ಔಷಧಿ ಅಸಲಿಯೋ, ನಕಲಿಯೋ? ಪರಿಶೀಲನೆ ಇನ್ನು ಸುಲಭ, ಕ್ಯೂಆರ್ ಕೋಡ್ ಜಾರಿ!

By Suvarna NewsFirst Published Aug 2, 2023, 7:08 PM IST
Highlights

ಮೆಡಿಕಲ್, ಮಾರುಕಟ್ಟೆಯಲ್ಲಿ ಖರೀದಿಸುವ ಔಷಧಿ ಅಸಲಿಯೋ ಅಥವಾ ನಕಲಿಯೋ? ಈ ಆತಂಕ ಪ್ರತಿಯೊಬ್ಬರಲ್ಲೂ ಇದೆ. ನಕಲಿ ಔಷಧಿ ಸೇವಿಸಿ ಮತ್ತೊಂದು ಸಮಸ್ಯೆಗೆ ಗುರಿಯಾದ ಹಲವು ಪ್ರಕರಣಗಳೂ ಇವೆ. ಇದೀಗ ಔಷಧಿ ಅಸಲಿಯೋ, ನಕಲಿಯೋ ಪರೀಶಿಲಿಸಲು ಕ್ಯೂಆರ್ ಕೂಡ್ ಜಾರಿಯಾಗುತ್ತಿದೆ.
 

ನವದೆಹಲಿ(ಆ.02) ಕೊರೋನಾ ಬಳಿಕ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಅತ್ಯಾಧುನಿಕ ತಂತ್ರಜ್ಞಾನ, ವೈದ್ಯಕೀಯ ಸಲಕರಣೆ ಸೇರಿದಂತೆ ಆಸ್ಪತ್ರೆಗಳು ಎಲ್ಲಾ ಸೌಲಭ್ಯಗಳನ್ನು ಹೊಂದಿರುವಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನು ವೈದ್ಯಕೀಯ ಅಗತ್ಯತೆಗಳೆ ಉತ್ಪಾದನೆಯನ್ನೂ ಭಾರತ ಮಾಡುತ್ತಿದೆ. ಇದೀಗ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಪರಿವರ್ತನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮಾರುಕಟ್ಟೆಯಲ್ಲಿ ಖರೀದಿಸುವ ಔಷಧಿ ಅಸಲಿಯೋ ಅಥವಾ ನಕಲಿಯೋ ಅನ್ನೋ  ಆತಂಕ ಪ್ರತಿಯೊಬ್ಬರಲ್ಲೂ ಇದೆ. ಈ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಇದೀಗ ಕ್ಯೂಆರ್ ಕೋಡ್ ಜಾರಿ ಮಾಡುತ್ತಿದೆ. ಕೋಡ್ ಸ್ಕ್ಯಾನ್ ಮಾಡಿದರೆ ಔಷಧದ ಜಾತಕ ಬಯಲಾಗಲಿದೆ.

ಆರೋಗ್ಯ ಸಮಸ್ಯೆಗೆ ಸೂಕ್ತ ಹಾಗೂ ಅಸಲಿ ಔಷಧಿ ಸೇವನೆ ಮಾಡಬೇಕು. ಔಷಧಿ ಖರೀದಿಸುವಾತನಿಗೆ ಗುಣಮಟ್ಟದ ಔಷಧಿ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಔಷಧಿಯ ಅಸಲಿಯತ್ತು ಖಚಿತಪಡಿಸಲು ಕ್ಯೂಆರ್ ಕೋಡ್ ಶೀಘ್ರದಲ್ಲೇ ಜಾರಿಗೆ ತರುತ್ತಿದೆ. ಆರಂಭಿಕ ಹಂತದಲ್ಲಿ ಗರಿಷ್ಠ ಮಾರಾಟವಾಗುವ 300 ಡ್ರಗ್‌ಗಳಲ್ಲಿ ಕ್ಯೂಆರ್ ಕೋಡ್ ಜಾರಿಗೆ ತರುತ್ತಿದೆ. ಖರೀದಿಸುವ ಮಾತ್ರೆಗಳ ಪ್ಯಾಕೆಟ್ ಕೆಳಭಾಗದಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮಾತ್ರೆ ಅಸಲಿಯೋ, ನಕಲಿಯೋ, ಉತ್ಪಾದಕರ ವಿವರ ಸೇರಿದಂತೆ ಎಲ್ಲಾ ಮಾಹಿತಿ ಸಿಗಲಿದೆ. ಈ ಮಾತ್ರೆಗೆ ಕೇಂದ್ರ ಡ್ರಗ್ ಕಂಟ್ರೋಲ್ ಆಫ್ ಇಂಡಿಯಾದ ಅನುಮತಿ ಸೇರಿದಂತೆ ಹಲವು ಮಾಹಿತಿಗಳು ಸಿಗಲಿದೆ.

Latest Videos

ನಾಯಿ ಮೂತ್ರ ಮಾಡಿದ ಔಷಧಿ ಕೊಡುವ ಮಡಿಕೇರಿ ಜಿಲ್ಲಾಸ್ಪತ್ರೆ: ಜನರ ಜೀವದ ಜೊತೆಗೆ ಚೆಲ್ಲಾಟ

ಮಾತ್ರೆ, ಟ್ಯೂಬ್, ಸೀಲ್ ಮಾಡಿದ ಔಷಧಗಳ ಪ್ಯಾಕೆಟ್ ಮೇಲೆ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. ಆ್ಯಂಟಿಬಯೋಟಿಕ್, ಕಾರ್ಡಿಯಕ್, ನೋವಿನ ಮಾತ್ರೆ, ಆ್ಯಂಟಿ ಅಲರ್ಜಿ ಸೇರಿದಂತೆ ಹಲವು ಔಷಧಗಳಿಗೆ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. 100 ರೂಪಾಯಿಗಿಂತ ಹೆಚ್ಚಿನ ಔಷಧಿಗಳಿಗೆ ಕ್ಯೂಆರ್ ಕೋಡ್ ಮೊದಲ ಹಂತದಲ್ಲಿ ಮುದ್ರಣವಾಗಲಿದೆ.

ಕೆಮ್ಮು, ಶೀತ ಸಿರಪ್‌ನಲ್ಲಿ ಹೆಚ್ಚು ನಕಲಿಗಳಾಗಿವೆ. ಈ ಕುರಿತು ಹಲವು ಪ್ರಕರಣಗಳು ದಾಖಲಾಗಿದೆ. ಹೀಗಾಗಿ ಈ ಔಷಧಗಳನ್ನು ತೆಗೆದುಕೊಂಡರೆ ಸಮಸ್ಯೆ ನಿವಾರಣೆಗಿಂತ ಆರೋಗ್ಯ ಮತ್ತಷ್ಟು ಹದಗೆಡಲಿದೆ. ಇವೆಲ್ಲಕ್ಕೂ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಇದೀಗ ಕ್ಯೂಆರ್ ಕೋಡ್ ನಿಯಮ ಜಾರಿಗೆ ತರುತ್ತಿದೆ.

ನಕಲಿ ಔಷಧಗಳ ಹಾವಳಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇಷ್ಟೇ ಅಲ್ಲ ಭಾರತಕ್ಕೆ ತೀವ್ರ ಹಿನ್ನಡೆಯನ್ನು ತಂದಿತ್ತು. ಭಾರತದಲ್ಲಿ ಔಷಧಿ ಉತ್ಪಾದಿಸುವ ಮೇಡನ್‌ ಫಾರ್ಮಾ ಔಷಧಿ ಸೇವಿಸಿ  ಗಾಂಬಿಯಾದ 66 ಮಕ್ಕಳ ಮೃತಪಟ್ಟಿದ್ದಾರೆ ಅನ್ನೋ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಭಾರತದಲ್ಲೂ ಸಾಕಷ್ಟುಎಡವಟ್ಟು ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಮೇಡನ್‌ ಫಾರ್ಮಾ ತಯಾರಿಸಿದ ಹಲವಾರು ಔಷಧಿಗಳು ದೇಶದ 4 ರಾಜ್ಯಗಳಲ್ಲಿ ನಿಗದಿ ಪಡಿಸಿದ ಗುಣಮಟ್ಟದ ಮಾನದಂಡವನ್ನು ಪೂರೈಸಿರಲಿಲ್ಲ ಎಂದು ತಿಳಿದುಬಂದಿದೆ. 2011ರಲ್ಲಿ ವಿಯೆಟ್ನಾಂ ದೇಶ ಕೂಡಾ ಈ ಕಂಪನಿಯ ವಸ್ತುಗಳ ಮೇಲೆ ನಿಷೇಧ ಹೇರಿತ್ತು ಎನ್ನಲಾಗಿದೆ.

88844 ಔಷಧಗಳ ಪರೀಕ್ಷೆ: 2500 ಔಷಧ ಗುಣಮಟ್ಟ ಕಳಪೆ 379 ವಿಷಪೂರಿತ: ಕೇಂದ್ರ

ಕೇಂದ್ರ ಔಷಧಿ ಗುಣಮಟ್ಟನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ನಂತೆ ಪ್ರತಿ ರಾಜ್ಯದಲ್ಲೂ ಔಷಧಿ ನಿಯಂತ್ರಕರು ಇರುತ್ತಾರೆ. ಕೇರಳ ಹಾಗೂ ಗುಜರಾತ್‌ ಔಷಧ ನಿಯಂತ್ರಕರು ಕಳೆದ ಕೆಲ ವರ್ಷಗಳಲ್ಲಿ ಮೇಡನ್‌ ಫಾರ್ಮಾದ ಕೆಲವು ಔಷಧಿಗಳು ಕಳಪೆ ಗುಣಮಟ್ಟದ್ದು ಎಂದು ಹೇಳಿದ್ದು, ಬಿಹಾರದಲ್ಲೂ ಕಂಪನಿಯ ಸಿರಪ್‌ಗಳನ್ನು 2011ರಿಂದಲೇ ಬ್ಲ್ಯಾಕ್‌ಲಿಸ್ಟ್‌ನಲ್ಲಿ ಇಡಲಾಗಿದೆ

click me!