ಉರಿಯಲ್ಲಿ ಭಾರತೀಯ ಸೇನಾ ಕಾರ್ಯಾಚರಣೆ; ಒರ್ವ ಪಾಕಿಸ್ತಾನ ಉಗ್ರನ ಹತ್ಯೆ, ಮತ್ತೊರ್ವ ಸರೆಂಡರ್!

By Suvarna NewsFirst Published Sep 28, 2021, 6:07 PM IST
Highlights
  • ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನಾ ಕಾರ್ಯಾಚರಣೆ
  • ಗಡಿ ನುಸುಳಲು ಯತ್ನಿಸುತ್ತದ್ದ ಉಗ್ರನ ಸೆರೆ ಹಿಡಿದ ಸೇನೆ
  • ಪ್ರತಿದಾಳಿ ನಡೆಸಿದ ಮತ್ತೊರ್ವ ಉಗ್ರನ ಮೇಲೆ ಗುಂಡಿನ ದಾಳಿ
  • ಉರಿ ಸೆಕ್ಟರ್‌ನಲ್ಲಿ ಬಿಗುವಿನ ವಾತಾರವರಣ, ಗಡಿಯಲ್ಲಿ ಹೈ ಅಲರ್ಟ್
     

ಉರಿ ಸೆಕ್ಟರ್(ಸೆ.28): ಭಯೋತ್ಪಾದನೆ ನೆರೆವು ನೀಡಿ ಭಾರತದ(India) ವಿರುದ್ಧ ಬಳಸಿಕೊಳ್ಳುವ ಪಾಕಿಸ್ತಾನದ(Pakistan) ನರಿ ಬುದ್ದಿ ಮತ್ತೊಮ್ಮೆ ಬಯಲಾಗಿದೆ. ಇಂದು ಉರಿ ಸೆಕ್ಟರ್‌ನಲ್ಲಿ(URI Sector) ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ. ಗಡಿ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರ(Terrorist) ಪೈಕಿ ಓರ್ವನನ್ನು ಜೀವಂತವಾಗಿ ಸೆರೆಹಿಡಿದರೆ, ಮತ್ತೊರ್ವನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಈ ಮೂಲಕ ಕಣಿವೆ ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿದ್ದ ಬಹುದೊಡ್ಡ ದುರಂತವನ್ನು ಭಾರತೀಯ ಸೇನೆ ತಪ್ಪಿಸಿದೆ.

LoC ಸ್ಥಿತಿ ಬಗ್ಗೆ ಯಾವುದೇ ಆತಂಕ ಬೇಡ, ಕಾಶ್ಮೀರಕ್ಕೆ ಸೇನೆ ಅಭಯ

ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಕಮಾಂಡರ್ 19 ವರ್ಷದ ಉಗ್ರನನ್ನು ಭಾರತೀಯ ಸೇನೆ(Indian Army) ಜೀವಂತವಾಗಿ ಸೆರೆ ಹಿಡಿದಿದೆ. ಪ್ರತಿ ದಾಳಿ ಮೂಲಕ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ ಮತ್ತೊರ್ವ ಉಗ್ರರನನ್ನು ಸೇನೆ ಹತ್ಯೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.

ಜಮ್ಮು-ಕಾಶ್ಮೀರದ ಶಾಲೆಗಳಿಗೆ ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ಹೆಸರು

2016ರಲ್ಲಿ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಪೋಷಿತ ಉಗ್ರರ ಉಪಟಳ ಹೆಚ್ಚಾಗಿತ್ತು. ಉಗ್ರರ ಒಳನುಸುಳುವಿಕೆ, ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಬಳಸಿಕೊಂಡು ವಿದ್ವಂಸಕ ಕೃತ್ಯಕ್ಕೆ ಬಳಸಿಕೊಳ್ಳಲು ಬಹುದೊಡ್ಡ ಪ್ಲಾನ್ ರೆಡಿಯಾಗಿತ್ತು. ಭಾರತೀಯ ಆರ್ಮಿ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಕ್ಯಾಂಪ್ ಮಾಡಿಕೊಂಡಿದ್ದರು. ಇದಕ್ಕೆ ಪಾಕಿಸ್ತಾನ ಸೇನೆಯೂ ಸಹಕಾರ ನೀಡಿತ್ತು. ಉರಿ ದಾಳಿ ಪ್ರತೀಕಾರ ತೀರಿಸಲು 2016ರಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್(Surgical Strike) ಮೂಲಕ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದಾದ 5 ವರ್ಷಗಳ ಬಲಿಕ ಇದೇ ತಿಂಗಳ ಆರಂಭದಲ್ಲಿ ಉರಿಯಲ್ಲಿ ಉಗ್ರರ ಉಪಟಳ ಹೆಚ್ಚಾಗಿತ್ತು.

ಕಾಶ್ಮೀರದಲ್ಲಿ ಈ ವರ್ಷ 89 ಉಗ್ರರ ಹತ್ಯೆ!

ಸೆಪ್ಟೆಂಬರ್ 18 ರಂದು ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ಮೂಲಗಳ ಪ್ರಕಾರ 6 ಉಗ್ರರು ಒಳನುಸಳುವ ಯತ್ನ ಮಾಡಿದ್ದಾರೆ ಮಾಹಿತಿ ಪಡೆದ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ದಾಳಿ ವೇಳೆ ನಾಲ್ವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಅಡಗಿ ಕುಳಿತು ದಾಳಿ ಮಾಡಿದ್ದಾರೆ. ಇಬ್ಬರು ಭಾರತದ ಗಡಿಯೊಳಕ್ಕೆ ನುಗ್ಗಿಬಂದಿದಾರೆ ಎಂದು ಮೇಜರ್ ಜನರಲ್ ವೀರೇಂದ್ರ ವತ್ಸ್ ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಅಡಗಿರುವ ನಾಲ್ವರು ಉಗ್ರರಿಂದ ಉರಿ ಸೆಕ್ಟರ್‌ನಲ್ಲಿ ಮತ್ತೆ ಆತಂಕದ ವಾತಾವರಣ ಇದೆ. ಹೀಗಾಗಿ ಭಾರತೀಯ ಸೇನೆ ಕಾರ್ಯಾಚರಣೆ ಮುಂದುವರಿಸಲಿದೆ ಎಂದಿದೆ. ಜೀವಂತವಾಗಿ ಸೆರೆ ಸಿಕ್ಕ ಉಗ್ರನನ್ನು ಆಲಿ ಬಾಬರ್ ಪರಾ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯ ಈ ಉಗ್ರ 2019ರಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯಿಂದ ತರೇಬೇತಿ ಪಡೆದಿದ್ದಾನೆ. ಪಾಕಿಸ್ತಾನದ ಮುಜಾಫರ್‌ಬಾದ್‌ನಲ್ಲಿ ತರಬೇತಿ ಪಡೆದಿದ್ದಾರೆ.

click me!