ಲೈಂಗಿಕ ಆಟಿಕೆ ಬಳಸೋ ಮುನ್ನ ತಿಳಿದುಕೊಳ್ಳಿ ಈ ಟಿಪ್ಸ್​: ಇಲ್ಲದಿದ್ರೆ ಪ್ರಾಣಕ್ಕೇ ಕುತ್ತು, ಜಾಗ್ರತೆ!

Published : Jan 20, 2025, 02:43 PM ISTUpdated : Jan 20, 2025, 02:50 PM IST
ಲೈಂಗಿಕ ಆಟಿಕೆ ಬಳಸೋ ಮುನ್ನ ತಿಳಿದುಕೊಳ್ಳಿ ಈ ಟಿಪ್ಸ್​: ಇಲ್ಲದಿದ್ರೆ  ಪ್ರಾಣಕ್ಕೇ ಕುತ್ತು, ಜಾಗ್ರತೆ!

ಸಾರಾಂಶ

ಲೈಂಗಿಕ ಆಟಿಕೆಗಳ ಬಳಕೆ ಭಾರತದಲ್ಲಿ ಹೆಚ್ಚುತ್ತಿದ್ದು, ₹10 ಕೋಟಿ ವಹಿವಾಟು ನಡೆಯುತ್ತಿದೆ. ಸುರಕ್ಷಿತ ಬಳಕೆಗಾಗಿ ಗುಣಮಟ್ಟದ ಉತ್ಪನ್ನ ಆಯ್ಕೆ, ಚರ್ಮಕ್ಕೆ ಹಾನಿಕಾರಕ ರಾಸಾಯನಿಕಗಳಿಲ್ಲದ್ದನ್ನು ಖರೀದಿಸಿ. ಪ್ರತಿ ಬಳಕೆಯ ನಂತರ ಸ್ವಚ್ಛಗೊಳಿಸಿ, ಕಾಂಡೋಮ್ ಬಳಸಿ. ಸೂಚನೆಗಳನ್ನು ಓದಿ, ಸಮಸ್ಯೆಯಾದರೆ ಬಳಕೆ ನಿಲ್ಲಿಸಿ.

ಸಂಗಾತಿ ಇಲ್ಲದಿದ್ದರೆ, ಒಂಟಿಯಾಗಿದ್ದರೆ, ಅವಿವಾಹಿತರಾಗಿದ್ದರೆ, ಸಂಗಾತಿ ಇದ್ದರೂ ದೂರವಿದ್ದರೆ, ಕೆಲವೊಮ್ಮೆ ಪಕ್ಕದಲ್ಲಿಯೇ ಸಂಗಾತಿ ಇದ್ದರೂ... ಹೀಗೆ ಕಾರಣಗಳು ಏನೇ ಇರಲಿ,  ಇಂದು ಲೈಂಗಿಕ ತೃಪ್ತಿಗಾಗಿ ಆಟಿಕೆಗಳನ್ನು ಬಳಸುವವರ ಸಂಖ್ಯೆ ಹೆಚ್ಚಿದೆ. ಕೇವಲ ಭಾರತದಲ್ಲಿಯೇ ಸುಮಾರು 10 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ ಎಂದರೆ ಎಷ್ಟು ಮಂದಿ ಇದರ ಬಳಕೆ  ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಲಾಕ್​ಡೌನ್​ ಬಳಿಕ 2020ರ ನಂತರ ಭಾರತದಲ್ಲಿ ಇದರ ಮಾರುಕಟ್ಟೆ ಶೇಕಡಾ 65ರಷ್ಟು ಏರಿಕೆ  ಆಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಮುಂಬೈ, ಬೆಂಗಳೂರು, ದೆಹಲಿ, ಲಖನೌಮ ಜೈಪುರ ಮತ್ತು ಚಂಡೀಗಢದಲ್ಲಿ ಇದರ ಮಾರುಕಟ್ಟೆ ಜೋರಾಗಿ ನಡೆಯುತ್ತಿದೆ ಎಂದು ಅಧ್ಯಯನ ವರದಿಗಳು ಹೇಳಿವೆ. 

ಇದನ್ನು ಬಳಸುವವರ ಸಂಖ್ಯೆ ಹೆಚ್ಚಿಗೆಯಾದರೂ ಇದನ್ನು ಖರೀದಿ ಮಾಡುವವರು ರಹಸ್ಯವಾಗಿ ತರುವ ಕಾರಣ, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಬಳಸಿದ ಬಳಿಕ ಏನು ಮಾಡಬೇಕು ಎನ್ನುವ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಇನ್ನಿಲ್ಲದಂಥ ಆರೋಗ್ಯ ಸಮಸ್ಯೆಗಳನ್ನು ತಂದುಕೊಂಡು, ಕೆಲವೊಮ್ಮೆ ಪ್ರಾಣಕ್ಕೂ ಕುತ್ತಾಗಬಹುದು ಎಂದು ತಜ್ಞರು ಹೇಳುತ್ತಾರೆ.  ಲೈಂಗಿಕ ಆಟಿಕೆಗಳ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳನ್ನು ಹೊಂದುವ ಅಗತ್ಯವಿಲ್ಲ. ಏಕೆಂದರೆ ಇವು ಸಾಕಷ್ಟು ಸುರಕ್ಷಿತವಾಗಿವೆ. ಆದರೆ  ಸರಿಯಾದ ಆಟಿಕೆಗಳ ಆಯ್ಕೆ ಅಗತ್ಯವಾಗಿದೆ. 

ಕೇಶ ವಿನ್ಯಾಸಕ್ಕೆ ಪಾರ್ಲರ್​ಗೆ ಹೋಗ್ತೀರಾ? ಯಾಮಾರಿದ್ರೆ ಬ್ರೈನ್​​ ಸ್ಟ್ರೋಕ್: ಏನಿದು Beauty Parlour Stroke Syndrome?

ಇಂಥ ಆಟಿಕೆಗಳನ್ನು ಆರಿಸುವಾಗ ಸಾಕಷ್ಟು ಜಾಗರೂಕರಾಗಿರಬೇಕು. ಉತ್ತಮ ಬ್ರ್ಯಾಂಡ್ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು. ಹಲವು ಆಟಿಕೆಗಳನ್ನು ಚರ್ಮಕ್ಕೆ ಆಗಿ ಬರದ ರಾಸಾಯನಿಕಗಳಿಂದ ತಯಾರಿಸಲಾಗಿರುತ್ತದೆ. ಅಂಥ  ಲೈಂಗಿಕ ಆಟಿಕೆಗಳನ್ನು ಬಳಸಬೇಡಿ. ಏಕೆಂದರೆ ಅವುಗಳಲ್ಲಿ ಇರುವ ರಾಸಾಯನಿಕಗಳು ಕೆಲವು ಪ್ಲಾಸ್ಟಿಕ್‌ಗಳಲ್ಲಿಯೂ ಇರುತ್ತವೆ. ಮಕ್ಕಳ ಆಟಿಕೆಗಳಲ್ಲಿ ಅವುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಅಲ್ಲದೆ, ಪ್ಯಾಸಿಫೈಯರ್‌ಗಳಲ್ಲಿ ಅವುಗಳ ಬಳಕೆಯನ್ನು ನಿಷೇಧಿಸಲಾಗಿದೆ.  ಇವು ಮನುಷ್ಯರ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಖರೀದಿಗೆ ಮುನ್ನ ಎಚ್ಚರವಿರಲಿ. 

ಆಟಿಕೆಗಳನ್ನು ಬಳಸಿದ ಬಳಿಕ, ಒಂದನ್ನು ಸರಿಯಾಗಿ ಪಾಲಿಸಲೇಬೇಕು. ಅದೇನೆಂದರೆ,  ಇವುಗಳನ್ನು ಪ್ರತಿ ಬಾರಿ ಬಳಸಿದ ನಂತರ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಹಲವು ರೋಗಗಳು ಬರಬಹುದು ಎಂದು ಎಚ್ಚರಿಕೆ  ನೀಡಲಾಗಿದೆ.  ನಿಮ್ಮ ಸಂಗಾತಿ ಕೂಡ ಇದನ್ನು ಬಳಸುತ್ತಿದ್ದರೆ, ಅವರಿಗೂ ಅದನ್ನು ಸ್ವಚ್ಛಗೊಳಿಸಲು ಹೇಳಿ. ಏಕೆಂದರೆ ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಆಟಿಕೆಗಳನ್ನು ಹಂಚಿಕೊಳ್ಳುವುದರಿಂದ ಲೈಂಗಿಕವಾಗಿ ಹರಡುವ ರೋಗಗಳು (STIs) ಶೀಘ್ರವಾಗಿ ಹರಡುವ ಅಪಾಯವಿದೆ.  ಈ ಆಟಿಕೆಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಸಂಗ್ರಹಿಸುತ್ತವೆ. ಆದ್ದರಿಂದ, ಪ್ರತಿ ಬಳಕೆಯ ನಂತರ ಅವುಗಳನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. ಅವು ತೇವವಾಗಿದ್ದರೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅವುಗಳನ್ನು ಸೆಳೆಯಬಲ್ಲುವು. 

ನೀವು ಹೊಸದಾಗಿ ಖರೀದಿಸುತ್ತಿರುವಿರಿಯಾದರೆ,  ಮೊದಲು ಅದರ ಬಳಕೆಯ ಸೂಚನೆಗಳನ್ನು ಸರಿಯಾಗಿ ಓದಿ ತಿಲಿದುಕೊಳ್ಳಿ. ನಿಧಾನವಾಗಿ ಓದಿ, ಆತುರಪಟ್ಟರೆ ಅನಾಹುತ ಗ್ಯಾರೆಂಟಿ.  ಅದನ್ನು ಹೇಗೆ ಬಳಸುವುದು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಅದರಿಂದ ನಿಮ್ಮ ಸೂಕ್ಷ್ಮ ಅಂಗಗಳಿಗೆ ಸಮಸ್ಯೆ ಉಂಟಾಗಬಹುದು, ಇಲ್ಲವೇ ನೀವು ನಿಮ್ಮ ನೀವು  ಸಂಗಾತಿಗೂ ನೋಯಿಸಬಹುದು. ಒಂದು ವೇಳೆ ಇದನ್ನು ಬಳಸುತ್ತಿರುವ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಇದ್ದರೆ, ತಕ್ಷಣ ಅದನ್ನು ಬಳಸುವುದನ್ನು ನಿಲ್ಲಿಸಿ. ಇನ್ನೊಂದು ವಿಷಯ ಎಂದರೆ, ಆಟಿಕೆಗಳ ಮೇಲೆ ಯಾವಾಗಲೂ ಕಾಂಡೋಮ್‌ಗಳನ್ನು ಬಳಸಿ. ಏಕೆಂದರೆ ನೀವು ಆಟಿಕೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒಣಗಿಸಿದ್ದರೂ, ನಂತರ ಬಳಸಿದಾಗ ಅವು ಸೋಂಕನ್ನು ಹರಡಬಹುದು. ನವೆಂಬರ್ 2014 ರಲ್ಲಿ ಲೈಂಗಿಕವಾಗಿ ಹರಡುವ ರೋಗಗಳು ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವೈಬ್ರೇಟರ್‌ಗಳ ಬಳಕೆ ಮತ್ತು ಶುಚಿಗೊಳಿಸಿದ ಒಂದು ದಿನದ ನಂತರವೂ ಮಾನವ ಪ್ಯಾಪಿಲೋಮವೈರಸ್‌ನ ಕುರುಹುಗಳು ಕಂಡುಬಂದಿವೆ.
 

ಹೇರ್​ಡೈನಿಂದ ಹೆಚ್ಚುವ ಕ್ಯಾನ್ಸರ್! ಕೂದಲು ಶಾಶ್ವತ ಕಪ್ಪಾಗಿಸಲು ಯೋಗ ಗುರು ಸಿಂಪಲ್​ ಟಿಪ್ಸ್​ ಕೇಳಿ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ
ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?