ಲೋಕಸಭಾ ಚುನಾವಣೆಯ 7 ಹಂತದ ಮತದಾನ ಅಂತ್ಯಗೊಂಡಿದೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ಜನ್ ಕಿ ಬಾತ್ ತನ್ನ ಸಮೀಕ್ಷೆಯಲ್ಲಿ ಕೆಲ ಅಚ್ಚರಿ ಸಂಖ್ಯೆಗಳನ್ನು ನೀಡಿದೆ. ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ನಿರೀಕ್ಷೆ ಮುಟ್ಟಿಲ್ಲ, ಕರ್ನಾಟಕದಲ್ಲಿ ಬಿಜೆಪಿ ಸ್ಥಾನ 20ಕ್ಕೆ ಕುಸಿಯಲಿದೆ ಎಂದು ಭವಿಷ್ಯ ನುಡಿದಿದೆ. ಜನ್ ಕಿ ಬಾತ್ ಸಂಪೂರ್ಣ ಅಂಕಿ ಸಂಖ್ಯೆ ಇಲ್ಲಿದೆ.
ನವದೆಹಲಿ(ಜೂ.01) ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವು? ಇದೀಗ ಎಕ್ಸಿಟ್ ಪೋಲ್ ವರದಿಗಳ ಪ್ರಕಟಗೊಂಡಿದೆ. 7 ಹಂತದ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಮತಗಟ್ಟೆ ಭವಿಷ್ಯಗಳು ಹೊರಬೀಳುತ್ತಿದೆ. ಈ ಪೈಕಿ ಜನ್ ಕಿ ಬಾತ್ ಕೆಲ ಅಚ್ಚರಿ ಭವಿಷ್ಯ ನುಡಿದಿದೆ. ಜನ್ ಕಿ ಬಾತ್ ವರದಿ ಪ್ರಕಾರ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 377 ಸ್ಥಾನ ಗೆಲ್ಲಲಿದೆ ಎಂದಿದೆ. ಈ ಮೂಲಕ ಬಿಜೆಪಿಯ ಅಬ್ ಕಿ ಬಾರ್ ಚಾರ್ ಸೋ ಪಾರ್ ನಿರೀಕ್ಷೆಯನ್ನು ಮುಟ್ಟುವುದಿಲ್ಲ ಎಂದು ಸಮೀಕ್ಷೆ ಹೇಳುತ್ತಿದೆ. ಆದರೆ ಇಂಡಿಯಾ ಒಕ್ಕೂಟ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಲಿದೆ ಎಂದಿದೆ. ಈ ಬಾರಿ ಇಂಡಿಯಾ ಮೈತ್ರಿ 151 ಸ್ಥಾನ ಗೆಲ್ಲಲಿದೆ ಎಂದಿದೆ.
ಜನ್ ಕಿ ಬಾತ್ ಪ್ರಕಾರ, ಬಿಜೆಪಿ ಪಕ್ಷ ಏಕಾಂಗಿಯಾಗಿ 327 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ಕಾಂಗ್ರೆಸ್ ಏಕಾಂಗಿಯಾಗಿ 52 ಸ್ಥಾನ ಗೆಲ್ಲಲಿದೆ ಎಂದು ಜನ್ ಕಿ ಬಾತ್ ಭವಿಷ್ಯ ನುಡಿದಿದೆ. ಕಾಂಗ್ರೆಸ್ ಈ ಬಾರಿಯ ವೋಟ್ ಶೇರ್ ಶೇಕಡಾ 18, ಬಿಜೆಪಿ ಶೇಕಡಾ 42 ವೋಟ್ ಶೇರ್ ಪಡೆಯಲಿದೆ ಎಂದು ಜನ್ ಕಿ ಬಾತ್ ಹೇಳಿದೆ.
ಲೋಕಸಭಾ ಎಕ್ಸಿಟ್ ಪೋಲ್ ಬಹಿರಂಗಕ್ಕೆ ಕೆಲವೇ ಗಂಟೆ ಮುನ್ನ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್!
ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ ಕೆಲ ಸ್ಥಾನ ಕಳೆದುಕೊಳ್ಳಲಿದೆ ಎಂದು ಜನ್ ಕಿ ಬಾತ್ ಹೇಳಿದೆ. ಜನ್ ಕಿ ಬಾತ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 19 ರಿಂದ 20 ಸ್ಥಾನ ಗೆಲ್ಲಿಲಿದೆ ಎಂದಿದೆ. ಕಳೆದ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗರಿಷ್ಠ 7 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ಬಿಜೆಪಿ ಜೊತೆ ಮೈತ್ರಿ ಮಾಡಿರುವ ಜೆಡಿಎಸ್ 2 ರಿಂದ 3 ಸ್ಥಾನ ಗೆಲ್ಲಲಿದೆ ಎಂದಿದೆ.
ಜನ್ ಕಿ ಬಾತ್ ಮತಗಟ್ಟೆ ಸಮೀಕ್ಷೆ(ಸ್ಥಾನ)
ಎನ್‌ಡಿಎ: 377
ಇಂಡಿಯಾ ಒಕ್ಕೂಟ: 151
ಇತರರು:15
ಜನ್ ಕಿ ಬಾತ್ ಮತಗಟ್ಟೆ ಸಮೀಕ್ಷೆ (ಸ್ಥಾನ):
ಬಿಜೆಪಿ: 327
ಕಾಂಗ್ರೆಸ್:52
ಜನ್ ಕಿ ಬಾತ್ ಮತಗಟ್ಟೆ ಸಮೀಕ್ಷೆ( ವೋಟ್ ಶೇರ್):
ಎನ್‌ಡಿಎ: 50%
ಇಂಡಿಯಾ ಒಕ್ಕೂಟ: 35%
ಇತರರು:15%
ಜನ್ ಕಿ ಬಾತ್ ಮತಗಟ್ಟೆ ಸಮೀಕ್ಷೆ( ವೋಟ್ ಶೇರ್):
ಬಿಜೆಪಿ: 42%
ಕಾಂಗ್ರೆಸ್:18%
ದೇಶದ ಚುನಾವಣೆಯ ಅನಧಿಕೃತ ಎಕ್ಸಿಟ್ ಪೋಲ್, ಏನಿದು ಫಲೋಡಿ ಸತ್ತಾ ಬಜಾರ್?
ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಜನ್ ಕಿ ಬಾತ್ ಸಮೀಕ್ಷೆ ಹೇಳುತ್ತಿದೆ. ಕೇರಳದಲ್ಲಿ ಬಿಜೆಪಿ 1 ಸ್ಥಾನ ಗೆಲ್ಲಲಿದೆ ಎಂದಿದೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿ 2 ರಿಂದ 3 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ತಮಿಳುನಾಡಿನಲ್ಲಿ ಬಿಜೆಪಿ ಗರಿಷ್ಠ 3 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತಿದೆ. ಇತ್ತ ತೆಲಂಗಾಣದಲ್ಲಿ ಬಿಡೆಪಿ 9 ರಿಂದ 10 ಸ್ಥಾನ ಗೆಲ್ಲಲಿದೆ ಎಂದಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಕರ್ನಾಟಕ ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ದಾಖಲೆ ಬರೆಯಲಿದೆ ಎಂದಿದೆ.
ಗುಜರಾತ್‌ನಲ್ಲಿ 26ಕ್ಕೆ 26 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದಿದೆ. ಇನ್ನು ಉತ್ತರಖಂಡದಲ್ಲಿ 5ಕ್ಕೆ 5 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದಿದೆ. ಮಧ್ಯ ಪ್ರದೇಶದಲ್ಲಿ 29 ಸ್ಥಾನಗಳ ಪೈಕಿ 28 ರಿಂದ 29 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಜನ್ ಕಿ ಬಾತ್ ಹೇಳಿದೆ.