ಹೋಟೆಲ್‌ ಮಾಲೀಕರ ಹೆಸರು ಕಡ್ಡಾಯ: ಹಿಮಾಚಲ ಸಚಿವಗೆ ಕಾಂಗ್ರೆಸ್‌ ಹೈಕಮಾಂಡ್‌ ತರಾಟೆ

By Kannadaprabha NewsFirst Published Sep 27, 2024, 6:00 AM IST
Highlights

ರಾಜ್ಯದಲ್ಲಿ ಹೆಚ್ಚುತ್ತಿರುವ ವಲಸೆ ಕಾರ್ಮಿಕರ ಭಯವನ್ನು ಹೋಗಲಾಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂಬ ಸಿಂಗ್‌ ಹೇಳಿಕೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಈ ಕುರಿತು ಚರ್ಚಿಸಲು ಸಚಿವರನ್ನು ದೆಹಲಿಗೆ ಕರೆಸಲಾಗಿದ್ದು, ವಿಷಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚಿಸಲಾಗಿದೆ. ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
 

ನವದೆಹಲಿ(ಸೆ.27):  ಹೋಟೆಲ್‌ ಹಾಗೂ ಆಹಾರ ಪದಾರ್ಥಗಳನ್ನು ಮಾರುವ ಅಂಗಡಿಗಳ ಮಂದೆ ಮಾಲೀಕರ ಹೆಸರನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸುವ ನಿರ್ಧಾರವನ್ನು ಬೆಂಬಲಿಸಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹೈಕಮಾಂಡ್‌ ಸ್ವಪಕ್ಷದ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

‘ರಾಜ್ಯದಲ್ಲಿ ಹೆಚ್ಚುತ್ತಿರುವ ವಲಸೆ ಕಾರ್ಮಿಕರ ಭಯವನ್ನು ಹೋಗಲಾಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂಬ ಸಿಂಗ್‌ ಹೇಳಿಕೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಈ ಕುರಿತು ಚರ್ಚಿಸಲು ಸಚಿವರನ್ನು ದೆಹಲಿಗೆ ಕರೆಸಲಾಗಿದ್ದು, ವಿಷಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚಿಸಲಾಗಿದೆ. ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

Latest Videos

ತಿರುಪತಿ ಲಡ್ಡು ವಿವಾದ: ಯುಪಿ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಯೋಗಿ ಸರ್ಕಾರ ಆದೇಶ

ಈ ಮೊದಲು ಕಾವಾಡಿ ಯಾತ್ರೆಯ ವೇಳೆ ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ಇಂತಹ ಆದೇಶ ಹೊರಡಿಸಿದ್ದಾಗ ಕಾಂಗ್ರೆಸ್‌ ಅದನ್ನು ಖಂಡಿಸಿತ್ತು. ಈಗ ಸಿಂಗ್‌ರ ನಡೆ ಪಕ್ಷದ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

click me!