PFI ಲಿಂಕ್?  ಹತ್ರಾಸ್‌ಗೆ ತೆರಳುತ್ತಿದ್ದ ಪತ್ರಕರ್ತ ಟೋಲ್‌ಗೇಟ್‌ನಲ್ಲೇ ಅರೆಸ್ಟ್!

By Suvarna NewsFirst Published Oct 6, 2020, 4:56 PM IST
Highlights

ಹತ್ರಾಸ್ ಗೆ ತೆರಳುತ್ತಿದ್ದ ಕೇರಳ ಮೂಲದ ಜರ್ನಲಿಸ್ಟ್ ಬಂಧನ/ ಪಿಎಫ್‌ಐ ನೊಂದಿಗೆ ಸಂಬಂಧ ಹೊಂದಿದ್ದರು ಎಂಬ  ಆರೋಪ/ ಮಾಹಿತಿ ಸ್ಪಷ್ಟ ಮಾಡದ ಪೊಲೀಸರು

ಲಕ್ನೋ(ಅ. 06)  ದೆಹಲಿಯಿಂದ  ಹತ್ರಾಸ್ ಗೆ ತೆರಳುತ್ತಿದ್ದ  ಕೇರಳ ಮೂಲದ ಪತ್ರಕರ್ತ ಸೇರಿ ಮೂವರನ್ನು ಉತ್ತರ ಪ್ರದೇಶ  ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಮೂವರನ್ನು ಅನುಮಾನಾಸ್ಪದ ವ್ಯಕ್ತಿಗಳು ಎಂಬ ಆರೋಪದ ಮೇಲೆ ಬಂಧನ ಮಾಡಲಾಗಿದೆ.

ಶಂಕಿತರು ದೆಹಲಿಯಿಂದ ಹತ್ರಾಸ್  ಕಡೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಟೋಲ್ ಗೇಟ್ ನಲ್ಲಿ ಅತೀಕ್ ಊರ್ ರೆಹಮಾನ್, ಸಿದ್ದೀಕ್ ಕಪ್ಪನ್, ಮಸೂದ್ ಅಹಮದ್ ಮತ್ತು ಆಲಂ ಎಂಬುವರನ್ನು ಬಂಧನ ಮಾಡಲಾಗಿದೆ.

ರೇಪ್ ಗಳಿಗೆ  ಪೋಷಕರೆ ಕಾರಣ; ಬಿಜೆಪಿ ನಾಯಕನ ವಿವಾದಿತ ಹೇಳಿಕೆ

ಹತ್ರಾಸ್ ಸಂತ್ರಸ್ತ ಕುಟುಂಬದ ಪರಿಸ್ಥಿತಿ ವರದಿ ಮಾಡಲು ಸಿದ್ದೀಕ್ ತೆರಳುತ್ತಿದ್ದರು. ಸಿದ್ದೀಕ್ ಕಪ್ಪನ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಮಥುರಾದ ಇತರ ಮೂವರೊಂದಿಗೆ  ಅವರನ್ನು ಬಂಧಿಸಲಾಗಿದೆ.

ಬಂಧಿತರ ಮೊಬೈಲ್ ಮತ್ತು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದ್ದು ಇವರಿಗೆ ಪ್ಆಫ್ಯೂಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಪರ್ಕ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದು ಸಿದ್ದೀಕ್ ಅವರನ್ನು ಬಿಡುಗಡೆ ಮಾಡಲು ಕೇಳಿಕೊಂಡಿದೆ.  ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ವಿಚಾರ ಗೊತ್ತಾಗಿದೆ.. ಆದರೆ ಹತ್ರಾಸ್ ಪೊಲೀಸ್ ಠಾಣೆಯಾಗಲಿ..ಇಲಾಖೆಯಾಗಲಿ ಯಾವುದೆ ಮಾಹಿತಿ ನೀಡುತ್ತಿಲ್ಲ ಎಂದು ಯೋಗಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

click me!