ಚಂಡೀಗಢ: ಪಂಜಾಬ್‌ನ ಆಮ್ ಆದ್ಮಿ ಸರ್ಕಾರವು ಅಮೃತಸರ ಸೇರಿದಂತೆ ರಾಜ್ಯದ ಮೂರು ನಗರಗಳನ್ನು ಪವಿತ್ರ ನಗರಗಳೆಂದು ಘೋಷಿಸಿ, ಅಲ್ಲಿ ಮದ್ಯ, ಮಾಂಸ, ತಂಬಾಕು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ನಿಷೇಧಿಸಿದೆ. ಕಳೆದ ನವೆಂಬರ್‌ನಲ್ಲಿ ಅಂಗೀಕರಿಸಿದ್ದ ಈ ಕುರಿತ ಕಾಯ್ದೆ ಭಾನುವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ವಿಡಿಯೋ ಮುಖೇನ ಮಾಹಿತಿ ಹಂಚಿಕೊಂಡಿದ್ದಾರೆ. ಅಮೃತಸರ, ತಲ್ವಾಂಡಿ ಸಾಬೊ ಮತ್ತು ಆನಂದಪುರ್ ಸಾಹಿಬ್ ಸೇರೊ ನಗರಗಳನ್ನು ಪವಿತ್ರ ನಗರಗಳೆಂದು ಘೋಷಿಸಲಾಗಿದೆ. ಈ ಮೂರೂ ನಗರಗಳು ಸಿಖ್ಖರ ಧಾರ್ಮಿಕ ಕೇಂದ್ರಗಳಿರುವ ನಗರಗಳಾಗಿವೆ.

11:54 AM (IST) Dec 22
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ, ಶಾಲಾ ವ್ಯಾನ್ ಬಾರದ ಕಾರಣ 10 ವರ್ಷದ ಬಾಲಕಿಯೊಬ್ಬಳು ಮೂರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದ್ದಾಳೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆದ ಈ ಬಾಲಕಿಗೆ ಶಾಲೆ ಕಿರುಕುಳ ನೀಡುತ್ತಿದೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.
11:06 AM (IST) Dec 22
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳ ತಂಡವು ತಮ್ಮ ಹೊಸ ಸ್ಯಾಟಲೈಟ್ ಲಾಂಚ್‌ಗೂ ಮೊದಲು ಆಂಧ್ರಪ್ರದೇಶದ ತಿರುಪತಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.
10:29 AM (IST) Dec 22
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಬ್ಯಾಟರ್‌ಗಳು ಯಾರು ಎನ್ನುವುದನ್ನು ನೋಡೋಣ ಬನ್ನಿ.
09:44 AM (IST) Dec 22
ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದೆದುರು ಸೋತು ರನ್ನರ್-ಅಪ್ ಆದ ಭಾರತ ತಂಡ, ಪಾಕ್ ಸಚಿವ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಪದಕ ಸ್ವೀಕರಿಸಲು ನಿರಾಕರಿಸಿದೆ. ಈ ಹಿಂದೆ ಹಿರಿಯರ ಏಷ್ಯಾಕಪ್‌ನಲ್ಲೂ ಇದೇ ರೀತಿ ಘಟನೆ ನಡೆದಿತ್ತು.
09:00 AM (IST) Dec 22