ರೇಪ್ ಸಂತ್ರಸ್ತೆ ಗುರುತು ರಿವೀಲ್: ರಾಹುಲ್ ಗಾಂಧಿ ವಿರುದ್ಧ ಕೇಸ್

By Suvarna NewsFirst Published Aug 5, 2021, 3:21 PM IST
Highlights
  • ದೆಹಲಿ ಅತ್ಯಾಚಾರ ರೇಪ್ ಸಂತ್ರಸ್ತೆಯ ಗುರುತು ಬಹಿರಂಗ
  • ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲು

ದೆಹಲಿ(ಆ.05): ದೆಹಲಿ ಮೂಲಕ ವಕೀಲ ವಿನೀತ್ ಜಿಂದಾಲ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೆಹಲಿ ನಂಗಲ್ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ ಪಡಿಸಿದ ಆರೋಪದ ಹಿನ್ನೆಲೆ ರಾಹುಲ್ ಗಾಂಧಿ ವಿರುದ್ಧ ಕೇಸು ದಾಖಲಾಗಿದೆ. ಕಾಂಗ್ರೆಸ್ ಸಂಸದ ಅತ್ಯಾಚಾರ ಸಂತ್ರಸ್ತೆಯ ತಂದೆ ಹಾಗೂ ತಾಯಿಯೊಂದಿಗೆ ತಾವಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ ಅಪ್ರಾಪ್ತ ಸಂತ್ರಸ್ತೆಯ ಗುರುತು ಬಹಿರಂಗ ಮಾಡಿದ್ದಾರೆ ಎಂದು ವಕೀಲ ವಿನೀತ್ ದೂರಿನಲ್ಲಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಕೀಲ ತಮ್ಮ ದೂರಿನಲ್ಲಿ ಪೊಲೀಸರಿಗೆ ವಿನಂತಿಸಿದ್ದಾರೆ. ರಾಹುಲ್ ಗಾಂಧಿ ನಡೆ ಪೋಸ್ಕೋ ಕಾಯ್ದೆ ಸೆಕ್ಷನ್ 23, ಜುವೆನೈಲ್ ಜಸ್ಟೀಸ್‌ ಕಾಯ್ದೆಯ ಸೆಕ್ಷನ್ 74, ಐಪಿಸಿ 228ಎ ಅಡಿಯಲ್ಲಿ ಅರೋಪಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

9ರ ಬಾಲಕಿ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ, ಶವ ಸುಟ್ಟುಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನ!

ಫೋಟೋಗಳನ್ನು ಅಪ್‌ಲೋಡ್ ಮಾಡಿ ದೆಹಲಿ ನಂಗಲ್ ಅತ್ಯಾಚಾರ ಸಂತ್ರಸ್ತೆಯ ಗುರುತು ರಿವೀಲ್ ಮಾಡಿ ಪೋಸ್ಕೋ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಟ್ವಿಟರ್‌ಗೆ ನೋಟಿಸ್ ಕಳುಹಿಸಿದೆ.

ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ: ಭುಗಿಲೆದ್ದ ಆಕ್ರೋಶ!

ಆ.04ರಂದು ಕಾಂಗ್ರೆಸ್ ಮುಖಂಡ ರಾಹುಲ್ ಅತ್ಯಾಚಾರವಾಗಿ, ಕೊಲೆಯಾಗಿ ಪೋಷಕರ ಗಮನಕ್ಕೆ ಬಾರದೆ ದೆಹಲಿಯ ನಂಗಲ್ ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾದ ಬಾಲಕಿಯ ಪೋಷಕರನ್ನು ಭೇಟಿ ಮಾಡಿದ್ದರು. ಭೇಟಿಯ ನಂತರ ಕುಟುಂಬಕ್ಕೆ ನೆರವಿನ ಭರವಸೆಯನ್ನು ರಾಹುಲ್ ಗಾಂಧಿ ನೀಡಿದ್ದರು. ನಂತರ ಅವರು ಟ್ವಿಟರ್‌ನಲ್ಲಿ ತಾವು ಸಂತ್ರಸ್ತೆಯ ಫೋಷಕರನ್ನು ಭೇಟಿ ಮಾಡಿದ ಫೋಟೊ ಶೇರ್ ಮಾಡಿದ್ದರು. ಆಗಸ್ಟ್ 1ರಂದು 9 ವರ್ಷದ ಬಾಲಕಿಯನ್ನು ಶವಾಗಾರದ ಪುರೋಹಿತರು ಹಾಗೂ ಮೂವರು ಸಿಬ್ಬಂದಿ ಅತ್ಯಾಚಾರ ಮಾಡಿ ಕೊಲೆ ಮಾಡಿ ನಂತರ ಸುಟ್ಟಿದ್ದರು. ನಾಲ್ವರು ಆರೋಪಿಗಳ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾರೆ. 

click me!