೆ. ಈ ಮೂಲಕ ಪಿಒಕೆ ಖಾಲಿ ಮಾಡಿ ಎಂದು ಪಾಕ್‌ಗೆ ಭಾರತ ಮತ್ತೆ ಸಂದೇಶ ನೀಡಿದೆ. ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ವಿರುದ್ಧದ ಭಾರತ ಬೃಹತ್ ಸೇನಾ ಕಾರ್ಯಾ ಚರಣೆ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಯೋಧರ ನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಎಳೆಯಲಾಗಿದೆ' ಎಂದು ಹೇಳಿದ್ದಾರೆ. ಈ ಮೂಲಕ, 'ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಕೈ ಹಾಕಿದರೆ ಸರ್ವನಾಶ ಖಚಿತ' ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಪಂಜಾಬ್‌ನ ಆದಂಪುರದ ವಾಯುನೆಲೆಯಲ್ಲಿ ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯಾದ ರಷ್ಯಾ ನಿರ್ಮಿತ ಎಸ್-400 ಮತ್ತು ಮಿಗ್-29 ಮುಂದೆ ನಿಂತು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ನೀವು (ಭಾರತೀಯ ಸೈನಿಕರು) ಮಾಡಿರುವ ಕೆಲಸ ಅಭೂತಪೂರ್ವ, ಆಕಲ್ಪನೀಯ ಮತ್ತು ಅದ್ಭುತ ಎಂದು ಹೇಳಿ ಯೋಧರನ್ನು ಹುರಿದುಂಬಿಸಿದರು.

10:49 PM (IST) May 14
ಭಾರತದ ಸುರಕ್ಷಿತ ನಗರ ಯಾವುದು? ಹೈದರಾಬಾದ್ ವಿಶ್ವವಿದ್ಯಾಲಯ ನಡೆಸಿದ ಸರ್ವೆ ಪಟ್ಟಿ ಪ್ರಕಟಗೊಂಡಿದೆ. ವಿಶೇಷ ಅಂದರೆ ಬೆಂಗಳೂರು ನಂ.1 ಸ್ಥಾನ ಪಡೆದುಕೊಂಡಿದೆ. ಇನ್ನು ಅತೀ ಕಡಿಮೆ ಸುರಕ್ಷತೆ ಹೊಂದಿರುವ ನಗರ ಯಾವುದು ಗೊತ್ತಾ?
ಪೂರ್ತಿ ಓದಿ09:35 PM (IST) May 14
ರಷ್ಯಾ ಮಹಿಳೆಯ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಯೋಧರ ಶೌರ್ಯವನ್ನು ರಷ್ಯಾ ಮಹಿಳೆ ಶ್ಲಾಘಿಸಿದ್ದಾರೆ. ಇದೇ ವೇಳೆ ಭಾರತ ನನ್ನ ಶಾಂತಿಯುತ ಮನೆ. ಭಾರತೀಯ ಸೈನಿಕರ ಕಾರಣದಿಂದ ನಾನು ನೆಮ್ಮದಿಯಾಗಿ ಮಲಗುತ್ತಿದ್ದೇನೆ, ದೇಶ ತೊರೆಯುವುದಿಲ್ಲ ಎಂದು ರಷ್ಯಾ ಮಹಿಳೆ ಹೇಳಿದ್ದಾರೆ.
ಪೂರ್ತಿ ಓದಿ09:12 PM (IST) May 14
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್‌ನ ಮೃತದೇಹ ಹಾಸನ ಜಿಲ್ಲೆಯ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಪ್ರಪಾತಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಪೂರ್ತಿ ಓದಿ09:00 PM (IST) May 14
ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಯಾವ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಲ್ಲಿ ಮಳೆಯಾಗಲಿದೆ?
ಪೂರ್ತಿ ಓದಿ08:14 PM (IST) May 14
ಇಂಡೋ ಪಾಕ್ ಸಂಘರ್ಷದ ಕಾರಣದಿಂದ ಸ್ಥಗಿತಗೊಂಡ ಐಪಿಎಲ್ ಮೇ.17ರಿಂದ ಆರಂಭಗೊಳ್ಳುತ್ತಿದೆ. ಆದರೆ ಇನ್ನುಳಿದ ಆವೃತ್ತಿಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿದೆ. ಪ್ಲೇಯರ್ ರಿಪ್ಲೇಸ್‌ಮೆಂಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಏನಿದು ಹೊಸ ರೂಲ್ಸ್
ಪೂರ್ತಿ ಓದಿ07:34 PM (IST) May 14
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಹೆಚ್ಆರ್(ಹ್ಯೂಮನ್ ರಿಸೋರ್ಸ್ ) ಉದ್ಯೋಕಕ್ಕೆ ಕುತ್ತು ನೀಡಿದೆ. ಪ್ರತಿಷ್ಠಿತ ಐಬಿಎಂ ಕಂಪನಿಯಲ್ಲಿ ಬರೋಬ್ಬರಿ 200 ಹೆಚ್ಆರ್ ಮ್ಯಾನೇಜರ್‌ಗಳ ಬದಲು ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲಾಗಿದೆ.
ಪೂರ್ತಿ ಓದಿ06:43 PM (IST) May 14
ಅಮಿರ್ ಖಾನ್ ಅಭಿನಯ, ಅಮೀರ್ ಖಾನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿರುವ ಸೀತಾರೆ ಜಮೀನ್ ಪರ್ ಸಿನಿಮಾದ ಟ್ರೇಲರ್ ಲಾಂಚ್ ಆದ ಬೆನ್ನಲ್ಲೇ ಬಾಯ್ಕಾಟ್ ಅಭಿಯಾನ ಆರಂಭಗೊಂಡಿದೆ. ಇದೇ ರೀತಿ ಬಾಯ್ಕಾಟ್ ಅಭಿಯಾನದಿಂದ ಪ್ಲಾಪ್ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅಮಿರ್‌ಗೆ ಇದೀಗ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.
ಪೂರ್ತಿ ಓದಿ06:03 PM (IST) May 14
ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಟೆನ್ಶನ್ ಮುಗಿದಿಲ್ಲ. ಪಾಕಿಸ್ತಾನ ಬೆದರಿಕೆ, ಅಂತಾರಾಷ್ಟ್ರೀಯ ಮಟ್ಟದ ಒತ್ತಡವನ್ನು ಸಮರ್ಥವಾಗಿ ಎದುರಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್‌ಗೆ ಭದ್ರತೆ ಹೆಚ್ಚಿಸಲಾಗಿದೆ.
ಪೂರ್ತಿ ಓದಿ05:47 PM (IST) May 14
ಭಯೋತ್ಪಾದಕ ಪಾಕಿಸ್ತಾನವನ್ನು ಶಿಕ್ಷಿಸಲು ಭಾರತದ ವಿಸ್ಮಯಕಾರಿ ಮಿಲಿಟರಿ ಯೋಜನೆಯಾದ ಆಪರೇಷನ್ ಸಿಂದೂರವನ್ನು ಭದ್ರತಾ ಪಡೆಗಳು ಎರಡು ವಾರಗಳಲ್ಲಿ ಯೋಜಿಸಿ ಕಾರ್ಯಗತಗೊಳಿಸಿದವು. ಈ ಯೋಜನೆಯನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳಿಸುವ ಸಾಮರ್ಥ್ಯವನ್ನು ಹಲವು ವರ್ಷಗಳ ಕಾಲ ಎಲ್ಲಾ ಪ್ರತಿಕೂಲತೆ ಮತ್ತು ವಿರೋಧದ ನಡುವೆಯೂ ಅಭಿವೃದ್ಧಿಪಡಿಸಲಾಯಿತು.
ಪೂರ್ತಿ ಓದಿ03:54 PM (IST) May 14
ಕಾಲು ಕೆರೆದು ಬಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಬಳಿಕ ಇದೀಗ ತಣ್ಣಗಾಗಿದೆ. ಆದರೆ ಪಾಕಿಸ್ತಾನ ಸೈಲೆಂಟ್ ಆದ ಬೆನ್ನಲ್ಲೇ ಇತ್ತ ಚೀನಾ ಕಿರಿಕ್ ಶುರು ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಕಿರಿಕ್ ಆರಂಭಿಸಿದ್ದು, ಭಾರತ ಖಡಕ್ ತಿರುಗೇಟು ನೀಡಿದೆ.
01:41 PM (IST) May 14
ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಯನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ದ್ವಂಸಗೊಳಿಸಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸುಳ್ಳು ಸುದ್ದಿ ಹಬ್ಬಿಸಿದವನು ಕೆನಡಾದ ಕೊಲಂಬಿಯಾ ನಿವಾಸಿ ಅನೀಸ್ ಉದ್ದೀನ್ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.
ಪೂರ್ತಿ ಓದಿ01:14 PM (IST) May 14
ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರವನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯು ಪಾಕಿಸ್ತಾನದ ಭಯೋತ್ಪಾದನಾ ಮೂಲಸೌಕರ್ಯವನ್ನು ಬಹಿರಂಗಪಡಿಸಿತು ಮತ್ತು ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯತಂತ್ರದಲ್ಲಿ ಹೊಸ ಯುಗವನ್ನು ತೆರೆಯಿತು.
ಪೂರ್ತಿ ಓದಿ01:11 PM (IST) May 14
ಜಮ್ಮು ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ಹೋಗಿದ್ದ ಶಿಕ್ಷಕನೊಬ್ಬ ತನ್ನ ಸಹೋದ್ಯೋಗಿಯ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಎರಡು ವರ್ಷಗಳ ನಂತರ ಕೇರಳದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಪೂರ್ತಿ ಓದಿ01:02 PM (IST) May 14
ಪ್ರಧಾನಿ ಮೋದಿ ಆದಂಪುರ ವಾಯುನೆಲೆಯಲ್ಲಿ ಸೈನಿಕರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಪ್ರಿಯಾಂಕ್ ಖರ್ಗೆ ಈ ಕ್ರಮವನ್ನು ಶ್ಲಾಘಿಸಿದರೂ, ಪ್ರಧಾನಿಯ ಕೆಲವು ಕ್ರಮಗಳನ್ನು ಟೀಕಿಸಿದ್ದಾರೆ ಮತ್ತು ಟ್ರಂಪ್ ಹೇಳಿಕೆಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ12:54 PM (IST) May 14
ಭಾರತದಿಂದ ರಫ್ತಾಗುವ ಉಕ್ಕಿನ ಮೇಲೆ ಶೇ.25 ಮತ್ತು ಅಲ್ಯೂಮಿನಿಯಂ ಮೇಲೆ ಶೇ.10 ಸುಂಕ ವಿಧಿಸಿದ್ದ ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಭಾರತವೂ ಅಮೆರಿಕದ ಕೆಲವು ಸರಕುಗಳ ಮೇಲೆ ಸುಂಕ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಪೂರ್ತಿ ಓದಿ12:33 PM (IST) May 14
Sonu Nigam Controversy: ಕನ್ನಡದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ರದ್ದುಗೊಳಿಸಲು ಸೋನು ನಿಗಮ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ.
ಪೂರ್ತಿ ಓದಿ12:32 PM (IST) May 14
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಛತ್ತೀಸ್‌ಗಢ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 9ರಂದು ಪಿಜಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಪೂರ್ತಿ ಓದಿ12:06 PM (IST) May 14
BSF Constable: ಪಾಕಿಸ್ತಾನ ರೇಂಜರ್ಸ್‌ನ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಿಗ್ಗೆ 10.30ಕ್ಕೆ ಅಟ್ಟಾರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಹಸ್ತಾಂತರ ಶಾಂತಿಯುತವಾಗಿ ಮತ್ತು ನಿಯಮಗಳ ಪ್ರಕಾರ ನಡೆದಿದೆ.
ಪೂರ್ತಿ ಓದಿ11:52 AM (IST) May 14
ಆಪರೇಷನ್ ಸಿಂದೂರ್ ಕುರಿತು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಒಂದು ವಾರದೊಳಗೆ ಚೀನಾ ಸಂಬಂಧಿತ ಮಾಧ್ಯಮಗಳ ವಿರುದ್ಧ ಭಾರತ ತೆಗೆದುಕೊಂಡ ಎರಡನೇ ಕ್ರಮವಾಗಿದೆ.
ಪೂರ್ತಿ ಓದಿ10:12 AM (IST) May 14
ಭಾರತದ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನದ ವಾಯುನೆಲೆಗಳು ಹೇಗೆ ಚಿಂದಿಯಾಗಿವೆ ಎಂಬುದಕ್ಕೆ ಹೊಸ ಸಾಕ್ಷ್ಯ ಸಿಕ್ಕಿದೆ. ಅಮೆರಿಕದ ಮ್ಯಾಕ್ಸರ್ ಕಂಪನಿ ಧ್ವಂಸವಾದ ರನ್‌ವೇ ಮತ್ತು ಕಟ್ಟಡಗಳ ಹೈ ರೆಸಲ್ಯೂಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಪೂರ್ತಿ ಓದಿ09:33 AM (IST) May 14
ಆಪರೇಷನ್ ಸಿಂದೂರ್ ನಂತರ, ಪಾಕಿಸ್ತಾನದ ಹ್ಯಾಕರ್‌ಗಳು ಭಾರತದ ಮೇಲೆ 15 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ನಡೆಸಿದ್ದಾರೆ. ಆದರೆ, ಕೇವಲ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಸೈಬರ್ ಅಪರಾಧ ವಿಭಾಗ ತಿಳಿಸಿದೆ.
ಪೂರ್ತಿ ಓದಿ08:59 AM (IST) May 14
ಪಾಕಿಸ್ತಾನದೊಂದಿಗಿನ ಕದನ ವಿರಾಮದ ನಂತರ ಪ್ರಧಾನಿ ಮೋದಿಯವರ ಭಾಷಣವು ಭಾರತದ ರಕ್ಷಣಾ ಷೇರುಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಸ್ವದೇಶಿ ರಕ್ಷಣಾ ಉಪಕರಣಗಳಿಗೆ ಒತ್ತು ನೀಡಿದ ಬೆನ್ನಲ್ಲೇ ಈ ಏರಿಕೆಯಾಗಿದೆ.
ಪೂರ್ತಿ ಓದಿ08:24 AM (IST) May 14
ಕರ್ನಲ್ ಸೋಫಿಯಾ ಖುರೇಶಿ ಅವರ ಮಾವನ ಮನೆಯ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಸುಳ್ಳು ಎಂದು ಬೆಳಗಾವಿ ಪೊಲೀಸರು ಖಚಿತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಈ ಸುಳ್ಳು ಸುದ್ದಿಯನ್ನು ನಂಬದಂತೆ ಮತ್ತು ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪೂರ್ತಿ ಓದಿ