ಎಮ್ಮೆ ನಿನಗೆ ಸಾಟಿಯಿಲ್ಲ : ದಾಖಲೆ ಬರೆದ ಆಂಧ್ರಪ್ರದೇಶದ ಎಮ್ಮೆ...!

By Anusha KbFirst Published Feb 3, 2023, 3:03 PM IST
Highlights

ಆಂಧ್ರಪ್ರದೇಶದಲ್ಲಿ  ಎಮ್ಮೆಯೊಂದು ದಾಖಲೆ ಬರೆದಿದೆ. ಆಂಧ್ರಪ್ರದೇಶದ ಮುರ್ರಾ ತಳಿಯ ನಾಲ್ಕು ವರ್ಷದ ಎಮ್ಮೆ ಪ್ರತಿನಿತ್ಯ 26.59 ಲೀಟರ್ ಹಾಲು ನೀಡುತ್ತಿದ್ದು, ಹಾಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದೆ.

ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ  ಎಮ್ಮೆಯೊಂದು ದಾಖಲೆ ಬರೆದಿದೆ. ಆಂಧ್ರಪ್ರದೇಶದ ಮುರ್ರಾ ತಳಿಯ ನಾಲ್ಕು ವರ್ಷದ ಎಮ್ಮೆ ಪ್ರತಿನಿತ್ಯ 26.59 ಲೀಟರ್ ಹಾಲು ನೀಡುತ್ತಿದ್ದು, ಹಾಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದೆ. ಹೈನುಗಾರಿಕೆ ನಡೆಸುತ್ತಿರುವ ಡಾ ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಮಂಡಪೇಟ ಪಟ್ಟಣದ ಕೃಷಿಕ ಮುತ್ಯಾಲ ಸತ್ಯನಾರಾಯಣ ಅವರ ಎಮ್ಮೆ ಇದಾಗಿದ್ದು, ಅವರು ಎಂಟು ವರ್ಷಗಳ ಹಿಂದೆ ತೆಲಂಗಾಣ ರಾಜ್ಯದ ನಿಜಾಮಾಬಾದ್‌ನಲ್ಲಿ ಒಂದು ಎಮ್ಮೆಯನ್ನು ಖರೀದಿಸಿದ್ದರಂತೆ. ಆ ಎಮ್ಮೆ ಒಟ್ಟು ನಾಲ್ಕು ಗಂಡು  ಹಾಗೂ  ಎರಡು ಹೆಣ್ಣು ಎಮ್ಮೆ ಕರುಗಳಿಗೆ ಜನ್ಮನೀಡಿದೆ. ಅದರಲ್ಲಿ ಒಂದು ಹೆಣ್ಣು ಎಮ್ಮೆ ತನ್ನ ತಾಯಿಗಿಂತ ಹೆಚ್ಚು ಹಾಲು ನೀಡುತ್ತಿದೆ. ಈ ಎಮ್ಮೆಯ ತಾಯಿ ವಿಜಯವಾಡ (Vijayawada) ಮತ್ತು ಮಂಡಪೇಟದಲ್ಲಿ (Mandapeta) ನಡೆದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಎರಡು ಬಾರಿ ಪ್ರಥಮ ಸ್ಥಾನ ಗಳಿಸಿತ್ತು.

ತಮ್ಮ ಹೆಮ್ಮೆಯ ಎಮ್ಮೆಯ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಮುತ್ಯಾಲ ಸತ್ಯನಾರಾಯಣ, ಇದರ ಮಕ್ಕಳಾದ ಎರಡು  ಕೋಣಗಳನ್ನು ವೀರ್ಯ ಸಂಗ್ರಹಕ್ಕಾಗಿ ವೀರ್ಯ ಸಂಗ್ರಹಣಾ ಕೇಂದ್ರದ (Semen Collection Center) ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಉಳಿದ ಎರಡು ಕೋಣಗಳು ತಮ್ಮ ಬಳಿ ಇವೆ. ಅದರಲ್ಲಿ ಒಂದು ಹೆಣ್ಣು ಎಮ್ಮೆ  ನಾಲ್ಕು ವರ್ಷ ತುಂಬಿದಾಗ ಅದರ ತಾಯಿ ನೀಡುವುದಕ್ಕಿಂತಲೂ ದಿನನಿತ್ಯ ಹೆಚ್ಚು ಹಾಲು ನೀಡಲು ಪ್ರಾರಂಭಿಸಿತು ಎಂದು ಹೇಳಿದರು.

ಈ ವಿಚಾರವನ್ನು ಕೇಂದ್ರ ಜಾನುವಾರು ನೋಂದಣಿ ಯೋಜನಾ ಅಧಿಕಾರಿ ರಾಜೇಶ್ವರ್ ರಾವ್ (D Rajeswara Rao) ಖಚಿತಪಡಿಸಿದ್ದಾರೆ. ದೇಶಾದ್ಯಂತ ದೈನಂದಿನ ದನದ ಹಾಲಿನ ಉತ್ಪಾದನೆಯನ್ನು ಸುಧಾರಿಸುವ ಸಲುವಾಗಿ ಕೇಂದ್ರ ನೋಂದಣಿ ಯೋಜನೆಯಡಿ ಮಂಡಪೇಟೆ (Mandapeta)ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಹಾಲು ನೀಡುವ ಎಮ್ಮೆಗಳನ್ನು ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಖುಷಿ ಹೆಚ್ಚಿಸಿದ ಸಾಧನೆ ಇದು; ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಂ.1

ಇಷ್ಟೊಂದು ಭರ್ಜರಿ ಹಾಲು ನೀಡುವ ಎಮ್ಮೆಯ ಮಾಲೀಕರಾಗಿರುವ ಕೃಷಿಕ ಸತ್ಯನಾರಾಯಣ (Satyanarayana) ಅವರು, ಪ್ರತಿನಿತ್ಯ ಎಮ್ಮೆಗಳಿಗೆ ಜೋಳ, ಅಂಜೂರ, ಹೊಟ್ಟು ಹಾಕಲು ಮೇವಿಗೆ 500 ರೂಪಾಯಿ ಖರ್ಚು ಮಾಡುತ್ತಾರೆ. ಇವರ ಈ ದಾಖಲೆ ಬರೆದ ಎಮ್ಮೆಯನ್ನು ನೋಡಲು ಡಾ.ಬಿ.ಆರ್. ಅಂಬೇಡ್ಕರ್ ( Dr BR Ambedkar district) ಜಿಲ್ಲೆಯ ಜನರಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳ ಹೈನುಗಾರಿಕೆಯಲ್ಲಿ ಆಸಕ್ತಿ ಇರುವ ಜನರು ಬರುತ್ತಾರೆ.  ಹೈನುಗಾರಿಕೆ ಅನೇಕರ ಬದುಕನ್ನು ಹಸನಾಗಿಸಿದೆ. ಅನೇಕ ರೈತರು ಹಸುಗಳನ್ನು ಸಾಕಿ ಹಾಲು ಕರೆದು ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. 

 

click me!