BSF ಕಾರ್ಯವ್ಯಾಪ್ತಿ ವಿಸ್ತರಣೆ, ಬಂಗಾಳಕ್ಕೆ ಏಕೆ ನಡುಕ ? ಕೇಂದ್ರಕ್ಕೆ ಪತ್ರ

By Suvarna NewsFirst Published Nov 17, 2021, 3:35 PM IST
Highlights
  • ಬಿಎಸ್‌ಎಫ್‌(BSF) ಕಾರ್ಯವ್ಯಾಪ್ತಿ ವಿಸ್ತರಿಸುವುದನ್ನು ಖಂಡಿಸಿದ ಟಿಎಂಸಿ(TMC)
  • ಗೃಹ ಇಲಾಖೆಯ ನಿರ್ಧಾರಕ ಪ್ರಶ್ನಿಸಿ ಪತ್ರ ಬರೆಯಲು ಸಿದ್ಧತೆ

ಕೊಲ್ಕತ್ತಾ(ನ.17): ಬಿಎಸ್‌ಎಫ್(BSF) ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರದ ಇತ್ತೀಚಿನ ಸೂಚನೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ (West Bengal)ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಿದೆ ಎನ್ನಲಾಗಿದೆ. ಇತ್ತೀಚಿನ ನೋಟಿಫಿಕೇಶನ್‌ನಲ್ಲಿ ಕೇಂದ್ರ ಗೃಹ ಇಲಾಖೆ ಬಿಎಸ್‌ಎಫ್‌ಗೆ ವಿಶೇಷ ಅಧಿಕಾರಿಗಳನ್ನು ಅನುಮತಿಸಿ ಆದೇಶ ನೀಡಿತ್ತು. ಅಂತಾರಾಷ್ಟ್ರೀಯ ಗಡಿಯಲ್ಲಿ 50 ಕಿ.ಮೀ ವ್ಯಾಪ್ತಿಯ ತನಕ ದಾಳಿ, ಅನ್ವೇಷಣೆ ನಡೆಸಿ, ಅಕ್ರಮವಾಗಿ ಸಿಕ್ಕಿದ್ದನ್ನು ಸೀಝ್ ಮಾಡಬಹುದು ಎಂದು ಕೇಂದ್ರ ಬಿಎಸ್‌ಎಫ್‌ಗೆ ಅನುಮತಿ ನೀಡಿತ್ತು.

ಈ ಹಿಂದೆ ಬಿಎಸ್‌ಎಫ್‌ಗೆ 15 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ದಾಳಿ ಮಾಡಿ ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಗುತ್ತಿತ್ತು. ಅ.11ರಂದು ಕೇಂದ್ರ ಈ ಕರ್ತವ್ಯವ್ಯಾಪ್ತಿಯನ್ನು ವಿಸ್ತರಿಸಿ ಆದೇಶ ನೀಡಿತ್ತು. ರಾಜಸ್ಥಾನ, ಪಂಜಾಬ್, ಗುಜರಾತ್, ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಎಸ್‌ಎಫ್‌ಗೆ ಕಾರ್ಯವ್ಯಾಪ್ತಿ ಹೆಚ್ಚಿಸಿ ಸರ್ಕಾರ ಆದೇಶ ನೀಡಿತ್ತು.

Bhagwat Karad: ಖುದ್ದು ಚಿಕಿತ್ಸೆ ನೀಡಿ ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಿದ ಕೇಂದ್ರ ಸಚಿವ

ಕೇಂದ್ರದ ಈ ಹೊಸ ಆದೇಶ ಮಣಿಪುರ, ಮಿಝೋರಾಮ್, ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯ, ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮ & ಕಾಶ್ಮೀರದ ಸಂಪೂರ್ಣ ರಾಜ್ಯದಲ್ಲಿ ರೈಡ್ ನಡೆಸಲು ಬಿಎಸ್‌ಎಫ್‌ಗೆ ಅನುಮತಿ ನೀಡಲಾಗಿದೆ.

ಪಶ್ಚಿಮ ಬಂಗಾಳ ಗೃಹ ಸಚಿವಾಲಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಬಿಎಸ್‌ಎಫ್ ಕಾರ್ಯವ್ಯಾಪ್ತಿ ವಿಸ್ತರಣೆ ರಾಜ್ಯದಲ್ಲಿ ಕಾನೂನಿನ ನಡುವೆ ನೇರ ಮೂಗುತೂರಿಸುವಿಕೆ. ಸಂವಿಧಾನ ಪ್ರಕಾರ ಇದು ರಾಜ್ಯ ಅಧಿಕಾರದಡಿಯಲ್ಲಿ ಬರುತ್ತದೆ ಎಂದಿದ್ದಾರೆ. ಈಗಾಗಲೇ ಗಡಿಗ್ರಾಮಗಳಲ್ಲಿ ಗ್ರಾಮಸ್ಥರನ್ನು ಬಿಎಸ್‌ಎಫ್ ಶೋಷಣೆ ಮಾಡುವ ಕುರಿತು ದೂರುಗಳಿವೆ. ಈಗ ಬಿಎಸ್‌ಎಫ್ ಅಧಿಕಾರ ಹೆಚ್ಚಿಸಿರುವುದು ಇಂತಹ ಇನ್ನಷ್ಟು ಘಟನೆಗಳಿಗೆ ಪ್ರೇರಣೆ ನೀಡುವುದಲ್ಲದೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ಬಿಎಸ್‌ಎಫ್ ವ್ಯಾಪ್ತಿ 50 ಕಿಮೀ ಹೆಚ್ಚಿಸಿದ್ದನ್ನು ಖಂಡಿತಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ರಾಜ್ಯ ಸರ್ಕಾರದ ಅಧಿಕಾರದಲ್ಲಿ ನೇರ ಹಸ್ತಕ್ಷೇಪ. ಟಿಎಂಸಿ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದಿದ್ದಾರೆ. ಟಿಎಂಸಿ ಸಂಸದ ಸುಗತ ರಾಯ್ ಅವರೂ ಇದು ರಾಜ್ಯ ಸರ್ಕಾರದ ವಿಷಯಗಳಲ್ಲಿ ನೇರ ಹಸ್ತಕ್ಷೇಪ ಎಂದು ಆರೋಪಿಸಿದ್ದಾರೆ.

ಇದುವರೆಗೆ ಗಡಿಯಿಂದ 15 ಕಿ.ಮೀ ಒಳಗಿನ ಪ್ರದೇಶದಲ್ಲಿ ಬಿಎಸ್‌ಎಫ್‌(BSF) ಯಾವುದೇ ವ್ಯಕ್ತಿಗಳನ್ನು ವಿಚಾರಣೆ ನಡೆಸುವ, ಬಂಧಿಸುವ ಅಧಿಕಾರ ಹೊಂದಿತ್ತು. ಅದನ್ನೀಗ 50 ಕಿ.ಮೀ ವಿಸ್ತರಿಸಲಾಗಿದೆ. ಜೊತೆಗೆ ಗುಜರಾತ್‌ನಲ್ಲಿ ಈ ಮಿತಿಯನ್ನು 50ರಿಂದ 80 ಕಿ.ಮೀ ಹೆಚ್ಚಿಸಲಾಗಿದೆ. ಅಧಿಕಾರ ವ್ಯಾಪ್ತಿ ವಿಸ್ತರಣೆಯಿಂದ ದೇಶದ ಭದ್ರತೆ ಸಹಕಾರಿಯಾಗಲಿದೆ. ಗಡಿಯಲ್ಲಿ ನಡೆಯುವ ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ ಕಳ್ಳಸಾಗಣೆ, ಗೋ ಕಳ್ಳಸಾಗಣೆಯಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಬಿಎಸ್‌ಎಫ್‌ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸರ್ಕಾರದ ಕ್ರಮವನ್ನು ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ಹಲವು ವಿಪಕ್ಷಗಳು ಇದು ಒಕ್ಕೂಟ ವ್ಯವಸ್ಥೆಗ್ನೆ ಧಕ್ಕೆ ತರುವ ನಿರ್ಧಾರ ಎಂದು ಟೀಕಿಸಿವೆ. ಆದರೆ ಬಿಜೆಪಿ ಮಾತ್ರ ಇದು ದೇಶದ ಭದ್ರತೆಯ ಹಿತಾಸಕ್ತಿಯಿಂದ ಕೈಗೊಂಡ ನಿರ್ಧಾರ ಎಂದು ಸ್ವಾಗತಿಸಿದೆ. ಗಡಿ ಭದ್ರತಾ ಪಡೆಗೆ ಪಂಜಾಬ್‌, ಪಶ್ಚಿಮ ಬಂಗಾಳ, ಅಸ್ಸಾಂನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ 15 ಕಿ.ಮೀ ಬದಲಿಗೆ 50 ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ, ಜಪ್ತಿ, ಬಂಧನಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಬಿಎಸ್‌ಎಫ್‌ ಕಾಯ್ದೆಗೆ ತಿದ್ದುಪಡಿ ತಂದಿದೆ.

ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಗುಜರಾತ್‌ನಲ್ಲಿ ಈ ಮಿತಿಯನ್ನು 80 ಕಿ.ಮೀನಿಂದ 50 ಕಿ.ಮೀಗೆ ಇಳಿಸಲಾಗಿದೆ. ರಾಜಸ್ಥಾನದಲ್ಲಿ ಈಗಿರುವ 50 ಕಿ.ಮೀ ಮಿತಿಯನ್ನೇ ಮುಂದುವರಿಸಲಾಗಿದೆ. ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳು ಸಹ ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿದ್ದರೆ, ಅಸ್ಸಾಂ ಬಾಂಗ್ಲಾದೇಶದೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ.

click me!