ನವದೆಹಲಿ: ಕಳೆದ ಕೆಲ ದಿನಗಳಿಂದ ರದ್ದಾದ ತನ್ನ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆ ಒಟ್ಟು 610 ಕೋಟಿ ರು. ಹಣವನ್ನು ಮರಳಿಸಿದೆ. ಪೂರ್ಣ ಪ್ರಮಾಣದಲ್ಲಿ ಹಣ ಮರಳಿಸಲು ಕೇಂದ್ರ ಸರ್ಕಾರ ಸಂಸ್ಥೆಗೆ ಭಾನುವಾರ ರಾತ್ರಿ 8 ಗಂಟೆಯ ಗಡುವು ನೀಡಿತ್ತು. ಅದರೊಳಗೆ 610 ಕೋಟಿ ರು. ಹಣ ಮರುಪಾವತಿ ಮಾಡಿದ್ದಾಗಿ ಕಂಪನಿ ಹೇಳಿದೆ. ಅಲ್ಲದೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಾಕಿ ಉಳಿದಿದ್ದ 3000 ಲಗೇಜ್ ಅನ್ನು ಪ್ರಯಾಣಿಕರಿಗೆ ತಲುಪಿಸಲಾಗಿದೆ. ಇಂಥ ಲಗೇಜ್ ತಲುಪಿಸುವುದಕ್ಕೂ ಕೇಂದ್ರ ಸರ್ಕಾರ 48 ಗಂಟೆಗಳ ಗಡುವು ನೀಡಿತ್ತು.

11:12 PM (IST) Dec 08
ಪ್ರಕರಣ ಸಂಬಂಧ ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಆದರೆ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗೆ 1 ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ. ಪ್ರಕರಣದಲ್ಲಿ ಠಾಣೆಗೆ ಹಾಜರಾಗಿ ಸಹಿ ಮಾಡಿ ಬರುವುದು ಸಾಮಾನ್ಯ, ಇದೇನಿದು ಹೊಸ ಕೇಸ್?
10:12 PM (IST) Dec 08
09:24 PM (IST) Dec 08
ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. 7.6ರ ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ಜಪಾನ್ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ಸುನಾಮಿ ವಾರ್ನಿಂಗ್ ಕೊಡಲಾಗಿದೆ. ಜಪಾನ್ ಸುನಾಮಿ ಭೀತಿ ಭಾರತದ ಮೇಲೆ ಪರಿಣಾಮ ಬೀರುತ್ತಾ?
08:38 PM (IST) Dec 08
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, ಉದ್ಯಮ ಜಗತ್ತಿನಲ್ಲಿ ಭಾರಿ ಹೂಡಿಕೆ ಮಾಡಿರುವ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ಮೆಗಾ ಡೀಲ್ ಕುದುರಿಸಿದ್ದಾರೆ. ವಿಶೇಷ ಅಂದರೆ ಬ್ರ್ಯಾಂಡ್ ಮಾರಾಟ ಮಾಡಿ ಬಳಿಕ ಅದೇ ಬ್ರ್ಯಾಂಡ್ ಮೇಲೆ 40 ಕೋಟಿ ಹೂಡಿಕೆ ಪ್ಲಾನ್.
07:55 PM (IST) Dec 08
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು, ನವಜೋತ್ ಸಿಂಗ್ ಸಿಧು ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುವ ಕುರಿತು ಹೇಳಿಕೆ ನೀಡಿದ್ದ ನವಜೋತ್ ಕೌರ್ ಸಿಧು ಇದೀಗ ಪಕ್ಷದಿಂದಲೇ ಸಸ್ಪೆಂಡ್ ಆಗಿದ್ದಾರೆ.
07:27 PM (IST) Dec 08
ಪ್ರದರ್ಶನವೊಂದರ ವೇಳೆ ಕರಡಿಯೊಂದು ತನ್ನ ಪಾಲಕನ ಮೇಲೆಯೇ ದಾಳಿ ಮಾಡಿದೆ. ಇತರ ಸಿಬ್ಬಂದಿ ಪಾಲಕನನ್ನು ರಕ್ಷಿಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿ ಪ್ರಾಣಿಗಳನ್ನು ಪ್ರದರ್ಶನಕ್ಕೆ ಬಳಸುವ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
06:41 PM (IST) Dec 08
ಕುಡಿದ ಅಮಲಿನಲ್ಲಿದ್ದ ಯುವತಿಯೊಬ್ಬಳು ರಾಪಿಡೋ ಬೈಕ್ ಹತ್ತುವಾಗ ಕೆಳಗೆ ಬಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಯುವ ಸಮೂಹದ ನಡವಳಿಕೆ ಮತ್ತು ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
06:30 PM (IST) Dec 08
ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ ಆರಂಭಿಸಿದ್ದಾರೆ. 21 ವರ್ಷಗಳ ಕಾಲ ಕಂಪನಿಗಾಗಿ ದುಡಿದಿರುವ ಈ ಉದ್ಯೋಗಿ, ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿಕೊಂಡ ತಕ್ಷಣ ಕೆಲಸದಿಂದ ತೆಗೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
06:20 PM (IST) Dec 08
ಪ್ಯಾನ್-ಆಧಾರ್ ಲಿಂಕ್, ಐಟಿಆರ್ ಫೈಲಿಂಗ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಕೆಲಸ ಮುಂದೂಡುತ್ತಿದ್ದರೆ, ಈಗಲೇ ಜಾಗರೂಕರಾಗಿರಿ. ಈ ಎಲ್ಲಾ ಗಡುವುಗಳು ನಿಮ್ಮ ಬ್ಯಾಂಕಿಂಗ್, ಹೂಡಿಕೆ ಮತ್ತು ತೆರಿಗೆ ಪ್ರೊಫೈಲ್ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.
05:52 PM (IST) Dec 08
ಆಪಲ್ ತನ್ನ ಐಫೋನ್ ಮತ್ತು ಮ್ಯಾಕ್‌ಬುಕ್‌ಗಳ ಮೇಲೆ ರೂ. 10,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಈ ಆಫರ್‌ಗಳು ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಐಸಿಐಸಿಐ, ಆಕ್ಸಿಸ್‌ನಂತಹ ಬ್ಯಾಂಕ್ ಕಾರ್ಡ್‌ಗಳ ಮೂಲಕ ಲಭ್ಯವಿದೆ.
05:50 PM (IST) Dec 08
ಬ್ರಿಟನ್ ಪ್ರಜೆ ಸೆಲ್ವಾ ಹುಸೈನ್ ಎಂಬುವವರಿಗೆ ನಿಜವಾದ ಹೃದಯವೇ ಇಲ್ಲ. ನೈಸರ್ಗಿಕ ಹೃದಯವೇ ಇಲ್ಲದಿದ್ದರು ಅವರು ಎಲ್ಲರಂತೆ ಬದುಕುತ್ತಿರುವುದು ಇಡೀ ಜಾಗತಿಕ ವೈದ್ಯಲೋಕವನ್ನೇ ಅಚ್ಚರಿಗೀಡು ಮಾಡಿದೆ. ಹಾಗಂತ ಜನ್ಮತಃ ಅವರಿಗೆ ಹೃದಯವೇ ಇರಲಿಲ್ಲ ಎಂದಲ್ಲ, ಎಲ್ಲರಂತೆ ಅವರಿಗೂ ನೈಸರ್ಗಿಕವಾದ ಹೃದಯವೇ ಇತ್ತು…
04:52 PM (IST) Dec 08
ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ , ತಂದೆ ಮಗಳ ಮೇಲಿನ ಪ್ರೀತಿ ಕುರಿತು ವಿಡಿಯೋ ಒಂದು ಇದೀಗ ಹಲವರನ್ನನು ಭಾವುಕರನ್ನಾಗಿ ಮಾಡಿದೆ. ಏನಿದು ವಿಡಿಯೋ
04:52 PM (IST) Dec 08
ಈ ಯುವ ತರುಣನ ಬುದ್ಧಿವಂತಿಕೆಗೆ ಬೆರಗಾಗಲೇಬೇಕು ಬೀದಿಯಲ್ಲಿ ಇದ್ದ ಸಾಮಾನ್ಯ ಕಲ್ಲೊಂದಕ್ಕೆ 460 ರೂ ಬಂಡವಾಳ ಹಾಕಿ 4540 ರೂ ಲಾಭ ಮಾಡಿದ್ದಾನೆ ಈ ಯುವ ತರುಣ ಹಾಗಿದ್ರೆ ಆತ ಮಾಡಿದ್ದೇನು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ…
04:04 PM (IST) Dec 08
ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (DRDO) ಯುದ್ಧ ವಿಮಾನಗಳಿಗಾಗಿ 'ಮಾರ್ಫಿಂಗ್ ವಿಂಗ್' ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ತಂತ್ರಜ್ಞಾನವು ವಿಮಾನಗಳು ಹಾರಾಟದ ಮಧ್ಯೆಯೇ ತಮ್ಮ ರೆಕ್ಕೆಗಳ ಆಕಾರವನ್ನು ಕ್ಷಣಾರ್ಧದಲ್ಲಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ.
03:37 PM (IST) Dec 08
ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಆಗಿ ಹಂಚಿಕೆಯಾದ ರಾಜೇಂದ್ರ ಪಂಚಾಲ್ ಅವರ ಫೋಟೋದ ಹಿಂದೆ 38 ವರ್ಷಗಳ ನೋವಿನ ಕಥೆಯಿದೆ. ಅದೇನು? ಅವರ ಕತೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ…
03:10 PM (IST) Dec 08
ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ತಿಂಗಳಿಗೆ ₹8,600 ಶುಲ್ಕದೊಂದಿಗೆ, ಈ ಸೇವೆಯು ಬ್ರಾಡ್‌ಬ್ಯಾಂಡ್ ಸೌಲಭ್ಯವಿಲ್ಲದ ಪ್ರದೇಶಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಒದಗಿಸುವ ಗುರಿ ಹೊಂದಿದೆ.
02:39 PM (IST) Dec 08
02:26 PM (IST) Dec 08
ಮದುವೆ ನಡೆಯಬೇಕಾದ್ರೆ ಕನಿಷ್ಠ ಅಂದ್ರೂ 7 ರಿಂದ 8 ಲಕ್ಷ ರೂಪಾಯಿ ಬೇಕಾಗುತ್ತದೆ. ಆದ್ರೆ ಸರ್ಕಾರದ ಯೋಜನೆ ಬಗ್ಗೆ ಸುಮಾರು ಜನರಿಗೆ ಗೊತ್ತಿಲ್ಲ. ಈ ಯೋಜನೆಯನ್ನು 2013 ರಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ್ದು, ಇಂದಿಗೂ ಚಾಲ್ತಿಯಲ್ಲಿದೆ.
02:11 PM (IST) Dec 08
ನಮ್ಮ ಪ್ರೀತಿಪಾತ್ರರು ನಮ್ಮ ಪೋಷಕರು ನಮ್ಮ ಸಾಧನೆಯನ್ನು ನೋಡಿ ಹೆಮ್ಮೆ ಪಡುವುದನ್ನು ನೋಡುವುದೇ ಒಂದು ಖುಷಿ. ಅದೇ ರೀತಿ ಇಲ್ಲೊಬ್ಬರು ಯುವ ಮಾಡೆಲ್,ು ತಮ್ಮನ್ನು ಮೊದಲ ಬಾರಿ ಬಿಲ್‌ಬೋರ್ಡ್ ಮೇಲೆ ನೋಡಿದ ಪೋಷಕರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ತೋರಿಸುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
01:17 PM (IST) Dec 08
Smriti Mandhana: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುರಿದು ಬಿದ್ದಿದ್ದು ಅಧಿಕೃತವಾಗಿದೆ. ಇದರ ಬೆನ್ನಲ್ಲಿಯೇ ಟೀಮ್ ಇಂಡಿಯಾದ 10 ಆಟಗಾರ್ತಿಯರು ಪಲಾಶ್ ಮಚ್ಚಲ್ ವಿರುದ್ಧ ಮಹಾ ನಿರ್ಧಾರ ತೆಗೆದುಕೊಂಡಿದ್ದಾರೆ.
12:54 PM (IST) Dec 08
ಉತ್ತರ ಪ್ರದೇಶದ 28 ವರ್ಷದ ಸ್ನಾತಕೋತ್ತರ ಪದವೀಧರೆ ಪಿಂಕಿ ಶರ್ಮಾ, ತನ್ನ ಆರಾಧ್ಯ ದೈವ ಶ್ರೀಕೃಷ್ಣನ ಪ್ರತಿಮೆಯನ್ನೇ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಈ ವಿಶಿಷ್ಟ ಮದುವೆ ನಡೆದಿದೆ.
12:52 PM (IST) Dec 08
ಲೋಕಸಭೆಯಲ್ಲಿ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ಪ್ರಧಾನಿ ಮೋದಿ ಚರ್ಚೆಗೆ ಚಾಲನೆ ನೀಡಿದರು. ಈ ಗೀತೆಯ ಐತಿಹಾಸಿಕ ಮಹತ್ವ, ಸ್ವಾತಂತ್ರ್ಯ ಚಳವಳಿಯಲ್ಲಿ ಅದರ ಪಾತ್ರದ ಬಗ್ಗೆ ಚರ್ಚೆ ನಡೆಯಲಿದೆ.
11:31 AM (IST) Dec 08
Actress And Dileep Case: ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ 8ನೇ ಆರೋಪಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳು ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
11:09 AM (IST) Dec 08
Gold And Silver Price Today: ಖರೀದಿಗೂ ಮುನ್ನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಇದರಿಂದ ಚಿನ್ನ ಖರೀದಿ ಸುಲಭವಾಗುತ್ತದೆ. ಈ ಲೇಖನದಲ್ಲಿ ಚಿನ್ನದ ಜೊತೆ ಬೆಳ್ಳಿ ದರವನ್ನು ಸಹ ನೀಡಲಾಗಿದೆ.
10:21 AM (IST) Dec 08
ಇತ್ತೀಚೆಗೆ ಇಂಡಿಗೋ ಸಂಸ್ಥೆಯು 1,300ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿ ಭಾರೀ ಬಿಕ್ಕಟ್ಟನ್ನು ಎದುರಿಸಿತು. ಹೊಸ ಎಫ್‌ಡಿಟಿಎಲ್ ನಿಯಮಗಳಿಗೆ ಸಿದ್ಧತೆ ನಡೆಸಲು 20 ತಿಂಗಳ ಅವಕಾಶವಿದ್ದರೂ, ಸಾಕಷ್ಟು ಪೈಲಟ್‌ಗಳನ್ನು ನೇಮಿಸದೆ ವಿಫಲವಾದದ್ದೇ ಈ ಬಿಕ್ಕಟ್ಟಿಗೆ ಮೂಲ ಕಾರಣ.
08:55 AM (IST) Dec 08
Indian Railways: ವಿಡಿಯೋಗೆ ಈವರೆಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಗೂಡ್ಸ್ ರೈಲು ರಿಪೇರಿಗೆ 5 ಗಂಟೆ ಬೇಕೆಂದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.