ನವದೆಹಲಿ (ನ.22): ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ-20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಯುತ್ತಿರುವ ಜೋಹಾನ್ಸ್ ಬರ್ಗ್ ನಗರಕ್ಕೆ ಶುಕ್ರವಾರ ಆಗಮಿಸಿದರು. ಅವರು ವಾಟರ್ ಲೋಫ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಾಂಸ್ಕೃತಿಕವಾಗಿ ಸ್ವಾಗತ ಕೋರಲಾಯಿತು. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:48 PM (IST) Nov 22
ದೆಹಲಿ ಸ್ಫೋಟ ಪ್ರಕರಣದಲ್ಲಿ ಮತ್ತೊಬ್ಬ ಶಂಕಿತ ಉಗ್ರ ಪುಲ್ವಾಮಾದ ತುಫಾಲಿ ನಿಯಾಝ್ ಅರೆಸ್ಟ್, ವೈದ್ಯ ಭಯೋತ್ಪಾದನೆ ನಡುವೆ ಈತನೊಬ್ಬ ಎಲೆಕ್ಟ್ರೀಶಿಯನ್. ಇದರ ಆಳ ಇಲ್ಲಿಗೆ ನಿಲ್ಲುತ್ತಿಲ್ಲ, ಊಹೆಗೂ ನಿಲುಕದ ರೀತಿಯಲ್ಲಿ ಉಗ್ರರು ದೆಹಲಿ ಸ್ಫೋಟ ನಡೆಸಿದ್ದಾರೆ.
07:32 PM (IST) Nov 22
ಪೂರ್ಣ ಕಾಮಗಾರಿ ಬಳಿಕ ಆಯೋಧ್ಯೆ ರಾಮ ಮಂದಿರ ಹೇಗಿದೆ? ವಿಡಿಯೋ ಬಿಡುಗಡೆ ಮಾಡಿದ ಟ್ರಸ್ಟ್, ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ನ.25ರಂದು ರಾಮ ಮಂದಿರಕ್ಕೆ ಭೇಟಿ ನೀಡಲಿರುವ ಮೋದಿ ಧ್ವಜಾರೋಹಣ ನೇರವೇರಿಸಲಿದ್ದಾರೆ. ಭವ್ಯ ರಾಮ ಮಂದಿರ ವಿಡಿಯೋ ಇಲ್ಲಿದೆ.
06:41 PM (IST) Nov 22
ಜೀವ ಬೆದರಿಕೆ ಇದೆ, ಕ್ಯಾಬ್ ಚಾಲಕನ ಮೆಸೇಜ್ ನೋಡಿ ಕಕ್ಕಾಬಿಕ್ಕಿಯಾದ ಟೆಕ್ಕಿಗೆ ಗೂಗಲ್ ಟ್ವಿಸ್ಟ್, ಎರಡು ನಿಮಿಷ ಕಾಯಲು ಹೇಳಿದ ಬಳಿಕ ಬಂದ ಈ ಸಂದೇಶ ನೋಡಿ ಟೆಕ್ಕಿ ಬೆವತು ಹೋಗಿದ್ದಾರೆ. ಆದರೆ ಮೆಸೇಜ್ ಅಸಲಿಯತ್ತು ಗೊತ್ತಾದಾಗ ನಿಟ್ಟುಸಿರು ಬಿಟ್ಟ ಘಟನೆ.
06:39 PM (IST) Nov 22
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ, ಜೂನಿಯರ್ ಟ್ರಂಪ್, ಅನಂತ್ ಅಂಬಾನಿಯವರ 'ವಂತರಾ' ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿನ ಸೌಲಭ್ಯ ಕಂಡು ಇದನ್ನು "ವಿಶ್ವದ ಅದ್ಭುತ" ಎಂದು ಬಣ್ಣಿಸಿ, ಪ್ರಾಣಿಗಳು ತಮಗಿಂತ ಉತ್ತಮವಾಗಿ ಬದುಕುತ್ತಿವೆ ಎಂದು ಶ್ಲಾಘಿಸಿದರು.
05:18 PM (IST) Nov 22
ಟ್ರಂಪ್-ಮಮ್ದಾನಿ ಭೇಟಿ ಉಲ್ಲೇಖಿಸಿ ರಾಹುಲ್ ಗಾಂಧಿ ಕಿವಿ ಹಿಂಡಿದ್ರಾ ಶಶಿ ತರೂರ್?, ಭಾರತದಲ್ಲಿ ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ ಎಂದಿರುವ ಶಶಿ ತರೂರ್ ನೀವು ಎನು ಮಾಡುತ್ತಿದ್ದೀರಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪ್ರಮುಖ ನಾಯಕರನ್ನು ಪ್ರಶ್ನಿಸಿದ್ದಾರೆ.
04:24 PM (IST) Nov 22
ಖಾಸಗಿ, ಸರ್ಕಾರಿ ನೌಕರಿಗೆ ಮತ್ತೆ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ, ನಾಳೆಯಿಂದಲೇ ಜಾರಿ, GRAP 4 ಹೇರಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಿಂತೆ ಇದೀಗ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
04:00 PM (IST) Nov 22
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸೂಪರ್ ಮಾಡೆಲ್ ಮಹಿಕಾ ಶರ್ಮಾ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಹವನವೊಂದು ಇಬ್ಬರ ನಿಶ್ಚಿತಾರ್ಥದ ವದಂತಿಗಳಿಗೆ ಕಾರಣವಾಗಿತ್ತು, ಈ ಕುರಿತು ಮಹಿಕಾ ಶರ್ಮಾ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
03:34 PM (IST) Nov 22
ಮಿಸ್ ಯೂನಿವರ್ಸ್ ಮತ್ತು ಮಿಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಈ ಲೇಖನ ವಿವರಿಸುತ್ತದೆ. 'ಆತ್ಮವಿಶ್ವಾಸದಿಂದ ಸುಂದರ' ಮತ್ತು 'ಉದ್ದೇಶಪೂರ್ವಕ ಸೌಂದರ್ಯ' ಎಂಬ ಧ್ಯೇಯವಾಕ್ಯಗಳು, ಸ್ಪರ್ಧೆಯ ಸುತ್ತುಗಳು ಹಾಗೂ ಈ ಕಿರೀಟಗಳನ್ನು ಗೆದ್ದ ಭಾರತೀಯರ ಪಟ್ಟಿ ನೀಡಲಾಗಿದೆ.
03:23 PM (IST) Nov 22
Tejas Jet Crash Dubai Airshow: Viral Video Shows Pilot Ejecting at Last Moment ದುಬೈ ಏರ್‌ಶೋನಲ್ಲಿ ಪತನಗೊಂಡ ತೇಜಸ್ ಯುದ್ಧವಿಮಾನದ ಹೊಸ ವಿಡಿಯೋದಲ್ಲಿ, ಪೈಲಟ್ ನಮಾಂಶ್ ಸಯ್ಯಾಲ್ ಕೊನೆಯ ಕ್ಷಣದಲ್ಲಿ ಪ್ಯಾರಾಚೂಟ್ ಮೂಲಕ ಹೊರಬರಲು ಯತ್ನಿಸಿದ್ದು ಸ್ಪಷ್ಟವಾಗಿದೆ.
03:05 PM (IST) Nov 22
ತೇಜಸ್ ಯುದ್ಧ ವಿಮಾನದ ಸಾಹಸ, ವಿಂಗ್ ಕಮಾಂಡರ್ ನಮಾಂಶ್ ಅಂತಿಮ ಕ್ಷಣದ ವಿಡಿಯೋ ಬಹಿರಂಗ , ಮೈಜುಮ್ಮೆನಿಸುವ ಸಾಹಸ, ಪರಿಸ್ಥಿತಿಯನ್ನು ಕೂಲ ಆಗಿ ನಿಭಾಯಿಸುತ್ತಿರುವ ಪೈಲೆಟ್ ಸೇರಿದಂತೆ ಅಂತಿಮ ನಿಮಿಷಗಳ ವಿಡಿಯೋ ಇಲ್ಲಿದೆ.
01:36 PM (IST) Nov 22
ಸಾಲದ ಸುಳಿಯಲ್ಲಿ ಸಿಲುಕಿರುವ ಎಜುಟೆಕ್ ಕಂಪನಿ ಬೈಜೂಸ್‌ನ ಸಂಸ್ಥಾಪಕ ಬೈಜು ರವೀಂದ್ರನ್‌ಗೆ ಅಮೆರಿಕದ ನ್ಯಾಯಾಲಯವು ₹9,000 ಕೋಟಿಗೂ ಹೆಚ್ಚು ದಂಡ ವಿಧಿಸಿದೆ. ಒಂದು ಕಾಲದಲ್ಲಿ ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟ್‌ಅಪ್ ಆಗಿದ್ದ ಬೈಜೂಸ್ ಈಗ ದಿವಾಳಿತನದ ಅಂಚಿಗೆ ಬಂದಿದೆ.
12:55 PM (IST) Nov 22
ದುಬೈ ಏರ್ ಶೋನಲ್ಲಿ ತೇಜಸ್ ವಿಮಾನ ಪತನಗೊಂಡು ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಮೃತಪಟ್ಟ ಘಟನೆಯನ್ನು ಲೇವಡಿ ಮಾಡಿದ ಪಾಕಿಸ್ತಾನಿ ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11:54 AM (IST) Nov 22
ಪ್ರತಿದಿನದಂತೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ವ್ಯತ್ಯಾಸವಾಗಿದೆ. ಈ ಲೇಖನದಲ್ಲಿ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಹಾಗೂ ಬೆಳ್ಳಿ ಬೆಲೆಯ ಸಂಪೂರ್ಣ ವಿವರವನ್ನು ನೀಡಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ದರ ಪಟ್ಟಿಯನ್ನೂ ಇಲ್ಲಿ ಪರಿಶೀಲಿಸಬಹುದು.
10:17 AM (IST) Nov 22
Delhi Court Sentences Man to 25 Years for Digital Rape of 2-Year-Old Girl in 9 Days 2 ವರ್ಷದ ಬಾಲಕಿಯ ಮೇಲೆ ಡಿಜಿಟಲ್ ಅ*ತ್ಯಾಚಾರ ಎಸಗಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ.
09:32 AM (IST) Nov 22
ಮಣಿಪುರದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂದೂ ಸಮಾಜವು ಅಮರ ಎಂದು ಪ್ರತಿಪಾದಿಸಿದರು, ಭಾರತವು ಯುನಾನ್ (ಗ್ರೀಸ್), ಮಿಸ್ರ್ (ಈಜಿಪ್ಟ್) ಮತ್ತು ರೋಮ್‌ನಂತಹ ಸಾಮ್ರಾಜ್ಯಗಳನ್ನು ಮೀರಿಸಿತ್ತು ಎಂದು ಹೇಳಿದರು.
08:06 AM (IST) Nov 22
07:48 AM (IST) Nov 22
ಐತಿಹಾಸಿಕ ಕ್ರಮವೊಂದರಲ್ಲಿ ಕೇಂದ್ರ ಸರ್ಕಾರವು 2020ರಿಂದ ಜಾರಿಯಾಗದೆ ಬಾಕಿ ಉಳಿದಿದ್ದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಇದರ ಕಂಪನಿ ಸ್ನೇಹಿ ಕ್ರಮಗಳಾದ ಕೆಲಸದ ಸಮಯ ಹೆಚ್ಚಳ ಹಾಗೂ ಉದ್ಯೋಗದಾತ ಸ್ನೇಹಿ ವಜಾ ನಿಯಮಗಳ ಜಾರಿಗೂ ಅನುಮತಿಸಿದೆ.
07:48 AM (IST) Nov 22
ಕೇರಳದಲ್ಲೊಂದು ವಿಶೇಷ ವಿವಾಹ ನಡೆದಿದ್ದು, ವಧು-ವರರು ಆಸ್ಪತ್ರೆಯ ತರ್ತು ಚಿಕಿತ್ಸಾ ಘಟಕದಲ್ಲಿ ನವಜೀವನಕ್ಕೆ ಕಾಲಿಟ್ಟ ಪ್ರಸಂಗ ಶುಕ್ರವಾರ ಜರಗಿದೆ. ಮೇಕಪ್‌ಗಾಗಿ ಶುಕ್ರವಾರ ಬೆಳಗ್ಗೆ ತಮ್ಮ ಕಾರಿನಲ್ಲಿ ಕುಮಾರಕೋಂಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಕಾರು ಅಪಘಾತಗೊಂಡು ಆಸ್ಪತ್ರೆ ಸೇರಿದ್ದರು
07:47 AM (IST) Nov 22
ಬಾಂಗ್ಲಾದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಕಂಪನದಿಂದಾಗಿ 7 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಪ. ಬಂಗಾಳದಲ್ಲೂ ಭೂಕಂಪದ ಅನುಭವವಾಗಿದೆ.
07:47 AM (IST) Nov 22
ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನ.23ರವರೆಗೆ ನಡೆಯಲಿರುವ ಜಿ-20 ಶೃಂಗದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಸಭೆ ನಡೆಯುತ್ತಿರುವ ಜೋಹಾನ್ಸ್‌ಬರ್ಗ್ ನಗರಕ್ಕೆ ಶುಕ್ರವಾರ ಆಗಮಿಸಿದರು. ವಾಟರ್‌ಲೋಫ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಾಂಸ್ಕೃತಿಕವಾಗಿ ಸ್ವಾಗತ ಕೋರಲಾಯಿತು.
07:47 AM (IST) Nov 22
‘ಬಿಹಾರದಲ್ಲಿ ಎನ್‌ಡಿಎ ಗೆಲುವು ದೇಶದ ನುಸುಳುಕೋರರ ವಿರುದ್ಧದ ಜಯ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ. ಇದರ ಬೆನ್ನಲ್ಲೇ ‘ಶಾ ಹೇಳಿಕೆ ಕೇಂದ್ರದ ವೈಫಲ್ಯ ತೋರಿಸುತ್ತದೆ. ಅವರು ರಾಜೀನಾಮೆ ನೀಡಬೇಕು’ ಎಂದು ಟಿಎಂಸಿ ಆಗ್ರಹಿಸಿದೆ.
07:46 AM (IST) Nov 22
ಅತ್ಯಂತ ಅಪಾಯಕಾರಿ ‘ರೈಸಿನ್’ ಪುಡಿಯಿಂದ ದೇಶಾದ್ಯಂತ ರಾಸಾಯನಿಕ ದಾಳಿ ನಡೆಸುವ ಸಂಚು ರೂಪಿಸಿ ಇಲ್ಲಿ ಬಂಧಿತನಾಗಿರುವ ಓರ್ವ ಶಂಕಿತ ಉಗ್ರ, ದಕ್ಷಿಣ ಭಾರತವನ್ನು ಉತ್ತರದಿಂದ ಪ್ರತ್ಯೇಕಿಸುವ ಯೋಜನೆ ರೂಪಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
07:46 AM (IST) Nov 22
ಉತ್ತಮ ಸಂಬಳದ ಕೆಲಸದ ಆಮಿಷಕ್ಕೆ ಒಳಗಾಗಿ ಮ್ಯಾನ್ಮಾರ್‌ನ ಸೈಬರ್ ವಂಚಕರ ಜಾಲದಲ್ಲಿ ಸಿಲುಕಿ ಒದ್ದಾಡುತ್ತಿದ್ದ 125 ಭಾರತೀಯರನ್ನು ರಕ್ಷಿಸಿ, ಥಾಯ್ಲೆಂಡ್‌ನಿಂದ ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ 25 ಮಂದಿ ಕನ್ನಡಿಗರೂ ಇದ್ದರು.
07:46 AM (IST) Nov 22
ದೆಹಲಿ ಸ್ಫೋಟದಲ್ಲಿ ಬಂಧಿತ ಅಲ್‌ಫಲಾ ವೈದ್ಯ ಕಾಲೇಜಿನ ವೈದ್ಯ ಡಾ। ಮುಜಮ್ಮಿಲ್ ಶಕೀಲ್ ಹರ್ಯಾಣದ ಫರೀದಾಬಾದ್‌ನ ತನ್ನ ಬಾಡಿಗೆ ಕೋಣೆಯಲ್ಲಿ ಹಿಟ್ಟಿನ ಗಿರಣಿ ಯಂತ್ರ ಬಳಸಿ ಸ್ಫೋಟಕಗಳಿಗೆ ಬೇಕಿರುವ ರಾಸಾಯನಿಕಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.