ಭೋಪಾಲ್: ಮುಘಲ್ ದೊರೆ ಬಾಬರ್ ಹೆಸರಿನಲ್ಲಿ ದೇಶದಲ್ಲಿ ಮಸೀದಿಯನ್ನು ನಿರ್ಮಿಸುವುದಕ್ಕೆ ಮುಂದಾದರೆ ಅಯೋಧ್ಯೆಯಂತೆ ಹೋರಾಟದ ರೀತಿಯಲ್ಲೇ ಗತಿ ಕಾಣಿಸುತ್ತೇವೆ’ ಎಂದು ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಎಚ್ಚರಿಕೆ ನೀಡಿದ್ದಾರೆ. ಟಿಎಂಸಿ ಶಾಸಕ ಹುಮಾಯೂನ್ ಕಬೀರ್, ಶನಿವಾರವಷ್ಟೇ ಬಂಗಾಳದಲ್ಲಿ ಬಾಬ್ರಿ ರೀತಿಯಲ್ಲಿಯೇ ಮಸೀದಿ ನಿರ್ಮಿಸಲಾಗುತ್ತದೆ ಎಂದಿದ್ದರು. ಈ ಬೆನ್ನಲ್ಲೇ ಬಿಜೆಪಿ ನಾಯಕಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ದೇವರು, ಪೂಜೆ ಮತ್ತು ಇಸ್ಲಾಂ ಹೆಸರಿನಲ್ಲಿ ನಿರ್ಮಿಸಲಾದ ಮಸೀದಿಯನ್ನು ನಾವು ಗೌರವಿಸುತ್ತೇವೆ. ಆದರೆ ಬಾಬರ್ ಹೆಸರಿನಲ್ಲಿ ನಿರ್ಮಿಸಿದರೆ 1992ರ ಡಿ.6ರಂದು ನಡೆದ ಅಯೋಧ್ಯೆಯಲ್ಲಿ ಆದ ರೀತಿಯ ಗತಿ ಕಾಣಿಸುತ್ತೇವೆ’ ಎಂದಿದ್ದಾರೆ.

11:30 PM (IST) Nov 24
ರಾಮ ಮಂದಿರದಲ್ಲಿ ನಾಳೆ ಮೋದಿಯಿಂದ ಕೇಸರಿ ಧ್ವಜಾರೋಹಣ, ಇಲ್ಲಿದೆ ಆಯೋಧ್ಯೆ ಫೋಟೋ, ರಾಮ ಮಂದಿರ ಕಾಮಗಾರಿ ಸಂಪೂರ್ಣವಾಗಿ ಮುಗಿದೆ. ಇದೀಗ ರಾಮ ಮಂದಿರ ಕಾಂಪ್ಲೆಕ್ಸ್, ಆಯೋಧ್ಯೆ ಮಂದಿರ ನೋಡಲು ಎರಡು ಕಣ್ಣು ಸಾಲದು.
08:12 PM (IST) Nov 24
10 ಸಾವಿರ ವರ್ಷ ಬಳಿಕ ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ, ಭಾರತದ ವಿಮಾನ ಡೈವರ್ಟ್, ಇದೀಗ ಭಾರತದ ಆತಂಕ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಜ್ವಾಲಾಮುಖಿ ಬೂದಿ ಹಾಗೂ ದೂಳು ದೆಹಲಿಗೂ ತಟ್ಟಲಿದೆ.
06:10 PM (IST) Nov 24
ಸ್ಮೃತಿ ಮಂಧನಾಗೆ ಮತ್ತೊಂದು ಶಾಕ್, ತಂದ ಬೆನ್ನಲ್ಲೇ ಭಾವಿ ಪತಿ ಪಲಾಶ್ ಆಸ್ಪತ್ರೆ ದಾಖಲು, ಶ್ರೀನಿವಾಸ್ ಮಂಧನಾ ಆರೋಗ್ಯ ಹದಗೆಡುತ್ತಿದ್ದಂತೆ ಪಲಾಶ್ ತೀವ್ರ ಆತಂಕಗೊಂಡಿದ್ದಾರೆ, ಪರಿಣಾಮ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.
05:49 PM (IST) Nov 24
ತಂದೆಯ ಅನಾರೋಗ್ಯ ಮತ್ತು ಭಾವಿ ಪತಿ ಆಸ್ಪತ್ರೆಗೆ ದಾಖಲಾದ ಕಾರಣ, ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿದ್ದಾರೆ. ಮದುವೆ ದಿನದಂದೇ ಈ ಅನಿರೀಕ್ಷಿತ ಘಟನೆಗಳು ನಡೆದಿದ್ದರಿಂದ, ಮದುವೆಯನ್ನು ಮುಂದೂಡಲಾಗಿದೆ.
05:29 PM (IST) Nov 24
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿರುವಾಗ, ಕ್ರಿಕೆಟಿಗ ಕರುಣ್ ನಾಯರ್ ನಿಗೂಢವಾದ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ. ಮೈದಾನದಲ್ಲಿ ಇಲ್ಲದಿರುವ ನೋವನ್ನು ವ್ಯಕ್ತಪಡಿಸಿದ್ದಾರೆ.
04:55 PM (IST) Nov 24
100 ಏಕರೆ ಫಾರ್ಮ್ ಹೌಸ್, ರೆಸ್ಟೋರೆಂಟ್, ಐಷಾರಾಮಿ ಕಾರು; ನಟ ಧರ್ಮೇಂದ್ರ ಬಿಟ್ಟುಹೋದ ಆಸ್ತಿ, ಧರ್ಮೇಂದ್ರ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಒಟ್ಟು ಆಸ್ತಿ ಎಷ್ಟಿದೆ? ಕುಟುಂಬದ ಆಸ್ತಿ ಎಷ್ಟು?
04:31 PM (IST) Nov 24
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಭವಿಷ್ಯದ ನಾಯಕತ್ವ, ರಿಷಭ್ ಪಂತ್ ಅವರ ದೀರ್ಘ ಅನುಪಸ್ಥಿತಿ ಮತ್ತು ರಾಹುಲ್ ಅವರ ನಾಯಕತ್ವದ ಅನುಭವವನ್ನು ಪರಿಗಣಿಸಿ ಪಟ್ಟ ಕಟ್ಟಲಾಗಿದೆ
03:37 PM (IST) Nov 24
02:51 PM (IST) Nov 24
ಪ್ರಯಾಣಿಕರ ಬಸ್ ನಡುವೆ ಅಪಘಾತ; ಸ್ಥಳದಲ್ಲೆ 6 ಮಂದಿ ಸಾವು, 35ಕ್ಕೂ ಮಂದಿಗೆ ಗಾಯ, ಎರಡು ಖಾಸಗಿ ಬಸ್‌ಗಳು ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ.
02:31 PM (IST) Nov 24
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಫಾಲೋಆನ್ ಭೀತಿ ಎದುರಿಸುತ್ತಿದೆ. ದಕ್ಷಿಣ ಆಫ್ರಿಕಾದ 489 ರನ್‌ಗಳಿಗೆ ಉತ್ತರವಾಗಿ, ಯಶಸ್ವಿ ಜೈಸ್ವಾಲ್ (58) ಅವರ ಅರ್ಧಶತಕದ ಹೊರತಾಗಿಯೂ ಭಾರತ 174 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
02:02 PM (IST) Nov 24
Dharmendra: ಬಾಲಿವುಡ್‌ನ 'ಹಿ-ಮ್ಯಾನ್' ಎಂದೇ ಖ್ಯಾತರಾಗಿದ್ದ ಹಿರಿಯ ನಟ ಧರ್ಮೇಂದ್ರ (89) ವಯೋಸಹಜ ಕಾಯಿಲೆಗಳಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ
01:58 PM (IST) Nov 24
ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದ ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಹಗರಣದಿಂದ ಪಾರಾಗುವುದು ಹೇಗೆ, ಅಧಿಕೃತ ಪ್ರಕ್ರಿಯೆ ಯಾವುದು ಮತ್ತು ವಂಚನೆಗೊಳಗಾದರೆ ಏನು ಮಾಡಬೇಕು ಎಂಬುದನ್ನು ಈ ಲೇಖನ ವಿವರಿಸುತ್ತದೆ.
01:16 PM (IST) Nov 24
ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ, ಹೀರೋ ಸ್ಪ್ಲೆಂಡರ್ ಬೈಕ್‌ನ ಬೆಲೆಯಲ್ಲಿ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯವಾಗುತ್ತಿವೆ. ಜನಪ್ರಿಯವಾಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ ಇಲ್ಲಿದೆ
12:57 PM (IST) Nov 24
ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಪಾಲಿಗೆ ಕೆಟ್ಟ ಸುದ್ದಿಯೊಂದು ಹೊರಬಿದ್ದಿದ್ದು, ಮುಂದಿನ ಎರಡು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ಅನುಮಾನ ಎನಿಸಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ.
12:01 PM (IST) Nov 24
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹರಿಯಾಣದ ಹಿಸಾರ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ಸಾಗಿದ ಅವರ ವೃತ್ತಿಜೀವನದ ಪಯಣ ಮತ್ತು ಅವರು ನೀಡಿದ ಪ್ರಮುಖ ತೀರ್ಪುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
11:49 AM (IST) Nov 24
ಶ್ರೀಲಂಕಾದಲ್ಲಿ ನಡೆದ ಮೊದಲ ಅಂಧ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ, ನೇಪಾಳ ವಿರುದ್ಧ ಏಳು ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ.
11:26 AM (IST) Nov 24
Gold Silver Price: ಕಳೆದ 10 ದಿನಗಳಲ್ಲಿ 5ನೇ ಬಾರಿಗೆ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 7,000 ರೂ. ಗಿಂತ ಅಧಿಕ ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲೂ 1 ಕೆಜಿಗೆ 1,000 ರೂ. ಕುಸಿತ ಕಂಡಿದೆ.
11:15 AM (IST) Nov 24
ಸೆನುರನ್ ಮುತ್ತುಸಾಮಿ ಅವರ ಅದ್ಭುತ ಶತಕದಿಂದ ಗುವಾಹಟಿ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಭಾರಿ ಸ್ಕೋರ್ ಮಾಡಿದೆ. ಅಸಲಿಗೆ ಯಾರು ಈ ಮುತ್ತುಸಾಮಿ? ಭಾರತೀಯ ಮೂಲದ ಈ ದಕ್ಷಿಣ ಆಫ್ರಿಕಾ ತಂಡದ ಆಟಗಾರನ ಬಗ್ಗೆ ಇಲ್ಲಿದೆ ಮಾಹಿತಿ.
10:14 AM (IST) Nov 24
ದೋಹಾದಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಎ ತಂಡವು ಬಾಂಗ್ಲಾದೇಶ ಎ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. 2 ತಂಡಗಳು 125 ರನ್ ಗಳಿಸಿ ಪಂದ್ಯ ಟೈ ಆದ ನಂತರ, ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ಗುರಿ ತಲುಪಿ ಮೂರನೇ ಬಾರಿಗೆ ಚಾಂಪಿಯನ್ ಆಯಿತು.
09:24 AM (IST) Nov 24
ಭಾರತ ವಿರುದ್ಧದ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಬಾಲಗೋಂಚಿ ಬ್ಯಾಟರ್‌ಗಳಾದ ಸೆನುರನ್ ಮುತ್ತುಸ್ವಾಮಿ (109) ಮತ್ತು ಮಾರ್ಕೊ ಯಾನ್ಸನ್ (93) ಅವರ ಅಮೋಘ ಆಟದಿಂದ ತಂಡವು 489 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ.