World Heart Day: ನಿದ್ದೆಯಲ್ಲೇ ಹಾರ್ಟ್‌ಅಟ್ಯಾಕ್ ಆಗೋದ್ಯಾಕೆ..ಹೀಗಾಗದಿರಲು ಏನ್ಮಾಡ್ಬೇಕು?

By Vinutha Perla  |  First Published Sep 29, 2023, 3:02 PM IST

ವ್ಯಾಯಾಮ ಮಾಡುವಾಗ, ಡ್ಯಾನ್ಸ್ ಮಾಡುವಾಗ, ಸುಮ್ಮನೆ ಕುಳಿತಿರುವಾಗ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬೀಳುವ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿದೆ. ಇದಲ್ಲದೆ, ನಿದ್ರೆಯ ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳೂ ಇವೆ. ಇದಕ್ಕೆ ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ ತಿಳಿಯೋಣ.


ಹೃದಯಾಘಾತವು ಒಂದು ಕಾಲದಲ್ಲಿ ಅಪರೂಪವಾಗಿತ್ತು. ಕೇವಲ ವಯಸ್ಸಾದವರಿಗೆ ಮಾತ್ರ ಹಾರ್ಟ್ ಅಟ್ಯಾಕ್ ಆಗುತ್ತಿತ್ತು. ಆದರೆ ಈಗ ಕಿರಿಯರು, ಹಿರಿಯರು ಅನ್ನೋ ಭೇದವಿಲ್ಲದೆ ಎಲ್ಲರೂ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಪ್ರಪಂಚದಾದ್ಯಂತ ಅನೇಕ ಜನರು ಸಾಯುತ್ತಿದ್ದಾರೆ ಎಂದು ಸಮೀಕ್ಷೆಗಳು ಬಹಿರಂಗಪಡಿಸುತ್ತವೆ. ವಿಶ್ವಾದ್ಯಂತ ಸಾವಿಗೆ ಹೃದಯಾಘಾತವು ಪ್ರಮುಖ ಕಾರಣವಾಗಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಕೆಟ್ಟ ಆಹಾರ ಪದ್ಧತಿ ಹೀಗೆ ನಾನಾ ಕಾರಣಗಳಿಂದ ಹೃದ್ರೋಗಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ನಾವು ಆರೋಗ್ಯವಾಗಿರಬೇಕಾದರೆ ನಮ್ಮ ಹೃದಯವು ಸದೃಢವಾಗಿರಬೇಕು. ಹೃದಯವು ನಮ್ಮ ಇಡೀ ದೇಹಕ್ಕೆ ರಕ್ತವನ್ನು ಪೂರೈಸುತ್ತದೆ. 

ಪ್ರತಿ ವರ್ಷ ಅನೇಕ ಜನರು ಹೃದ್ರೋಗದಿಂದ ಸಾಯುತ್ತಾರೆ. ಜನರಲ್ಲಿ ಅರಿವಿನ ಕೊರತೆಯೂ ಇದಕ್ಕೆ ಕಾರಣ. ಅದಕ್ಕಾಗಿಯೇ ಜಾಗೃತಿ (Awareness) ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ (World heart day)ವನ್ನು ಆಚರಿಸಲಾಗುತ್ತದೆ. ಅದರಲ್ಲೂ ಕೆಲವು ಸಮಯದಿಂದ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಕೊರೋನಾ ವೈರಸ್ ನಂತರ ದೇಶದ ವಿವಿಧ ಭಾಗಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನದ ಪ್ರಕರಣಗಳು ವರದಿಯಾಗಿವೆ.

Tap to resize

Latest Videos

ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ

ವ್ಯಾಯಾಮ ಮಾಡುವಾಗ, ಡ್ಯಾನ್ಸ್ ಮಾಡುವಾಗ, ಸುಮ್ಮನೆ ಕುಳಿತಿರುವಾಗ ಹೃದಯಾಘಾತಕ್ಕೆ (Heartattack) ಒಳಗಾಗಿ ಕುಸಿದು ಬೀಳುವ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿದೆ. ಇಂತಹ ಹೃದಯಾಘಾತದ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಇದಲ್ಲದೆ, ನಿದ್ರೆಯ (Sleep) ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳೂ ಇವೆ. ಇದಕ್ಕೆ ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ ತಿಳಿಯೋಣ.
 
ಮಲಗಿರುವಾಗ ಹೃದಯಾಘಾತವಾಗುವುದು ಯಾಕೆ?
ಆರೋಗ್ಯ ತಜ್ಞರ ಪ್ರಕಾರ, ನಿದ್ರೆಯ ಸಮಯದಲ್ಲಿ ಹೃದಯಾಘಾತಕ್ಕೆ ಮುಖ್ಯ ಕಾರಣವೆಂದರೆ ಹೃದಯದ ಪ್ರಮುಖ ರಕ್ತನಾಳ ಸಂಪೂರ್ಣವಾಗಿ ನಿರ್ಬಂಧಿಸಲ್ಪಡುವುದು. ಈ ಅಡಚಣೆಗೆ ಎರಡು ಕಾರಣಗಳಿವೆ. ಒಂದು ಕೊಲೆಸ್ಟ್ರಾಲ್ ಶೇಖರಣೆ. ಎರಡನೆಯದು ರಕ್ತ ಹೆಪ್ಪುಗಟ್ಟುವಿಕೆ. ಇದು ತಾತ್ಕಾಲಿಕವಾಗಿ ಸಂಭವಿಸುತ್ತದೆ. ಆದರೆ ಕೊಲೆಸ್ಟ್ರಾಲ್ ಯಾವಾಗಲೂ ಇರುತ್ತದೆ. ಹೃದಯಾಘಾತಕ್ಕೆ ಎರಡನೇ ಸಾಮಾನ್ಯ ಕಾರಣವಾದ ರಕ್ತ ಹೆಪ್ಪುಗಟ್ಟುವಿಕೆ ಯಾವುದೇ ಸಮಯದಲ್ಲಿ ಸಂಭವಿಸಬಹುದು. 

ಸಕ್ರಿಯವಾಗಿರುವಾಗ ಅಥವಾ ಕೆಲಸ ಮಾಡುವಾಗ ಮಾತ್ರ ಹೃದಯಾಘಾತ ಸಂಭವಿಸುವ ಸಾಧ್ಯತೆಯಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಮಲಗುವಾಗ ರಕ್ತ ಹೆಪ್ಪುಗಟ್ಟುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದಲ್ಲದೆ ಹೃದಯಾಘಾತಕ್ಕೆ ಕಾರಣವಾಗುವ ಇತರ ಪ್ರಮುಖ ಕಾರಣಗಳು ಹೀಗಿವೆ.

ಮಗಳ ಮದ್ವೆಯ ದಿನ ಹೃದಯಾಘಾತ, ತಂದೆ ಸಾವು; ಹೆಚ್ಚು ಖುಷಿಯಾದ್ರೂ ಹಾರ್ಟ್‌ಅಟ್ಯಾಕ್‌ ಆಗುತ್ತಾ?

ಹೃದಯಾಘಾತಕ್ಕೆ ಪ್ರಮುಖ ಕಾರಣಗಳು
ತೀವ್ರ ರಕ್ತದೊತ್ತಡ 
ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ
ಹೆಚ್ಚಿನ ಸಕ್ಕರೆ ಮಟ್ಟಗಳು
ದೈಹಿಕ ಚಟುವಟಿಕೆಯ ಕೊರತೆ
ಅಧಿಕ ತೂಕ 
ಹೆಚ್ಚಿನ ಒತ್ತಡ

ಹೃದಯಾಘಾತಕ್ಕೆ ಕಾರಣವಾಗುವ ಇವುಗಳಲ್ಲಿ ಹೆಚ್ಚಿನ ಅಂಶಗಳನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು. ಆದರೆ ಹೃದಯಾಘಾತಕ್ಕೆ ಇತರ ಕಾರಣಗಳಿವೆ. ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. 

ಹೃದಯಾಘಾತದ ಲಕ್ಷಣಗಳು
ಹೃದಯಾಘಾತವು ಎದೆಯಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಈ ನೋವು ಎದೆಯ ಎಡಭಾಗದಲ್ಲಿ ಮಾತ್ರ ಎಂದು ಹಲವರು ಭಾವಿಸುತ್ತಾರೆ. ಆದರೆ ಹೃದಯಾಘಾತದ ನೋವು ಎದೆಯಲ್ಲಿ ಮಾತ್ರವಲ್ಲದೆ ನಮ್ಮ ದವಡೆಯಿಂದ ಹೊಕ್ಕುಳಿನವರೆಗೂ ಬರಬಹುದು. ಆದರೆ ಈ ನೋವು ನಮ್ಮ ಭುಜಗಳು, ತೋಳುಗಳು ಮತ್ತು ಮೇಲಿನ ಬೆನ್ನಿಗೆ ಮಾತ್ರ ಹರಡುವುದಿಲ್ಲ. 

ಎದೆ ನೋವು
ಉಸಿರಾಟದ ತೊಂದರೆ
ಆತಂಕ
ಹೆಚ್ಚಿದ ಹೃದಯ ಬಡಿತ 
ಮಾತನಾಡಲು ಕಷ್ಟವಾಗುವುದು
ವಿಪರೀತ ಬೆವರುವುದು

ಹೃದಯಾಘಾತ ತಡೆಗಟ್ಟುವ ಸಲಹೆಗಳು 

-ತೂಕ ಹೆಚ್ಚಾಗದಂತೆ ಎಚ್ಚರಿಕೆ ವಹಿಸಬೇಕು.
-ಪ್ರತಿದಿನ 7ರಿಂದ 8 ಗಂಟೆಗಳ ಕಾಲ ನಿದ್ರಿಸಿ.
-ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಿ
-ಹೆಚ್ಚು ಕರಿದ ಆಹಾರವನ್ನು ಸೇವಿಸಬೇಡಿ
-ದಿನವೂ ವ್ಯಾಯಾಮ ಮಾಡಿ
-ಬಿಪಿ, ಶುಗರ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ಮಾಡುತ್ತಿರಿ

click me!