ಎಸ್‌ಐಆರ್ ವಿರುದ್ಧದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ’ಚಲೋ ದೆಹಲಿ’ಗೆ ಸಡ್ಡು ಹೊಡೆದಿರುವ ಬಿಜೆಪಿ ಸಂವಿಧಾನ ಉಳಿಸಿ ಪಾದಯಾತ್ರೆ ಕೈಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಭಾಗಿಯಾಗಿದ್ದು, ಈ ವೇಳೆ ಎಸ್‌ಐಆರ್ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸಿದ್ಧ. ರಾಹುಲ್ ಚರ್ಚೆಗೆ ಬರಲಿ’ ಎಂದು ಶಾ ಸವಾಲೆಸಿದ್ದಾರೆ.
ಉಭಯ ನಾಯಕರು ಭಾಗಲ್ಪುರ, ಕೋಲ್ಕತಾ ಮತ್ತು ಹೈದರಾಬಾದ್‌ನಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಹೆಸರಿನಲ್ಲಿ ಪ್ರತ್ಯೇಕ ಪಾದಯಾತ್ರೆ ನಡೆಸಿದರು. ಈ ವೇಳೆ ಹೈದರಾಬಾದ್‌ನಲ್ಲಿ ಮಾತನಾಡಿದ ಶಾ ವಿಪಕ್ಷಗಳ ಎಸ್‌ಐಆರ್ ಅಕ್ರಮ ಆರೋಪಗಳನ್ನು ತಳ್ಳಿ ಹಾಕಿದರು. ‘ರಾಹುಲ್ ಕೈಯಲ್ಲಿ ಸಂವಿಧಾನವನ್ನು ಹಿಡಿಯುತ್ತಾರೆ. ಆದರೆ ಅದಕ್ಕೆ ಅವರು ಬೆಲೆ ಕೊಡುವುದಿಲ್ಲ. ಇವಿಎಂ ಆಗಿರಲಿ, ಎಸ್‌ಐಆರ್ ಆಗಿರಲಿ ಅಥವಾ ಒಳನುಸುಳುಕೋರರ ವಿಷಯವೇ ಆಗಿರಲಿ. ನಾವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಸಿದ್ಧರಿದ್ದೇವೆ. ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.
ಸಂಸತ್ತಿನ ಅಧಿವೇಶನ ನಡೆದರೆ, ‘ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅನ್ನು ತುಂಡು ತುಂಡು ಮಾಡುತ್ತಾರೆ’ ಎಂದು ಗುಡುಗಿದರು.
06:37 PM (IST) Nov 03
ಹೋಂಡಾ ಕಾರ್ಸ್ ಇಂಡಿಯಾ ತನ್ನ ಮೊದಲ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ಎಸ್‌ಯುವಿಗೆ 'ಹೋಂಡಾ ಆಲ್ಫಾ' ಎಂದು ಹೆಸರಿಟ್ಟಿದೆ. ಹೊಸ 'H' ಲೋಗೋ ಹೊಂದಿರುವ ಈ ಕಾರು 2026 ರ ಡಿಸೆಂಬರ್ 2 ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ.
06:35 PM (IST) Nov 03
06:19 PM (IST) Nov 03
ನ್ಯೂಜಿಲೆಂಡ್ ವಿರುದ್ಧದ ಟಿ-ಸರಣಿ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾ ಮತ್ತೊಂದು ಅಖಾಡಕ್ಕೆ ಸಜ್ಜಾಗುತ್ತಿದೆ. ನಾಳೆಯಿಂದ ಐದು ಪಂದ್ಯಗಳನ ಏಕದಿನ ಸರಣಿ ನಡೆಯಲಿದ್ದು, ಬೆಳಗ್ಗೆ 7.30 ರಿಂದ ಪಂದ್ಯ ಶುರುವಾಗಲಿದೆ. ODI ಸರಣಿಗೆ ಇರುವ ಸವಾಲುಗಳು ಏನೇನು ಅನ್ನೋ ವಿವರ ಇಲ್ಲಿದೆ.
06:11 PM (IST) Nov 03
ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ 'ರಾಮಾಯಣ' ಚಿತ್ರದ ಮುಂಗಡ ಟಿಕೆಟ್ ಮಾರಾಟ ದಸರಾ ಹಬ್ಬದ ದಿನವೇ ಆರಂಭವಾಗಿತ್ತು. ಸುಮಾರು 15 ದಿನಗಳ ಮುಂಚಿತವಾಗಿ ಬುಕಿಂಗ್ ತೆರೆಯಲಾಗಿತ್ತು. ಸದ್ಉ ಮುಂಗಡ ಗಳಿಕೆಯೇ 100 ಕೋಟಿ ರೂ. ದಾಟಿದೆ. ಮೊದಲ ದಿನದ ಕಲೆಕ್ಷನ್ ಲೆಕ್ಕ ನೋಡಿ!
05:11 PM (IST) Nov 03
04:59 PM (IST) Nov 03
04:58 PM (IST) Nov 03
04:19 PM (IST) Nov 03
03:51 PM (IST) Nov 03
03:00 PM (IST) Nov 03
02:59 PM (IST) Nov 03
ಮಧ್ಯಪ್ರದೇಶದ ಐಟಿ ಕಂಪನಿಯೊಂದು ಉದ್ಯೋಗಿಗೆ ಗ್ರಾಚ್ಯುಟಿ ಅವಧಿ ಸಮೀಪಿಸುತ್ತಿದ್ದಂತೆ ರಾಜೀನಾಮೆಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. 4 ವರ್ಷ 9 ತಿಂಗಳು ಸೇವೆ ಸಲ್ಲಿಸಿದ್ದ ಉದ್ಯೋಗಿಗೆ, ಗ್ರಾಚ್ಯುಟಿ, ಇತರ ಭತ್ಯೆಗಳನ್ನು ನೀಡದಿರಲು ಕಂಪನಿಯೇ ಸ್ವಯಂಪ್ರೇರಿತವಾಗಿ ರಾಜೀನಾಮೆ ದಾಖಲಿಸಿ ವಂಚಿಸಿದೆ.
01:19 PM (IST) Nov 03
Sourav ganguly s luxurious lifestyle ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರ ಅದ್ಭುತ ಕ್ರಿಕೆಟ್ ವೃತ್ತಿಜೀವನ ಮತ್ತು ಸಾಧನೆಗಳನ್ನು ಈ ಲೇಖನ ವಿವರಿಸುತ್ತದೆ. ಜೊತೆಗೆ, ಕೋಲ್ಕತ್ತಾದ ಬೆಹಾಲಾದಲ್ಲಿನ ಅವರ 40 ಕೋಟಿ ರೂ. ಮೌಲ್ಯದ 60 ವರ್ಷಗಳ ಹಳೆಯ ಭವ್ಯ ಪೂರ್ವಜರ ಮನೆಯ ವಿಶೇಷತೆ ತಿಳಿಯಿರಿ.
01:10 PM (IST) Nov 03
12:53 PM (IST) Nov 03
12:51 PM (IST) Nov 03
'ವಿಕ್ರಮ್' ಸಿನಿಮಾದ ಕೊನೆಯ ಭಾಗದಲ್ಲಿ ಸೂರ್ಯ ಅವರು ರೋಲೆಕ್ಸ್ ಎಂಬ ಭಯಾನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಮಂದಿರಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೆಲವೇ ನಿಮಿಷಗಳ ಅವರ ಪಾತ್ರವೇ ಪ್ರೇಕ್ಷಕರ ಮನಸ್ಸಿನಲ್ಲಿ ದೊಡ್ಡ ಕುತೂಹಲ ಮೂಡಿಸಿತ್ತು. ಇನ್ಮುಂದೆ ‘ರೋಲೆಕ್ಸ್’ ಬರಲಿದೆ.
12:29 PM (IST) Nov 03
12:26 PM (IST) Nov 03
ಯೋಗಿ ಆದಿತ್ಯನಾಥ್ ಸರ್ಕಾರವು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಪ್ರಕಾರ, ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿ ಸಾಮಾಜಿಕ ವ್ಯವಸ್ಥೆ ಬದಲಾಯಿಸಲು ಯತ್ನಿಸುವವರನ್ನು ಸರ್ಕಾರಿ ಉದ್ಯೋಗಕ್ಕೆ ಅನರ್ಹಗೊಳಿಸಲಾಗುತ್ತದೆ. ಕೇವಲ ಎಫ್‌ಐಆರ್ ದಾಖಲಾದರೆ ಅನರ್ಹರಾಗುವುದಿಲ್ಲ, ಆದರೆ ಗಂಭೀರ ಅಪರಾಧಗಳಲ್ಲಿ ಭಾಗಿಯಾದವರಿಗೆ ಈ ನಿಷೇಧ ಅನ್ವಯವಾಗಲಿದೆ. ಫುಲ್ ಡಿಟೇಲ್ಸ್ ಇಲ್ಲಿದೆ.
12:13 PM (IST) Nov 03
ಒಮನ್ ಕರಾವಳಿಯಲ್ಲಿ ಭಾರತದ ಸರಕು ಸಾಗಣೆ ಹಡಗಿನ ಮೇಲೆ ಅಪರಿಚಿತ ವೈಮಾನಿಕ ವಸ್ತುವಿನಿಂದ ಭೀಕರ ದಾಳಿ ನಡೆದಿದೆ. ಘಟನೆಯಲ್ಲಿ ಗುಜರಾತ್ ಮೂಲದ ಓರ್ವ ನಾವಿಕ ಮೃತಪಟ್ಟಿದ್ದು, ಉಳಿದ 13 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಾವಿಕರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ರಾಜತಾಂತ್ರಿಕ ಕ್ರಮ ಕೈಗೊಂಡಿದೆ.
11:35 AM (IST) Nov 03
ಆಪಲ್ ಕಂಪನಿಯು ಭಾರತದಲ್ಲಿ ಐಫೋನ್ ಮತ್ತು ಮ್ಯಾಕ್ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 114.5 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. ಐಫೋನ್ ಕ್ರೇಜ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳಿಂದಾಗಿ ಕಂಪನಿಯ ಆದಾಯ ಶೇ.12ರಷ್ಟು ಹೆಚ್ಚಾಗಿದೆ. ಎಷ್ಟು ಆದಾಯ ಗಳಿಸಿದ ತಿಳಿಯಿರಿ
11:29 AM (IST) Nov 03
10:35 AM (IST) Nov 03
08:36 AM (IST) Nov 03
08:20 AM (IST) Nov 03
ಅಮೆರಿಕ ಪ್ರಜೆಯಾಗಿದ್ದರೂ ಭಾರತದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ದೇಶ ಬಿಟ್ಟು ಹೋಗುವಂತೆ ಮುಂಬೈ ಪೊಲೀಸರು ನೀಡಿದ್ದ ನೋಟಿಸ್‌ಗೆ ಕೋರ್ಟ್ ಡಿಸೆಂಬರ್ 7ರವರೆಗೆ ತಡೆ ನೀಡಿದೆ. ಪ್ರಕರಣದ ಪೂರ್ಣ ವಿವರ ಇಲ್ಲಿದೆ ನೋಡಿ
07:48 AM (IST) Nov 03
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ 'ಮುರಸು' ಚಂಡಮಾರುತ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ್ದು, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ವಿದ್ಯುತ್ ಮರುಸ್ಥಾಪನೆಗೆ ಕರ್ನಾಟಕದಿಂದ 500 ಲೈನ್‌ಮೆನ್‌ಗಳನ್ನು ಆಂಧ್ರಕ್ಕೆ.
07:41 AM (IST) Nov 03
ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 201 ರನ್ ಸಿಡಿಸಿ ಐತಿಹಾಸಿಕ ದಾಖಲೆ ಬರೆದಿದ್ದ ಇವರು, ಮೂರು ಐಸಿಸಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು.