Halal Row ಹಲಾಲ್ ಪ್ರಮಾಣಪತ್ರದ ಕುರಿತಾಗಿ ಹಿಮಾಲಯ ಕಂಪನಿ ಸ್ಪಷ್ಟೀಕರಣ!

By Santosh NaikFirst Published Apr 1, 2022, 4:18 PM IST
Highlights

ಹಿಮಾಲಯ ಡ್ರಗ್ ಕಂಪನಿಯ 'ಹಲಾಲ್ ನೀತಿ'ಯ ಕುರಿತಾದ ಚಿತ್ರ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ. '#BycottHimalaya' ಆನ್‌ಲೈನ್ ಅಭಿಯಾನಕ್ಕೆ ಇತ್ತೀಚೆಗೆ ನಟ-ಬಿಜೆಪಿ ನಾಯಕ ಪರೇಶ್ ರಾವಲ್ ಕೂಡ ಸೇರಿದ್ದಾರೆ. ಇದರ ಬೆನ್ನಲ್ಲೇ ಕಂಪನಿ ಅಡ್ಡಗೋಡೆಯ ಮೇಲೆ ದೀಪವಿಡುವಂಥ ಸ್ಪಷ್ಟೀಕರಣ ನೀಡಿದೆ.

ಬೆಂಗಳೂರು (ಏ.1): ದೇಶದ ಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಹಿಮಾಲಯ ವೆಲ್ ನೆಸ್ ಕಂಪನಿ (Himalaya Wellness Company) ತನ್ನ ಹಲಾಲ್ ಪ್ರಮಾಣಪತ್ರದ (Halal Certification) ಕಾರಣದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿತ್ತು. ಕಂಪನಿಯ ಹಲಾಲ್ ಪಾಲಿಸಿಯ (Halal Policy) ಕುರಿತಾಗಿ ಸುದ್ದಿ ಪ್ರಕಟವಾದ ಬೆನ್ನಲ್ಲಿಯೇ ಏಷ್ಯಾನೆಟ್ ಸುವರ್ಣ ನ್ಯೂಸ್, ಈ ಕುರಿತಾಗಿ ಹಿಮಾಲಯ ಇಂಡಿಯಾ ಕಂಪನಿಯಿಂದ ಸ್ಪಷ್ಟೀಕರಣಕ್ಕಾಗಿ ಈ-ಮೇಲ್ ಕಳಿಸಿತ್ತು.

ಶುಕ್ರವಾರ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿಮಾಲಯ ಕಂಪನಿ ಬಳಿಕ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಬಿಡುಗಡೆ ಮಾಡಿದೆ. ತನ್ನ ಹಲಾಲ್ ನೀತಿಯ ಮೇಲಿನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕಂಪನಿ, ಪ್ರಮಾಣೀಕರಣವು "ಉತ್ಪನ್ನವು ಪ್ರಾಣಿ ಮೂಲದ ಅಂಶಗಳನ್ನು ಒಳಗೊಂಡಿದೆ ಎಂದು ಸೂಚಿಸುವುದಿಲ್ಲ" ಎಂದು ಹೇಳಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರ ವಿಭಾಗವು "#BycottHimalaya" ಟ್ಯಾಗ್ ಅನ್ನು ಬಳಸಿಕೊಂಡು ಬ್ರ್ಯಾಂಡ್ ಅನ್ನು ಗುರಿಯಾಗಿಸಿದ ನಂತರ ಕಂಪನಿಯ ಹೇಳಿಕೆ ಬಂದಿದೆ.

ತನ್ನ ಹೇಳಿಕೆಯಲ್ಲಿ ಬರೆದುಕೊಂಡಿರುವ ಕಂಪನಿಯು, "ಹಿಮಾಲಯ ವೆಲ್‌ನೆಸ್ ಕಂಪನಿಯು ತನ್ನ ಉತ್ಪನ್ನಗಳನ್ನು 100 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. ಆಮದು ಮಾಡಿಕೊಳ್ಳುವ ದೇಶದಲ್ಲಿ ಉತ್ಪನ್ನಗಳ ಸ್ವೀಕಾರಾರ್ಹತೆಗಾಗಿ, ಕಂಪನಿ ಮತ್ತು ಅದರ ಉತ್ಪನ್ನಗಳು ಆಮದು ಮಾಡಿಕೊಳ್ಳುವ ದೇಶಗಳ ಕಾನೂನು ಮತ್ತು ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ. " "ಕೆಲವು ದೇಶಗಳಲ್ಲಿ, ಹಲಾಲ್ ಪ್ರಮಾಣೀಕರಣವು ಕಡ್ಡಾಯವಾಗಿದೆ. ಆದ್ದರಿಂದ ಹಲಾಲ್ ಪ್ರಮಾಣೀಕರಣವನ್ನು ಅಂತಹ ದೇಶಗಳಿಗೆ ಮಾತ್ರ ಆಯಾ ನಿಯಮಗಳ ಪ್ರಕಾರ ಪಡೆದುಕೊಂಡಿದ್ದೇವೆ" ಎಂದು ಹೇಳಿದೆ.

pic.twitter.com/9iCRhuQUbc

— Himalaya Wellness Company (@HimalayaIndia)


"ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆರೋಪಿಸಿದಂತೆ ಹಿಮಾಲಯ ಉತ್ಪನ್ನಗಳಲ್ಲಿ ಯಾವುದೇ ಮಾಂಸವನ್ನು ಒಳಗೊಂಡಿಲ್ಲ ಎಂದು ನಾವು ಸ್ಪಷ್ಟಪಡಿಸಲು ಮತ್ತು ಖಚಿತಪಡಿಸಲು ಬಯಸುತ್ತೇವೆ; ಇದು ವಾಸ್ತವಿಕವಾಗಿ ತಪ್ಪಾಗಿದೆ" ಎಂದು ಹೇಳುವ ಸಾಮಾಜಿಕ ಮಾಧ್ಯಮದಲ್ಲಿ ವರದಿಯಾದ ಸುದ್ದಿಗಳಿಗೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದೆ.

Latest Videos

Halal Row ಹಲಾಲ್ ಗೂ, ಹಿಮಾಲಯ ಕಂಪನಿಯ ಉತ್ಪನ್ನಕ್ಕೆ ಏನು ಸಂಬಂಧ? ಬ್ಯಾನ್ ಹಿಮಾಲಯ ಟ್ರೆಂಡ್ ಆಗುತ್ತಿರುವುದೇಕೆ?

"ಹಲಾಲ್ ಪ್ರಮಾಣೀಕರಣವು ಉತ್ಪನ್ನವು ಪ್ರಾಣಿ ಮೂಲದ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಸೂಚಿಸುವುದಿಲ್ಲ. ಇದು ಆಮದು ಮಾಡಿಕೊಳ್ಳುವ ದೇಶಗಳ ನಿಯಮಗಳ ಪ್ರಕಾರ ಸಸ್ಯಾಹಾರಿ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಈ ದೇಶಗಳಿಗೆ ರಫ್ತು ಮಾಡಲು ಬಯಸುವ ಎಲ್ಲಾ ಕಂಪನಿಗಳು ಈ ಪ್ರಮಾಣೀಕರಣವನ್ನು ಪಡೆಯುವುದು ಅಗತ್ಯವಾಗಿದೆ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಹಿಮಾಲಯ ಕಂಪನಿಯು ತಾನು ಪಡೆದುಕೊಂಡಿರುವ ಹಲಾಲ್ ಪ್ರಮಾಣಪತ್ರದ ಬಗ್ಗೆ ಸ್ಪಷ್ಟೀಕರಣ ನೀಡಿದ್ದರೂ, ಭಾರತದಲ್ಲಿ ಹಲಾಲ್ ಪ್ರಮಾಣೀಕರಿಸಲ್ಪಟ್ಟ ಉತ್ಪನ್ನವನ್ನು ಮಾರುತ್ತಿದೆಯೇ? ಇಲ್ಲವೇ ಎನ್ನುವ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. 

ನಾನು ಹಿಮಾಲಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಿದ್ದೇನೆ, ಗೊಗೋಯ್ ಹೆಸರಿನಲ್ಲಿ ವೈರಲ್ ಆಗ್ತಿದೆ ಈ ಸಂದೇಶ

ಈ ವಿಷಯದಲ್ಲಿ ಕೆಲವರು ಹಿಮಾಲಯ ಕಂಪನಿಯನ್ನು ಬೆಂಬಲಿಸಿದ್ದಾರೆ. ಅದಾನಿ, ರಿಲಯನ್ಸ್, ಟಾಟಾ, ಹಿಂದೂಸ್ತಾನ್ ಯೂನಿಲಿವರ್, ಅಮುಲ್, ಡಾಬರ್ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣವನ್ನು ಪಡೆದಿವೆ ಎಂದೂ ಹೇಳಿದ್ದಾರೆ.  ಕರ್ನಾಟಕದಲ್ಲಿ ಹಲಾಲ್ ಮಾಂಸದ ವಿವಾದಕ್ಕೆ ಸಂಬಂಧಿಸಿದಂತೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹಲಾಲ್ ಮಾಂಸದ ವ್ಯಾಪಾರವು ಒಂದು ರೀತಿಯ 'ಆರ್ಥಿಕ ಜಿಹಾದ್' ಎಂದು ಬುಧವಾರ ಹೇಳದ್ದರು. ಹಲಾಲ್ ಮಾಂಸದ ಬಗ್ಗೆ ಈಗ ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿರುವುದರಿಂದ ರಾಜ್ಯ ಸರ್ಕಾರವು ಪರಿಶೀಲಿಸಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ನಡುವೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಇಂತಹ ವಿಷಯಗಳನ್ನು ತರುತ್ತಿದೆ ಎಂದು ಕರ್ನಾಟಕದ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

click me!