ಇದೆಂತಾ ನ್ಯಾಯ!? ದೂರು ಕೊಟ್ಟಿದ್ದಕ್ಕೆ ರೇಪ್ ಸಂತ್ರಸ್ತೆಗೆ 5000 ರೂ. ದಂಡ

By Web DeskFirst Published Nov 18, 2019, 9:42 PM IST
Highlights

ರೇಪ್ ದೂರು ಕೊಟ್ಟಿದ್ದಕ್ಕೆ ಸಂತ್ರಸ್ತೆಗೆ ದಂಡ/ ಸ್ಥಳೀಯ ಗ್ರಾಮದ ಮುಖಂಡರಿಂದ ಇದೆಂಥಾ ಕ್ರಮ/ ಛತ್ತೀಸ್ ಘಡದ ಜಶ್ ಪುರ ಜಿಲ್ಲೆಯಲ್ಲಿ ಈ ಘಟನೆ

ಛತ್ತೀಸ್ ಘಡ[ನ. 18]  23 ವರ್ಷದ ರೇಪ್ ಸಂತ್ರಸ್ತೆ ಒಬ್ಬರಿಗೆ ಸ್ಥಳೀಯ ಹಳ್ಳಿಯ ಮುಖಂಡರು 5000 ರೂ. ದಂಡ ಹಾಕಿದ್ದಾರೆ! ಅಚ್ಚರಿಯಾದರೂ ನಿಜ .. ಇದಕ್ಕೆ ಗ್ರಾಮದ ಮುಖಂಡರು ನೀಡಿರುವ ಕಾರಣ ಆಕೆ ಪೊಲೀಸರನ್ನು ಸಂಪರ್ಕಿಸಿದ್ದೇ ದಂಡ ಹಾಕಲು ಕಾರಣ.

ಛತ್ತೀಸ್ ಘಡದ ಜಶ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಶರ ಬಳಿ ಹೋದ ರೇಪ್ ಸಂತ್ರಸ್ತ ಹುಡುಗಿ ಊರ ಮರ್ಯಾದಿಯನ್ನು ಬೀದಿ ಪಾಲು ಮಾಡಿದ್ದಾರೆ ಎಂಬ ಕಾರಣಕ್ಕೆ 5000 ರೂ. ದಂಡ ಹಾಕಿಸಿಕೊಂಡಿದ್ದಾರೆ.

ಪಕ್ಕದ ಊರಿನ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಇಬ್ಬರು ಕಾಮುಕರು ಹುಡುಗಿಯ ಮೇಲೆ ಎಗರಿದ್ದರು. ಅತ್ಯಾಚಾರ ಮಾಡಿದರರನ್ನು ಸಂದೀಪ್ ಮತ್ತು ಕಿಶೋರ್ ಎಂದು ಗುರುತಿಸಲಾಗಿತ್ತು. ಪೊಲೀಸರ ಬಳಿ ಹೋಗದಂತೆ ಹುಡುಗಿಗೆ ಬೆದರಿಕೆ ಹಾಕಲಾಗಿತ್ತು. ಆದರೂ ಹುಡುಗಿ ದೂರು ನೀಡಲು ತೆರಳಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.

ಈ ಘಟನೆ ಗೊತ್ತಾದ ಮೇಲೆ ಹಳ್ಳಿಯ ಮುಖಂಡರು ಸಭೆ ಕರೆದಿದ್ದರು. ಹುಡುಗಿ ತನಗಾದ ಅನ್ಯಾಯ ಹೇಳಿಕೊಂಡಿದ್ದು ಅಲ್ಲದೇ ನ್ಯಾಯ ನೀಡಲು ಕೇಳಿಕೊಂಡಿದ್ದರು.

ನಾವು ಬಡವರು ಒಂದು ಕಡೆ ದಂಡ ಕಟ್ಟಲು ಹಳ್ಳಿಯ ಮುಖಂಡರು ಒತ್ತಾಯ ಮಾಡುತ್ತಿದ್ದರೆ ಇನ್ನೊಂದು ಕಡೆ ಪೊಲೀಸರಿಗೆ ನೀಡಿರುವ ದೂರು ಹಿಂದಕ್ಕೆ ಪಡೆಯಲು ಒತ್ತಾಯ ಮಾಡಲಾಗುತ್ತಿದೆ. ನನಗೆ ಮಾತ್ರ ನ್ಯಾಯ ಸಿಗದಾಗಿದೆ ಎಂದು ನೊಂದ ಬಾಲಕಿ ಅಳಲು ತೋಡಿಕೊಂಡಿದ್ದಾರೆ.ಘಟನೆ ನಡೆದ 12 ದಿನದ ಬಳಿಕ ಹುಡುಗಿ ಪೊಲೀಸರ ಬಳಿ ದೂರು ನೀಡಲು ತೆರಳಿದ್ದಾಳೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಪೊಲೀಸರು ದೂರು ತೆಗೆದುಕೊಳ್ಳದ ಆರೋಪ ನಿರಾಕರಿಸಿದ್ದು ನಮ್ಮ ಬಳಿಮ ಹುಡುಗಿ ಮೊದಲಿಗೆ ಬಂದೇ ಇರಲಿಲ್ಲ ಎಂದು ಹೇಳಿದ್ದಾರೆ.

click me!