
ಕ್ಯಾನ್ಸರ್ (Cancer) ಹೆಸರು ಕೇಳ್ತಿದ್ದಂತೆ ಸಾವು ಹತ್ತಿರಕ್ಕೆ ಬಂದು ನಿಂತಷ್ಟು ಭಯವಾಗುತ್ತೆ. ಕ್ಯಾನ್ಸರ್ ಒಂದು ಮಾರಣಾಂತಿಕ ಖಾಯಿಲೆ. ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕ್ಯಾನ್ಸರ್ ಗೆ ಬಲಿಯಾಗ್ತಿದ್ದಾರೆ. ದೇಶದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಮಹಿಳೆಯರು ಸ್ತನ ಕ್ಯಾನ್ಸರ್ (Breast cancer) ಗೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗ್ತಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಭಾರತೀಯ ಮಹಿಳೆಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಇದ್ರ ಲಕ್ಷಣ ಪತ್ತೆಯಾದ್ರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ ಕೊನೆ ಹಂತದಲ್ಲಿಯೇ ಇದು ಕಾಣಿಸಿಕೊಳ್ಳುವ ಕಾರಣ ಅನೇಕ ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದ ಸಾವನ್ನಪ್ಪುತ್ತಿದ್ದಾರೆ. ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗಲು ನಾವು ಬಳಸುವ ಅಡುಗೆ ಎಣ್ಣೆ (Cooking Oil) ಕಾರಣ ಎಂಬುದು ಅಧ್ಯಯನದಿಂದ ಪತ್ತೆಯಾಗಿದೆ.
ಅಡುಗೆ ಎಣ್ಣೆಯಿಂದ ಸ್ತನ ಕ್ಯಾನ್ಸರ್ : ಸಾಮಾನ್ಯ ಅಡುಗೆ ಎಣ್ಣೆಗಳು ಲಿನೋಲಿಕ್ ಆಮ್ಲ ಎಂಬ ಅಂಶವನ್ನು ಹೊಂದಿರುತ್ತವೆ. ಇದು ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದು ಅತ್ಯಂತ ಅಪಾಯಕಾರಿ ರೀತಿಯ ಸ್ತನ ಕ್ಯಾನ್ಸರ್ ಆಗಿದ್ದು, ಇದರಲ್ಲಿ ರೋಗಿಗಳು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ.
ಒಂದು ತಿಂಗಳು ಆಲ್ಕೋಹಾಲ್ ಕುಡಿಯದೇ ಇದ್ದರೆ ಆಗುವ ಲಾಭಗಳೇನು? ಆಯಸ್ಸು ಹೆಚ್ಚಿಸಿಕೊಳ್ಳಬಹುದಾ?
ಕ್ಯಾನ್ಸರ್ ಕೋಶಗಳಲ್ಲಿ ಲಿನೋಲಿಕ್ ಆಮ್ಲವು FABP5 ಎಂಬ ನಿರ್ದಿಷ್ಟ ಪ್ರೋಟೀನ್ ಬಂಧಿಸುತ್ತದೆ. ಈ ಜೋಡಣೆಯು ಕ್ಯಾನ್ಸರ್ ಬೆಳವಣಿಗೆಯ ಮಾರ್ಗವನ್ನು ಸುಲಭಗೊಳಿಸುತ್ತದೆ. ಇದ್ರಿಂದ ಕ್ಯಾನ್ಸರ್ ಗಡ್ಡೆ ವೇಗವಾಗಿ ಬೆಳೆಯಲು ಕಾರಣವಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಲಿನೋಲಿಕ್ ಆಮ್ಲವು ಅನೇಕ ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತದೆ. ಅದಕ್ಕೆ ಹೆದರುವ ಅಗ್ತಯವಿಲ್ಲ. ನೀವು ಲಿನೋಲಿಕ್ ಆಮ್ಲವಿರುವ ಎಲ್ಲ ಆಹಾರ ಸೇವನೆ ಮಾಡೋದ್ರಿಂದ ನಿಮಗೆ ನೇರವಾಗಿ ಕ್ಯಾನ್ಸರ್ ಬರುತ್ತೆ ಎಂದಲ್ಲ. ಸ್ತನ ಕ್ಯಾನ್ಸರ್ ಗೆ ಅಡುಗೆ ಎಣ್ಣೆಗಳು ಕೂಡ ನೇರವಾಗಿ ಕಾರಣವಾಗೋದಿಲ್ಲ. ಕ್ಯಾನ್ಸರ್ ಕಾಡಲು ಅನೇಕ ಕಾರಣವಿದೆ. ಜನರ ಆಹಾರ ಪದ್ಧತಿ, ಪರಿಸರಕ್ಕೆ ಒಡ್ಡಿಕೊಳ್ಳುವಿಕೆ ಮತ್ತು ಕುಟುಂಬದ ಇತಿಹಾಸ ಕೂಡ ಇಲ್ಲಿ ಮುಖ್ಯವಾಗುತ್ತದೆ. ಇಂಥವರು ಕ್ಯಾನ್ಸರ್ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅಡುಗೆ ಎಣ್ಣೆಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು.
ಯಾವ ಎಣ್ಣೆಯಲ್ಲಿ ಲಿನೋಲಿಕ್ ಆಮ್ಲವಿದೆ ? : ಲಿನೋಲಿಕ್ ಆಮ್ಲವು ಒಮೆಗಾ-6 ಕೊಬ್ಬಿನಾಮ್ಲವಾಗಿದೆ. ಇದು ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಕಾರ್ನ್ ಎಣ್ಣೆಯಲ್ಲಿ ಕಂಡುಬರುತ್ತದೆ. ಇದಲ್ಲದೆ, ಇತರ ಅನೇಕ ಬೀಜದ ಎಣ್ಣೆಗಳು ಸಹ ಉತ್ತಮ ಪ್ರಮಾಣದಲ್ಲಿ ಲಿನೋಲಿಕ್ ಆಮ್ಲವನ್ನು ಹೊಂದಿರುತ್ತವೆ.
ಈ ಆಹಾರದಲ್ಲಿ ಹೆಚ್ಚಿರುತ್ತೆ ಲಿನೋನಿಕ್ ಆಮ್ಲ : ಬರಿ ಎಣ್ಣೆಯಲ್ಲಿ ಮಾತ್ರವಲ್ಲ ಕೆಲ ಆಹಾರದಲ್ಲಿ ಲಿನೋನಿಕ್ ಆಮ್ಲವಿದೆ. ಹಂದಿ ಮಾಂಸ, ಮೊಟ್ಟೆ ಮತ್ತು ಇತರ ಪ್ರಾಣಿ ಉತ್ಪನ್ನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ, ಇವುಗಳನ್ನು ಪ್ರತಿದಿನ ತಿನ್ನಬಾರದು. ಇವು ದೇಹದಲ್ಲಿ ಉರಿಯೂತವನ್ನು ಹೆಚ್ಚು ಮಾಡುತ್ತವೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸೈಡ್ ಎಫೆಕ್ಟ್ ಇಲ್ಲದೆ ಬಿಳಿ ಕೂದಲನ್ನ ಶಾಶ್ವತವಾಗಿ ಕಪ್ಪಗೆ ಮಾಡೋದು
ಸಾಮಾನ್ಯವಾಗಿ ಎಲ್ಲ ವಯಸ್ಸಿನ ಮಹಿಳೆಯರಿಗೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದ್ರೆ 50 ವರ್ಷ ಮೇಲ್ಪಟ್ಟ ಮಹಿಲೆಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗುತ್ತದೆ. 40 ವರ್ಷದ ನಂತ್ರ ಸ್ತನ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗಬೇಕು. ನೀವು ಮ್ಯಾಮೊಗ್ರಫಿ ಮತ್ತು ಅಲ್ಟ್ರಾಸೌಂಡ್ ಮೂಲಕ ಅದನ್ನು ಪತ್ತೆ ಮಾಡ್ಬಹುದು. 40 ವರ್ಷ ವಯಸ್ಸಿನ ಮಹಿಳೆಯರು ಪ್ರತಿ ಎರಡು ವರ್ಷಗಳಿಗೊಮ್ಮೆ ಮ್ಯಾಮೊಗ್ರಾಮ್ ಮಾಡಿಸಿಕೊಳ್ಳುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.