ಬೆಂಗಳೂರು (ಜುಲೈ 24): ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಮಾತುಕತೆ ನಡೆಸಲಿರುವ ಪ್ರಧಾನಿ, ಹೂಡಿಕೆ, ವ್ಯಾಪಾರ, ರಕ್ಷಣೆ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾಟ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:54 PM (IST) Jul 24
ಕರ್ನಾಟಕದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ, ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ಅಂತಾರಾಷ್ಟ್ರೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸಚಿವರಿಗೆ ಸಲ್ಲಿಸಿದ್ದಾರೆ.
07:07 PM (IST) Jul 24
ಜಬಲ್ಪುರದಲ್ಲಿ ಎರಡು ಕುದುರೆಗಳ ನಡುವೆ ನಡೆದ ಫೈಟ್ ವೇಳೆ ಆಟೋದೊಳಗೆ ಕುದುರೆಯೊಂದು ನುಗ್ಗಿ ಸಿಲುಕಿಕೊಂಡ ಘಟನೆ ನಡೆದಿದೆ. ಚಲಿಸುತ್ತಿದ್ದ ಆಟೋದೊಳಗೆ ನುಗ್ಗಿದ ಕುದುರೆಯಿಂದಾಗಿ ಆಟೋ ಚಾಲಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿವೆ.
06:35 PM (IST) Jul 24
Social Media Following: ಇದು ಸೋಶಿಯಲ್ ಮೀಡಿಯಾ ಜಗತ್ತು. ನೇರವಾಗಿ ಭೇಟಿಯಾಗದೇ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಸ್ನೇಹಿತರಾಗುವ ಕಾಲವಿದು. ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯುನ್ನು ಫಾಲೋ ಮಾಡುವ ಮುನ್ನ ಈ ಸ್ಟೋರಿ ನೋಡಿ
05:43 PM (IST) Jul 24
ಪತ್ನಿಯನ್ನು ಮರಳಿ ಪಡೆಯಲು ಮಾಂತ್ರಿಕನ ಸಲಹೆಯ ಮೇರೆಗೆ ವ್ಯಕ್ತಿಯೊಬ್ಬ ತನ್ನ ಸಂಬಂಧಿಯೇ ಆದ ಆರು ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಅಲ್ವಾರದಲ್ಲಿ ನಡೆದಿದೆ.
04:31 PM (IST) Jul 24
ದಕ್ಷಿಣ ಆಫ್ರಿಕಾದ ಪ್ರಮುಖ ಗೇಮ್ ರಿಸರ್ವ್‌ಗಳಲ್ಲಿ ಒಂದಾದ ಗೋಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಮಾಲೀಕನನ್ನು ಆನೆಯೊಂದು ತುಳಿದು ಸಾಯಿಸಿ ಬಿಟ್ಟಿದೆ. 39 ವರ್ಷದ ಬಹುಕೋಟ್ಯಾಧಿಪತಿ ಫ್ರಾಂಕೋಯಿಸ್ ಕ್ರಿಶ್ಟಿಯಾನ್ ಕಾರ್ನಾಡಿ ಎಂಬುವವರು ತಮ್ಮದೇ ಗೇಮ್ ರಿಸರ್ವ್‌ನಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾರೆ.
04:26 PM (IST) Jul 24
ಅವಳಿ ಮಕ್ಕಳಿಗೆ ಬೇರೆ ಬೇರೆ ಅಪ್ಪ ಎಂದರೆ ನಂಬುವುದು ಬಲು ಕಷ್ಟವೇ. ಅಂಥ ಘಟನೆಯೊಂದು ನಡೆದಿದೆ. ಇದು ಹೇಗೆ ಸಾಧ್ಯ? ಮಹಿಳೆಗೆ ಆಗಿದ್ದೇನು? ಇಲ್ಲಿದೆ ಡಿಟೇಲ್ಸ್...
04:12 PM (IST) Jul 24
Woman Desires: ಹಾಸಿಗೆಯ ತೃಪ್ತಿಗಾಗಿ ಪತ್ನಿಯೊಬ್ಬಳು ಗಂಡನನ್ನು ಕೊ*ಲೆ ಮಾಡಿದ್ದಾಳೆ. ಸೋದರಮಾವನ ಮೇಲಿನ ಆಸೆ ಮತ್ತು ದೈಹಿಕ ಸಂಬಂಧದಲ್ಲಿ ತೃಪ್ತಿ ಇಲ್ಲದಿರುವುದು ಕೊಲೆಗೆ ಕಾರಣ ಎನ್ನಲಾಗಿದೆ.
03:55 PM (IST) Jul 24
ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗ ಪಡಿಸಿಕೊಂಡು ಸಾಲ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗ ಆಗ್ತಿದ್ಯೋ ನೋಡುವುದು ಹೇಗೆ?
03:30 PM (IST) Jul 24
Tata Harrier EV ತನ್ನ ಅದ್ಭುತ ಆಫ್-ರೋಡ್ ಸಾಮರ್ಥ್ಯಕ್ಕೆ ಹೆಸರಾಗಿದೆ ಕೆಸರಿನಲ್ಲಿ ಸಿಲುಕಿದ್ದ Mahindra Thar Roxx ಅನ್ನು ಹ್ಯಾರಿಯರ್ ಇವಿ ರಕ್ಷಿಸಿದ ದೃಶ್ಯ ಈಗ ವೈರಲ್ ಆಗಿದೆ. ಈ ಘಟನೆ ಟಾಟಾ ಹ್ಯಾರಿಯರ್ ಇವಿಯ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ.
02:58 PM (IST) Jul 24
Passenger Plane Crash: ರಷ್ಯಾದ ಪೂರ್ವ ಭಾಗದಲ್ಲಿ 50 ಜನರನ್ನು ಹೊತ್ತೊಯ್ಯುತ್ತಿದ್ದ An-24 ವಿಮಾನ ಪತನಗೊಂಡಿದೆ. ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿತಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿವೆ.
02:33 PM (IST) Jul 24
ಇಬ್ಬರು ಹಿರಿಯ ಇಂಜಿನಿಯರ್‌ಗಳ ಹೆಸರು ಬರೆದಿಟ್ಟು PWD ಕಿರಿಯ ಇಂಜಿನಿಯರ್ ಒಬ್ಬರು ಸಾವಿಗೆ ಶರಣಾದ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ.
01:32 PM (IST) Jul 24
Consuming Refrigerated Meat: ಫ್ರಿಡ್ಜ್‌ನಲ್ಲಿಟ್ಟ ಮಾಂಸಾಹಾರ ಸೇವಿಸಿ ಒಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಒಟ್ಟು 9 ಜನರಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಡ್ ಪಾಯ್ಸನ್ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
01:14 PM (IST) Jul 24
ತಮಿಳುನಾಡಿನಲ್ಲಿ ವರದಕ್ಷಿಣೆ ಮತ್ತು ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತ 32ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಸಾಯುವ ಮುನ್ನ ವೀಡಿಯೊ ಮಾಡಿ ಈ ಆರೋಪ ಮಾಡಿದ್ದಾರೆ.
12:49 PM (IST) Jul 24
Passenger Plane Missing: ಚೀನಾ ಗಡಿಯಲ್ಲಿರುವ ಅಮುರ್ ಪ್ರದೇಶದಲ್ಲಿ ಪ್ರಯಾಣಿಕ ವಿಮಾನ ನಾಪತ್ತೆಯಾಗಿದೆ. ವಿಮಾನದಲ್ಲಿ ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು.
12:27 PM (IST) Jul 24
ಮುಂಬೈನಲ್ಲಿ 21 ವರ್ಷದ ಯುವಕನೊಬ್ಬ ತನ್ನ ಪ್ರೇಮ ನಿರಾಕರಣೆಗೆ ಪ್ರತೀಕಾರವಾಗಿ ಮಹಿಳೆಯ ಗಂಡನನ್ನು ಕೊಲೆಗೈದಿದ್ದಾನೆ.
12:27 PM (IST) Jul 24
Gold And Silver Price Today: ದೇಶದಲ್ಲಿ ಏಳು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರ ಕೂಡ ಇಳಿಕೆಯಾಗಿದೆ.
11:55 AM (IST) Jul 24
ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಪೊಲೀಸ್ ಜೋಡಿಯೊಂದು ಜನರಿಗೆ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ಕದ್ದೊಯ್ದು ಪರಾರಿಯಾಗುವಾಗಲೇ ಸಿಕ್ಕಿಬಿದ್ದ ವಿಚಿತ್ರ ಘಟನೆ ನಡೆದಿದೆ. ಏನಿದು ನೋಡಿ...
11:41 AM (IST) Jul 24
ಇಲ್ಲೊಬ್ಬರು 24ರ ಹರೆಯದ ಗೃಹಿಣಿ ಮನೆ ನಿರ್ವಹಿಸುವ, ಮಗುವನ್ನು ಬೆಳೆಸುವ ಜವಾಬ್ದಾರಿಯ ಜೊತೆಗೆ ಯುಜಿಸಿ ನೀಟ್ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ್ದಾರೆ. ಅವರ ಈ ಸಾಧನೆ ಈಗ ದೇಶದೆಲ್ಲೆಡೆ ಸುದ್ದಿಯಾಗುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ.
07:52 AM (IST) Jul 24
ಅಧಿವೇಶನದಲ್ಲಿ ಆಪರೇಷನ್ ಸಿಂದೂರದ ಕುರಿತು ಚರ್ಚೆಯ ವಿಚಾರದಲ್ಲಿ ಪ್ರತಿಪಕ್ಷ ಹಾಗೂ ಸರ್ಕಾರದ ನಡುವಿನ ತೀವ್ರ ಜಟಾಪಟಿ ಬಳಿಕ ಕೊನೆಗೂ ಜು.28 ಹಾಗೂ 29ರಂದು ಸಮಯ ನಿಗದಿ ಮಾಡಲಾಗಿದೆ.
07:51 AM (IST) Jul 24
ಭಾರತದಲ್ಲಿ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಭಾರೀ ಮತಗಳ್ಳತನ ನಡೆಯುತ್ತಿದೆ. ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರ ಅಧ್ಯಯನ ನಡೆಸಿ ನಾವು ‘ಭಯಂಕರ ಮತಗಳ್ಳತನ’ವನ್ನು ಪತ್ತೆ ಹಚ್ಚಿದ್ದೇವೆ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
07:51 AM (IST) Jul 24
ಆಪರೇಷನ್ ಸಿಂದೂರದ ವೇಳೆ ಭಾರತದ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಲಷ್ಕರ್-ಎ-ತೊಯ್ಬಾದ ಉಗ್ರ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.
07:50 AM (IST) Jul 24
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಪ್ರಮುಖ ವಿಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಚುನಾವಣೆಯನ್ನು ಬಹಿಷ್ಕರಿಸುವ ಸುಳಿವು ನೀಡಿದೆ.
07:50 AM (IST) Jul 24
ಭೂಮಿಯ ಮೇಲೆ ಇಲ್ಲದ ದೇಶಗಳ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿ ತೆರೆದು ಅದಕ್ಕೆ ರಾಯಭಾರಿಯಾಗಿದ್ದ ಹರ್ಷವರ್ಧನ್ ಜೈನ್ ಎಂಬಾತನನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆತನಿಂದ ನಕಲಿ ಪಾಸ್ಪೋರ್ಟ್, ಕಾರಿನ ನಕಲಿ ಡಿಪ್ಲೋಮ್ಯಾಟಿಕ್ ನಂಬರ್ ಪ್ಲೇಟ್ ವಶಪಡಿಸಿಕೊಂಡಿದ್ದಾರೆ.
07:50 AM (IST) Jul 24
ಅಹಮಾದಾಬಾದ್ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟ ತಮ್ಮವರ ಮೃತದೇಹದ ಬದಲಾಗಿ ಇನ್ಯಾರದ್ದೋ ಮೃತದೇಹವನ್ನು ತಪ್ಪಾಗಿ ಕಳಿಸಿಕೊಡಲಾಗಿದೆ ಎಂದು ಬ್ರಿಟನ್‌ನ 2 ಕುಟುಂಬಗಳು ಆರೋಪಿಸಿವೆ. ಆದರೆ ಈ ಆರೋಪವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.
07:49 AM (IST) Jul 24
ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ, ಪಾಕ್ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಎದುರಲ್ಲೇ ಭಾರತ ಪಾಕಿಸ್ತಾನವನ್ನು ‘ಭಯೋತ್ಪಾದಕ’ ಮತ್ತು ಮತಾಂಧತೆಯಲ್ಲಿ ಮುಳುಗಿರುವ ‘ಸರಣಿ ಸಾಲಗಾರ’ ಎಂದು ಕರೆದು ತೀವ್ರ ಮುಖಭಂಗ ಉಂಟುಮಾಡಿದೆ.
07:49 AM (IST) Jul 24
ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಬುಧವಾರ ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದರು. ದೇಶದ ಕ್ರೀಡಾ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಈ ಬಿಲ್ ಮಂಡನೆಯಾಗಿದೆ. ಹಲವು ಮಹತ್ವದ ವಿಚಾರಗಳನ್ನು ಈ ಮಸೂದೆ ಒಳಗೊಂಡಿದೆ.