ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆಯ ಆರೋಪಿಗಳ ಸೆರೆ| ಆರೋಪಿಗಳ ಪರ ವಕಾಲತ್ತು ನಡೆಸದಿರಲು ವಕೀಲರ ಸಂಘ ನಿರ್ಧಾರ| ಲಂಗಾಣದ ಶಾದ್‌ನಗರ್ ಜಿಲ್ಲಾ ವಕೀಲರ ಸಂಘದ ಒಕ್ಕೊರಲಿನ ನಿರ್ಣಯ| ಪ್ರಿಯಾಂಕಾ ರೆಡ್ಡಿ ಪೋಷಕರನ್ನು ಭೇಟಿ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ನಿಯೋಗ|
ಹೈದರಾಬಾದ್(ನ.30): ಹೈದರಾಬಾದ್ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳ ಪರ ವಕಾಲತ್ತು ನಡೆಸಲು ತೆಲಂಗಾಣದ ಶಾದ್‌ನಗರ್ ಜಿಲ್ಲಾ ವಕೀಲರ ಸಂಘ ನಿರ್ಧರಿಸಿದೆ.
ವೈದ್ಯೆಯನ್ನು ಅಮಾನವೀಯವಾಗಿ ಅತ್ಯಚಾರಗೈದು ಕೊಂದು ಹಾಕಿದ ದುರುಳರ ಪರ ವಕಾಲತ್ತು ಮಾಡಲು ತಾವು ಸಿದ್ಧರಿಲ್ಲ ಎಂದು ವಕೀಲರಯ ಒಕ್ಕೊರಲಿನ ನಿರ್ಣಯ ಕೈಗೊಂಡಿದ್ದಾರೆ.
undefined
ಸುಟ್ಟಸ್ಥಿತಿಯಲ್ಲಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆ ಶವ ಪತ್ತೆ
ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಇದುವರೆಗೂ 4 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರನ್ನು ಮೊಹ್ಮದ್ ಆರೀಫ್, ಜೊಲ್ಲು ಶಿವಾ, ಜೊಲ್ಲು ನವೀನ್ ಹಾಗೂ ಚಿಂತಾಕುಂತಾ ಚೆನ್ನಕೇಶವಲು ಎಂದು ಗುರುತಿಸಲಾಗಿದೆ.
ಈ ಎಲ್ಲಾ ಆರೋಪಿಗಳ ಪರ ವಕಾಲತ್ತು ನಡೆಸದಿರಲು ಶಾದ್‌ನಗರ್ ಬಾರ್ ಅಸೋಸಿಯೇಶನ್ ನಿರ್ಧರಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
National Commission for Women team reaches the residence of the veterinarian who was allegedly raped and murdered in Hyderabad. pic.twitter.com/7ScRTgMmjf
— ANI (@ANI)ವೈದ್ಯೆಯ ಮೇಲೆ ರೇಪ್, ಕೊಲೆ: ಪೊಲೀಸರಿಗೇಕೆ ಸಂತ್ರಸ್ತೆ ಕರೆ ಮಾಡಲಿಲ್ಲ? ಮಂತ್ರಿ ವಿವಾದ!
ಈ ಮಧ್ಯೆ ಪ್ರಿಯಾಂಕಾ ರೆಡ್ಡಿ ಪೋಷಕರನ್ನು ಭೇಟಿ ಮಾಡಿರುವ ಶ್ಯಾಮಲಾ ಕುಂದನ್ ನೇತೃತ್ವದ ರಾಷ್ಟ್ರೀಯ ಮಹಿಳಾ ಆಯೋಗದ ನಿಯೋಗ, ಕುಟುಂಬಕ್ಕೆ ಸಾಂತ್ವನ ಹೇಳಿದೆ.