Published : Nov 14, 2025, 07:15 AM ISTUpdated : Nov 14, 2025, 09:55 PM IST

Bihar Election Results 2025 Live Blog: ಶಿವಮೊಗ್ಗ - ತೀರ್ಥಹಳ್ಳಿಯಲ್ಲಿ ಪದವಿ ವಿದ್ಯಾರ್ಥಿನಿ ನಿಗೂಢ ಸಾವು!

ಸಾರಾಂಶ

ಪಟನಾ: ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 67.13ರಷ್ಟು ಮತದಾನ ಆಗಿದೆ. ನ.6 ಮತ್ತು 11ರಂದು ಎರಡು ಹಂತದಲ್ಲಿ ರಾಜ್ಯದ 243 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 2,616 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಹಾರ ಚುನಾವಣೆ ಕುರಿತ ಬಹುತೇಕ ಅಂದರೆ 10 ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೇ ಗೆಲುವು ಪಕ್ಕಾ ಎಂದು ಹೇಳಿವೆ. ಪ್ರಶಾಂತ್‌ ಕಿಶೋರ್‌ ಅವರ ಜನ್‌ ಸೂರಜ್‌ ಪಕ್ಷಕ್ಕೆ 2ಕ್ಕಿಂತ ಹೆಚ್ಚು ಸ್ಥಾನ ಸಿಗುವುದು ಅನುಮಾನ. ಇನ್ನು ಮಹಾಘಟಬಂಧನ್‌ ಸೀಟುಗಳ ಸಂಖ್ಯೆ 100 ದಾಟುವುದು ಕಷ್ಟ ಎಂದು ಭವಿಷ್ಯ ನುಡಿದಿವೆ.

Shivamogga Student Succumbs to Noose Rising Suicide Cases Spark Alarm

09:55 PM (IST) Nov 14

ಶಿವಮೊಗ್ಗ - ತೀರ್ಥಹಳ್ಳಿಯಲ್ಲಿ ಪದವಿ ವಿದ್ಯಾರ್ಥಿನಿ ನಿಗೂಢ ಸಾವು!

Thirthahalli BBA student death: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಪ್ರಾಪ್ತಿ (21) ಎಂಬ ಬಿಬಿಎ ವಿದ್ಯಾರ್ಥಿನಿ ನೇಣುಬಿಗಿದು ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಮಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read Full Story

09:35 PM (IST) Nov 14

Feelfree - Feelfree - ನನ್ನ ಹೆಂಡ್ತಿ ದಿನದಿಂದ ದಿನಕ್ಕೆ ಚಂದ ಆಗ್ತಿದಾಳೆ, ನಂಗೆ ಭಯ!

ತನ್ನ ಪತ್ನಿ ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾಳೆ. ನನಗಿಂತ ಫಿಟ್‌ ಆಗ್ತಿದಾಳೆ. ಆಕೆಗೆ ಯಾರಾದರೂ ಗುಪ್ತ ಪ್ರೇಮಿ ಇರಬಹುದಾ? ಪತಿಗೆ ಹಾಗೊಂದು ಭಯ. ಏನು ಮಾಡಬೇಕು? ತಜ್ಞರ ಸಮಾಧಾನ (Feelfree) ಏನು? 

Read Full Story

08:09 PM (IST) Nov 14

ಸಂಭ್ರಮಾಚರಣೆಯಲ್ಲಿ ಬಿಹಾರ ಗೆಲುವಿನ ಹಿಂದಿನ 'MY' ಸೂತ್ರ ಹೇಳಿದ ಪ್ರಧಾನಿ ಮೋದಿ

ಸಂಭ್ರಮಾಚರಣೆಯಲ್ಲಿ ಬಿಹಾರ ಗೆಲುವಿನ ಹಿಂದಿನ 'MY' ಸೂತ್ರ ಹೇಳಿದ ಪ್ರಧಾನಿ ಮೋದಿ, 200ಕ್ಕೂ ಹೆಚ್ಚು ಸ್ಥಾನದ ಅಭೂತಪೂರ್ವ ಗೆಲುವಿನ ಬಳಿ ದೆಹಲಿಯಲ್ಲಿ ಸಂಭ್ರಮಾಚರಿಸಿದ ಮೋದಿ, ಭರ್ಜರಿ ಭಾಷಣ ಮಾಡಿದ್ದಾರೆ.

 

Read Full Story

08:03 PM (IST) Nov 14

ಬಿಹಾರ ಫಲಿತಾಂಶ, ತೆರೆಯ ಹಿಂದೆ ನಿಂತು ಬಿಜೆಪಿಗೆ ಮತ್ತೊಂದು ದೊಡ್ಡ ಯಶಸ್ಸು ನೀಡಿದ ಆರೆಸ್ಸೆಸ್‌!

ಆರ್‌ಎಸ್‌ಎಸ್ ಜನಸಾಮಾನ್ಯರ ಅಭಿಯಾನವನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 'ತುಂಬಾ ಒತ್ತಡದ ಸಾರ್ವಜನಿಕ ಸಮಸ್ಯೆಗಳನ್ನು' ಚರ್ಚಿಸಲು ಸಾವಿರಾರು ಸಭೆಗಳನ್ನು ನಡೆಸಿತು ಮತ್ತು ಮುಖ್ಯವಾಗಿ ಹಿಂದುತ್ವ ನಿರೂಪಣೆಯ ಮೇಲೆ ಕೇಂದ್ರೀಕರಿಸಿತು.

 

Read Full Story

06:57 PM (IST) Nov 14

ಕಳೆದ 30 ವರ್ಷಗಳಿಂದ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಯೇ ಇಲ್ಲ ನಿತೀಶ್‌ ಕುಮಾರ್‌, ಕಾರಣವೇನು?

Why Nitish Kumar Never Contested Bihar Assembly Elections in the Last 30 Years ಬಿಹಾರದ ದೀರ್ಘಾವಧಿಯ ಮುಖ್ಯಮಂತ್ರಿ ನಿತೀಶ್ ಕುಮಾರ್, ಸುಮಾರು ಮೂರು ದಶಕಗಳಿಂದ ನೇರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ತಪ್ಪಿಸುತ್ತಿದ್ದಾರೆ. 

Read Full Story

06:24 PM (IST) Nov 14

ಬಿಹಾರದ ಮುಖ್ಯಮಂತ್ರಿ ಯಾರು? ಜೆಡಿಯು ಅಧಿಕೃತ ಪೋಸ್ಟ್ ಕೆಲವೇ ನಿಮಿಷಗಳಲ್ಲಿ ಅಳಿಸಿದ್ದು ಯಾಕೆ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದ ನಂತರ, ಜೆಡಿಯು ಪಕ್ಷವು ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಪೋಸ್ಟ್ ಮಾಡಿ ನಂತರ ಅಳಿಸಿಹಾಕಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ, ಮಹಾರಾಷ್ಟ್ರದಂತೆ ಇಲ್ಲೂ ನಾಯಕತ್ವ ಬದಲಾವಣೆಯಾಗಬಹುದೇ ಎಂಬ ಚರ್ಚೆಗಳು ತೀವ್ರಗೊಂಡಿವೆ.
Read Full Story

05:04 PM (IST) Nov 14

ನಿತೀಶ್ ಚೌಕಾಸಿ ರಾಜಕಾರಣಕ್ಕೆ ಕೊನೆ, ಬಿಜೆಪಿ ದೊಡ್ಡ ಪಕ್ಷ, ಮುಖ್ಯಮಂತ್ರಿ ಹುದ್ದೆ ಯಾರಿಗೆ?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕವಾಗಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ನಿತೀಶ್ ಕುಮಾರ್ ಅವರ ಜೆಡಿಯು ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ಹೊಸ ಫಲಿತಾಂಶವು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದ್ದು, ಜೆಡಿಯು ಇಲ್ಲದೆಯೂ ಬಿಜೆಪಿ ಸರ್ಕಾರ ರಚಿಸುತ್ತಾ?.

Read Full Story

04:59 PM (IST) Nov 14

ರಾಹುಲ್ ಗಾಂಧಿ ಬಿಹಾರ ವೋಟ್ ಅಧಿಕಾರಿ ಯಾತ್ರೆ ಮಾಡಿದ ಎಲ್ಲಾ ಕಡೆ ಕಾಂಗ್ರೆಸ್‌ಗೆ ಹಿನ್ನಡೆ

ರಾಹುಲ್ ಗಾಂಧಿ ಬಿಹಾರ ವೋಟ್ ಅಧಿಕಾರಿ ಯಾತ್ರೆ ಮಾಡಿದ ಎಲ್ಲಾ ಕಡೆ ಕಾಂಗ್ರೆಸ್‌ಗೆ ಹಿನ್ನಡೆ, ಬರೋಬ್ಬರಿ 1,300 ಕಿಲೋಮೀಟರ್ 110 ಕ್ಷೇತ್ರಗಲ್ಲಿ ರಾಹುಲ್ ಗಾಂಧಿ ಯಾತ್ರೆ ಸಾಗಿತ್ತು. ಆದರೆ ಎಲ್ಲಾ ಕಡೆ ಕಾಂಗ್ರೆಸ್ ಹಿನ್ನಡೆ ಅನುಭವಸಿದೆ.

Read Full Story

04:32 PM (IST) Nov 14

Bihar Election results 2025 - 75 ಲಕ್ಷ ಮಹಿಳೆಯರಿಗೆ 10 ಸಾವಿರ ನೀಡಿ ಎನ್‌ಡಿಎ ಗೆಲುವು, ಶಾಸಕ ಪೊನ್ನಣ್ಣ ಆರೋಪ

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಇದು 'ನೇರ ಭ್ರಷ್ಟಾಚಾರ'ದ ಫಲ ಎಂದು ಆರೋಪಿಸಿದ್ದಾರೆ. ಚುನಾವಣೆಗೆ ಮುನ್ನ ಮಹಿಳೆಯರಿಗೆ ತಲಾ ಹತ್ತು ಸಾವಿರ ರೂಪಾಯಿ ನೀಡಿ ಮತಗಳನ್ನು ಖರೀದಿಸಲಾಗಿದೆ ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಎಂದಿದ್ದಾರೆ.

Read Full Story

03:00 PM (IST) Nov 14

95ನೇ ಸೋಲಿನೊಂದಿಗೆ ಸ್ಥಿರತೆ ಕಾಪಾಡಿಕೊಂಡ ರಾಹುಲ್ ಗಾಂಧಿ, ಬಿಜೆಪಿ ಟೀಕೆಗೆ ಕಾಂಗ್ರೆಸ್ ಕೆಂಡಾಮಂಡಲ

95ನೇ ಸೋಲಿನೊಂದಿಗೆ ಸ್ಥಿರತೆ ಕಾಪಾಡಿಕೊಂಡ ರಾಹುಲ್ ಗಾಂಧಿ, ಬಿಜೆಪಿ ಟೀಕೆಗೆ ಕಾಂಗ್ರೆಸ್ ಕೆಂಡಾಮಂಡಲ , ಬಿಹಾರ ಚುನಾವಣೆ ಸೋಲಿನೊಂದಿಗೆ ಕಾಂಗ್ರೆಸ್ ಕಂಗಾಲಾಗಿದೆ. ವೋಟ್ ಚೋರಿ ಆರೋಪವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದಿದೆ.

Read Full Story

01:39 PM (IST) Nov 14

ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ಅಲೆ, ನಗ್ರೋಟಾ ಉಪಚುನಾವಣೆಯಲ್ಲಿ ಬಿಜೆಪಿ ದೇವಯಾನಿಗೆ ಗೆಲುವು

ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ಅಲೆ, ನಗ್ರೋಟಾ ಉಪಚುನಾವಣೆಯಲ್ಲಿ ಬಿಜೆಪಿ ದೇವಯಾನಿಗೆ ಗೆಲುವು , ಬಿಹಾರದಲ್ಲಿ ಮಾತ್ರವಲ್ಲ ಕಣಿವೆ ರಾಜ್ಯದಲ್ಲೂ ಬಿಜೆಪಿ ಮೋಡಿ ಮಾಡಿದೆ. ನಗ್ರೋಟಾ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಸಂಭ್ರಮಾಚರಿಸುತ್ತಿದೆ.

Read Full Story

01:06 PM (IST) Nov 14

ಹಾಡಲ್ಲಿ ಮಾತ್ರವಲ್ಲ ಚುನಾವಣೆಯಲ್ಲೂ ಮೋಡಿ, ಇದುವರೆಗೆ ಗೆಲ್ಲದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಮುನ್ನಡೆ

ಹಾಡಲ್ಲಿ ಮಾತ್ರವಲ್ಲ ಚುನಾವಣೆಯಲ್ಲೂ ಮೋಡಿ, ಇದುವರೆಗೆ ಗೆಲ್ಲದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಮುನ್ನಡೆ,  ಬಿಜೆಪಿ ಅಭ್ಯರ್ಥಿ ಮೈಥಿಲಿ 28 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಳೆದ 17 ವರ್ಷಗಳಿಂದ ಬಿಜೆಪಿಗೆ ಸಾಧ್ಯವಾಗದ ದಾಖಲೆಯನ್ನು ಮೈಥಿಲಿ ಬರೆಯಲು ಸಜ್ಜಾಗಿದ್ದಾರೆ.

Read Full Story

12:33 PM (IST) Nov 14

10 ವರ್ಷದಿಂದ ಶಾಸಕನಾಗಿರುವ ಕ್ಷೇತ್ರದಲ್ಲೇ ಘಟಬಂದನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಹಿನ್ನಡೆ

10 ವರ್ಷದಿಂದ ಶಾಸಕನಾಗಿರುವ ಕ್ಷೇತ್ರದಲ್ಲೇ ಘಟಬಂದನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಹಿನ್ನಡೆ, ಮಹಾಘಟಬಂದನ್ ಭಾರಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಇತ್ತ ತನ್ನ ಸ್ವಂತ ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಲಾಲು ಯಾದವ್ ಪುತ್ರ.

 

Read Full Story

12:08 PM (IST) Nov 14

ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು ಎಂದ ಬಿಜೆಪಿ

ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ ಆದರೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನ ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ. ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ಸನ್ಮಾನ್ಯ ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್ ಜೆಡಿ - ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟಿದ್ದು. ಆದರೆ ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ "ವೋಟ್ ಚೋರಿ" ಪ್ರಹಸನವ್ನ ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ಮೋದಿ ಹಾಗು ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ.

12:00 PM (IST) Nov 14

ಮುಂದಿನ ಸುತ್ತುಗಳಲ್ಲಿ ನಮಗೆ ಗೆಲುವು ಸಿಗಲಿದೆ: ಆರ್‌ಜೆಡಿ

ಇನ್ನು ಕೆಲವು ಸುತ್ತುಗಳು ಮತ ಎಣಿಕೆ ನಡೆಯಬೇಕಿದೆ. ಮುಂದಿನ ಸುತ್ತುಗಳಲ್ಲಿ ನಮಗೆ ಗೆಲುವು ಸಿಗಲಿದೆ. ತೇಜಸ್ವಿ ಯಾದವ್ ಅವರು 3 ಸಾವಿರ ಮತಗಳ ಹಿನ್ನಡೆ ಹೊಂದಿದ್ದು, ಇದು ಐದನೇ ಸುತ್ತಿನ ಫಲಿತಾಂಶವಾಗಿದೆ. ಬಿಹಾರದಲ್ಲಿ ಮಹಾಘಟಬಂಧನ್‌ ಸರ್ಕಾರ ಬರಲಿದೆ. ನವೆಂಬರ್ 18ರಂದು ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಆರ್‌ಜೆಡಿ ಲೀಡರ್ ಸಾರಿಕಾ ಪಾಸ್ವಾನ್ ಹೇಳಿದ್ದಾರೆ.

11:32 AM (IST) Nov 14

ಪಟಾಕಿ ಸಿಡಿಸದಂತೆ ಬಿಜೆಪಿ ಸೂಚನೆ

ದೆಹಲಿ ಬಾಂಬ್ ಸ್ಪೋಟ ಹಿನ್ನೆಲೆಯಲ್ಲಿ ದೊಡ್ಡದಾಗಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಬಿಜೆಪಿ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ. ಪಟಾಕಿ ಸಿಡಿಸದಂತೆ ಬಿಜೆಪಿ ಸೂಚನೆ ನೀಡಿದೆ.

11:29 AM (IST) Nov 14

ಗಾಯಕಿ, ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಮುನ್ನಡೆ

ಅಲಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಗಾಯಕಿ, ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆರ್‌ಜೆಡಿಯ ವಿನೋದ್ ಮಿಶ್ರಾ ಅತ್ಯಧಿಕ ಮತಗಳಿಂದ ಹಿನ್ನಡೆ ಕಾಯ್ದುಕೊಂಡಿದ್ದಾರೆ. ಈವರೆಗೆ ನಾಲ್ಕು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ.

11:21 AM (IST) Nov 14

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಕಾಂಗ್ರೆಸ್

ಫಲಿತಾಂಶದ ಅಂಕಿ ಅಂಶಗಳು ನಿರಾಶಾದಾಯಕ ಎಂದು ಹೇಳಿದ್ದಾರೆ. ಮಹಿಳೆಯರಿಗೆ ನೀಡಲಾದ 10 ಸಾವಿರ ರೂಪಾಯಿ ಸಹ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. 10 ಸಾವಿರ ರೂ. ವಿತರಣೆಯನ್ನು ಚುನಾವಣೆ ಆಯೋಗ ತಡೆಯಬೇಕಿತ್ತು. ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ಮಾತನಾಡುತ್ತಿದ್ದಾರೆ. ಇದೆನಾ ಮತಗಳ್ಳತನ? ಮತ್ತಿನ್ನೇನು ಎಂದು ಬಿಹಾರ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ

11:12 AM (IST) Nov 14

RJD ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್ ಹಿನ್ನಡೆ

RJD ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್ ಹಿನ್ನಡೆ

ರಾಘೋಪುರ್ ಕ್ಷೇತ್ರದಲ್ಲಿ 1000ಕ್ಕೂ ಅಧಿಕ ಮತಗಳ ಹಿನ್ನಡೆ

ಜೆಡಿಯು ಅಭ್ಯರ್ಥಿ ಸತೀಶ್ ಕುಮಾರ್ ಯಾದವ್ ಅವರಿಗೆ 6 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ

11:07 AM (IST) Nov 14

ಚಿರಾಗ್ ಪಾಸ್ವಾನ್‌ಗೆ ಒಳ್ಳೆಯ ಸುದ್ದಿ

ಚುನಾವಣಾ ಆಯೋಗದ ಸದ್ಯದ ಅಂಕಿ ಅಂಶಗಳ ಪ್ರಕಾರ, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್, ಎಲ್‌ಜೆಪಿಆರ್) 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಚಿರಾಗ್ ಪಾಸ್ವಾನ್ ಅವರ ಪಕ್ಷವು 29 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.

11:02 AM (IST) Nov 14

ನಾಲ್ಕನೇ ಸ್ಥಾನಕ್ಕೆ ಕುಸಿದ ತೇಜ್ ಪ್ರತಾಪ್ ಯಾದವ್

ಮಹುವಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜ್ ಪ್ರತಾಪ್ ಯಾದವ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರು ಸುತ್ತಿನ ಎಣಿಕೆಯ ನಂತರ ಚುನಾವಣಾ ಆಯೋಗ ಈ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಚಿರಾಗ್ ಪಾಸ್ವಾನ್ ಅವರ ಪಕ್ಷದ ಅಭ್ಯರ್ಥಿ ಸಂಜಯ್ ಕುಮಾರ್ ಸಿಂಗ್ ಈ ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ. ಆರ್‌ಜೆಡಿಯ ಮುಖೇಶ್ ಕುಮಾರ್ ರೋಷನ್ ಎರಡನೇ ಸ್ಥಾನದಲ್ಲಿದ್ದಾರೆ. ಎಐಎಂಐಎಂನ ಅಮಿತ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ಜನಶಕ್ತಿ ಜನತಾದಳದ ತೇಜ್ ಪ್ರತಾಪ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

 

10:58 AM (IST) Nov 14

185 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಎನ್‌ಡಿಎ

185 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಎನ್‌ಡಿಎ

56 ಕ್ಷೇತ್ರಗಳಲ್ಲಿ ಮಹಾಘಟ್‌ಬಂಧನ ಮುನ್ನಡೆ

ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸೂರಜ್ ಪಕ್ಷಕ್ಕೆ ಶಾಕ್

 

10:52 AM (IST) Nov 14

ಕರಕಟ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಮುನ್ನಡೆ

ಮಹಾಬಲಿ ಸಿಂಗ್ (ಜೆಡಿಯು): 8,526 ಮತಗಳು

ಅರುಣ್ ಕುಮಾರ್ (ಸಿಪಿಐಎಂಎಲ್): 6,567 ಮತಗಳು

ಜ್ಯೋತಿ ಸಿಂಗ್ (ಸ್ವತಂತ್ರ): 2,403 ಮತಗಳು

ಜೆಡಿಯು ಅಭ್ಯರ್ಥಿ ಮಹಾಬಲಿ ಸಿಂಗ್ 2,259 ಮತಗಳ ಮುನ್ನಡೆಯೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

10:51 AM (IST) Nov 14

'ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ' - ಜಿತನ್ ರಾಮ್ ಮಾಂಝಿ

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ NDA ಮುನ್ನಡೆ ಸಾಧಿಸುತ್ತಿರುವಾಗ, ಜಿತನ್ ರಾಮ್ ಮಾಂಝಿ ಮಹತ್ವದ ಹೇಳಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ನಮ್ಮ ಮುಖ್ಯಮಂತ್ರಿಯಾಗಲಿದ್ದು, ನಾವು 160 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.

10:12 AM (IST) Nov 14

ಬಿಹಾರ ಗೆಲ್ಲುತ್ತಿದೆ ಎಂದ ಜೆಡಿಯು

ಜೆಡಿಯು ಕಾರ್ಯಕರ್ತರು ಜೆಡಿಯು ಕಚೇರಿಗೆ ಬರಲು ಪ್ರಾರಂಭಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸುತ್ತದೆ ಎಂಬ ಭರವಸೆ ಮಾತ್ರವಲ್ಲದೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ.

 

 

09:53 AM (IST) Nov 14

ಬೆಳಗ್ಗೆ 9.45ಕ್ಕೆ ಚುನಾವಣೆ ಆಯೋಗ ಬಿಡುಗಡೆ ಮಾಡಿದ ಮಾಹಿತಿ ಹೀಗಿದೆ.

JDU- 39

BJP- 36 

RJD- 23 

LJP(R)- 10 

Congress- 6 

HAM- 2 

VIP- 1 

AIMIM- 1 

CPI(M)- 1 

CPI(ML)- 1 TPLRSP- 1

09:50 AM (IST) Nov 14

ಝಾಝಾ ಅಸೆಂಬ್ಲಿ ಕ್ಷೇತ್ರದ ಸದ್ಯದ ಟ್ರೆಂಡ್

ಜೆಡಿಯುನ ದಾಮೋದರ್ ರಾವತ್ ಮುನ್ನಡೆ

ಜೆಡಿಯುನ ದಾಮೋದರ್ ರಾವತ್ - 4,134 ಮತಗಳು

ಆರ್‌ಜೆಡಿಯ ಜೈಪ್ರಕಾಶ್ ನಾರಾಯಣ ಯಾದವ್ - 3,087 ಮತಗಳು

09:42 AM (IST) Nov 14

ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್‌ಪಿ ಅಜಯ್ ಕುಮಾರ್

ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯುತ್ತಿದ್ದು, ನಾವು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಲಯದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಲಖೀಸರಾಯ್ ಎಸ್‌ಪಿ ಅಜಯ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

09:39 AM (IST) Nov 14

ನಿತೀಶ್ ಕುಮಾರ್ ನಾಯಕತ್ವದಲ್ಲಿಯೇ ಮುಂದುವರಿಯುತ್ತೇವೆ

ನಮಗೆ ಜನಾದೇಶದ ಬಗ್ಗೆ ವಿಶ್ವಾಸವಿದ್ದು, ಗೃಹ ಸಚಿವರು ನಾವು 160 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಸರಿಯಾಗಿ ಹೇಳಿದ್ದಾರೆ. ನಾವು ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು, ಅವರ ನಾಯಕತ್ವದಲ್ಲಿಯೇ ಮುಂದುವರಿಯುತ್ತೇವೆ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.

09:35 AM (IST) Nov 14

ಚುನಾವಣಾ ಆಯೋಗದ ಮಾಹಿತಿ

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, 

ಬಿಜೆಪಿ - 20 , ಜೆಡಿಯು - 15 ಆರ್‌ಜೆಡಿ - 6 ಕಾಂಗ್ರೆಸ್ - 3 ಎಲ್‌ಜೆಪಿ (ಆರ್) - 3 ಎಡ - 1

09:17 AM (IST) Nov 14

ಎನ್‌ಡಿಎ 135, ಮಹಾ ಮೈತ್ರಿಕೂಟ 65

ಎನ್‌ಡಿಎ 135, ಮಹಾ ಮೈತ್ರಿಕೂಟ 65 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇತರರು ಐದು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಅಂಚೆ ಮತಪತ್ರಗಳಲ್ಲಿ ವಿಜಯ್ ಕುಮಾರ್ ಸಿನ್ಹಾ ತಮ್ಮ ಹತ್ತಿರದ ಪ್ರತಿಸ್ಪರ್ಧಿಗಿಂತ ಮುಂದಿದ್ದಾರೆ. ಕುಮ್ರಾರ್‌ನಲ್ಲಿ ಕೆ.ಸಿ. ಸಿನ್ಹಾ (ಜನ್ಸುರಾಜ್) ಮುನ್ನಡೆಯಲ್ಲಿದ್ದಾರೆ

 

09:09 AM (IST) Nov 14

NDA 122, ಮಹಾ ಮೈತ್ರಿಕೂಟ 73 ಸ್ಥಾನಗಳಲ್ಲಿ ಮುನ್ನಡೆ

ಬೆಳಗ್ಗೆ 9 ಗಂಟೆ ವೇಳಗೆ NDA 122, ಮಹಾ ಮೈತ್ರಿಕೂಟ 73 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ. ಆರ್‌ಜೆಡಿಯ ತೇಜಸ್ವಿ ಯಾದವ್ ರಾಘೋಪುರದಲ್ಲಿ ಮುನ್ನಡೆಯಲ್ಲಿದ್ದಾರೆ. ಮುಜಫರ್ಪುರದ ಸಕ್ರಾ ವಿಧಾನಸಭಾ ಕ್ಷೇತ್ರದಲ್ಲಿ JDU ಸುಮಾರು 1,000 ಮತಗಳಿಂದ ಮುನ್ನಡೆಯಲ್ಲಿದೆ.

08:53 AM (IST) Nov 14

ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುನ್ನಡೆ

ಕುಟುಂಬಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ರಾಮ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಲಾಲ್‌ಗಂಜ್ ಕ್ಷೇತ್ರದಲ್ಲಿ ಶಿವಾನಿ ಶುಕ್ಲಾ ಸಹ ಮುನ್ನಡೆಯಲ್ಲಿದ್ದಾರೆ.

08:49 AM (IST) Nov 14

ಡಿಸಿಎಂ ಸಾಮ್ರಾಟ್ ಚೌಧರಿಗೆ ಹಿನ್ನಡೆ

ಬಿಹಾರ ಚುನಾವಣೆ ಫಲಿತಾಂಶದ ಆರಂಭಿಕ ಟ್ರೆಂಡ್ ಪ್ರಕಾರ, ಬಿಜೆಪಿ ಅಭ್ಯರ್ಥಿಯಾಗಿರುವ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಿನ್ನಡೆ ಅನುಭವಿಸಿದ್ದಾರೆ. ಮಹಾ ಮೈತ್ರಿಕೂಟದ ಆರ್‌ಜೆಡಿ ಅರುಣ್‌ಕುಮಾರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಡಿಸಿಎಂ ಸಾಮ್ರಾಟ್ ಚೌಧರಿ ಸ್ಪರ್ಧಿಸಿದ್ದಾರೆ.

08:20 AM (IST) Nov 14

ಗಾಯಕಿ ಮೈಥಿಲಿ ಠಾಕೂರ್ ಮುನ್ನಡೆ

ಗಾಯಕಿ ಮೈಥಿಲಿ ಠಾಕೂರ್ ಮುನ್ನಡೆ

30 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ

LJP ಎರಡು ಕ್ಷೇತ್ರಗಳಲ್ಲಿ ಮುನ್ನಡೆ 

ತಾರಾಪುರ ಕ್ಷೇತ್ರದಲ್ಲಿ ಸಾಮ್ರಾಟ್ ಚೌಧರಿ ಮುನ್ನಡೆ =

08:16 AM (IST) Nov 14

ಅಂಚೆ ಮತಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಎನ್‌ಡಿಎ

ಸದ್ಯದ ಅಂಕಿ ಅಂಶಗಳ ಪ್ರಕಾರ, ಎನ್‌ಡಿಎ 14, ಮಹಾಘಟ್‌ಬಂಧನ 4, ಜನ್ ಸುರಾಜ್ ಪಾರ್ಟಿ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಘೋಪುರ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ಮುನ್ನಡೆಯಲ್ಲಿದ್ದಾರೆ.

08:13 AM (IST) Nov 14

ಬದಲಾವಣೆ ಖಚಿತ, ಗೆಲುವಿನತ್ತ ಹೊರಟಿದ್ದೇವೆ

ಬಿಹಾರದಲ್ಲಿ ಖಂಡಿತ ಬದಲಾವಣೆ ಆಗಲಿದೆ. ನಾವು ಚುನಾವಣೆಯನ್ನು ಗೆಲ್ಲಲು ಹೊರಟಿದ್ದೇವೆ. ಈ ಬಾರಿ ಬದಲಾವಣೆ ಫಿಕ್ಸ್ ಎಂದು ತೇಜಸ್ವಿ ಯಾದವ್ ಹೇಳಿಕೆ ನೀಡಿದ್ದಾರೆ.

08:01 AM (IST) Nov 14

ಬಿಹಾರ ಚುನಾವಣೆ: ಮತ ಎಣಿಕೆ ಆರಂಭ

ಬಿಹಾರದ 46 ಮತ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ 

ಮೊದಲು ಅಂಚೆ  ಮತಗಳ ಎಣಿಕೆ ಆರಂಭವಾಗಿದೆ

ಮತ ಎಣಿಕಾ ಕೇಂದ್ರದ ಬಳಿ ಸೇರುತ್ತಿರುವ ಜನರು

ಮತ ಎಣಿಕಾ ಕೇಂದ್ರ ಸುತ್ತ ಭಾರೀ ಭದ್ರತೆ  ನೀಡಲಾಗಿದೆ

 

 

07:55 AM (IST) Nov 14

ಗೆಲುವು ನಮ್ಮದೇ ಎಂದ ಜೆಡಿಯು ನಾಯಕ

ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸಲು ನಮಗೆ ಜನರ ಆಶೀರ್ವಾದ ಸಿಕ್ಕಿದೆ. ಈ ಬಾರಿಯ ಫಲಿತಾಂಶವೂ ಸಹ 2010 ರಂತೆಯೇ ಇರಲಿದೆ. ಮತದಾರರ ದಾರಿ ತಪ್ಪಿಸಲು ಮಹಾ ಮೈತ್ರಿಕೂಟ ನೀಡಿದ ಹೇಳಿಕೆಗಳನ್ನು ಜನರು ತಿರಸ್ಕರಿಸಿದ್ದು, ಗೆಲವು ನಮ್ಮದೇ ಎಂದು ಜೆಡಿಯು ನಾಯಕ ರಾಜೀವ್ ರಂಜನ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

07:50 AM (IST) Nov 14

ಬಿಜೆಪಿ ಯಾವುದೇ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ: ಪಪ್ಪು ಯಾದವ್

ಸುಳ್ಳು ಮತ್ತು ಕಳ್ಳತನವಿಲ್ಲದೆ ಬಿಜೆಪಿ ಯಾವುದೇ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಮಹಿಳೆಯರು ಮತ್ತು ಯುವಕರು ಭಾರತ ಮೈತ್ರಿಕೂಟಕ್ಕೆ ಮತ ಹಾಕಿದ್ದಾರೆ. ಆದರೆ ನೀವು (ಬಿಜೆಪಿ) ಯಾವ ಆಧಾರದ ಮೇಲೆ ತಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ಹೇಳುತ್ತಿದ್ದೀರಿ? ಯುವಕರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಸಂಸದ ಪಪ್ಪು ಯಾದವ್ ಹೇಳಿದ್ದಾರೆ.


More Trending News