ಸಟ್ಟಾ ಬಜಾರ್‌, ಬ್ರೋಕರೇಜ್‌ ಹೌಸ್‌ಗಳ ಎಕ್ಸಿಟ್‌ ಪೋಲ್‌ ರಿಸಲ್ಟ್‌, ಖುಷಿಯಿಂದ ಕುಣಿದಾಡಿದ ಇಂಡಿ ಒಕ್ಕೂಟ!

By Santosh Naik  |  First Published Jun 1, 2024, 6:53 PM IST

ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನ ಮುಗಿದ ಬೆನ್ನಲ್ಲಿಯೇ ಸಟ್ಟಾ ಬಜಾರ್‌ ಹಾಗೂ ಬ್ರೇಕರೇಜ್‌ ಹೌಸ್‌ಗಳು ತಮ್ಮ ಅಂಕಿ-ಅಂಶಗಳನ್ನು ನೀಡಿವೆ. ಇದರಲ್ಲಿ ಬಿಜೆಪಿ ಖುಷಿಪಡುವಂಥ ಸಂಖ್ಯೆಗಳು ಕಾಣುತ್ತಿಲ್ಲ.
 



ಬೆಂಗಳೂರು (ಜೂನ್‌.1): ಲೋಕಸಭೆ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಚುನಾವಣೆ ಶನಿವಾರ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲಿಯೇ ಎಕ್ಸಿಟ್‌ ಪೋಲ್‌ನ ಭರಾಟೆಗಳು ಆರಂಭವಾಗಿದೆ. ಎಕ್ಸಿಟ್‌ ಪೋಲ್‌ಗಳಿಗಿಂತ ಮುಂಚಿತವಾಗಿ ದೇಶದ ಪ್ರಮುಖ ಸಟ್ಟಾ ಬಜಾರ್‌ಗಳು ಅಂದರೆ ಬೆಟ್ಟಿಂಗ್‌ ಕೇಂದ್ರಗಳು ಹಾಗೂ ಬ್ರೋಕರೇಜ್‌ ಹೌಸ್‌ಗಳು ತಮ್ಮ ನಂಬರ್‌ಗಳನ್ನು ನೀಡಿವೆ. ಆದರೆ, ಈ ಯಾವ ಸಂಖ್ಯೆಯಲ್ಲೂ ಬಿಜೆಪಿ ಚಾರ್‌ ಸೌ ಪಾರ್‌ ಅನ್ನೋದು ಬರೀ ನೀರಿನ ಮೇಲಿನ ಗುಳ್ಳೆ ಎನ್ನುವುದು ಖಚಿತವಾಗಿದೆ. ಇನ್ನು ಸಟ್ಟಾ ಬಜಾರ್‌ಗಳು ಇಂಡಿ ಒಕ್ಕೂಟಕ್ಕೂ ದೊಡ್ಡ ಮಟ್ಟದ ನಂಬರ್‌ಗಳನ್ನು ಪ್ರೆಡಿಕ್ಟ್‌ ಮಾಡಿದೆ. ಇಂಡಿ ಒಕ್ಕೂಟದ ಪಕ್ಷಗಳು ಸಟ್ಟಾ ಬಜಾರ್‌ ಹಾಗೂ ಬ್ರೋಕರೇಜ್‌ ಹೌಸ್‌ಗಳ ನಂಬರ್‌ಗಳನ್ನು ಕಂಡು ಕೊಂಚ ಮಟ್ಟಿಗೆ ಖುಷಿ ಪಟ್ಟಿವೆ. 400 ಸೀಟ್‌ ಗೆದ್ದೇ ಗೆಲ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಇಂಡಿ ಒಕ್ಕೂಟ ಯಶಸ್ವಿಯಾಗಿದೆ ಅನ್ನೋ ಸೂಚನೆಗಳು ಎಕ್ಸಿಟ್‌ ಪೋಲ್‌ನಲ್ಲಿ ಸಿಕ್ಕಿವೆ.

ಫಲೋಡಿ ಸಟ್ಟಾ ಬಜಾರ್: ದೇಶದ ಪ್ರಮುಖ ಹಾಗೂ ಅತ್ಯಂತ ಪ್ರಖ್ಯಾತ ಬೆಟ್ಟಿಂಗ್‌ ಕೇಂದ್ರವಾಗಿರುವ ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್‌, ಬಿಜೆಪಿ 270 ರಿಂದ 300 ಸೀಟ್‌ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದರೆ, ಕಾಂಗ್ರೆಸ್‌ 60-63 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದೆ.

Tap to resize

Latest Videos

undefined

ಫಲನ್‌ಪುರ ಸಟ್ಟಾ ಬಜಾರ್: ಇನ್ನು ಫಲನ್‌ಪುರ ಸಟ್ಟಾ ಬಜಾರ್ ಪ್ರಕಾರ ಬಿಜೆಪಿಗೆ ಮ್ಯಾಜಿಕ್‌ ನಂಬರ್‌ ತಲುಪೋದು ಕಷ್ಟ ಎಂದಿದೆ. ಬಿಜೆಪಿ 247 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದ್ದರೆ, ಇಂಡಿಯಾ ಒಕ್ಕೂಟ 225 ಸೀಟ್‌ಗಳಲ್ಲಿ ಜಯ ಸಾಧಿಸಬಹುದು ಎಂದಿದೆ. ಕಾಂಗ್ರೆಸ್ 112 ಸೀಟ್‌ಗಳಲ್ಲಿ ಗೆಲ್ಲಬಹುದು ಎಂದಿದೆ.

ವಿಜಯವಾಡ ಸಟ್ಟಾ ಬಜಾರ್‌: ದಕ್ಷಿಣದ ವಿಜಯವಾಡ ಸಟ್ಟಾ ಬಜಾರ್‌ ಕೂಡ ಇಂಡಿ ಒಕ್ಕೂಟ 200ಕ್ಕಿಂತ ಅಧಿಕ ಸೀಟ್‌ ಪಡೆಯಲಿದೆ ಎಂದು ತಿಳಿಸಿದ್ದರೆ, ಎನ್‌ಡಿಎ 300ಕ್ಕೂ ಅಧಿಕ ಸೀಟ್‌ ಪಡೆಯಲಿದೆ ಎಂದು ಅಂದಾಜು ಮಾಡಿದೆ. ಇದರಲ್ಲಿ ಕಾಂಗ್ರೆಸ್‌ 40-60 ಸೀಟ್‌ ಪಡೆಯಬಹುದು ಎಂದಿದೆ.

ಕೋಲ್ಕತ್ತಾ ಸಟ್ಟಾ ಬಜಾರ್‌: ದೇಶದ ಅತ್ಯಂತ ಪುರಾತನ ಸಟ್ಟಾ ಬಜಾರ್‌ಗಳಲ್ಲಿ ಒಂದಾಗಿರುವ ಕೋಲ್ಕತ್ತಾ ಸಟ್ಟಾ ಬಜಾರ್‌, ಎನ್‌ಡಿಎಗೆ ಬಹುಮತ ಸಿಗೋದು ಕಷ್ಟ ಎಂದು ನಂಬರ್ ಹೇಳಿದೆ. ಎನ್‌ಡಿಎ 261 ಸೀಟ್‌ ಗೆಲ್ಲಲಿದ್ದರೆ, ಇಂಡಿ ಒಕ್ಕೂಟ 228 ಸೀಟ್‌ ಗೆಲ್ಲಬಹುದು ಎಂದಿದೆ. ಇದರಲ್ಲಿ ಕಾಂಗ್ರೆದ್‌ 128 ಸೀಟ್‌ ಗೆಲ್ಲಲ್ಲಿದರೆ, ಬಿಜೆಪಿ 218 ಸೀಟ್‌ ಗೆಲ್ಲಲಿದೆ ಎಂದಿದೆ.

ಬೆಳಗಾವಿ ಸಟ್ಟಾ ಬಜಾರ್: ರಾಜ್ಯದ ಬೆಳಗಾವಿ ಸಟ್ಟಾ ಬಜಾರ್‌ನಲ್ಲಿ ಎನ್‌ಡಿಎ 265 ಸೀಟ್‌ ಗೆಲ್ಲಬಹುದು ಎಂದಿದ್ದರೆ, ಇದರಲ್ಲಿ ಬಿಜೆಪಿ ಪಾಲು 223 ಸೀಟ್‌ ಎಂದಿದೆ. ಇಂಡಿ ಒಕ್ಕೂಟ 230 ಸೀಟ್‌ ಗೆಲ್ಲಲಿದ್ದು ಇದರಲ್ಲಿ ಕಾಂಗ್ರೆಸ್‌ ಪಾಲು 120 ಸೀಟ್‌ ಎಂದಿದೆ.

ಕರ್ನಲ್‌ ಸಟ್ಟಾ ಬಜಾರ್‌: ಇಲ್ಲಿಯೂ ಕೂಡ ಬಿಜೆಪಿ ಎನ್‌ಡಿಎ ಮ್ಯಾಜಿಕ್‌ ನಂಬರ್‌ ತಲುಪೋದು ಕಷ್ಟ ಎಂದಿದೆ. ಎನ್‌ಡಿಎ 263 ಸೀಟ್‌ಗಳಲ್ಲಿ ಗೆಲುವು ಕಾಣಲಿದ್ದರೆ, ಇಂಡಿ ಒಕ್ಕೂಟ 231 ಸೀಟ್‌ ಗೆಲ್ಲಬಹುದು ಎಂದು ತಿಳಿಸಿದೆ.

ಇಂದೋರ್‌ ಸರಾಫಾ ಸಟ್ಟಾ ಬಜಾರ್‌: ಇಂದೋರ್‌ ಸರಾಫಾ ಸಟ್ಟಾ ಬಜಾರ್‌ ಎನ್‌ಡಿಎ 283 ಸೀಟ್‌ ಗೆಲ್ಲಬಹುದು ಎಂದಿದ್ದರೆ, ಬಿಜೆಪಿ 260 ಸೀಟ್‌ ಗೆಲ್ಲಬಹುದು ಎಂದು ತಿಳಿಸಿದೆ. ಇಂಡಿ ಒಕ್ಕೂಟ 180 ಸೀಟ್‌ಗಳಲ್ಲಿ ಗೆಲುವು ಕಾಣಲಿದ್ದರೆ, ಕಾಂಗ್ರೆಸ್‌ 94 ಸೀಟ್‌ ಗೆಲ್ಲಬಹುದು ಎಂದಿದೆ.

ಮುಂಬೈ ಸಟ್ಟಾ ಬಜಾರ್‌: ಮುಂಬೈ ಸಟ್ಟಾ ಬಜಾರ್‌ ಬಿಜೆಪಿಗೆ ಬಹುಮತ ಬೀಡಿದೆ. 295 ರಿಂದ 305 ಸೀಟ್‌ ಗೆಲ್ಲಬಹುದು ಎಂದಿ ಹೇಳಿದ್ದರೆ, ಕಾಂಗ್ರೆಸ್‌ 55-65 ಸೀಟ್‌ ಗೆಲ್ಲಬಹುದು ಎಂದು ತಿಳಿಸಿದೆ.

ಅಹಮದಾಬಾದ್‌ ಸಟ್ಟಾ ಬಜಾರ್: ಗುಜರಾತ್‌ನ ಅಹಮದಾಬಾದ್‌ನ ಸಟ್ಟಾ ಬಜಾರ್‌ ಬಿಜಪಿ 301-303 ಸೀಟ್‌ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್‌ 63-65 ಸೀಟ್‌ ಗೆಲುವು ಸಾಧಿಸಬಹುದು ಎಂದು ತಿಳಿಸಿದೆ.

ಇನ್ನು ವಿಶ್ವದ ಪ್ರಖ್ಯಾತ ಬ್ರೋಕರೇಜ್‌ ಹೌಸ್‌ಗಳು ಬಿಜೆಪಿ ಗೆಲ್ಲುವ ಸ್ಥಾನಗಳ ಪ್ರೆಡಿಕ್ಷನ್‌ ನೋಡೋದಾದರೆ, ರಾಜಕೀಯ ವಿಮರ್ಶಕ ಇಯಾನ್‌ ಬ್ರೆಮ್ಮರ್‌ ಬಿಜೆಪಿ 305 ಸೀಟ್‌ ಗೆಲ್ಲಬಹುದು ಎಂದಿದೆ. ಪ್ರಶಾಂತ್‌ ಕಿಶೋರ್‌ 303, ಯೋಗೇಂದ್ರ ಯಾದವ್‌ 240-260, ಸೂರ್ಝಿತ್‌ ಭಲ್ಲಾ 330 ಸೀಟ್‌ಗಳನ್ನು ಬಿಜೆಪಿ ಗೆಲ್ಲಬಹುದು ಎಂದಿದೆ. CSDS Lokniti ಸಂಸ್ಥೆಯ ಸಸಂಜಯ್‌ ಕುಮಾರ್‌ ಬಿಜೆಪಿ 272 ಸೀಟ್‌ ಗೆಲ್ಲಬಹುದು ಎಂದಿದ್ದರೆ, ಬ್ರೋಕರೇಜ್‌ ಹೌಸ್‌ಗಳಾದ ಜೆಎಂ ಫೈನಾನ್ಶಿಯಲ್‌ 290, ಫಿಲಿಪ್‌ ಕ್ಯಾಪಿಟಲ್‌ 290, ಐಐಎಫ್‌ಎಲ್‌ 320 ಹಾಗೂ ಬೆರ್ನೆಸ್‌ಸಟೀನ್‌ 330 ಸೀಟ್‌ ಗೆಲ್ಲಬಹುದು ಎಂದಿದೆ.
 

click me!