ಅತ್ಯಾಚಾರ ತಡೆಯಲು ಪೋರ್ನ್ ಸೈಟ್ ಬ್ಯಾನ್ ಮಾಡಿ: ನಿತೀಶ್ ಕುಮಾರ್

By Web DeskFirst Published Dec 7, 2019, 3:33 PM IST
Highlights

ದಿನೇ ದಿನೇ ಹೆಚ್ಚುತ್ತಿವೆ ಅತ್ಯಾಚಾರ ಪ್ರಕರಣ| ಯುವಜನರ ಮನಸ್ಸು ಕೆಡಲು ಪೋರ್ನ್ ಸೈಟ್ ಕಾರಣ| ಅಶ್ಲೀಲತೆಯುಳ್ಳ ವೆಬ್‌ಸೈಟ್‌ಗಳನ್ನು ಬ್ಯಾನ್ ಮಾಡಿ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ[ಡಿ.07]: ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳಿಗೆ ಪೋರ್ನ್ ಸೈಟ್ ಗಳೇ ಕಾರಣವೆಂದು ಆರೋಪಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಇಂತಹ ಸೈಟ್ ಗಳನ್ನು ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಹೈದರಾಬಾಧ್ ರೇಪ್ ಹಾಗೂ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್, 'ಇತ್ತೇಚೆಗೆ ದುಷ್ಕೃತ್ಯಗಳು ಹೆಚ್ಚಾಘಲಾರಂಭಿಸಿವೆ. ಹೈದರಾಬಾದ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆ ಇಂತಹ ಘಟನೆಗಳು ನಡೆಯುತ್ತಿವೆ. ನಾನು ಆರಂಭದಿಂದಲೂ ಸೋಶಿಯಲ್ ಮೀಡಿಯಾ ಹಾಗೂ ಪೋರ್ನ್ ವೆಬ್ ಸೈಟ್ ಗಳ ಕುರಿತು ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ಇವುಗಳಿಂದ ಸಿಗುವ ಲಾಭಕ್ಕಿಂತ, ಆಗುವ ಹಾನಿಯೇ ಹೆಚ್ಚು' ಎಂದಿದ್ದಾರೆ.

ಸಾಮಾಜಿಕ ಜಾಲತಣಾದಲ್ಲಿ ‘ಹುಬ್ಬಳ್ಳಿ ಹುಲಿಯಾ’ ಸಜ್ಜನರ ವೈರಲ್

ಅಲ್ಲದೇ 'ನನಗೆ ಈ ಪೋರ್ನ್ ಸೈಟ್ ಗಳ ಕುರಿತು ಮಾಹಿತಿ ಸಿಕ್ಕಿದೆ. ಜನರು ಹೆಣ್ಮಕ್ಕಳು ಹಾಗೂ ಮಹಿಳೆಯರ ವಿರುದ್ಧ ಘೋರ ಅಪರಾಧವೆಸಗುತ್ತಿದ್ದಾರೆ. ಅಲ್ಲದೇ ಅತ್ಯಾಚಾರವನ್ನು ಸೆರೆ ಹಿಡಿದು, ಈ ಕುಕೃತ್ಯವನ್ನು ಅಪ್ಲೋಡ್ ಮಾಡುತ್ತಾರೆ. ಈ ದೃಶ್ಯಗಳನ್ನು ನೋಡಿದವರ ಮನಸ್ಸೂ ಸಾಮಾನ್ಯವಾಗಿ ವಿಕೃತಗೊಳ್ಳುತ್ತದೆ. ಹೀಗಾಗಿ ಇಂತಹ ಸೈಟ್ ಗಳಿಂದ ದೂರವಿರುವಂತೆ ನಾನು ಯುವಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ.

ಎನ್‌ಕೌಂಟರ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದ ಕಾನೂನು ಸಚಿವ

click me!