ಮನುಷ್ಯನನ್ನು ಅತೀ ಬುದ್ಧಿವಂತ ಅಂತಾರೆ. ಆದ್ರೆ ಆತ ಮಾಡೋ ಎಡವಟ್ಟುಗಳಿಗೆ ಮಾತ್ರ ಕೊನೆಯೇ ಇಲ್ಲ. ಆಕಸ್ಮಿಕವಾಗಿ, ಗೊಂದಲಕ್ಕೊಳಗಾಗಿ ಏನೇನೋ ಎಡವಟ್ಟು ಮಾಡಿಕೊಳ್ತಾನೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಮಾಡ್ಕೊಂಡಿರೋ ಎಡವಟ್ಟಿಗೆ ಆಕೆಯ ಕಣ್ಣಿನದೃಷ್ಟಿಯೇ ಹೋಗುವ ಸ್ಥಿತಿಯಲ್ಲಿದೆ.
ಸಾಮಾನ್ಯವಾಗಿ ಮನುಷ್ಯರ ಆರೋಗ್ಯವನ್ನು ಸರಿಪಡಿಸಲು ಮೆಡಿಸಿನ್‌ಗಳನ್ನು ಬಳಸಲಾಗುತ್ತದೆ. ಆದ್ರೆ ಮೆಡಿಸಿನ್‌ಗಳು ಎಷ್ಟು ಅಪಾಯಕಾರಿಯೆಂದರೆ ಅವುಗಳನ್ನು ತಪ್ಪಾದ ರೀತಿಯಲ್ಲಿ ತೆಗೆದುಕೊಂಡ್ರೆ ಆರೋಗ್ಯ ಸಮಸ್ಯೆ ಕಾಡೋದಷ್ಟೇ ಅಲ್ಲ ಜೀವಾನೇ ಹೋಗ್ಬೋದು. ಮನುಷ್ಯನನ್ನು ಅತೀ ಬುದ್ಧಿವಂತ ಅಂತಾರೆ. ಆದ್ರೆ ಆತ ಮಾಡೋ ಎಡವಟ್ಟುಗಳಿಗೆ ಮಾತ್ರ ಕೊನೆಯೇ ಇಲ್ಲ. ಆಕಸ್ಮಿಕವಾಗಿ, ಗೊಂದಲಕ್ಕೊಳಗಾಗಿ ಏನೇನೋ ಎಡವಟ್ಟು ಮಾಡಿಕೊಳ್ತಾನೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಮಾಡ್ಕೊಂಡಿರೋ ಎಡವಟ್ಟಿಗೆ ಆಕೆಯ ಕಣ್ಣಿನ ದೃಷ್ಟಿಯೇ ಹೋಗುವ ಸ್ಥಿತಿಯಲ್ಲಿದೆ.
ಟಿಕ್‌ಟಾಕ್‌ನಲ್ಲಿ ಮಹಿಳೆ (Women)ಯೊಬ್ಬರು ತಮ್ಮ ಕಣ್ಣಿಗೆ ಹಾಕಲು ಹನಿಗಳ ಬದಲಿಗೆ ಸೂಪರ್ ಗ್ಲೂ ಅನ್ನು ತಪ್ಪಾಗಿ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಆ ನಂತರ ಆರೋಗ್ಯ (Health) ಹೇಗೆ ಹದಗೆಟ್ಟಿತು ಎಂಬುದಾಗಿ ಸಹ ಹೇಳಿಕೊಂಡಿದ್ದಾರೆ. 22 ವರ್ಷದ, ಲಿಡ್, ಸಾಮಾಜಿಕ ಜಾಲತಾಣದಲ್ಲಿ (Social media) ಈ ಕುರಿತಾದ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಘಟನೆಯ ನಂತರ ಫೋಟೋಸ್ ಮತ್ತು ತನ್ನ ಕಣ್ಣಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್‌ನಲ್ಲಿ ವಿಶ್ರಾಂತಿ (Rest) ಪಡೆಯುತ್ತಿರುವಾಗ ಎಡಗಣ್ಣು ಮುಚ್ಚಿದ ಫೋಟೋಗಳನ್ನೂ ಹೈಲೈಟ್ ಮಾಡಿದ್ದಾರೆ. ಆಸ್ಪತ್ರೆಯವರು ಆಕೆಗೆ ಅಂಟು ಕರಗಿಸಲು ಎಮೋಲಿಯಂಟ್ ನೀಡಿ ಕಣ್ಣು ತೆರೆಯಲು ಯತ್ನಿಸಿದ್ದರು ಎಂದು ತಿಳಿಸಿದ್ದಾಳೆ.
undefined
Eye Care : ಬೆಳಿಗ್ಗೆ ಎದ್ದಾಗ ಕಣ್ಣು ಬಿಡಲಾರದಷ್ಟು ಮಡ್ಡಿ ಬರ್ತಿದ್ಯಾ?
ಗಮ್‌ನಿಂದ ಅಂಟಿಕೊಂಡ ಕಣ್ಣಿನ ರೆಪ್ಪೆಗಳು, ಮಹಿಳೆಯ ಒದ್ದಾಟ
@icyylyd ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 'ನಾನು ಕಣ್ಣಿಗೆ ಹನಿಗಳನ್ನು ಹಾಕಲು ಹುಡುಕುತ್ತಿದ್ದೆ. ಒಂದು ಕಣ್ಣನ್ನು ಮುಚ್ಚಿ ಇನ್ನೊಂದು ಕಣ್ಣಿಗೆ ಸಮೀಪದಲ್ಲಿದ್ದ ಐ ಡ್ರಾಪ್ಸ್ ಹಾಕಿದೆ. ಆದರೆ ಅದು ಐ ಡ್ರಾಪ್ಸ್ ಆಗಿರದೆ ಗಮ್ ಆಗಿತ್ತು. ನನ್ನ ಕಣ್ಣಿನ ರೆಪ್ಪೆಗಳು ಅಂಟಿಕೊಂಡವು. ತಕ್ಷಣಕ್ಕೆ ನನಗೆ ಏನು ಮಾಡಬೇಕೆಂದು ತಿಳಿಯಲ್ಲಿಲ್ಲ. ನಂತರ ಚೇತರಿಸಿಕೊಂಡು ಆಸ್ಪತ್ರೆಗೆ ಧಾವಿಸಿದೆ' ಎಂದು ಮಹಿಳೆ ವಿಡಿಯೋದಲ್ಲಿ ತಿಳಿಸಿದ್ದಾರೆ.
ನಂತರ ಅವರು ಆಸ್ಪತ್ರೆಯ (Hospial) ಹಾಸಿಗೆಯಲ್ಲಿ ಮಲಗಿರುವ ಚಿತ್ರವನ್ನು ಹಂಚಿಕೊಂಡರು, ವೈದ್ಯರು ಮತ್ತು ದಾದಿಯರು ಅವಳ ಕಣ್ಣು ತೆರೆಯಲು ವಿವಿಧ ವಿಧಾನಗಳನ್ನು ಪ್ರಯತ್ನಿಸುವುದನ್ನು ನೋಡಬಹುದು. ವೈರಲ್ ಆಗಿರುವ ವಿಡಿಯೋ ಐದು ಮಿಲಿಯನ್ ವೀಕ್ಷಣೆಗಳು ಮತ್ತು 500,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.
Carrot Day : ಕಣ್ಣಿಗೂ ಬೆಸ್ಟು, ಹೃದಯಕ್ಕೂ ಬೇಕು ಈ ಕ್ಯಾರೇಟ್
ವಿಡಿಯೋದಲ್ಲಿ ಮಹಿಳೆ, ವೈದ್ಯರು ನನ್ನ ಕಣ್ಣನ್ನು ಗಮ್‌ನಿಂದ ಪ್ರತ್ಯೇಕಿಸಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ. 'ವೈದ್ಯರು ನನ್ನನ್ನು ಖಾಸಗಿ ಕೋಣೆಗೆ ಕರೆದೊಯ್ದರು ಮತ್ತು ಕಣ್ಣಿನಿಂದ ಗಮ್ ತೆಗೆಯಲು ಲೋಹದ ಉಪಕರಣವನ್ನು ಬಳಸಿದರು. ನನ್ನ ಕಣ್ಣುಗಳ (Eyes) ಬಿಳಿ ಭಾಗ, ಕೆಂಪು ಮತ್ತು ಹಳದಿಯಾಗಿದ್ದವು. ನನಗೆ ತುಂಬಾ ನೋವಿನ ಅನುಭವವಾಯಿತು' ಎಂದು ಮಹಿಳೆ ಹೇಳಿದ್ದಾರೆ. ಆದರೆ ಕಣ್ಣಿನ ದೃಷ್ಟಿ ಸುಧಾರಿಸದ ಕಾರಣ ನೋಡಲು ಕಷ್ಟಪಡುವಂತಾಗಿದೆ ಎಂದರು. ಆಕೆಯ ಚಿಕಿತ್ಸೆಗೆ ಸಹಾಯ ಮಾಡಲು, ದೃಷ್ಟಿ ಮರಳಿ ಪಡೆಯಲು ವೈದ್ಯರು ಬೇರೆ ಮೆಡಿಸಿನ್ ಶಿಫಾರಸು ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವರು 'ಮೆಡಿಸಿನ್‌ಗಳನ್ನು ಬಳಸುವ ಮೊದಲು ಬಾಟಲಿಗಳನ್ನು ಓದಿ' ಎಂದು ಬರೆದಿದ್ದಾರೆ. ಇನ್ನೊಬ್ಬರು 'ನನಗೆ ವಿಷಯವನ್ನು ತಿಳಿದಾಗಲೇ ನೋವಿನ ಅನುಭವವಾಗುತ್ತಿದೆ' ಎಂದಿದ್ದಾರೆ. ಮತ್ತೊಬ್ಬರು 'ಇದು ತುಂಬಾ ಭಯಾನಕವಾಗಿದೆ. ನೀವು ಕ್ಷೇಮವಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ' ಎಂದು ಕಾಳಜಿ ವಹಿಸಿದ್ದಾರೆ. 'ಯಾಕೆ ಇಂಥಾ ಎಡವಟ್ಟಾಯಿತು. ಉಪಯೋಗಿಸುವ ಮುನ್ನ ನೀವು ಬಾಟಲಿಯ ಮಾಹಿತಿಯನ್ನು ಓದಲಿಲ್ಲವಾ' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.