ಮೆಟಲ್ ಮಾಲಿನ್ಯದಿಂದ ವಿಷಕಾರಿಯಾದ ಮಣ್ಣು, ಅಪಾಯದಲ್ಲಿ 1.4 ಬಿಲಿಯನ್ ಜನ

Published : Apr 20, 2025, 02:17 PM ISTUpdated : Apr 20, 2025, 02:29 PM IST
ಮೆಟಲ್ ಮಾಲಿನ್ಯದಿಂದ ವಿಷಕಾರಿಯಾದ ಮಣ್ಣು, ಅಪಾಯದಲ್ಲಿ 1.4 ಬಿಲಿಯನ್ ಜನ

ಸಾರಾಂಶ

ವಾಯು ಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಹಲವು ಮಾಲಿನ್ಯ ಕುರಿತು ಕೇಳಿದ್ದೇವೆ. ಆದರೆ ಇದೀಗ  ಜಗತ್ತನ್ನೇ ಮೆಟಲ್ ಮಾಲಿನ್ಯ ಬೆಚ್ಚಿ ಬೀಳಿಸಿದೆ. ಮೆಟಲ್ ಮಾಲಿನ್ಯದಿಂದ ಮಣ್ಣು ವಿಷಕಾರಿಯಾಗಿದೆ. ಇದರಿಂದ 1.4 ಬಿಲಿಯನ್ ಜನರು ಅಪಾಯದಲ್ಲಿದ್ದಾರೆ.   

ನವದೆಹಲಿ(ಏ.20) ಜಗತ್ತಿನ ಎಲ್ಲಾ ಜೀವರಾಶಿಗಳು ಒಂದಲ್ಲ ಒಂದು ಮಾಲಿನ್ಯದಡಿಯಲ್ಲಿ ಬದುಕುತ್ತಿದ್ದಾರೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯಗಳು ಪ್ರತಿ ಹೆಜ್ಜೆ ಹೆಜ್ಜೆಗೂ ಗುರುತಿಸಬಹುದು. ಆದರೆ ಇದೀಗ ಮತ್ತೊಂದು ಮಾಲಿನ್ಯ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಅದು ಮೆಟಲ್ ಮಾಲಿನ್ಯ ಅಥವಾ ಲೋಹದ ಮಾಲಿನ್ಯ. ಇದರಿಂದ ವಿಶ್ವದಾದ್ಯಂತ ಬರೋಬ್ಬರಿ 1.4 ಶತಕೋಟಿ ಜನರು ಅಪಾಯದಲ್ಲಿದ್ದಾರೆ. ನಿಕಲ್, ಸೀಸ, ತಾಮ್ರ, ಕ್ಯಾಡ್ಮಿಯಮ್, ಕೋಬಾಲ್ಟ್,ಕ್ರೋಮಿಯಂ ಸೇರಿದಂತೆ ಹಲವು ಲೋಹಗಳನ್ನು ವಿಪರೀತವಾಗಿ ಬಳಕೆ ಮಾಡುತ್ತಿರುವ ಕಾರಣ ಮಣ್ಣು ವಿಷಕಾರಿಯಾಗಿದೆ. ಇದು ಆಹಾರವನ್ನು, ಬೆಳೆಗಳನ್ನು ವಿಷಕಾರಿ ಮಾಡುತ್ತಿದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ.

242 ಹಕ್ಟೇರ್ ಪ್ರದೇಶ ವಿಷಕಾರಿ
ಡೈಯಿ ಹ್ಯೂ ಹಾಗೂ ಸಿಬ್ಬಂದಿಗಳು ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ವಿಶ್ವದ 1,493 ವಿವಿಧ ಪ್ರಾಂತ್ಯಗಳಿಂದ ಬರೋಬ್ಬರಿ 8 ಲಕ್ಷ ಮಣ್ಣಿನ ಮಾದರಿ ಸಂಗ್ರಹಿಸಿ ಸಂಶೋಧನೆ ನಡೆಸಲಾಗಿದೆ. ಈ ವರದಿ ಪ್ರಕಾರ  ವಿಶ್ವದಲ್ಲಿರುವ ಶೇಕಜಾ 14 ರಿಂದ 17 ರಷ್ಟು  ಬೆಳೆ ಬೆಳೆಯುವ ಪ್ರದೇಶದ ಮಣ್ಣು ವಿಷಕಾರಿಯಾಗಿದೆ. ಅಂದರೆ 242 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಅತೀಯಾದ ಲೋಹ, ರಾಸಾಯನಿಕ ಸೇರಿದಂತೆ ಇತರ ವಿಷಕಾರಿ ವಸ್ತುಗಳ ಬಳಕೆಯಾಗುತ್ತಿರುವ ಕಾರಣ ಮಣ್ಣು ವಿಷಕಾರಿಯಾಗಿದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.

ಗದಗ ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತ!

242 ಮಿಲಿಯನ್ ಹೆಕ್ಟೇರ್‌ಗಳ ಮಣ್ಣು ವಿಷಕಾರಿಯಾಗಿದೆ. ಇದು ಕೃಷಿ ಮತ್ತು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವಷ್ಟು ಹೆಚ್ಚಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಣ್ಣಿನ ವಿಷಕಾರಿತ್ವವು ಆಹಾರ ಭದ್ರತೆ, ಪರಿಸರ ಮತ್ತು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಇದರಿಂದ ಬೆಳೆ ಇಳುವರಿ ಕಡಿಮೆಯಾಗುತ್ತದೆ. ವಿಷಕಾರಿ ಲೋಹಗಳು ಆಹಾರದ ಮೂಲಕ ಮನುಷ್ಯ ಹಾಗೂ ಪ್ರಾಣಿಗಳ ದೇಹ ತಲುಪಬಹುದು. ಅಧ್ಯಯನದ ಒಂದು ಪ್ರಮುಖ ಸಂಶೋಧನೆಯೆಂದರೆ, ದಕ್ಷಿಣ ಯುರೇಷಿಯಾದಲ್ಲಿ ಲೋಹ-ಸಮೃದ್ಧ ವಲಯ ಪತ್ತೆಯಾಗಿದೆ.

ವರದಿಯಲ್ಲಿ ಬೆಚ್ಚಿಬೀಳಿಸುವ ಹಕ್ಕು
ಈ ಮಣ್ಣಿನ ವಿಷವು ಈಗ ಆಹಾರ, ಸಸ್ಯಗಳು ಮತ್ತು ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ. ಇದರಿಂದಾಗಿ ಬೆಳೆ ಇಳುವರಿ ಕಡಿಮೆಯಾಗುತ್ತಿದೆ ಮತ್ತು ವಿಷಕಾರಿ ಲೋಹಗಳು ನಮ್ಮ ಆಹಾರ ಮತ್ತು ಪಾನೀಯಗಳನ್ನು ಪ್ರವೇಶಿಸುತ್ತಿವೆ. ವರದಿಯಲ್ಲಿ ಒಂದು ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ, ಯುರೇಷಿಯಾದ ಕೆಲವು ಬಿಸಿ ಪ್ರದೇಶಗಳಲ್ಲಿ ಹೊಸ ಲೋಹ-ಸಮೃದ್ಧ ವಲಯ ಪತ್ತೆಯಾಗಿದೆ, ಇದರ ಬಗ್ಗೆ ಈ ಹಿಂದೆ ಯಾರಿಗೂ ತಿಳಿದಿರಲಿಲ್ಲ.

ಮಣ್ಣು ವಿಷಕಾರಿಯಾಗಲು ಕಾರಣಗಳೇನು?
ಈ ಪ್ರದೇಶದ ಮಣ್ಣಿನಲ್ಲಿ ಈಗಾಗಲೇ ಹೆಚ್ಚಿನ ಲೋಹಗಳಿದ್ದವು ಮತ್ತು ಅಲ್ಲಿ ಜ್ವಾಲಾಮುಖಿಗಳು ಸಹ ಸ್ಫೋಟಗೊಂಡಿವೆ. ಇದಲ್ಲದೆ, ಅತಿಯಾದ ಗಣಿಗಾರಿಕೆ, ಕಾರ್ಖಾನೆಗಳು ಮತ್ತು ತಪ್ಪು ನೀರಾವರಿ ವಿಧಾನಗಳಂತಹ ಮಾನವ ಚಟುವಟಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಈ ಎಲ್ಲಾ ಕಾರಣಗಳಿಂದಾಗಿ ಈಗ ಅಲ್ಲಿನ ಮಣ್ಣು ತುಂಬಾ ವಿಷಕಾರಿಯಾಗಿದೆ.

ಮಣ್ಣು ಇಲ್ಲದಿದ್ದರೆ ಯಾವ ಸಸ್ಯವೂ ಉಳಿಯುವುದಿಲ್ಲ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಸಿ ಬೆಳ್ಳುಳ್ಳಿಯ ಶಕ್ತಿ.. ಬೆಳಗ್ಗೆ ಮೊದಲು ಈ ಕೆಲಸ ಮಾಡಿ ಅದೆಂಥದ್ದೇ ಕಾಯಿಲೆಯಾದ್ರೂ ಹಿಮ್ಮೆಟ್ಟುತ್ತೆ
ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು