ಪ್ಲೀಸ್ ಅಭಿನಂದನ್ ಬಿಟ್ಟುಬಿಡಿ, ಇಲ್ಲದಿದ್ರೆ ಭಾರತ ದಾಳಿ ಮಾಡುತ್ತೆ: ಪಾಕ್‌ ರಹಸ್ಯ ಬಿಚ್ಚಿಟ್ಟ ಸಂಸದ!

By Suvarna NewsFirst Published Oct 29, 2020, 11:32 AM IST
Highlights

ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿದ್ದ ಪಾಕಿಸ್ತಾನ| ಅಂದು ನಬಡೆದ ಕ್ಷಣ ಕ್ಷಣದ ಮಾಹಿತಿ ಬಿಚ್ಚಿಟ್ಟ ಪಾಕ್ ಸಂಸದ| ಅಭಿನಂದನ್ ಬಂಧನ ಬೆನ್ನಲ್ಲೇ ನಡುಗಿದ್ದ ಪಾಕ್ ಆರ್ಮಿ ಮುಖ್ಯಸ್ಥ

ಇಸ್ಲಮಾಬಾದ್‌(ಅ.29): ಪಾಕಿಸ್ತಾನದ ಸಂಸದನೊಬ್ಬ ಬುಧವಾರದಂದು ಮಾತನಾಡುತ್ತಾ ಇಮ್ರಾನ್ ಖಾನ್ ಸರ್ಕಾರ ಭಾರತ ದಾಳಿ ನಡೆಸುತ್ತದೆ ಎಂಬ ಭಯದಿಂದ ವಿಂಗ್ ಕಮಾಂಡರ್ ಅಭಿನಂದನ್‌ ವರ್ಧಮಾನ್‌ರನ್ನು ಬಿಡುಗಡೆಗೊಳಿಸಿದ್ದರೆಂದು ತಿಳಿಸಿದ್ದಾರೆ. ಸಂಸದ ಈ ವಿಚಾರವನ್ನು ಅಲ್ಲಿನ ಸಂಸತ್ತಿನಲ್ಲೇ ಬಹಿರಂಗಪಡಿಸಿದ್ದಾರೆಂಬುವುದು ಉಲ್ಲೇಖನೀಯ.

ಕಳೆದ ವರ್ಷ ಫೆಬ್ರೆವರಿಯಲ್ಲಿ ಪಾಕಿಸ್ತಾನ ವಾಐಉಸೇನೆಯ ಮೇಲೆ ನಡೆದ ಕಾರ್ಯಾಚರಣೆ ವೇಳೆ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ಹಾರಿಸುತ್ತಿದ್ದ ವಿಮಾನ ಪಾಕ್ ಗಡಿಯಲ್ಲಿ ಪತನಗೊಂಡಿತ್ತು. ಇದಾದ ಬಳಿಕ ಅವರನ್ನು ಬಂಧಿಸಿತ್ತು.

ಪಾಕಿಸ್ತಾನ ಸಂಸತ್ತಿನಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ ಎನ್(PML-N) ನಾಯಕ ಅಯಾಜ್ ಸಾದಿಕ್ ಸದ್ಯ ಹೀಗೊಂದು ವಿಚಾರವನ್ನು ಬಹಿರಂಗಪಡಿಸಿದ್ದು, ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಶಿ ಮೀಟಿಂಗ್ ಒಂದರಲ್ಲಿ ಮಾತನಾಡುತ್ತಾ 'ಒಂದು ವೇಳೆ ನಾವು ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಬಿಡುಗಡೆ ಮಾಡದಿದ್ದಲ್ಲಿ ಭಾರತ ಇಂದು ರಾಥ್ರಿ 9  ಗಂಟೆಗೆ ನಮ್ಮ ಮೇಲೆ ದಾಳಿ ನಡೆಸಲಿದೆ' ಎಂದು ಹೇಳಿದ್ದರೆಂದು ಸಂಸದ ಸಾದಿಕ್ ತಿಳಿಸಿದ್ದಾರೆ.

ನಡುಗುತ್ತಿದ್ದರು ಪಾಕ್ ಆರ್ಮಿ ಚೀಫ್

ಅಯಾಜ್ ಸಾದಿಕ್ ಮಾತನಾಡುತ್ತಾ ವಿದೇಶಾಂಗ ಸಚಿವ ಈ ವಿಚಾರವಾಗಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಾಜ್ವಾ ಸೇರಿ ಅನ್ಯರೊಂದಿಗೆ ಸಭೆ ನಡೆಸಿದ್ದರು. ಈ ಕುರಿತಾಗಿ ಮಾತನಾಡಿದ ಸಾದಿಕ್ ನನಗೆ ಇವತ್ತಿಗೂ ನೆನಪಿದೆ. ಅಂದು ಆರ್ಮಿ ಚೀಫ್ ಬಾಜ್ವಾ ಸಭೆ ನಡೆಯುತ್ತಿದ್ದ ಕೋಣೆಗೆ ಬಂದಿದ್ದರು. ಅಂದು ಅವರ ಕೈ ಕಾಲುಗಳು ನಡುಗುತ್ತಿದ್ದವು, ಅವಡು ಬೆವರುತ್ತಿದ್ದರು ಎಂದಿದ್ದಾರೆ.

कांग्रेस के शहजादे को भारत की किसी भी चीज पर विश्वास नहीं है, चाहे वह सेना हो, सरकार हो या हमारे लोग हों। तो वे अपने ‘सबसे भरोसेमंद देश’ पाकिस्तान की ही सुन लें। उम्मीद है कि अब तो उनकी आंखें खुलेंगी... pic.twitter.com/2aXK8ZvAIM

— Jagat Prakash Nadda (@JPNadda)

ಅಲ್ಲಾನಿಗಾಗಿ ಅಭಿನಂದನ್‌ರನ್ನು ಹೋಗಲು ಬಿಡಿ, ಇಲ್ಲದಿದ್ದರೆ ಭಾರತ ದಾಳಿ ನಡೆಸುತ್ತದ

ಸಾದಿಕ್ ಅನ್ವಯ ಇಮ್ರಾನ್ ಖಾನ್ ಮೀಟಿಂಗ್‌ನಲ್ಲಿ ಭಾಗಿಯಾಗಲು ನಿರಾಕರಿಸಿದ್ದರು. ಸಭೆಗೆ ಆಗಮಿಸಿದ್ದ ವಿದೇಶಾಂಗ ಸಚಿವ ಆರ್ಮಿ ಚೀಫ್ ಬಳಿ ಅಲ್ಲಾನಿಗಾಗಿ ಅಭಿನಂದನ್‌ರನ್ನು ಬಿಟ್ಟು ಬಿಡಿ, ಇಲ್ಲದಿದ್ದರೆ ಇಂದು ರಾತ್ರಿ ಒಂಭತ್ತು ಗಂಟೆಗೆ ಭಾರತ ದಾಳಿ ನಡೆಸುತ್ತದೆ ಎಂದು ಗೋಗರೆದಿದ್ದರು. ಅಲ್ಲದೇ ವಿಪಕ್ಷವೂ ಅಭಿನಂದನ್ ಸೇರಿ ಅಂದು ತಲೆದೋರಿದ್ದ ಎಲ್ಲಾ ಸಮಸ್ಯೆಗಳ ಸಂಬಂಧ ಸರ್ಕಾರದ ನಿರ್ಧಾರ ಬೆಂಬಲಿಸಿತ್ತಜ ಎಂದಿದ್ದಾರೆ ಸಾದಿಕ್  

click me!