
ದೇವರ ಸೃಷ್ಟಿಯಲ್ಲಿ ಲೋಪವಿಲ್ಲ, ಆದರೆ ಕೆಲವರಿಗೆ ಎಷ್ಟೇ ಚೆನ್ನಾಗಿದ್ದರೂ ಏನೋ ಕೀಳರಿಮೆ ಇದಕ್ಕಾಗಿ ದೇವರು ನೀಡಿದ ದೇಹವನ್ನು ಸರಿಪಡಿಸಲು ಹೋಗಿ ಇನ್ನೇನೋ ಅವಾಂತರ ಸೃಷ್ಟಿಸಿಕೊಳ್ಳುತ್ತಾರೆ. ಹೀಗೆ ಕಾಸ್ಮೆಟಿಕ್ ಚಿಕಿತ್ಸೆಗೆ ಒಳಗಾಗಿ ಅನೇಕರು ಇವರುವ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಬ್ಬರು ಮಹಿಳೆಯ ಜೀವವೇ ಹೋಗಿದೆ.
ನಕಲಿ ವೈದ್ಯನಿಂದ ಪೃಷ್ಠದ ಗಾತ್ರ ಹೆಚ್ಚಿಸುವ ಸರ್ಜರಿಗೆ ಒಳಗಾದ ಮಹಿಳೆ ಸಾವನ್ನಪ್ಪಿದ ಆಘಾತಕಾರಿ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಮಾರಿಯಾ ಪೆನಲೋಜಾ ಕ್ಯಾಬ್ರೆರಾ ಸಾವನ್ನಪ್ಪಿದ ಮಹಿಳೆ. ಇವರು ಮಾರ್ಚ್ 28 ರಂದು ಕ್ವೀನ್ಸ್‌ನಲ್ಲಿರುವ ಅವರ ಮನೆಯಲ್ಲಿಯೇ ಬಟ್ ಲಿಫ್ಟ್ ಇಂಪ್ಲಾಂಟ್ ತೆಗೆಯುವ ಪ್ರಕ್ರಿಯೆಗೆ ಒಳಗಾಗಿದ್ದರು. ಈ ಘಟನೆ ನಡೆದು ವಾರಗಳ ನಂತರ ಏಪ್ರಿಲ್ 11 ರಂದು ಮಾರಿಯಾ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇವರಿಗೆ 38 ವರ್ಷದ ಫೆಲಿಪೆ ಹೊಯೊಸ್-ಫೊರೊಂಡಾ ಎಂಬ ನಕಲಿ ವೈದ್ಯ ಈ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ. ಇದಕ್ಕಾಗಿ ಆತ ಆಕೆಗೆ ಲಿಡೋಕೇಯ್ನ್ ಎಂಬ ಔಷಧಿಯನ್ನು ಸಿರಿಂಜ್ ಮೂಲಕ ಮಾರಿಯಾಗೆ ನೀಡಿದ್ದಾನೆ. ಈ ಇಂಜೆಕ್ಷನ್ ನೀಡಿದ ಕೂಡಲೇ ಮರಿಯಾಗೆ ಹೃದಯಾಘಾತವಾಗಿದೆ.
ಕೂಡಲೇ ಆಕೆಯನ್ನು ಮನೆಯವರು ಆಸ್ಪತ್ರೆಗೆ ದಾಖಿಸಿದ್ದಾರೆ. ಈ ವೇಳೆ ಆಕೆಯ ಮಿದುಳು ಕೆಲಸ ಮಾಡುತ್ತಿಲ್ಲ ಎಂದು ಹೇಳಿದ ವೈದ್ಯರು ಬದುಕುವ ಸಾಧ್ಯತೆ ತುಂಬಾ ಕ್ಷೀಣ ಎಂದು ಹೇಳಿದ್ದಾರೆ. ಇದಾದ ನಂತರ ಏಪ್ರಿಲ್ 11ರಂದು ಮಾರಿಯಾ ಸಾವನ್ನಪ್ಪಿದ್ದಾರೆ. ಮಹಿಳೆಯ ಹಠಾತ್ ಸಾವಿನಿಂದ ಗಾಬರಿಯಾಗಿರುವ ಕುಟುಂಬದವರು ಗೋ ಫಂಡ್ ಮಿ ಪೇಜ್ ಮೂಲಕ ಘಟನೆಯ ಬಗ್ಗೆ ವಿವರಿಸಿ ಸಹಾಯಕ್ಕೆ ಮನವಿ ಮಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಈ ಶಸ್ತ್ರಚಿಕಿತ್ಸೆ ನಡೆಸಿದ ಆರೋಪಿ ವೈದ್ಯ ಹೊಯೊಸ್-ಫೊರೊಂಡಾ ಟಿಕ್‌ಟಾಕ್‌ನಲ್ಲಿ ತನ್ನ ಪರವಾನಗಿ ಪಡೆಯದ ವೈದ್ಯಕೀಯ ಸೇವೆಗಳನ್ನು ಪ್ರಚಾರ ಮಾಡುತ್ತಿದ್ದ. ಈತ ಬೊಟೊಕ್ಸ್ ಇಂಜೆಕ್ಷನ್‌ಗಳು ಮತ್ತು ಕಾಸ್ಮೆಟಿಕ್ ಸರ್ಜರಿಗಳಂತಹ ಜಾಹೀರಾತುಗಳನ್ನು ನೀಡಿ ಜನರನ್ನು ಆಕರ್ಷಿಸುತ್ತಿದ್ದ ಆತನ ಪೋಸ್ಟ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರ ವೀಡಿಯೊಗಳು ಮತ್ತು ಫೋಟೋಗಳು ಇದ್ದವು.. ಗ್ರಾಹಕರನ್ನು ಆಕರ್ಷಿಸಲು ಈತ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಂಗ್ ಆಗಿ ಕಾಣಲು ನಟಿಯರು ಮಾತ್ರವಲ್ಲ ಈ ನಟರೂ ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗಿದ್ದಾರೆ!
ಆದರೆ ಈತನ ಬಳಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಾರಿಯಾ ಪೆನಲೋಜಾ ಕ್ಯಾಬ್ರೆರಾ ಅವರು ಸಾವಿಗೀಡಾಗುತ್ತಿದ್ದಂತೆ ದೇಶ ಬಿಟ್ಟು ಪಲಾಯನ ಮಾಡಲು ಮುಂದಾದ ಆರೋಪಿ ಹೊಯೊಸ್-ಫೊರೊಂಡಾನನ್ನು ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅದೇ ದಿನ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪರವಾನಗಿ ಇಲ್ಲದೆ ವೈದ್ಯಕೀಯ ವೃತ್ತಿ ಮತ್ತು ಎರಡನೇ ಹಂತದ ಹಲ್ಲೆ ಆರೋಪ ಹೊರಿಸಲಾಗಿದೆ.
ಇತ್ತ ಅವರ ಸಾವಿಗೆ ಅಧಿಕೃತ ಕಾರಣ ಇನ್ನೂ ತಿಳಿದು ಬಂದಿಲ್ಲ ಮತ್ತು ಈ ಬಗ್ಗೆ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿ ತನಿಖೆ ನಡೆಸುತ್ತಿದೆ. ಕೊಲಂಬಿಯಾದವರಾದ ಕ್ಯಾಬ್ರೆರಾ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಅವರ ಸಂಬಂಧಿಕರನ್ನು ಅಮೆರಿಕಕ್ಕೆ ಕರೆತರಲು ಮತ್ತು ಅವರ ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಬೆಂಬಲಿಸಲು ಹಣವನ್ನು ಸಂಗ್ರಹಿಸಲು ಅವರ ಕುಟುಂಬವು ಈಗ ಗೋಫಂಡ್‌ಮಿ ಅಭಿಯಾನವನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ USD 20,000 , ನಿಧಿಸಂಗ್ರಹಣೆಯು ಗುರಿಯಲ್ಲಿಇದುವರೆಗೆ USD 6,000 ಕ್ಕಿಂತ ಸ್ವಲ್ಪ ಹೆಚ್ಚು ಹಣ ಸಂಗ್ರಹಿಸಲಾಹಿದೆ ಎಂದು ವರದಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.