ಪಂಚ ರಾಜ್ಯ ಚುನಾವಣೆ ಡೇಟ್ ಫಿಕ್ಸ್, ರೈತ ಜನಾಂದೋಲನದಲ್ಲಿ ಟ್ವಿಸ್ಟ್: ಫೆ.26ರ ಟಾಪ್ 10 ಸುದ್ದಿ!

By Chethan Kumar  |  First Published Feb 26, 2021, 6:21 PM IST

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮಾ.8ರಂದು ಜನಾಂದೋ​ಲ​ನ​ಕ್ಕಾಗಿ ಸಿದ್ಧತೆ ನಡೆ​ಸಿ​ರುವ ರೈತ ಮುಖಂಡ ರಾಕೇಶ್ ಟಿಕಾಯತ್‌ಗೆ ಇದೀಗ ಬಂಧನ ಬೀತಿ ಎದುರಾಗಿದೆ. ವಂಚಕ ನೀರವ್‌ ಮೋದಿ ಗಡೀಪಾರಿಗೆ ಬ್ರಿಟನ್‌ ಗ್ರೀನ್ ಸಿಗ್ನಲ್ ನೀಡಿದೆ. ಬಿಗ್‌ಬಾಸ್ ಮನೆಗೆ ಕಾಲಿಡ್ತಾರ ರಾಗಿಣಿ? ರೈಲಿನಲ್ಲಿ ಸ್ಫೋಟಕ ಪತ್ತೆ ಸೇರಿದಂತೆ ಫೆ.26ರ ಟಾಪ್ 10 ಸುದ್ದಿ ಇಲ್ಲಿವೆ.


ಮಾ.27 ರಿಂದ ಎಪ್ರಿಲ್ 29: ಪಂಚರಾಜ್ಯ ಚುನಾವಣಾ ದಿನಾಂಕ ಘೋಷಿಸಿದ ಆಯೋಗ!...

Tap to resize

Latest Videos

ಭಾರತೀಯ ಚುನಾವಣಾ ಆಯೋಗ 5 ರಾಜ್ಯಗಳ ಚುನವಣಾ ದಿನಾಂಕ ಘೋಷಿಸಿದೆ. ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಇತ್ತ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಚುನಾವಣೆ ದಿನಾಂಕ ಹಾಗೂ ಇತರ ಮಾಹಿತಿ ಇಲ್ಲಿದೆ.

ಚೆನ್ನೈ-ಮಂಗಳೂರು ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಗಿಸುತ್ತಿದ್ದ ರಮಣಿ...

ಬೆಂಗಳೂರು/ ಮಂಗಳೂರು(ಫೆ. 26)  ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸ್ಫೋಟಕ ಪತ್ತೆಯಾಗಿದೆ. ತಮಿಳುನಾಡಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸ್ಫೋಟಕ ಪತ್ತೆಯಾಗಿದೆ. 

2012ರ ಗಲಭೆ ಕೇಸ್‌: ರೈತ ರ‍್ಯಾಲಿಯಂದೇ ಟಿಕಾ​ಯತ್‌ ಬಂಧನ?...

ಮಾ.8ರಂದು ಜನಾಂದೋ​ಲ​ನ​ಕ್ಕಾಗಿ ಸಿದ್ಧತೆ ನಡೆ​ಸಿ​ರುವ ಭಾರ​ತೀಯ ಕಿಸಾನ್‌ ಯೂನಿ​ಯ​ನ್‌​(​ಬಿಕೆ​ಯು) ಮುಖಂಡ ರಾಕೇಶ್‌ ಟಿಕಾ​ಯತ್‌| 2012ರ ಗಲಭೆ ಕೇಸ್‌| ರೈತ ರಾರ‍ಯಲಿಯಂದೇ ಟಿಕಾ​ಯತ್‌ ಬಂಧನ?

ಇಂಧನ ದರ ಏರಿಕೆ ಖಂಡಿಸಲು ಮಮತಾ ಸ್ಕೂಟರ್‌ ರೈಡ್‌!...

ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ​ವಿ​ದ್ಯುತ್‌ ಚಾಲಿತ ದ್ವಿಚಕ್ರ ವಾಹ​ನವನ್ನು ಖುದ್ದಾಗಿ ತಾವೇ ಚಾಲನೆ ಮಾಡುವ ಮೂಲಕ ಇಂಧನ ದರ ಏರಿಕೆ ವಿರುದ್ಧ ವಿಶೇಷ ಪ್ರತಿ​ಭ​ಟನೆ ನಡೆ​ಸಿ​ದರು.

ವಂಚಕ ನೀರವ್‌ ಮೋದಿ ಗಡೀಪಾರಿಗೆ ಬ್ರಿಟನ್‌ ಗ್ರೀನ್ ಸಿಗ್ನಲ್!...

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ನೀರವ್‌ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್‌ ನ್ಯಾಯಾಲಯ ಅನುಮತಿ ನೀಡಿದೆ.

ಮೊಟೇರಾ ಬೌಲಿಂಗ್‌ ಎಂಡ್‌ಗೆ ಅದಾನಿ, ರಿಲಯನ್ಸ್‌ ಹೆಸರಿಟ್ಟಿದ್ದೇಕೆ..?...

ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಅದಾನಿ ಹಾಗೂ ರಿಲಯನ್ಸ್‌ ಎಂಡ್ ಎನ್ನುವ ಹೆಸರಿಟ್ಟಿದ್ದೇಕೆ ಎನ್ನುವ ಸತ್ಯ ಬಯಲಾಗಿದೆ. 

ಬಿಗ್‌ಬಾಸ್‌ ಮನೆಗೆ ರಾಗಿಣಿ..? ಶುರುವಾಗೋಕೂ ಮುನ್ನ ರಿವೀಲ್ ಮಾಡಿದ್ರು ರಾಗಿಣಿ!...

ಬಿಗ್‌ಬಾಸ್ ಹೊಸ ಸೀಸನ್ ಆರಂಭವಾಗುತ್ತಿದೆ. ಬಿಗ್ ಬಾಸ್ ಮನೆಯೊಳಗೆ ರಾಗಿಣಿ ಹೋಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ರಾಗಿಣಿ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ MG ಹೆಕ್ಟರ್ ಕಾರು ನಿರ್ಮಾಣ!...

SUV ಕಾರುಗಳ ಪೈಕಿ ಕಡಿಮೆ ಅವಧಿಯಲ್ಲಿ ಭಾರಿ ಜನಪ್ರಿಯವಾಗಿರುವ ಎಂಜಿ ಮೋಟಾರ್ಸ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಡುವೆ ಎಂಜಿ ಮೋಟಾರ್ಸ್ ಮತ್ತೊಂದು ಸಾಧನೆ ಮಾಡಿದೆ. ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ತಯಾರಿಸಿದ ಎಂಜಿ ಹೆಕ್ಟರ್ ಕಾರು ರೋಲ್ ಔಟ್ ಆಗಿದೆ.

ಇದೀಗ ಹೊಸ ಪೊಗರು; 8 ನಿಮಿಷ ಟ್ರಿಮ್, 45 ಕೋಟಿ ಗಳಿಕೆ!...

ಪೊಗರು ರಿಲೀಸಾಗಿ ಆರು ದಿನಗಳಾಗಿವೆ. ರಾಜ್ಯಾದ್ಯಂತ 45 ಕೋಟಿ ಗಳಿಕೆ ಆಗಿದೆ. ವಿವಾದಕ್ಕೂ ಗುರಿಯಾಗಿದ್ದಾಗಿದೆ. ಅದರ ಲವಾಗಿ ಎಂಟು ನಿಮಿಷದ ದೃಶ್ಯಾವಳಿಗಳು ಕಟ್ ಆಗಿವೆ. ಇಂದಿನಿಂದ ಹೊಸ ಪೊಗರು ಥೇಟರ್‌ಗಳಲ್ಲಿ ಪ್ರದರ್ಶನ ಕಾಣುವ ಸಾಧ್ಯತೆ ಇದೆ.

ಬಿಗ್‌ಬಾಸ್ ಸೀಸನ್ 8; ವಿಶೇಷ ಏನೇನು ಉಂಟು!...

ಬಿಗ್‌ಬಾಸ್ ಎಂಟನೇ ಸೀಸನ್‌ನನ್ನು ವಿವರಗಳನ್ನು ಕಲರ್ಸ್ ಕನ್ನಡ ಚಾನಲ್ಲಿನ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್ ತೆರೆದಿಟ್ಟರು. ಈ ಸಲದ ಬಿಗ್‌ಬಾಸ್ ಹೇಗಿರುತ್ತದೆ ಅನ್ನುವುದನ್ನು ಅವರು ನೇರ ನುಡಿಗಳಲ್ಲಿ ವಿವರಿಸಿದರು. ಆ ವಿವರಗಳು ಇಲ್ಲಿವೆ.

click me!