Latest Videos

ನಡುರಾತ್ರಿ ಕಾರಿನಲ್ಲಿ ಬಂದು ನಾಯಿಗಳಿಗೆ ಗುಂಡಿಕ್ಕಿದ ಪಾಪಿ : 20ಕ್ಕೂ ಹೆಚ್ಚು ಬೀದಿ ನಾಯಿಗಳ ಮಾರಣಹೋಮ

By Anusha KbFirst Published Feb 19, 2024, 1:23 PM IST
Highlights

ಕಾರಿನಲ್ಲಿ ಬಂದ ಕಿಡಿಗೇಡಿಯೋರ್ವ 20 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಅಮಾನವೀಯ ಘಟನೆ ತೆಲಂಗಾಣದ ಮೆಹಾಬೂಬ್‌ನಗರದಲ್ಲಿ ನಡೆದಿದೆ. 

ತೆಲಂಗಾಣ: ಕಾರಿನಲ್ಲಿ ಬಂದ ಕಿಡಿಗೇಡಿಯೋರ್ವ 20 ಬೀದಿ ನಾಯಿಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಅಮಾನವೀಯ ಘಟನೆ ತೆಲಂಗಾಣದ ಮೆಹಾಬೂಬ್‌ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮೆಹಬೂಬ್‌ನಗರದ ಪೊನ್ನಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಮುಂಜಾನೆ ಹಾದಿಯಲ್ಲಿ ಸಾಲು ಸಾಲಾಗಿ ಬಿದ್ದಿದ್ದ ಬೀದಿ ನಾಯಿಗಳ ಕಳೇಬರ ಕಂಡ ಜನ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪಂಚಾಯತ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಅಡ್ಡಕಲ್ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429ರಡಿ  ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಜೊತೆಗೆ ಸಂಬಂಧಿತ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 

ಮತ್ತೊಂದು ಮದ್ವೆಯಾದ ಅಪ್ಪನಿಗೇ ಬೇಡವಾದ ಹೆತ್ತ ಮಗ, ಒಂದೂ ಕ್ಷಣವೂ ಬಿಡುತ್ತಿಲ್ಲ ನಿರ್ಗತಿಕ ಶ್ವಾನ!

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಮಾಹಿತಿ ಪ್ರಕಾರ,  ವ್ಯಕ್ತಿಯೋರ್ವ ಕಾರಿನಲ್ಲಿ ಬಂದು ಈ ಕೃತ್ಯವೆಸಗಿದ್ದಾನೆ. ಮಧ್ಯರಾತ್ರಿ 1.30 ರಿಂದ 2.30ರ ಸುಮಾರಿಗೆ ಈ ಅನಾಹುತಕಾರಿ ಘಟನೆ ನಡೆದಿರಬಹುದು ಎಂದು ಭೂತ್‌ಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಂ. ರಾಮಕೃಷ್ಣ ಹೇಳಿದ್ದಾರೆ. 

ಆದರೆ ಮತ್ತೆ ಕೆಲವು ಸ್ಥಳೀಯರ ಪ್ರಕಾರ, ಮಾಸ್ಕ್ ಧರಿಸಿ ಕಾರಿನಲ್ಲಿ ಬಂದಿದ್ದ ಕೆಲವರು ಬೀದಿಯಲ್ಲಿದ್ದ ಬೀದಿ ನಾಯಿಗಳ ಮೇಲೆ ಒಂದೇ ಸಮನೇ ಗುಂಡು ಹಾರಿಸಿದ್ದು, 20 ರಿಂದ 25 ನಾಯಿಗಳು ಸಾವನ್ನಪ್ಪಿವೆ. ಅಲ್ಲದೇ ಕೆಲವು ನಾಯಿಗಳು ಗಾಯಗೊಂಡಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸ್ಟ್ರೇ ಅನಿಮಲ್ ಫೌಂಡೇಷನ್ ಆಫ್ ಇಂಡಿಯಾದ ಸದಸ್ಯ ಗೌತಮ್ ಎಂಬುವವರು ಹೇಳಿದ್ದಾರೆ.

ನಾಯಿಯಾದರೇನು, ಮಾತೃ ಮಮತೆ ಕಡಿಮೆಯಾಗುತ್ತಾ? ಹೊಟ್ಟೆ ತುಂಬಿಸಲು ತಾಯಿ ಹರಸಾಹಸ!: ಭಾವುಕ ವೀಡಿಯೋ ವೈರಲ್
 

| Chandigarh: On meeting farmer leaders in connection with the ongoing protest, Union Minister Piyush Goyal says, "We have together proposed a very innovative, out-of-the-box idea...The govt promoted cooperative societies like NCCF (National Cooperative Consumers'… pic.twitter.com/6hdST9AUEG

— ANI (@ANI)

 

click me!