ಡೀಸೆಲ್, ವಿದ್ಯುತ್ ಬೇಡ, ನೀರು ಕುಡಿದು ಚಲಿಸುವ ಭಾರತದ ಮೊದಲ ರೈಲು ಶೀಘ್ರದಲ್ಲಿ ಆರಂಭ!

By Chethan Kumar  |  First Published Nov 13, 2024, 8:14 PM IST

ಭಾರತೀಯ ರೈಲ್ವೇ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಈ ರೈಲಿಗೆ ವಿದ್ಯುತ್ ಬೇಡ, ಡೀಸೆಲ್ ಬೇಡ. ಕೇವಲ ನೀರು ಸಾಕು. ನೀರು ಕುಡಿದು ಚಲಿಸುವ ಭಾರತದ ಮೊಟ್ಟ ಮೊದಲು ರೈಲು ಡಿಸೆಂಬರ್‌ನಲ್ಲಿ ಟ್ರಯಲ್ ರನ್ ಆರಂಭಿಸುತ್ತಿದೆ.


ನವದೆಹಲಿ(ನ.13) ಭಾರತೀಯ ರೈಲ್ವೇ ಈಗಾಗಲೇ ಹೊಸ ಹೊಸ ರೈಲು, ವಂದೇ ಭಾರತ್ ರೈಲು, ಹೊಸ ಕೋಚ್, ಹೊಸ ಮಾರ್ಗ ಸೇರಿದಂತೆ ರೈಲ್ವೇಯನ್ನು ಅತ್ಯಾಧುನಿಕ ಹಾಗೂ ಮೇಲ್ದರ್ದೆಗೆ ಏರಿಸುತ್ತಿದೆ.ಇದೀಗ ರೈಲ್ವೇ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇದೀಗ ಎಲೆಕ್ಟ್ರಿಸಿಟಿ ಬೇಡ, ಡೀಸೆಲ್ ಕೂಡ ಬೇಡ, ಈ ರೈಲು ಸಂಚರಿಸಲು ನೀರು ಸಾಕು. ಹೌದು ಭಾರತೀಯ ರೈಲ್ವೇ ಮೊದಲ ಹೈಡ್ರೋಜನ್ ಟ್ರೈನ್ ಸೇವೆ ಆರಂಭಿಸುತ್ತಿದೆ. ಪರಿಸರ ಸ್ನೇಹಿ ಹೈಡ್ರೋಜನ್ ರೈಲು ಡಿಸೆಂಬರ್ ತಿಂಗಳಲ್ಲಿ ಟ್ರಯಲ್ ರನ್ ಆರಂಭಿಸುತ್ತಿದೆ. 

ಈ ರೈಲಿನ ಇಂಧನ ನೀರು. ಹೌದು, ಇದು ಹೈಡ್ರೋಜನ್ ಪವರ್ ಎಂಜಿನ್ ರೈಲು. ನೀರು ಹಾಗೂ ಬಿಸಿ ಹವೆ ಮೂಲಕ ಈ ರೈಲು ಸಾಗಲಿದೆ. ವಿಶೇಷ ಅಂದರೆ ಶೂನ್ಯ ಕಾರ್ಬನ್. ಅಂದರೆ ಸಂಪೂರ್ಣ ಪರಿಸರ ಸ್ನೇಹಿ. ಇಷ್ಟೇ ಅಲ್ಲ ಡೀಸೆಲ್ ಎಂಜಿನ್‍‌ಗೆ ಹೋಲಿಸಿದರೆ ಶೇಕಡಾ 60 ರಷ್ಟು ಶಬ್ದವೂ ಕಡಿಮೆ. ಹೀಗಾಗಿ ಶಬ್ದ ಮಾಲಿನ್ಯದ ಆತಂಕವೂ ಇಲ್ಲ. ಮೊದಲ ಹಂತದಲ್ಲಿ ದೇಶಾದ್ಯಂತ 35 ಹೈಡ್ರೋಜನ್ ರೈಲು ಸೇವೆ ಆರಂಭಿಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.

Latest Videos

undefined

ಪ್ರವಾಸಿಗರ ನೆಚ್ಚಿನ ತಾಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರ ಕೇವಲ 30 ರೂ!

ನೀರಿನಲ್ಲಿ ಚಲಿಸುವ ರೈಲು ಅನ್ನೋ ಕಾರಣ ಇದರ ವೇಗದಲ್ಲಿ ರಾಜಿಯಿಲ್ಲ. ಗಂಟೆಗೆ 140 ಕಿ.ಮಿ ವೇಗದಲ್ಲಿ ಹೈಡ್ರೋಜನ್ ರೈಲು ಸಂಚರಿಸಲಿದೆ. ಒಂದು ಬಾರಿ ನೀರು ತುಂಬಿಸಿ ಪ್ರಯಾಣ ಆರಂಭಿಸಿದರೆ 1,000 ಕಿ.ಮಿ ದೂರ ಕ್ರಮಿಸಲಿದೆ. ಅತೀ ಕಡಿಮೆ ದರದಲ್ಲಿ ರೈಲು ಸಾಗಲಿದೆ. ಇನ್ನು ಹೈಡ್ರೋಜನ್ ತುಂಬಿಸುವುದು ಸವಾಲಿನ ಕೆಲಸವಲ್ಲ.  ಹೀಗಾಗಿ ಎಲ್ಲಾ ದೃಷ್ಟಿಯಿಂದಲೂ ಹೈಡ್ರೋಜನ್ ರೈಲು ಭಾರತೀಯರ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲಿದೆ.

ಮೊದಲ ಹಂತದಲ್ಲಿ ಹೈಡ್ರೋಜನ್ ರೈಲು ಹರ್ಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ. 90 ಕಿಲೋಮೀಟರ್ ದೂರ ಪ್ರಯಾಣದಲ್ಲಿ ಸಂಚಾರ ಮಾಡಲಿದೆ. ಇನ್ನು ಡಾರ್ಜಲಿಂಗ್ ಹಿಮಾಲಯನ್ ರೈಲ್ವೇ, ನೀಲಗಿರಿ ಮೌಂಟೈನ್ ರೈಲ್ವೇ, ಕಾಲ್ಕಾ ಶಿಮ್ಲಾ ರೈಲ್ವೇ ಸೇರಿದಂತೆ ಹಲವು ಇಕೋ ಸೆನ್ಸೀಟೀವ್ ಝೋನ್ ಮೂಲಕ ರೈಲು ಸಂಚಾರ ಆರಂಭಗೊಳ್ಳಲಿದೆ. ಇಷ್ಟೇ ಅಲ್ಲ ಹಂತ ಹಂತವಾಗಿ ಸುಂದರ ಪರಿಸರ, ಪ್ರವಾಸಿ ತಾಣಗಳ ಮೂಲಕವೂ ಈ ಹೈಡ್ರೋಜನ್ ರೈಲು ಸಂಚಾರ ಆರಂಭಗೊಳ್ಳಲಿದೆ. ಈ ಮೂಲಕ ಪರಿಸರಕ್ಕೆ ಶೂನ್ಯ ಹಾನಿ ಮೂಲಕ ಭಾರತೀಯ ರೈಲ್ವೇ ಪರಿಸರ ಉಳಿಸುವ ನಿಟ್ಟಿನಲ್ಲೂ ಕಾರ್ಯಪ್ರವೃತ್ತರಾಗಲಿದೆ.

ಗ್ರೀನ್ ರೈಲ್ವೇಸ್ ಅಡಿಯಲ್ಲಿ ಹೈಡ್ರೋಜನ್ ರೈಲು ಕಾರ್ಯನಿರ್ವಹಸಲಿದೆ. ಡಿಸೆಂಬರ್ ತಿಂಗಳಲ್ಲಿ ಪ್ರಾಯೋಗಿಕ ರೈಲು ಆರಂಭಿಸಲಾಗುತ್ತದೆ. ಹಲವು ಪ್ರಯೋಗದ ಬಳಿಕ ಹೈಡ್ರೋಜನ್ ರೈಲು ಸಂಚಾರ ಆರಂಭಗೊಳ್ಳಲಿದೆ. ಮಳೆ, ಬಿಸಿಲು ಸೇರಿದಂತೆ ವಿವಿಧ ಹವಾಮಾನಗಳಲ್ಲಿ ರೈಲು ಪ್ರಯೋಗ ನಡೆಯಲಿದೆ. 
 

click me!