ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿದ ಎಡಿಟರ್ಸ್ ಗಿಲ್ಡ್!

By Suvarna NewsFirst Published Nov 4, 2020, 12:06 PM IST
Highlights

ರಿಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್| ಪೊಲೀಸರ ಈ ನಡೆಯನ್ನು ಖಂಡಿಸಿದ ಎಡಿಟರ್ಸ್ ಗಿಲ್ಡ್| ನಿಜಕ್ಕೂ ಚಿಂತಾಜನಕ ವಿಚಾರ ಎಂದ ಗಿಲ್ಡ್

ಮುಂಬೈ(ನ.04): ರಿಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಮುಂಬೈ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಸದ್ಯ ಪೊಲೀಸರ ಈ ನಡೆಯನ್ನು ಎಡಿಟರ್ಸ್ ಗಿಲ್ಡ್ ಖಂಡಿಸಿದೆ. ಈ ಸಂಬಂಧ ಪ್ರಕಟನೆ ಜಾರಿಗೊಳಿಸಿರುವ ಗಿಲ್ಡ್ ಇದು ನಿಜಕ್ಕೂ ಚಿಂತಾಜನಕವೆಂದಿದೆ.

ಎಡಿಟರ್ಸ್‌ ಗಿಲ್ಡ್ ಕೊಟ್ಟ ಹೇಳಿಕೆ ಏನು?

ಬುಧವಾರದಂದು ಅರ್ನಬ್ ಗೋಸ್ವಾಮಿಯನ್ನು ಅರೆಸ್ಟ್ ಮಾಡಲಾಗಿದ್ದು, ಈ ವಿಚಾರ ತಿಳಿದು ಶಾಕ್ ಆಯ್ತು. ಅಚಾನಕ್ಕಾಗಿ ನಡೆದ ಈ ಬಂಧನವನ್ನು ನಾವು ಖಂಡಿಸುತ್ತೇವೆ. ಇದು ನಿಜಕ್ಕೂ ಚಿಂತಾಜನಕ ವಿಚಾರ ಎಂದಿದೆ. ಜೊತೆಗೆ ರಾಜ್ಯಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ತನ್ನ ಶಕ್ತಿ ಪ್ರದರ್ಶನ ಮಾಡದೆ ಗೋಸ್ವಾಮಿಯನ್ನು ಉತ್ತಮವಾಗಿ ನಡೆಸಿಕೊಳ್ಳುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಬಳಿ ಮನವಿಯನ್ನೂ ಮಾಡಿದೆ. 

ಯಾವ ಪ್ರಕರಣ ಸಂಬಂಧ ಅರೆಸ್ಟ್?

ಅರ್ನಬ್ ಗೋಸ್ವಾಮಿ ವಿರುದ್ಧ ಓರ್ವ ತಾಯಿ ಹಾಗೂ ಮಗನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಕೇಳಿ ಬಂದಿದೆ. ಈ ಪ್ರಕರಣ  2018ರದ್ದಾಗಿದೆ. 53ವರ್ಷದ ಓರ್ವ ಇಂಟೀರಿಯರ್ ಡಿಸೈನರ್ ಅನ್ವರ್ ನಾಯ್ಕ್ ಹಾಗೂ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆ ಸಿಐಡಿ ಮಾಡುತ್ತಿದೆ. ಇನ್ನು ಅನ್ವರ್ ಬರೆದಿದ್ದಾರೆನ್ನಲಾದ ಸೂಸೈಡ್‌ ನೋಟ್‌ನಲ್ಲಿ ಅರ್ನಬ್ ಹಾಗೂ ಇನ್ನಿತರ ಇಬ್ಬರು ತಮಗೆ ನೀಡಬೇಕಾದ 5.40ಕೋಟಿ ರೂಪಾಯಿ ನೀಡಿಲ್ಲ ಎಂದು ದೂರಿದ್ದರು ಹಾಗೂ ಇದೇ ಕಾರಣದಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು.

click me!