ಭಾರತೀಯ ಚುನಾವಣಾ ಆಯೋಗ 5 ರಾಜ್ಯಗಳ ಚುನವಣಾ ದಿನಾಂಕ ಘೋಷಿಸಿದೆ. ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಇತ್ತ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಚುನಾವಣೆ ದಿನಾಂಕ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಫೆ.26): ಐದು ರಾಜ್ಯಗಳ ವಿಧಾನ ಸಭಾ ಚುನಾವಣಾ ಕುತೂಹಲಕ್ಕ ಭಾರತೀಯ ಚುನಾವಣಾ ಆಯೋಗ ಸುದ್ಧಿಗೋಷ್ಠಿ ಮೂಲಕ ಉತ್ತರ ನೀಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ವಿಧಾನ ಸಭಾ ಚುನಾವಣೆ
ದಿನಾಂಕವನ್ನು ಚುನಾವಣಾ ಆಯುಕ್ತ ಸುನಿಲ್ ಅರೋರ ಘೋಷಿಸಿದ್ದಾರೆ. ಮಾರ್ಚ್ 27 ರಿಂದ ಎಪ್ರಿಲ್ 29ರವರೆಗೆ ಪಂಚ ರಾಜ್ಯಗಳ ಚುನಾವಣೆ ನಡೆಯಲಿದೆ. ಇನ್ನು 5 ರಾಜ್ಯಗಳ ಮತ ಎಣಿಕೆ ಮೇ.02ರಂದು ನಡೆಯಲಿದೆ
BJP ಸೇರಿದ ಬೆಂಗಾಲಿ ಬ್ಯೂಟಿ: ನಟಿಯ ಹಾಟ್ ಫೋಟೋಸ್ ವೈರಲ್
ಐದು ರಾಜ್ಯಗಳ ಚುನಾವಣೆ ದಿನಾಂಕ ಮಾಹಿತಿ ಈ ಕೆಳಗಿದೆ.
ಅಸ್ಸಾಂನಲ್ಲಿ 3 ಹಂತದಲ್ಲಿ ಮತದಾನ
1ನೇ ಹಂತ: ಮಾರ್ಚ್ 27
2ನೇ ಹಂತದ: ಎಪ್ರಿಲ್ 01,
3ನೇ ಹಂತ: ಎಪ್ರಿಲ್ 06
ಕೇರಳ: ಎಪ್ರಿಲ್ 06, (ಒಂದೇ ಹಂತದಲ್ಲಿ ಮತದಾನ)
ತಮಿಳುನಾಡು: ಎಪ್ರಿಲ್ 06, (ಒಂದೇ ಹಂತದಲ್ಲಿ ಮತದಾನ)
ಪುದುಚೇರಿ: ಎಪ್ರಿಲ್ 06 (ಒಂದೇ ಹಂತದಲ್ಲಿ ಮತದಾನ)
ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಮತದಾನ:
1ನೇ ಹಂತ: ಮಾರ್ಚ್ 27
2ನೇ ಹಂತ: ಎಪ್ರಿಲ್ 01
3ನೇ ಹಂತ: ಎಪ್ರಿಲ್ 06
4ನೇ ಹಂತ: ಎಪ್ರಿಲ್ 10
5ನೇ ಹಂತ: ಎಪ್ರಿಲ್ 17
6ನೇ ಹಂತ: ಎಪ್ರಿಲ್ 22
7ನೇ ಹಂತ: ಎಪ್ರಿಲ್ 26
8ನೇ ಹಂತ: ಎಪ್ರಿಲ್ 29
ಪಂಚ ರಾಜ್ಯಗಳ ಮತಎಣಿಕೆ ಮೇ. 02ರಂದು ನಡೆಯಲಿದೆ.
5 ರಾಜ್ಯಗಳ 824 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 18.68 ಕೋಟಿ ಮತದಾರರು ಈ ಬಾರಿಯ ಹಕ್ಕು ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಆಯೋಗ ಹೇಳಿದೆ.
ಕೊರೋನಾ ಕಾರಣ ರಾಜಕೀಯ ಪಕ್ಷಗಳಿಗೆ ಚುನಾವಣೆ ಮಾರ್ಗಸೂಚಿ:
2.7 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗುವುದು .ಸೂಕ್ಷ್ಮ ಮತಗಟ್ಟೆ ಬಳಿ ಹಚ್ಚುವರಿ CRPF ಸಿಬ್ಬಂದಿ ನಿಯೋಜಿಸಲಾಗುವುದು. ಕನಿಷ್ಠ 50 ರಷ್ಟು ಮತಗಳಟ್ಟೆಗಳ ನೇರಪ್ರಸಾರ ಮಾಡವಾಗುವುದು. ಇಂಟರ್ನೆಟ್ ಮೂಲಕ ವೋಟಿಂಗ್ ನೇರಪ್ರಸಾರ ವೀಕ್ಷಿಸಬಹುದು ಎಂದು ಸುನಿಲ ಆರೋರ ಹೇಳಿದ್ದಾರೆ.
ಎಲ್ಲಾ ರಾಜ್ಯಗಳಿಗೆ ವಿಶೇಷ ವೀಕ್ಷಕರ ನೇಮಕ ಮಾಡಲಾಗುವುದು. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತ ಅವಕಾಶ ನೀಡಲಾಗಿದೆ. ಎಲ್ಲಾ ಬೂತ್‌ಗಳಲ್ಲಿ ಸ್ಯಾನಿಟೈಸರ್ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ ಎಂದಿದ್ದಾರೆ.ಪರೀಕ್ಷೆಗಳು ನಡೆಯುವಾಗ ಚುನಾವಣೆ ಇರುವುದಿಲ್ಲ. ಇನ್ನು ಹಲವು ಮಾರ್ಗಸೂಚಿ, ಕಟ್ಟು ನಿಟ್ಟಿನ ಮುಂಜಾಗ್ರತ ಕ್ರಮ ಪಾಲಿಸಬೇಕಾದ ಕಾರಣ ಮತದಾನ ಅವಧಿಯನ್ನು 1 ಗಂಟೆ ವಿಸ್ತರಿಸಲಾಗಿದೆ. ಚುನಾವಣೆ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಆಯೋಗ ಹೇಳಿದೆ