ನವದೆಹಲಿ (ಜ.27): ಇಂದು ಭಾರತ ಹಾಗೂ ಯುರೋಪ್ ನಡುವೆ ಮದರ್ ಆಫ್ ಆಲ್ ಡೀಲ್ಸ್ ನಡೆಯುವ ಸಾಧ್ಯತೆ ಇದೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಇಂದು ಅಧಿಕೃತ ಘೋಷಣೆಯಾಗಬಹುದು. ವ್ಯಾಪಾರ ಒಪ್ಪಂದಕ್ಕೆ ಕ್ಯಾತೆ ತೆಗೆದ ಟ್ರಂಪ್‌ಗೆ ಮೋದಿ ದೊಡ್ಡ ಶಾಕ್ ನೀಡಿದ್ದಾರೆ. ಈ ಒಪ್ಪಂದದಿಂದ ಭಾರತ ಹಾಗೂ ಯುರೋಪ್ ನಡುವೆ ವ್ಯಾಪಾರ, ವಹಿವಾಟು ಇನ್ನಷ್ಟು ಸುಗಮವಾಗಲಿದೆ. ಡೀಲ್ ಮೊತ್ತ ವಿಶ್ವದ ಜಿಡಿಪಿಯ ಶೇ. 25ರಷ್ಟಿದೆ. ಇದು 200 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:53 AM (IST) Jan 27
ಆಗ್ರಾದಲ್ಲಿ ಚೀಲದಲ್ಲಿ ಪತ್ತೆಯಾದ ಯುವತಿಯ ಶಿರರಹಿತ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೀತಿಯ ವಿಚಾರದಲ್ಲಿ ಅನುಮಾನಗೊಂಡು, ಸಹೋದ್ಯೋಗಿ ಹಾಗೂ ಪ್ರೇಮಿ ವಿನಯ್ ರಜಪೂತ್ ಎಂಬಾತನೇ ಮಿಂಕಿ ಶರ್ಮಾಳನ್ನು ಬರ್ಬರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
08:32 AM (IST) Jan 27
07:40 AM (IST) Jan 27
ಭಾರತದ ಸಾಂಸ್ಕೃತಿಕ ವೈವಿಧ್ಯ, ಆರ್ಥಿಕ ಪ್ರಗತಿ ಮತ್ತು ಸೈನಿಕ ಶಕ್ತಿಯ ಅನಾವರಣದ ಮೂಲಕ 77ನೇ ಗಣರಾಜ್ಯ ದಿನ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಆ್ಯಂಟೋನಿಯೋ ಕೋಸ್ಟಾ, ಉರ್ಸುಲಾ ವೊನ್ ಡೇರ್ ಲೆಯೆನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು
07:40 AM (IST) Jan 27
ಯುಜಿಸಿ ಕಳೆದ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದಕ್ಕೀಡಾಗಿದ್ದು, ಉತ್ತರ ಪ್ರದೇಶದ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ, ಈ ನಿಯಮ ವಿರೋಧಿಸಿ ಲಖನೌನ ಮೇಲ್ವರ್ಗದ 11 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ
07:39 AM (IST) Jan 27
‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಸ್ಥಾಗಿತ್ಯಕ್ಕೆ ಭಾರತದ ಅಳಿಯನೂ ಆಗಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಶ್ವೇತಭವನದ ಆರ್ಥಿಕ ಸಲಹೆಗಾರ ಪೀಟರ್ ನವಾರೋ ಮತ್ತು ಸ್ವತಃ ಟ್ರಂಪ್ ಅವರೇ ಕಾರಣ’ ಎಂಬ ಆರೋಪ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸಂಸದ ಟೆಡ್ ಕ್ರೂಜ್ ಆರೋಪಿಸಿದ್ದಾರೆ.
07:39 AM (IST) Jan 27
ಕಳೆದ ವರ್ಷ ಥಾಯ್ಲೆಂಡ್ - ಕಾಂಬೋಡಿಯಾ ಗಡಿ ವಿವಾದದಲ್ಲಿದ್ದ ವಿಷ್ಣುವಿನ ಪ್ರತಿಮೆಯನ್ನು ತೆರವು ಮಾಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಥಾಯ್ಲೆಂಡ್ ಸರ್ಕಾರ ವಿಷ್ಣುವಿನ ಪ್ರತಿಮೆಯಿದ್ದ ಸ್ಥಳದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದೆ.
07:39 AM (IST) Jan 27
ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
07:38 AM (IST) Jan 27
ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಟ್ರಂಪ್ ನಾನಾ ಕ್ಯಾತೆ ತೆಗೆಯುತ್ತಿರುವ ಹೊತ್ತಿನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.