Sundar Pichai IIT Kharagpur ಗೂಗಲ್ ಸಿಇಒ ಸುಂದರ್ ಪಿಚೈ ಅವರ ಐಐಟಿ ದಿನಗಳ ಚಿತ್ರವನ್ನು ಅವರ ಬ್ಯಾಚ್‌ಮೇಟ್‌ನ ಪುತ್ರಿಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಸುಂದರ್ ಪಿಚೈ ಮಾತ್ರವಲ್ಲ, ಅವರ ಪಕ್ಕದಲ್ಲಿ ಕುಳಿತಿರುವ ಇಂದಿನ ಪ್ರಸಿದ್ಧ ಕಂಪನಿಯ ಸಿಇಒಅನ್ನೂ ಕೂಡ ಗುರುತಿಸಿದ್ದಾರೆ.
ನವದೆಹಲಿ (ಮೇ.8): ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹಿಂದೆಂದೂ ಪ್ರಕಟವಾಗದ ಚಿತ್ರವೊಂದು ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಐಟಿ ಖರಗ್‌ಪುರದ ಘಟಿಕೋತ್ಸವ ಸಮಾರಂಭದಲ್ಲಿ ತೆಗೆದುಕೊಂಡ ಈ ಚಿತ್ರವನ್ನು ಸುಂದರ್ ಪಿಚೈ ಅವರ ಬ್ಯಾಚ್‌ಮೇಟ್‌ನ ಪುತ್ರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಚಿತ್ರದಲ್ಲಿ ಸುಂದರ್ ಪಿಚೈ ಮಾತ್ರವಲ್ಲ, ಅಮೆರಿಕದ ಪ್ರಮುಖ ಐಟಿ ಕಂಪನಿ ಮ್ಯಾಚ್ ಗ್ರೂಪ್‌ನ ಮಾಜಿ ಸಿಇಒ ಶರ್ಮಿಷ್ಠಾ ದುಬೇ ಕೂಡ ಈ ಚಿತ್ರದಲ್ಲಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಎಕ್ಸ್ ಯೂಸರ್ ಅನನ್ಯ ಲೋಹಾನಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಕೆಯ ತಂದೆ ಸುಂದರ್ ಪಿಚೈ ಅವರೊಂದಿಗೆ ಐಐಟಿ ಖರಗ್‌ಪುರದಲ್ಲಿ ಅಭ್ಯಾಸ ಮಾಡಿದ್ದರು. ಹಳೆದಯ ಚಿತ್ರವನ್ನು ಶೇರ್ ಮಾಡಿಕೊಳ್ಳುತ್ತಾ ಅನನ್ಯ ಲೋಹಾನಿ ಬರೆದುಕೊಂಡಿದ್ದು, 'ನನ್ನ ತಂದೆ ಈಗ ತಾನೆ ಅವರ ಐಐಟಿ ಖರಗ್‌ಪುರ ಘಟಿಕೋತ್ಸವದ (1993) ಚಿತ್ರವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಸುಂದರ್ ಪಿಚೈ ಹಾಗೂ ಶರ್ಮಿಷ್ಟಾ ದುಬೇ ಅವರೊಂದಿಗೆ ತಮ್ಮ ಫ್ರೇಮ್ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಇನ್ಸೇನ್ ಆಗಿದೆ..' ಎಂದು ಬರೆದುಕೊಂಡಿದ್ದಾರೆ.
ಭಾರತದ ಹೆಮ್ಮೆಯ ಟೆಕ್ ಟೈಟಾನ್ ಆಗಿರುವ ಸುಂದರ್ ಪಿಚೈ ಇಂದು ಗೂಗಲ್ ಸಿಇಒ ಆಗಿ ಬಹಳ ಎತ್ತರಕ್ಕೆ ಏರಿದ್ದಾರೆ. 2004ರಲ್ಲಿ ಗೂಗಲ್‌ಗೆ ಸೇರಿದ್ದ ಸುಂದರ್ ಪಿಚೈ ಅವರು, ಜೀಮೇಲ್, ಗೂಗಲ್ ಕ್ರೋಮ್, ಮ್ಯಾಪ್ಸ್ ಮತ್ತು ಗೂಗಲ್ ಡ್ರೈವ್‌ನಂಥ ಉತ್ಪನ್ನಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರೊಂದಿಗೆ ಗೂಗಲ್ ಪೋರ್ಟ್‌ಫೋಲಿಯೋಗೆ ಆಂಡಾಯ್ಡ್‌ಅನ್ನು ಸೇರಿಸಿದ ಪ್ರಮುಖ ವ್ಯಕ್ತಿ ಇವು. ಟೆಕ್ ಕ್ಷೇತ್ರದಲ್ಲಿ ಗೂಗಲ್‌ನ ಪ್ರಾಬಲ್ಯವನ್ನು ಇನ್ನಷ್ಟು ಗಟ್ಟಿ ಮಾಡಿದ ದೈತ್ಯರಾಗಿದ್ದಾರೆ. ಅವರ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ, ಪಿಚೈ ಅವರನ್ನು ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಅವರು 2014 ರಲ್ಲಿ ಪ್ರಾಡಕ್ಟ್ ಚೀಫ್ ಸ್ಥಾನಕ್ಕೆ ಏರಿಸಿದ್ದರು.
ಚೆನ್ನೈ ಮೂಲದ ಪಿಚೈ ಐಐಟಿ ಖರಗ್‌ಪುರದಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಬ್ಯುಸಿನೆಸ್ ಮತ್ತು ಉದ್ಯಮದಲ್ಲಿನ ಅವರ ಅತ್ಯುತ್ತಮ ಸಾಧನೆಗಳಿಗಾಗಿ 2022 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಸೇರಿದಂತೆ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
undefined
ರಾಕೇಶ್ ಜುಂಜುನ್‌ವಾಲಾ ಪತ್ನಿಗೆ ಒಂದೇ ದಿನ 800 ಕೋಟಿ, ಒಂದು ತಿಂಗಳಲ್ಲಿ 2360 ಕೋಟಿ ನಷ್ಟ!
ಇಂಡೋ-ಅಮೆರಿಕನ್ ಸಿಇಒ ಆಗಿರುವ ಶರ್ಮಿಷ್ಠಾ ದುಬೇ, ಅವರು OkCupid ಮತ್ತು ಟಿಂಡರ್ ಸೇರಿದಂತೆ ಅನೇಕ ಡೇಟಿಂಗ್ ಅಪ್ಲಿಕೇಶನ್‌ಗಳ ಮಾಲೀಕತ್ವ ಹೊಂದಿರುವ ಮ್ಯಾಚ್ ಗ್ರೂಪ್‌ನಲ್ಲಿ CEO ಸ್ಥಾನ ವಹಿಸಿಕೊಂಡಿದ್ದರು. 2022ರಲ್ಲಿ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಶರ್ಮಿಷ್ಠಾ ದುಬೇ ಪ್ರಸ್ತುತ ಮ್ಯಾಚ್ ಗ್ರೂಪ್‌ನ ನಿರ್ದೇಶಕ ಮಂಡಳಿಯಲ್ಲಿ ಮಾತ್ರವೇ ಸ್ಥಾನ ಹೊಂದಿದ್ದಾರೆ. 197080ರಲ್ಲಿ ಜೆಮ್ಶೆಡ್ಪುರದಲ್ಲಿ ಬೆಳೆದಿದ್ದ ಶರ್ಮಿಷ್ಠಾ ದುಬೇ ಅವರ ತಂದೆ ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿರಿಂಗ್ ಆಗಿದ್ದರು. ಮಗಳನ್ನು ಐಐಟಿಯಲ್ಲಿ ಡಿಗ್ರಿ ಪಡೆಯುವಂತೆ ಅವರು ಪ್ರೋತ್ಸಾಹಿಸಿದ್ದರು. ನೂರಾರು ಪುರುಷರ ನಡುವೆ ಐಐಟಿಯಲ್ಲಿ ಪದವಿ ಪಡೆದ ಏಕೈಕ ಮಹಿಳೆ ಇವರಾಗಿದ್ದರು. ಚಿತ್ರವನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್ ಮಾಡಿದ್ಯಾರು? ಉದ್ದೇಶವೇನು..
My dad just shared this picture of his IIT KGP convocation (1993) with him, Sundar Pichai and Sharmistha Dubey in the same frame.
This is absolutely insane… pic.twitter.com/v9Hup5xhh1