fact Check: ದೆಹಲಿ ಸಿಎಂ ಕೇಜ್ರಿವಾಲ್‌ ಮೇಲೆ ಅತ್ಯಾಚಾರ ಆರೋಪ?

By Suvarna NewsFirst Published Jan 31, 2020, 9:11 AM IST
Highlights

ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿಯ ನಡುವಿನ ನೇರ ಹಣಾಹಣಿಯಲ್ಲಿ ಗೆಲವು ಯಾರದ್ದು ಎಂಬುದೇ ಈ ಬಾರಿಯ ಕುತೂಹಲ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅವರ ಮೇಲೆ ಅತ್ಯಾಚಾರ ಆರೋಪ ಇತ್ತು ಎಂದು ಹೇಳಲಾದ ದಿನಪತ್ರಿಕೆಯ ತುಣುಕೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿಯ ನಡುವಿನ ನೇರ ಹಣಾಹಣಿಯಲ್ಲಿ ಗೆಲವು ಯಾರದ್ದು ಎಂಬುದೇ ಈ ಬಾರಿಯ ಕುತೂಹಲ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅವರ ಮೇಲೆ ಅತ್ಯಾಚಾರ ಆರೋಪ ಇತ್ತು ಎಂದು ಹೇಳಲಾದ ದಿನಪತ್ರಿಕೆಯ ತುಣುಕೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

ಐಐಟಿ ಖರಗ್‌ಪುರದಲ್ಲಿ ಓದುತ್ತಿರುವ ಸಂದರ್ಭದಲ್ಲಿ ನಡೆದ ಘಟನೆ ಎಂದೂ ಅದರಲ್ಲಿ ಹೇಳಲಾಗಿದೆ. ಪತ್ರಿಕೆಯಲ್ಲಿ 1987 ಜೂನ್‌ 8ರ ದಿನಾಂಕ ನಮೂದಾಗಿದೆ. ‘ಐಐಟಿ ವಿದ್ಯಾರ್ಥಿ ಮೇಲೆ ಅತ್ಯಾಚಾರ ಆರೋಪ’ ಎಂಬ ಶೀರ್ಷಿಕೆಯಡಿ, ‘ಸ್ಥಳೀಯ ಮಹಿಳೆಯು 19 ವರ್ಷ ಹುಡುಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದು, ಪ್ರಕರಣ ಸಂಬಂಧ ಆರೋಪಿ ಅರವಿಂದ ಕೇಜ್ರಿವಾಲ್‌ ಎಂಬವನನ್ನು ಸ್ಥಳೀಯರು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದಿದೆ.

Fact Check: ‘ಹಿಂದು’ ಪದ ಬಳಸದಂತೆ ಆದೇಶ ಹೊರಡಿಸಿದ ಗೃಹ ಇಲಾಖೆ!

ಆದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಆಮ್‌ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಐಐಟಿ ಖರಗ್‌ಪುರದಲ್ಲಿ ಬಿ ಟೆಕ್‌ ಪದವಿ ಪಡೆದಿದ್ದು 1980ರಲ್ಲಿ. ಅಲ್ಲಿಗೆ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟ. ಅಲ್ಲದೆ ಈ ಪತ್ರಿಕೆಯ ತುಣುಕು 2016, 2018ರಲ್ಲಿಯೂ ವೈರಲ್‌ ಆಗಿತ್ತು. ಹಾಗೆಯೇ ಕೇಜ್ರಿವಾಲ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿರುವ ಅಫಿಡವಿಟ್‌ನಲ್ಲಿಯೂ ಈ ಬಗ್ಗೆ ಉಲ್ಲೇಖವಿಲ್ಲ.

- ವೈರಲ್ ಚೆಕ್ 

click me!