ನೋಯ್ದಾದ ಅವಳಿ ಗೋಪುರ ನೆಲಸಮ: ವಿಡಿಯೋ ನೋಡಿ

Published : Aug 28, 2022, 02:54 PM ISTUpdated : Aug 28, 2022, 09:48 PM IST
ನೋಯ್ದಾದ ಅವಳಿ ಗೋಪುರ ನೆಲಸಮ: ವಿಡಿಯೋ ನೋಡಿ

ಸಾರಾಂಶ

ಲಕ್ನೋ: ಉತ್ತರ ಪ್ರದೇಶದ ನೋಯ್ಡಾದ ಸೂಪರ್‌ಟೆಕ್‌ನ ಅವಳಿ ಗೋಪುರ ಕೊನೆಗೂ ನೆಲಸಮವಾಗಿದೆ. ಮಧ್ಯಾಹ್ನ, 2.30ಕ್ಕೆ ಸರಿಯಾಗಿ ಸ್ಫೋಟಕಗಳನ್ನು ಬಳಸಿ ಈ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.

ಲಕ್ನೋ: ಉತ್ತರ ಪ್ರದೇಶದ ನೋಯ್ಡಾದ ಸೂಪರ್‌ಟೆಕ್‌ನ ಅವಳಿ ಗೋಪುರ ಕೊನೆಗೂ ನೆಲಸಮವಾಗಿದೆ. ಮಧ್ಯಾಹ್ನ, 2.30ಕ್ಕೆ ಸರಿಯಾಗಿ ಸ್ಫೋಟಕಗಳನ್ನು ಬಳಸಿ ಈ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಅಕ್ರಮವಾಗಿ ನಿರ್ಮಿಸಿದ್ದ ಹಿನ್ನೆಲೆಯಲ್ಲಿ ಈ ಕಟ್ಟಡವನ್ನು ನೋಯ್ಡಾ ನಗರಾಭಿವೃದ್ಧಿ ನೆಲಸಮಗೊಳಿಸಿದೆ. ಸೂಪರ್‌ ಟೆಕ್‌ ಕಂಪನಿ ನಿರ್ಮಿಸಿದ್ದ ಅವಳಿ ಕಟ್ಟಡ ಇದಾಗಿದೆ. ಈ ಕಟ್ಟಡ ನೆಲಸಮದಿಂದಾಗಿ ಸರಿಸುಮಾರು 35,000 ಕ್ಯೂಬಿಕ್ ಮೀಟರ್ ಕಟ್ಟಡ ತ್ಯಾಜ್ಯ ಸೃಷ್ಟಿಯಾಗಿದೆ. ಈ ಮೂಲಕ ದೇಶದಲ್ಲಿ ಇಷ್ಟು ದೊಡ್ಡ ಕಟ್ಟಡವನ್ನು ಸ್ಫೋಟಕ ಬಳಸಿ ನೆಲಸಮಗೊಳಿಸಿದ್ದು, ಇದೇ ಮೊದಲು.

ಈ ತ್ಯಾಜ್ಯವನ್ನು ತೆರವುಗೊಳಿಸಲು ಸುಮಾರು ಮೂರು ತಿಂಗಳು ಬೇಕು ಎಂದು ಹೇಳಲಾಗುತ್ತಿದೆ. ಕಟ್ಟಡ ನೆಲಸಮಗೊಳಿಸಲು 37,000 ಕೆಜಿ ಸ್ಫೋಟಕಗಳನ್ನು ಬಳಸಲಾಗಿತ್ತು. ಈ ಕಟ್ಟಡ ಧ್ವಂಸಗೊಳಿಸುವ ವೇಳೆ ಆಕಾಶದೆತ್ತರಕ್ಕೆ ಧೂಳು ಏರಿತ್ತು. ಸ್ಥಳದಲ್ಲೇ ಸನ್ನದ್ಧವಾಗಿದ್ದ ಅಗ್ನಿ ಶಾಮಕ ವಾಹನಗಳು ನೀರು ಹಾಕಿ ಈ ಧೂಳನ್ನು ಶಮನಗೊಳಿಸಿವೆ.

ಈ ಕಟ್ಟಡ ಬೀಳಿಸುವ ಮೊದಲು ಮುನ್ನೆಚ್ಚರಿಕ ಕ್ರಮವಾಗಿ ಸಮೀಪದ ಕಟ್ಟಡಗಳಿಂದ 5000 ನಾಗರಿಕರು, 2700 ವಾಹನ, 200 ಸಾಕು ಪ್ರಾಣಿ ತೆರವುಗೊಳಿಸಲಾಗಿತ್ತು. ಅವಳಿ ಗೋಪುರಗಳ ಸಮೀಪದಲ್ಲಿರುವ 2 ವಸತಿ ಸಂಕೀರ್ಣಗಳಾದ ಎಮೆರಾಲ್ಡ್‌ ಕೋರ್ಟ್ ಹಾಗೂ ಎಟಿಎಸ್‌ ವಿಲೇಜ್‌ನಿಂದ 5000 ನಿವಾಸಿಗಳಿಗೆ ಮುಂಜಾನೆ 7ರ ಒಳಗೆ ಕಟ್ಟಡವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಅವರೊಂದಿಗೆ ಸುಮಾರು 2700 ವಾಹನ ಹಾಗೂ 150-200 ಸಾಕು ಪ್ರಾಣಿಗಳನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗಿತ್ತು. ಅವಳಿ ಕಟ್ಟಡಗಳ ಸುತ್ತ 500 ಮೀಟರ್‌ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿತ್ತು, ಅಲ್ಲಿ ಸ್ಫೋಟ ಕಾರ್ಯಾಚರಣೆ ಸಿಬ್ಬಂದಿ ಹೊರತು ಪಡಿಸಿ ಯಾವುದೇ ಇತರೆ ವ್ಯಕ್ತಿಗಳು ಅಥವಾ ಪ್ರಾಣಿಗಳಿಗೆ ಪ್ರವೇಶಕ್ಕೆ ಅನುಮತಿ ಇರಲಿಲ್ಲ.

20 ಕೋಟಿ ವೆಚ್ಚ: ನೋಯ್ಡಾದ ಈ ಅವಳಿ ಕಟ್ಟಡಗಳ ಧ್ವಂಸಕ್ಕೆ ಒಟ್ಟು 20 ಕೋಟಿ ರೂ. ವೆಚ್ಚವಾಗಿದೆ. ಅಕ್ರಮವಾಗಿ ಕಟ್ಟಡವನ್ನು ಕಟ್ಟಿದ ಸೂಪರ್‌ಟೆಕ್‌ ಕಂಪನಿ ಈ ಕಟ್ಟಡದ ಧ್ವಂಸಕ್ಕೆ 5 ಕೋಟಿ ರೂ. ವೆಚ್ಚ ಪಾವತಿಸಲಿದೆ. ಉಳಿದ 15 ಕೋಟಿ ರೂ. ಗಳನ್ನು ಧ್ವಂಸದ ಬಳಿಕ ಲಭ್ಯವಾಗುವ 4000 ಟನ್‌ ಸ್ಟೀಲ್‌ ಸೇರಿದಂತೆ 55,000 ಟನ್‌ ಅವಶೇಷಗಳನ್ನು ಮಾರಿ ಸರಿದೂಗಿಸಲಾಗುತ್ತದೆ. ಇದರೊಂದಿಗೆ ಕಟ್ಟಡ ಧ್ವಂಸದ ಹೊಣೆ ಹೊತ್ತುಕೊಂಡ ಎಡಿಫೈಸ್‌ ಎಂಜಿನಿಯರಿಂಗ್‌ ಸುತ್ತಲಿನ ಪ್ರದೇಶಕ್ಕೆ ಯಾವುದೇ ಹಾನಿಯಾದಲ್ಲಿ 100 ಕೋಟಿ ರೂ. ವಿಮೆ ಕೂಡಾ ಮಾಡಿಸಿದೆ. 

ಈ ಕಟ್ಟಡಗಳ ನಿರ್ಮಾಣ ವೆಚ್ಚ ಸುಮಾರು 70 ಕೋಟಿ ರೂ ಎಂದು ತಿಳಿದು ಬಂದಿದೆ. ಈ ಕಟ್ಟಡಗಳಿದ್ದ 3 ಬಿಎಚ್‌ಕೆ ಫ್ಲಾಟ್‌ ಬೆಲೆ 1.13 ಕೋಟಿ ರೂ. ಆಗಿದ್ದು, ಇಂತಹ 915 ಫ್ಲಾಟ್‌ಗಳು ಈ ಅವಳಿ ಕಟ್ಟಡಗಳಲ್ಲಿತ್ತು. ಈ ಮೂಲಕ ಕಂಪನಿ 1200 ಕೋಟಿ ರೂ. ಆದಾಯ ಗಳಿಸುವ ಉದ್ದೇಶ ಹೊಂದಿತ್ತು. ಕಟ್ಟಡಗಳ ನಿರ್ಮಾಣವು ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕಟ್ಟಡಗಳನ್ನು ಕೆಡವಲು ಆಗಸ್ಟ್ 2021 ರಲ್ಲಿಯೇ ಸುಪ್ರೀಂಕೋರ್ಟ್ ಆದೇಶಿಸಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!