ಕಾರ್ಮಿಕರಿಗೆ ಮೋದಿ ಸರ್ಕಾರದ ದೀಪಾವಳಿ ಉಡುಗೊರೆ, ಕನಿಷ್ಠ ವೇತನ ದರ ಹೆಚ್ಚಳ!

By Chethan Kumar  |  First Published Sep 26, 2024, 10:17 PM IST

ದೀಪಾವಳಿ ಹಬ್ಬಕ್ಕೆ ಕಾರ್ಮಿಕರಿಗೆ ಮೋದಿ ಸರ್ಕಾರ ಉಡುಗೊರೆ ನೀಡಿದೆ. ದೇಶದ ಎಲ್ಲಾ ವರ್ಗದ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಿದೆ.
 


ನವದೆಹಲಿ(ಸೆ.26) ಕೃಷಿ, ಕೈಗಾರಿಗೆ, ಕಟ್ಟಡ ನಿರ್ಮಾಣ, ಮನೆಕೆಲಸ ಸೇರಿದಂತೆ ದೇಶದ ಎಲ್ಲಾ ಕಾರ್ಮಿಕ ವರ್ಗಕ್ಕೆ ಪ್ರಧಾನಿ ಮೋದಿ ಸರ್ಕಾರ ದೀಪಾವಳಿ ಗಿಫ್ಟ್ ನೀಡಿದೆ. ಕಾರ್ಮಿಕ ವರ್ಗದ ಕನಿಷ್ಠ ವೇತನ ದರ ಹೆಚ್ಚಳ ಆದೇಶವನ್ನು ಮೋದಿ ಸರ್ಕಾರ ಹೊರಡಿಸಿದೆ. ಅಕ್ಟೋಬರ್ 1, 2024ರಿಂದ ದೇಶದ ಎಲ್ಲಾ ಕಾರ್ಮಿಕ ವರ್ಗದ ಕನಿಷ್ಠ ವೇತನ ದರ ಹೆಚ್ಚಳವಾಗಲಿದೆ. ಜೀವನ ನಿರ್ವಹಣೆ ದುಬಾರಿಯಾಗುತ್ತಿರುವ ಬೆನ್ನಲ್ಲೇ ಕಾರ್ಮಿಕ ವರ್ಗದ ಕನಿಷ್ಠ ವೇತನ ದರ ಹೆಚ್ಚಳಕ್ಕೆ ಆದೇಶ ಹೊರಡಿಸಲಾಗಿದೆ.

ಲೋಡಿಂಗ್, ಅನ್‌ಲೋಡಿಂಗ್, ಮನೆಗೆಲಸ, ಶುಚಿತ್ವ, ಗಣಿಕಾರಿಗೆ, ಕೃಷಿ, ಕೈಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಶ್ರಮಿಕ ವರ್ಗದ ಜನರ ಕನಿಷ್ಠ ವೇತನ ದರ ಅಕ್ಟೋಬರ್ 1 ರಿಂದ ಹೆಚ್ಚಾಗುತ್ತಿದೆ. ಈ ಪೈಕಿ ನುರಿತ, ಅರೆ ಕೌಶಲ್ಯ, ಕೌಶಲ್ಯ ರಹಿತ ಕಾರ್ಮಿಕರು ಎಂದು ವಿಂಗಡನೆ ಮಾಡಲಾಗಿದೆ.  ಎ,ಬಿ,ಸಿ ಎಂದು ಕಾರ್ಮಿಕರ ವಿಭಾಗಗಳಾಗಿ ಮಾಡಿ ಕನಿಷ್ಠ ವೇತನ  ದರ ಹೆಚ್ಚಿಸಲಾಗಿದೆ. 

Tap to resize

Latest Videos

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಅಕ್ಟೊಬರ್‌ನಿಂದ ವೇತನ ಹೆಚ್ಚಳ!

ಕಟ್ಟಡ ನಿರ್ಮಾಣ, ಕ್ಲೀನಿಂಗ್, ಲೋಡಿಂಗ್ ಅನ್‌ಲೋಡಿಂಗ್ ಸೇರಿದಂತೆ ಕೌಶಲ್ಯರಹಿತ ಶ್ರಮಿಕ ವರ್ಗದ ದಿನಗೂಲಿಯನ್ನು 783 ರೂಪಾಯಿಗೆ ಹೆಚ್ಚಿಸಲಾಗಿದೆ. ತಿಂಗಳಿಗೆ 20,358 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇನ್ನು ಅರೆ ಕೌಶಲ್ಯ ಕಾರ್ಮಿಕರಿಗೆ  ಪ್ರತಿ ದಿನದ ವೇತನ 868 ರೂಪಾಯಿಂತೆ ತಿಂಗಳಿಗೆ 22,568 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕೌಶಲ್ಯ ಕಾರ್ಮಿಕರಿಗೆ ಪ್ರತಿ ದಿನ 954 ರೂಪಾಯಿಂತೆ ತಿಂಗಳಿಗೆ 24,804 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಇನ್ನು ನುರಿತ ಕಾರ್ಮಿಕರಿಗೆ ಪ್ರತಿ ದಿನ 1,035 ರೂಪಾಯಿ ಹಾಗೂ ತಿಂಗಳಿಗೆ 26,910 ರೂಪಾಯಿ ವೇತನ ನಿಗದಿ ಮಾಲಾಗಿದೆ. ಈ ಪರಿಷ್ಕೃತ ವೇತನ ಅಕ್ಟೋಬರ್ 1 ರಿಂದ ಜಾರಿಯಾಗುತ್ತಿದೆ. 

ಕಾರ್ಮಿಕ ವರ್ಗದ ವೇತನವನ್ನು ವರ್ಷದಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗುತ್ತಿದೆ. ಎಪ್ರಿಲ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಎಪ್ರಿಲ್ 2024ರಲ್ಲೂ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಿತ್ತು. ಮೋದಿ ಸರ್ಕಾರ ಇದೀಗ ಕಾರ್ಮಿಕರ ಜೀವನ ಹಾಗೂ ವೇತನ ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಿದೆ.  ಕಾರ್ಮಿಕ ಸಚಿವಾಲಯ ಈ ಮಹತ್ವದ ಆದೇಶ ಹೊರಡಿಸಿದೆ.

ಕಾರ್ಮಿಕರ ವೇತನ ಹೆಚ್ಚಳ ಅತೀ ಅವಶ್ಯಕವಾಗಿದೆ. ಶ್ರಮಿಕ ವರ್ಗದವರ ಜೀವನ ಮಟ್ಟ ಸುಧಾರಣೆಗೆ ಇದು ನೆರವಾಗಲಿದೆ. ಪ್ರತಿ ಅಗತ್ಯವಸ್ತುಗಘಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಶ್ರಮಿಕ ವರ್ಗದ ಕುಟುಂಬ ನಿರ್ವಹಣೆ ಸವಾಲಾಗಿದೆ. ಹೀಗಾಗಿ ವೇತನ ಹೆಚ್ಚಳ ಕಾರ್ಮಿಕ ವರ್ಗದ ಮುಖದಲ್ಲಿ ನಗು ತರಿಸಲಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ರಾತ್ರಿ ಕ್ಲಬ್‌ಲ್ಲಿ ಸಿಂಗರ್, ಬೆಳಗ್ಗೆ ಆಫೀಸ್‌ಗೆ ಚಕ್ಕರ್: ಆದರೂ 10 ವರ್ಷ ತಪ್ಪದೆ ಸ್ಯಾಲರಿ ಪಡೆದ ಸರ್ಕಾರಿ ನೌಕರ!
 

click me!