ಕಾಶ್ಮೀರದಲ್ಲಿ ಈ ವರ್ಷ 89 ಉಗ್ರರ ಹತ್ಯೆ!

By Suvarna NewsFirst Published Aug 1, 2021, 12:31 PM IST
Highlights

* ಭಾರತದ ಭದ್ರತಾ ಪಡೆಗಳು ಈ ವರ್ಷದಲ್ಲಿ 89 ಉಗ್ರಗಾಮಿ

* 200ಕ್ಕೂ ಹೆಚ್ಚು ಉಗ್ರಗಾಮಿಗಳು ಸಕ್ರಿಯ

* ಕಾಶ್ಮೀರದ ಐಜಿಪಿ ವಿಜಯ್‌ಕುಮಾರ್‌ ಮಾಹಿತಿ

ಶ್ರೀನಗರ(ಆ.01): ಭಾರತದ ಭದ್ರತಾ ಪಡೆಗಳು ಈ ವರ್ಷದಲ್ಲಿ 89 ಉಗ್ರಗಾಮಿಗಳನ್ನು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಹತ್ಯೆ ಮಾಡಿವೆ. 200ಕ್ಕೂ ಹೆಚ್ಚು ಉಗ್ರಗಾಮಿಗಳು ಸಕ್ರಿಯವಾಗಿರುವ ಸಾಧ್ಯತೆ ಇದೆ ಎಂದು ಕಾಶ್ಮೀರದ ಐಜಿಪಿ ವಿಜಯ್‌ಕುಮಾರ್‌ ಹೇಳಿದ್ದಾರೆ.

ಸತ್ತಿರುವ 89 ಉಗ್ರರಲ್ಲಿ ಏಳು ಜನ ಪಾಕಿಸ್ತಾನ ಪ್ರಜೆಗಳಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಾಗಿದೆ. ಇನ್ನು 200-225 ಉಗ್ರಗಾಮಿಗಳು ಸಕ್ರಿಯವಾಗಿರುವವ ಸಾಧ್ಯತೆ ಇದೆ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ವರ್ಷ ಗಡಿ ನಿಯಂತ್ರಣಾ ರೇಖೆಯ ಬಳಿ ಯಾವುದೇ ಒಳನುಸುಳುವಿಕೆ ಕಂಡುಬಂದಿಲ್ಲ.

ಕಳೆದ ವಾರ ಕೊಲ್ಲಲ್ಪಟ್ಟ ಮೂವರು ಉಗ್ರರಲ್ಲಿ ಇಬ್ಬರ ವಿಸಾ ಪಡೆದು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಇಲ್ಲಿನ ಯುವಕರನ್ನು ಬಳಸಿಕೊಂಡು ದಾಳಿಗಳನ್ನು ಯೋಜಿಸುತ್ತಿದ್ದರು ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

click me!